ಸನ್ಮಾನ್ಯ ಈಶ್ವರ ಖಂಡ್ರೆಯವರಿಗೆ ಮುಖ್ಯಮಂತ್ರಿ ಇಲ್ಲವೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸಬೇಕು – ಸಂಗಮೇಶ ಎನ್ ಜವಾದಿ.
ಬೀದರ/ಭಾಲ್ಕಿ/ಚಿಟಗುಪ್ಪ : ಕರ್ನಾಟಕ ರಾಜ್ಯದ ಭವಿಷ್ಯದ ನಾಯಕರು, ಬಡವರ ಬಂಧು, ರೈತರ ಆಶಾಕಿರಣ, ಬೀದರ್ ಜಿಲ್ಲೆಯ ಅಭಿವೃದ್ಧಿ ಹರಿಕಾರ, ಯುವಕರ ಕಣ್ಮಣಿ, ಜನಸಾಮಾನ್ಯರ ಪ್ರೀತಿಯ ಜನನಾಯಕರಾದ ಶ್ರೀ ಈಶ್ವರ ಖಂಡ್ರೆಯವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಇಲ್ಲವೇ ಉಪಮುಖ್ಯಮಂತ್ರಿ ಹುದ್ದೆಗೆ ಪರಿಗಣಿಸಬೇಕು. ಪರಿಗಣಿಸಿ ಕಂದಾಯ, ಲೋಕೋಪಯೋಗಿ, ಸಹಕಾರ ಇಲಾಖೆಯ ಖಾತೆಗಳನ್ನು ಕೊಡಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಾಹಿತಿ, ಸಾಮಾಜಿಕ ಸೇವಕರು, ಪತ್ರಕರ್ತರಾದ ಸಂಗಮೇಶ ಎನ್ ಜವಾದಿಯವರು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಳೆದ ಮೂರು ಅವಧಿಯಲ್ಲಿ ಭಾಲ್ಕಿ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಯಶಸ್ವಿಯಾಗಿ ಸಾಗಿಸಿ, ನಿಸ್ವಾರ್ಥದಿಂದ ಸೇವೆಗೈದು, ಜನಸಾಮಾನ್ಯರಿಂದ ಸೈ ಎನಿಸಿಕೊಂಡಿದ್ದಾರೆ. ಪ್ರಗತಿಪರ ಚಿಂತಕರಾಗಿ, ವೈಜ್ಞಾನಿಕ ಶಿಕ್ಷಣದ ಅಭಿವೃದ್ಧಿಯ ಹರಿಕಾರರಾಗಿ, ಈದಿಗ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರು ಕೃಷಿ, ನೀರಾವರಿ, ಶಿಕ್ಷಣ, ಆರೋಗ್ಯ, ರಸ್ತೆ, ಸಾರಿಗೆ, ವಸತಿ ಸೇರಿದಂತೆ ಹಲವು ಯೋಜನೆಗಳನ್ನು ತಂದು, ಭಾಲ್ಕಿ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿರುವುದು ಕಾಣುತ್ತೇವೆ.ಉತ್ತಮ ಸಂಘಟಕರಾಗಿ ಯಶಸ್ವಿಯಾಗಿ ಆಡಳಿತ ನಡೆಸಿರುವ ಕೀರ್ತಿ ಇವರದು. ಲಿಂಗಾಯತ ಧರ್ಮದ ಪ್ರಬಲ ನಾಯಕರು ಹೌದು,ಸರ್ವ ಜನಾಂಗದ ಪ್ರೀತಿಯ ನೇತಾರರು. ಅನೇಕ ಅಭಿವೃದ್ಧಿ ಕಾರ್ಯಗಳು ಮಾಡಿ, ಕಲ್ಯಾಣ ಕರ್ನಾಟಕದಲ್ಲಿ ಭಾಗದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ಛಾಪು ಮೂಡಿಸಿದ್ದಾರೆ. ಈ ಹಿಂದೆ ನೀಡಿರುವ ಸಚಿವ ಖಾತೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇವರ ಸಂಘಟನಾ ಸಾಮರ್ಥ್ಯದಿಂದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಕರ್ನಾಟಕ ರಾಜ್ಯದ ಸರ್ವಾಂಗೀಣ, ಸರ್ವತೋಮುಖ ಅಭಿವೃದ್ಧಿಗಾಗಿ ಸುರಕ್ಷಿತ ಕರುನಾಡಿನ ಅಭ್ಯುದಯದ ಏಳಿಗೆಗಾಗಿ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ರವರು ಮುಖ್ಯಮಂತ್ರಿ ಇಲ್ಲವೇ ಉಪಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಮತ್ತು ಯೋಗ್ಯ, ಸಮರ್ಥ ಉತ್ಸಾಹಿ ವ್ಯಕ್ತಿತ್ವದವರಾಗಿದ್ದಾರೆ. ಇವರು ಪಟ್ಟ ಪರಿಶ್ರಮ ಬಹಳ ದೊಡ್ಡ ಮಟ್ಟದಲ್ಲಿ ಇರುವ ಕಾರಣದಿಂದ ರಾಜ್ಯದ ಮುಖ್ಯಮಂತ್ರಿಯಾಗಿ ಅಥವಾ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ಯವರನ್ನು ಆಯ್ಕೆ ಮಾಡಬೇಕು. ಈ ಮೂಲಕ ಕಲ್ಯಾಣ ಕರ್ನಾಟಕಕ್ಕೆ ಅವಕಾಶ ಕಲ್ಪಿಸಿದಂತೆ ಆಗುತ್ತದೆ ಎಂದು ಸಾಹಿತಿ ಪತ್ರಕರ್ತರು ಸಾಮಾಜಿಕ ಸೇವಕರಾದ ಸಂಗಮೇಶ ಎನ್ ಜವಾದಿ ಯವರು ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಯವರೆಗೆ ಒತ್ತಾಯಿಸಿ,ವಿನಂತಿಸಿದ್ದಾರೆ.
ವರದಿ-ಸಂಗಮೇಶ ಎನ್ ಜವಾದಿ.