ರಣರಂಗದಲ್ಲಿ ಜಯ ಭೇರಿ ಭಾರಿಸಿದ ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್. ಇತಿಹಾಸ ಬದಲಿಸಲು ಸಾದ್ಯವಿಲ್ಲವೆಂದು ಮತ್ತೊಮ್ಮೆ ಸಾಬೀತು ಪಡಿಸಿದ ಕುಷ್ಟಗಿ ಕ್ಷೇತ್ರದ ಮತದಾರರು.

Spread the love

ರಣರಂಗದಲ್ಲಿ ಜಯ ಭೇರಿ ಭಾರಿಸಿದ ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್.

ಇತಿಹಾಸ ಬದಲಿಸಲು ಸಾದ್ಯವಿಲ್ಲವೆಂದು ಮತ್ತೊಮ್ಮೆ ಸಾಬೀತು ಪಡಿಸಿದ ಕುಷ್ಟಗಿ ಕ್ಷೇತ್ರದ ಮತದಾರರು. ರಣರಂಗದಲ್ಲಿ ಜಯ ಭೇರಿ ಭಾರಿಸಿದ ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್. ಇತಿಹಾಸ ಬದಲಿಸಲು ಸಾದ್ಯವಿಲ್ಲವೆಂದು ಮತ್ತೊಮ್ಮೆ ಸಾಬೀತು ಪಡಿಸಿದ ಕುಷ್ಟಗಿ ಕ್ಷೇತ್ರದ ಮತದಾರರು.  2023 ರ ಕುಷ್ಟಗಿ ವಿಧಾನ ಸಭಾ ಕ್ಷೇತ್ರಕ್ಕೆ ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ರವರು ಮತ್ತೊಮ್ಮೆ ಆಯ್ಕೆಯಾಗಿ ಜನರ ಸೇವೆಗೆ ಚಿರೃಣಿಯಾಗಿದ್ದಾರೆ, ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಜಿದ್ದಾ ಜಿದ್ದಿನಲ್ಲಿ ಶ್ರೀಮಾನ ಅಮಾರೇಗೌಡ ಎಲ್ ಪಾಟೀಲ್ ರವರು ಪಡೇದ ಮತಗಳು 80521. ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ರವರು ಪಡೆದ ಮತಗಳು 89596 ಇದ್ದು. ಒಟ್ಟು 9075 ಮತಗಳಿಂದ ಜಯ ಭೇರಿ ಭಾರಿಸಲಾಗಿದೆ.  ಕರ್ನಾಟಕ ರಾಜ್ಯ ಕಂಡ ಜನಪ್ರಿಯ ಹೃದಯವಂತ, ಜನನಾಯಕ, ಬಡವರ ಬಂಧು, ದಿನ ದಲೀತರ, ಶೋಷಿತರ ದ್ವನಿಯಾಗಿ, ಅಭಿವೃದ್ಧಿ ಚಿಂತಕರಾಗಿ, ಸಂಘಟಕರಾಗಿ, ಸಮಾಜಿಕ ಸೇವಕರಾಗಿ ನಾಡಿನಾದ್ಯಂತ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡ ಧೀಮಂತ ರಾಜಕೀಯ ನಾಯಕರೆಂದೆ ಚಿರಪರಿಚಿತರಾದವರು ಶ್ರೀ ದೊಡ್ಡನಗೌಡ ಹೆಚ್ ಪಾಟೀಲ್ ರವರು ಎನ್ನಬಹುದು. ಇಂದಿನ ದಿನಗಳಲ್ಲಿ ಒಬ್ಬ ಸರಳ ಸಜ್ಜನಿಕೆಯ, ಸ್ನೇಹ ಜೀವಿಯಾಗಿ, ಕರುನಾಡಿನ ಈ ಪುಣ್ಯಭೂಮಿಯಲ್ಲಿ ಜನಿಸುವ ಮೂಲಕ ಈ ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರಳು ಎನ್ನದೇ ದುಡಿಯುತ್ತಿರುವ ಹೃದಯ ಶ್ರೀಮಂತಿಕೆಯ ಸಾಹುಕಾರ ಶ್ರೀ ದೊಡ್ಡನಗೌಡ ಹೆಚ್ ಪಾಟೀಲ್ ರವರು ಎಂದರೆ ತಪ್ಪಾಗಲಾರದು. ಇವರ ನಿಷ್ಕಲ್ಮಶ, ನಿಷ್ಕಳಂಕ  ಸೇವೆಯ ಸಾಧನೆ ಇಡೀ ಕರುನಾಡಿನ ಜನತೆಗೆ ಮಾದರಿ ಹಾಗೂ ಪ್ರೇರಣೆಯಾಗಿದೆ. ಹಾಗಾಗಿ ಇವರು ಕೈಗೊಳ್ಳುತ್ತಿರುವ ಸಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವಾ ಕಾರ್ಯಗಳನ್ನು ಈ ಲೇಖನದ ಮೂಲಕ ಜನರಿಗೆ ಪರಿಚೆಯಿಸೋಣ. ರಾಷ್ಟ್ರೀಯ ನವನಿರ್ಮಾಣದ ಚಳುವಳಿಯಲ್ಲಿ ಪಾಲ್ಗೊಂಡು ದೇಶಾಭಿಮಾನ ಹಾಗೂ ದೇಶದ ಉನ್ನತಿಗಾಗಿ ಹಗಲಿರುಳು ದುಡಿಯುವ ಸಂಕಲ್ಪ ಮಾಡಿದರು. ತರುವಾಯ ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ರವರ ನಿಸ್ವಾರ್ಥ ಸೇವಾ ಕಾರ್ಯಗಳು ಈದಿಗೂ ಸದ್ದುಗದಲ್ಲವಿಲದೆ ನಿರಂತರವಾಗಿ ಸಾಗುತ್ತೀವೆ. ಆದಕಾರಣ ಇವರ ಸೇವಾ ಕೈಂಕರ್ಯಗಳು ಪ್ರಮಾಣಿಕತೆ, ನಿಷ್ಠೆ ಹಾಗೂ ಸೌಹಾರ್ದತೆಯ ಮನೋಭಾವ ಹಾಗೂ ಮನೋಧರ್ಮದಿಂದ ಸಾಗುತ್ತಲಿವೆ. ಹಾಗಾಗಿ ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ರವರು ಕನ್ನಡ ನಾಡು ಕಂಡ ಸಮಾಜಿಕ ಕ್ಷೇತ್ರದ ರಾಯಬಾರಿ, ಅತ್ಯುತ್ತಮ ಅಭಿವೃದ್ಧಿಯ ಹರಿಕಾರ, ಮೌಲ್ಯಾಧಾರಿತ ರಾಜಕೀಯ ವ್ಯಕ್ತಿ, ನಿಸ್ವಾರ್ಥ ಜನನಾಯಕ, ಜನ ಸೇವಕ ಎನ್ನುವ ಗೌರವ ಒಂದು ಕಡೆ ಇದರೆ, ಮತ್ತೊಂದು ಕಡೆಯಲ್ಲಿ ಅನೇಕ ಸಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಾಗೂ ಭಾಗವಹಿಸುವ ಮೂಲಕ ಜನಸಾಮಾನ್ಯರ ನೋವಿಗೆ ಸ್ಪಂದಿಸುವ ಕೆಲಸ ಶಾಶ್ವತವಾಗಿ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಂತೆಯೇ ನಾಡಿನ ಉದ್ದಗಲಕ್ಕೂ ಸೇವಾ ಚುಟುವಟಿಗಳು ಹಮ್ಮಿಕೊಂಡು ಬಡ ಜನರ ಸೇವೆಯನ್ನು ಮಾಡುತ್ತಿರುವುದು ಶ್ರೇಷ್ಠ ಕೆಲಸವಾಗಿದೆ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಸೇವಾ ಕೆಲಸಗಳನ್ನು ಮಾಡಲು ಪ್ರೇರಣೆ ಎಂದರೆ ಬಸವಾದಿ ಶರಣರ ವಿಚಾರಧಾರೆಗಳು, ವೀರ ಹೋರಾಟಗಾರರ ನಡೆದು ಬಂದ ದಾರಿ/ದಿಪಗಳೆ ಇವರಿಗೆ ಸ್ಪೂರ್ತಿ  ಎನ್ನಬಹುದು. ಇವುಗಳನ್ನು ಅಪ್ಪಿಕೊಂಡು, ಕಾಯಕವೇ ಕೈಲಾಸವೆಂದು ತಿಳಿದು, ನುಡಿದಂತೆ ನಡೆಯುತ್ತಿದ್ದಾರೆ. ಆದುದರಿಂದಲೇ ಯಾವುದೇ ಕೆಲಸ, ಕಾರ್ಯಗಳೇ ಇರಲಿ, ಅತ್ಯಂತ ಶ್ರದ್ಧಾ, ಭಕ್ತಿ, ಭಾವನೆಯಿಂದ ಮಾಡುತ್ತಿರುವುದು ಇವರ ಸಾಧನಾ ಸೇವೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದರೆ ತಪ್ಪಾಗಲಾರದು. ಅಲ್ಲದೇ ಅನೇಕ ವೈಜ್ಞಾನಿಕ, ವೈಚಾರಿಕ, ಶರಣ–ಕನ್ನಡ ಸಾಹಿತ್ಯ, ಸಂಸ್ಕೃತಿ, ನಾಡು/ನುಡಿ ಭಾಷೆಯ ಉನ್ನತಿಗಾಗಿ ಸತತವಾಗಿ ಶ್ರಮಿಸುತ್ತಿದ್ದಾರೆ. ಇನ್ನು ಕನ್ನಡ ಮತ್ತು ಶರಣ ಸಾಹಿತ್ಯ ಪರಿಷತ್ತಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತನು,ಮನ,ಧನದಿಂದ ಸಹಾಯ, ಸಹಕಾರ ಮಾಡಿದ್ದಾರೆ. ಇದಲ್ಲದೆ ಇನ್ನಿತರ ಸಮಾಜ ಮುಖಿ ಸೇವಾ ಸಂಸ್ಥೆಗಳಲ್ಲಿ ದುಡಿಯುವುದರ ಮೂಲಕ ಸಂಘಟನಯ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗಿಯಾಗುತ್ತಿರುವುದು ಅತ್ಯುತ್ತಮ ಬೆಳವಣಿಗೆ. ಜೊತೆಗೆ ಹಲವು ಸಮಾಜಿಕ, ಧಾರ್ಮಿಕ, ಸಂಘ ಸಂಸ್ಥೆಗಳ ಆಜೀವ ಸದಸ್ಯತ್ವ ಪಡೆದುಕೊಂಡಿದ್ದಾರೆ. ಇನ್ನು ಇವರಿಗೆ ಒಪ್ಪಿಸಿರುವ ಎಲ್ಲಾ ಕೆಲಸಗಳನ್ನು ಅತ್ಯಂತ ವಿನಮ್ರತೆಯಿಂದ ಮಾಡುವ ಮೂಲಕ ಸರ್ವ ಜನಾಂಗದ ಸ್ನೇಹ ಜೀವಿಯಾಗಿ, ಸೌಮ್ಯ ಸ್ವಭಾವದ ಮೇಧಾವಿ ಜನನಾಯಕರಾಗಿ  ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಸಮಾಜಮುಖಿ ಸೇವೆ :- ವಿವಿಧ ಸಂಘ ಸಂಸ್ಥೆಗಳ ಸಹಾಯದಿಂದ ಸಮಾಜದ ಅಭಿವೃದ್ಧಿ ಹಾಗೂ ಉನ್ನತಿಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಅಲ್ಲದೇ ಎಲ್ಲರೊಂದಿಗೆ ಆತ್ಮೀಯತೆಯ ಅಕ್ಕರೆಯ ಮಾತುಗಳ ಮೂಲಕ ಜನಸಾಮಾನ್ಯರ ಒಲವು ಮತ್ತು ಸ್ನೇಹವನ್ನು ಸಂಪಾದಿಸಿದ್ದಾರೆ. ಈ ಹಿನ್ನಲೆಯಲ್ಲಿ ಸಮಾಜದ ಕೆಳಸ್ತರದಲ್ಲಿ ಬದುಕುವ ಜನರ ಜೀವನದ ಸುಧಾರಣೆಗಾಗಿ ಸದಾ ಹಂಬಲಿಸುವ ಮನ ಇವರದು ಜೊತೆಗೆ ಅವರ ಶ್ರೆಯೋಭಿವೃದ್ಧಿಗಾಗಿ ಇವರ ಹೃದಯ ಸದಾ ಮಿಡಿಯುತ್ತಿದೆ. ಒಟ್ಟಿನಲ್ಲಿ ಹೇಳುವುದಾದರೇ, ಸೇವೆಯೇ ಶ್ರೇಷ್ಠ ಜೀವನವೆಂದು ತಿಳಿದು ಬಾಳುತ್ತಿರುವವರು ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ರವರು. ಹಾಗಾಗಿ ಸೇವೆಯ ಯಶಸ್ವಿ ದಿಕ್ಕಿನಲ್ಲಿ ದಾಪುಗಾಲು ಹಾಕುತ್ತ  ಬಡವರ ಪಾಲಿನ ಆಶಾಕಿರಣವಾಗಿದ್ದಾರೆ. ಜೊತೆಯಲ್ಲಿ ವಿವಿಧ ಜವಾಬ್ದಾರಿಗಳು ಹೊತ್ತು ಯಶಸ್ವಿಯಾಗಿ ಕೆಲಸ ಮಾಡಿದ,ಮಾಡುತ್ತಿರುವ ಕೀರ್ತಿ ಇವರದು ಮತ್ತು ಸಭೆ, ಸಮಾರಂಭ – ಕಾರ್ಯಾಗಾರ, ಶಿಬಿರಗಳ ಯಶಸ್ವಿಯ ರೂವಾರಿಗಳಾಗಿದ್ದಾರೆ. ಕಾರಣ ಇವರ ಯಶಸ್ಸು ಗುಟ್ಟು ಎಂದರೆ ಸಂಘಟನೆ,ಪರಿಶ್ರಮ, ಪ್ರಮಾಣಿಕತೆ ಎನ್ನಬಹುದು.

ರಾಜಕೀಯ ಕ್ಷೇತ್ರ :– ಹಿರಿಯರ ಸ್ಪೂರ್ತಿಯ ಮಾತುಗಳಿಂದ ಪ್ರೇರಣೆಗೊಂಡ ಪರಿಣಾಮವಾಗಿ ರಾಜಕೀಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುತ್ತಾರೆ. ಸತತ ಎರಡು ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ರೀತಿಯಲ್ಲಿ ಸೇವಾ ಕಾರ್ಯ, ಕೆಲಸಗಳನ್ನು ಯಶಸ್ವಿಯಾಗಿ ಮಾಡಿ, ಸೈ ಎನಿಸಿಕೊಂಡಿದ್ದಾರೆ. ಹಾಗಾಗಿ ಇವರ ನಿಸ್ವಾರ್ಥ ಸೇವಾ ಕೆಲಸಗಳನ್ನು ಗುರುತಿಸಿ, ಸ್ಥಳೀಯ ಜನರು ಇವರನ್ನು ಪುನಃಹ ಕುಷ್ಟಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹುರಿದುಂಬಿಸಿ, ಅವರ ಜೊತೆಯಾಗಿ ನಿಲ್ಲುವ ಮೂಲಕ ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ನವರನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸಿಕೊಂಡು ಬಂದ ಕೀರ್ತಿ ಇವರಿಗೆ ಸಲ್ಲುತ್ತದೆ. ಪ್ರಸ್ತುತ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗೆ ಜನಪರ, ರೈತಪರ, ನಾಡಿನ ಅಭ್ಯುದಯಕ್ಕಾಗಿ ದುಡಿಯುತ್ತಿದ್ದಾರೆ.

ಕ್ರಿಯಾಶೀಲ ವ್ಯಕ್ತಿತ್ವ:- ಸಂಭಾವಿತ ಮತ್ತು ಯಾವುದೇ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳದ ನಾಯಕ. ಹಗುರವಾಗಿ ಯಾರ ಬಗ್ಗೆಯೂ ಕೆಟ್ಟದಾಗಿ ಮಾತಾಡುವುದಿಲ್ಲ. ಯಾವುದೇ ರೀತಿಯ ಜಾತಿಯ ಬಲ ಪ್ರದರ್ಶನ ಮಾಡುವುದಿಲ್ಲ. ದೊಡ್ಡ ಮನಸ್ಸಿನಿಂದ ಎಲ್ಲವನ್ನೂ ಮೌನವಾಗಿ ನೋಡಿಕೊಂಡು ಇರುವ ವ್ಯಕ್ತಿ . ಅಲ್ಲದೆ ಎಂದಿಗೂ ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ರವರು ಸ್ವಾರ್ಥ ರಾಜಕೀಯ ಮಾಡಿದವರಲ್ಲ, ಕೊಟ್ಟ ಖಾತೆಯನ್ನು ಸಮರ್ಥವಾಗಿ ಅಷ್ಟೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿರುವ ಕ್ರಿಯಾಶೀಲ ವ್ಯಕ್ತಿತ್ವದವರು. ಅತಿಯಾದ ಮಹತ್ವಾಕಾಂಕ್ಷೆ ಇರದ ಸರಳ ಸ್ವಭಾವದ ನಿಷ್ಕಲ್ಮಶ ವ್ಯಕ್ತಿ. ಅಪಾರ ಅನುಭವವುಳ್ಳ ಎಲ್ಲಾ ಪಕ್ಷಗಳ, ಎಲ್ಲಾ ಧರ್ಮ ಮುಖಂಡರ ವಿಶ್ವಾಸವನ್ನು ಗಳಿಸಿದ್ದಾರೆ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ ಅಣ್ಣ ಬಸವಣ್ಣನವರ “ಕಾಯಕವೇ ಕೈಲಾಸ” ತತ್ವದಂತೆ ಅವರಿಗೆ ಸಿಕ್ಕಿರುವ ಜವಾಬ್ದಾರಿಯನ್ನು ಅತ್ಯಂತ ಶ್ರದ್ಧೆ, ನಿಷ್ಠೆ, ಪ್ರಾಮಾಣಿಕತೆಯಿಂದ ಆಡಳಿತ ಅನುಭವ ಉಪಯೋಗಿಸಿಕೊಂಡು ಪಾರದರ್ಶಕ ಆಡಳಿತ ನೀಡಿದ್ದಾರೆ ಮತ್ತು ನೀಡುತ್ತಿದ್ದಾರೆ. ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ರವರಿಗೆ ಇನ್ನು ಹೆಚ್ಚಿನ ಅಂದರೆ ದೊಡ್ಡ ಜವಾಬ್ದಾರಿಗಳು ಸೀಗಲಿ ಹಾಗೂ ಇವರಿಗೆ ವಹಿಸಿದ್ದ ಜವಾಬ್ದಾರಿಗಳಿಂದ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಹೊಂದಲಿ, ಕರ್ನಾಟಕಕ್ಕೆ ಹೊಸ ಆಯಾಮ ಸಿಗಲಿ, ಉತ್ತಮ, ಕಳಂಕ ರಹಿತ ಆಡಳಿತ ನೀಡಲಿ ಎಂದು ನಾಡಿನ ಜನರ ಪರವಾಗಿ ಆಶಿಸುತ್ತೇವೆ. ಅಭಿನಂದನೆ ನುಡಿ : ಹಲವು ಸಮಸ್ಯೆಗಳ  ನಡುವೆ, ದಿಟ್ಟ ಹೋರಾಟದ ಹಾದಿ ಸವೆಸಿ, ಈ ನಮ್ಮ ನಾಡಿನಲ್ಲಿ ಸೇವೆ ಸಲ್ಲಿಸುತ್ತಿರುವುದು ನಮ್ಮೆಲ್ಲರ ಪುಣ್ಯ ಬಂಧುಗಳೆ. ಸ್ವಾಭಿಮಾನ, ಸಂಘಟನೆ, ಹೋರಾಟ, ಪ್ರಮಾಣಿಕತೆಯ ಮೂಲಕ ಪ್ರತಿಯೊಬ್ಬ ಪ್ರಜೆಗಳಲ್ಲಿ ಸೇವಾ ಶ್ರೇಷ್ಠತೆಯ ಅರಿವನ್ನು ಮೂಡಿಸುವ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಹೀಗಾಗಿ ಬಡವರ, ಅನಾಥರ, ನಿರ್ಗತಿಕರ ಬೆಳವಣಿಗೆ ಪೂರಕವಾಗಿ ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ರವರು ಸದಾ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಇವರ ತ್ಯಾಗ ಕೊಡುಗೆ ಅಪಾರ, ಅಮೂಲ್ಯ ಹಾಗೂ ಇವರ ಸೇವೆ ನಿಜಕ್ಕೂ ಆಶಾದಾಯಕ ಕಾಯಕವಾಗಿದೆ ಎಂದರೆ ತಪ್ಪಾಗಲಾರದು. ಆದಕಾರಣ ಇವರು ಹೆಚ್ಚಾಗಿ ನೋವು-ನಲುವಿನ ಬಗ್ಗೆ ತೆಲೆಕೆಡಿಸಿಕೊಳ್ಳದೆ‌. 12ನೇ ಶತಮಾನದ ಬಸವಾದಿ ಪ್ರಮಥರು ಕಂಡ ಆದರ್ಶ ಸಮಾಜ ಕನಸು, ನಿರ್ಮಾಣ ಮಾಡಬೇಕೆಂಬ ಮಾಹಾದಾಸೆ ಇವರದು. ಸಮ ಸಮಾಜವನ್ನು ಕಟ್ಟುವ ಚಿಂತನೆ ಜೊತೆಗೆ ಸುಂದರ, ಆದರ್ಶ ಸಂಪತ್ಭರಿತ ನಾಡಾಗಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಬೇಕೆಂದು ಕಾರ್ಯಪೃವತ್ತರಾಗಿದ್ದಾರೆ. ಹಾಗಾಗಿ ದುಡಿಯುವ ಚೈತನ್ಯದ ಸ್ವೂರ್ತಿಯಾಗಿರುವ ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ರವರ ನಿಸ್ವಾರ್ಥ ಸೇವೆ  ಕಾರ್ಯಗಳು ಅನನ್ಯ ಎನ್ನುವುದು ನಾವೆಲ್ಲರೂ ಮರೆಯುವಂತಿಲ್ಲ. ಆದ್ದರಿಂದ ಇಂತಹ ಸಾಧಕರು ನಮ್ಮಗೆಲ್ಲರಿಗೂ ಮಾರ್ಗದರ್ಶಕರಾಗಿ,ನಾಡಿನ ಹೆಮ್ಮೆಯ ಮಗನಾಗಿ, ಇಡೀ ದೇಶವೇ ಹೆಮ್ಮೆ ಪಡುವಂತ ಸೇವೆ ಮಾಡಲಿ, ಇನ್ನು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಉನ್ನತವಾದ ಹುದ್ದೆ ದೊರೆಯಲಿ ಎಂಬುವುದೇ ನಮ್ಮೆಲ್ಲರ ಅದಮ್ಯ ಬಯಕೆ. ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ರವರಿಗೆ ಬಸವಾದಿ ಪ್ರಮಥರ ಹಾಗೂ ವಿಶ್ವ ದಾರ್ಶನಿಕರು ಉತ್ತಮ ಆಯುಷ್ಯ, ಆರೋಗ್ಯ ಕರುಣಿಸಿ, ನಾಡಿಗೆ ಇನ್ನಷ್ಟು ಸೇವೆ ಸಲ್ಲಿಸುವ ಶಕ್ತಿ ನೀಡಲಿ, ಮತ್ತೊಮ್ಮೆ ಕುಷ್ಟಗಿ ವಿಧಾನ ಸಭಾ ಕ್ಷೇತ್ರದ ಜನತೆ ಶ್ರೀ ದೊಡ್ಡನಗೌಡ ಹೆಚ್.ಪಾಟೀಲ್ ರವರನ್ನು ಪ್ರಚಂಡ ಬಹುಮತದಿಂದ ಆರಿಸಿ ತಂದಿದ್ದು ಬಹು ನಿರೀಕ್ಷಿತವಾಗಿದೆ. ಹಗಲಿರುಳು ಎನ್ನದೇ ಜನರ ಸೇವೆಗೆ ಸದಾ ಮುಂದಾಗಲಿ ಎಂದು ಆ ಭಂಗವಂತನಲ್ಲಿ ಪ್ರಾರ್ಥಿಸುವೆ.  ತಾವರಗೇರಾ ನ್ಯೂಸ್ ಪತ್ರಿಕಾ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ಪ್ರಾರ್ಥಿಸಿ,ಶುಭ ಹಾರೈಸುತ್ತೇವೆ.

ವಿಶೇಷ ಲೇಖನ : ಉಪ್ಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *