ತಾವರಗೇರಾ 2ನೇ ದಿನ ಸಂಪೂರ್ಣ ಬಂದ್, ಬಿಗಿ ಕ್ರಮಕ್ಕೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ.

Spread the love

ತಾವರಗೇರಾ 2ನೇ ದಿನ ಸಂಪೂರ್ಣ ಬಂದ್, ಬಿಗಿ ಕ್ರಮಕ್ಕೆ ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ.

ರಾಜ್ಯ ಸರ್ಕಾರ ನೀಡಿರುವ ಆದೇಶದ ಅನ್ವಯ ಕೋವಿಡ್-19 ಎರಡನೇ ಅಲೆಯ ಸಾಂಕ್ರಾಮಿಕ ರೋಗ ಹರಡದಂತೆ ಸೂಕ್ತ ಮುಂಜಾಗ್ರತಾ ಕ್ರಮವಾಗಿ ಕೊಪ್ಪಳ ಜಿಲ್ಲಾಯಾದ್ಯಂತ ಮೇ 17 ರ ಬೆಳಿಗ್ಗೆ 6 ಗಂಟೆಯಿಂದ ಮೇ 21ರ ರಾತ್ರಿ 12 ಗಂಟೆಯ ವರೆಗೆ ಲಾಕ್‌ಡೌನ್ ಜಾರಿಗೊಳಿಸಲಾಗಿದ್ದು, ಈ ಅವಧಿಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಕಲಂ 34(ಎಂ) ಮತ್ತು ಅಪರಾಧಿಕಾ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರಡಿಯಲ್ಲಿ ಅಗತ್ಯ ಸೇವೆಗಳು ಹಾಗೂ ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಅವರು ಆದೇಶ ಹೊರಡಿಸಿದ್ದಾರೆ. ಆದೇಶದನ್ವಯ ಅಗತ್ಯ ವಸ್ತುಗಳಾದ ಹಾಲು, ಮೊಟ್ಟೆ, ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಅಗತ್ಯ ಸೇವೆಗಳಾದ ಅಂಬುಲೆನ್ಸ್, ಕೃಷಿ ಚಟುವಟಿಕೆಗಳು, ಅಗ್ನಿ ಶಾಮಕ, ಪೆಟ್ರೋಲ್ ಪಂಪ್, ಆಮ್ಲಜನಕ ಉತ್ಪಾದನಾ ಘಟಕ, ಎ.ಟಿ.ಎಂ ಸೇವೆ, ರೈಸ್‌ಮಿಲ್‌ನಲ್ಲಿ ಒಳಗಿನ ಚಟುವಟಿಕೆಗಳಿಗೆ ಸ್ಥಳದಲ್ಲಿಯೇ ಲಭ್ಯವಿರುವ ಕಾರ್ಮಿಕರಿಂದ ನಿರ್ವಹಿಸತಕ್ಕದ್ದು ಮತ್ತು ಇತರೆ ತುರ್ತು ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಚುಟುವಟಿಕೆಗಳನ್ನು ನಿರ್ಬಂಧಿಸಲಾಗಿದೆ. ಆಸ್ಪತ್ರೆಗಳಿಗೆ ಹೋಗುವವರು ವೈದ್ಯಕೀಯ ದಾಖಲೆಗಳನ್ನು ಚೆಕ್ ಪೋಸ್ಟ್ಗಳಲ್ಲಿ ತೋರಿಸತಕ್ಕದ್ದು. ದಿನ ಪತ್ರಿಕೆ, ದೃಶ್ಯ ಮಾಧ್ಯಮ ಹಾಗೂ ಸೇವೆಗಳಿಗೆ, ಆಹಾರ ಸಂಸ್ಕರಣೆಯ ಸೇವೆಗಳಾದ ಕೋಲ್ಡ್ ಸ್ಟೋರೇಜ್‌ಗಳು, ರಾಸಾಯನಿಕ ಉದ್ಯಮಗಳು, ವಿದ್ಯುತ್ ಉತ್ಪಾದನೆ ಮತ್ತು ಪ್ರಸರಣ ಘಟಕಗಳಲ್ಲಿ ಶೇ.50 ರಷ್ಟು ಸಿಬ್ಬಂದಿಯೊಂದಿಗೆ ನಿರ್ವಹಿಸಲು ಅನುಮತಿಸಲಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣವು ಎರಡನೇಯ ದಿನದ ಅಂಗವಾಗಿ  ಸಂಪೂರ್ಣ ಬಂದ್ ಗೆ ಉತ್ತಮ ಸ್ಪಂದನೆ ಶ್ರೀ ಬಸವೇಶ್ವರ ಸರ್ಕಲ್, ಡಾ.. ಬಿ.ಆರ್. ಅಂಬೇಡ್ಕರ್ ಸರ್ಕಲ್, ಶ್ರೀ ಶ್ಯಾಮೀದಲಿ ಸರ್ಕಲ್, ಶ್ರೀ ವೀರರಾಣಿ  ಕಿತ್ತೂರು ಚೆನ್ನಮ್ಮ ಸರ್ಕಲ್,  ಗಾಂಧಿ ಚೌಕ್ ಇತರೆ ಮಾರ್ಕೇಟ್ ರಸ್ತೆಯಲ್ಲಿ ಅಂಗಡಿ ಮುಂಗಟ್ಟುಗಳು ಸಂಪೂರ್ಣ ಬಂದ್ ಆಗಿದ್ದವು. ಪಟ್ಟಣ ಪಂಚಾಯತಿಯ ಪೊಲೀಸ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಪ್ರತಿ ವೃತ್ತದಲ್ಲಿ ಬಿಗಿಕ್ರಮ ಕೈಗೊಂಡಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾಡಳಿತ ಐದು ದಿನಗಳ ಕಠಿಣ ಲಾಕ್ಡೌನ್‌ ಹಿನ್ನೆಲೆ ಇಂದು ನೇ ದಿನಕ್ಕೆ ಕಾಲೀಟ್ಟಿದ್ದು ಪಟ್ಟಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಔಷಧಿ ಅಂಗಡಿ, ರಸಗೊಬ್ಬರ ಹಾಗೂ ಕೃಷಿ ಸಂಬಂಧಿತ ಕಚೇರಿಗಳು ಎಂದಿನಂತೆ ಓಪನ್ ಆಗಿದ್ದವು. ಶ್ರೀ ಬಸವೇಶ್ವರ ಸರ್ಕಲ್ ರಸ್ತೆಯಲ್ಲಿ ಪೊಲೀಸರು ಬೈಕ್ ಸವಾರರ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿರುವುದು ಕಂಡು ಬಂತು. ಈ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳುವವರನ್ನು ಅಧಿಕ ಸಮಯ ನಿಲ್ಲಿಸಿದ್ದರಿಂದ ರೋಗಿಗಳ ಸಂಬಂಧಿಕರು ಬೇಗನೆ ಬಿಡುವಂತೆ ಮನವಿ ಮಾಡಿಕೊಳ್ಳುವುದು ಕಂಡು ಬಂತು.

ವರದಿ – ಮಂಜುನಾಥ ಎಸ್.ಕೆ

 

Leave a Reply

Your email address will not be published. Required fields are marked *