ಸಮಸ್ತ ನಾಡಿನ ತಾಯಂದಿರಿಗೆ ನನ್ನ ಭಕ್ತಿ ಪೂರ್ವಕ ಅಮ್ಮಂದಿರ ದಿನದ ಹಾರ್ಧಿಕ ಶುಭಾಶಯಗಳು.
ಅಮ್ಮ..ಐ ಲವ್ ಯು
“ಮಮತೆಯ ಮಡಿಲು“
ಅಮ್ಮ ಎಂದರೆ.. ಏನೋ ಹರುಷವೂ
ನಮ್ಮ ಪಾಲಿಗೆ ಅವಳೇ ದೈವವು..
ತಾಯಿಗೆ ಬೆಲೆ ಕಟ್ಟಲು ಸಾದ್ಯವಿಲ್ಲ. ಅಷ್ಟೇ ಏಕೆ ಆಕೆಯ ಋಣವನ್ನು ತೀರಿಸಲೂ ಆಗುವುದಿಲ್ಲ. ಮಾತೃವಾತ್ಸಲ್ಯ, ಮಾತೃ ಪ್ರೇಮಕ್ಕೆ ಬೆಲೆ ಕಟ್ಟಲು ಅಸಾದ್ಯ ಎಂಬುದು ಪುರಾಣ ಇತಿಹಾಸ ಕಾಲದಿಂದಲೇ ಕಂಡು ಬಂದಿದೆ. ಅಮ್ಮನ ದಿನವನ್ನು ಆಚರಿಸಲು ಪ್ರತೇಕವಾದ ದಿನ ಬೇಕಾಗಿಲ್ಲ. ಎಂದೆಂದೂ ಅಮ್ಮನ ದಿನವೇ ಆಕೆ ದೈವಾ ಸಮಾನಳು, ಜಗತ್ತಿನಲ್ಲಿ ಕೆಟ್ಟ ಮಕ್ಕಳು ಇರುತ್ತಾರೆ ಆದರೆ ಕೆಟ್ಟ ತಾಯಿ ಇರಲು ಸಾದ್ಯವಿಲ್ಲ ಎಂಬ ಮಾತಿದೆ.ಇದು ತಾಯಿಯ ಶ್ರೇಷ್ಠತೆ ತನ್ನ ಕನಸು– ಸುಖವನ್ನು ತ್ಯಾಗಮಾಡಿ ಮಕ್ಕಳ ಸಂತೋಷವೇ ತನ್ನ ಸಂತೋಷ ಎಂದು ಪ್ರೀತಿ, ವಾತ್ಸಲ್ಯವನ್ನು ಧಾರೆ ಎರೆಯುವ ಅಮ್ಮನಿಗೆ ಸರಿಸಾಟಿಯುಂಟೇ.. ಅಮ್ಮ ಎಂದರೆ.. ವ್ಯಕ್ತಿತ್ವ ನಿರ್ಮಾಣದ ಬುನಾದಿ, ನೀತಿಪಾಠ ಬೋಧಕಿ, ಹೀಗಾಗಿ ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು. ಮಕ್ಕಳ ಯೋಗಕ್ಷೇಮವನ್ನೇ ಸದಾ ಕಾಲ ಬಯಸುವ ಸದ್ದಿಲ್ಲದ ಶ್ರಮಜೀವಿ. ತನ್ನ ನಿಷ್ಕಲ್ಮಶ ಕೆಲಸದಲ್ಲಿಯೇ ಸಂತಸ ಕಾಣುವ ಈಕೆ ಕೆಲಸಕಾರ್ಯಗಳ ಮೂಲಕವೇ ತನ್ನ ಮಕ್ಕಳನ್ನು ಪೋಷಿಸುವ ತಾಯಿಗೆ ಈ ತಾಯಿಯೇ ಸಾಟಿ. ತಾಯಿ ತನ್ನ ಮಕ್ಕಳಿಗೆ ಓರ್ವ ಸ್ನೇಹಿತೆ, ಮಾರ್ಗದರ್ಶಕಿ ಬಂದು ಬಳಗ ಎಲ್ಲಾ ಮನಸ್ಸಂಗಳದ ಮನೆಯಲ್ಲಿ ಎಷ್ಟೇ ನೋವುಗಳಿದ್ದರೂ ಅದನ್ನು ತನ್ನ ಹೃದಯದಲ್ಲಿ ಬಚ್ಚಿಟ್ಟು ಮುಗುಳ್ನಗೆಯೊಂದಿಗೆ ಇತರರ ಸಮಸ್ಯೆಗಳನ್ನು ಬಗೆಹರಿಸುವ ತಾಯಿ ನಿಜಕ್ಕೂ ಕೂಡ ಒಂದು ಆದರ್ಶ. ಎಲ್ಲೆಡೆ ದೇವರು ಇರಲು ಸಾಧ್ಯವಿಲ್ಲ.ಹೀಗಾಗಿ ಆ ದೇವರೆ ತಾಯಿಯನ್ನು ಸೃಷ್ಟಿಸಿದ್ದಾನೆ ಎಂಬ ಮಾತಿಗೆ ಅರ್ಥಪೂರ್ಣ ಪ್ರತಿಮೆ ಈ ತಾಯಿ. ಈ ತಾಯಿ “ಮಮತೆಯ ಮಡಿಲು” ವಿಶ್ವ ಅಮ್ಮಂದಿರ ದಿನದ ಅಂಗವಾಗಿ ಹಾಗೂ ನನ್ನ ಅಮ್ಮನಿಗಾಗಿ ನನ್ನ ಪದಫುಷ್ಪಗಳ ಅರ್ಪಣೆ..
ಅಮ್ಮನ ಪ್ರೀತಿ
ಮನುಷ್ಯತ್ವದ ಪ್ರೀತಿ,
ಕತ್ತಲಿಂದ ಬೆಳಕಿನೆಡೆಗೆ ಕೊಂಡೋಯ್ಯುವ ಪ್ರೀತಿ,
ಹಸಿವಿನಿಂದ ಬಾಯಾರಿದಾಗ ಹಾಲುಣಿಸಿ ಉಣ ಬಡಿಸುವ ಪ್ರೀತಿ,
ಕಷ್ಟಕ್ಕೆ ಮರಗುವ ಪ್ರೀತಿ,
ಧರ್ಮದ ಜೊತೆಗೂಡಿ ಗೋಪುರಗಳಲ್ಲಿ ನೆಲಸದ ಜಗತ್ತಿನ ಮನುಷ್ಯತ್ವದ ಪ್ರೀತಿ,
ಯಾವ ಪ್ರಪಂಚದಲ್ಲಿ ದೊರಕದ ಒಂದೇ ಪ್ರೀತಿ ಮಮತೆಯ ಮಡಿಲಲ್ಲಿ ಸಿಗುವುದು ಅದೇ ತಾಯಿಯ ಪ್ರೀತಿ.✍️
ಸಿ.ಆರ್ ಶಿವಕುಮಾರ್ ಸಕ್ಷಮ.ಶಿವಮೊಗ್ಗ