ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಇಮಾಮ್ ಕಾಂಗ್ರೆಸ್ ಯುವ ನಾಯಕ ಮನವಿ.
ಯಲಬುರ್ಗಾ : ರಾಜ್ಯದಲ್ಲಿ ಸ್ವಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಯಲಬುರ್ಗಾ ಕ್ಷೇತ್ರದ ಅಭಿವೃದ್ಧಿ ಹರಿಕಾರರಾದ ಬಸವರಾಜ ರಾಯರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ತಾಲೂಕಿನ ಮುಧೋಳ ಗ್ರಾಮದ ಮುಸ್ಲಿಂ ಸಮಾಜದ ಯುವ ನಾಯಕ ಇಮಾಮ್ ಮೊತೇಖಾನ್ ಅವರು ರಾಜ್ಯ ಸಂಚಾಲಕರು ಕೆಪಿಸಿಸಿ ಅಸಂಘಟಿತ ಕಾರ್ಮಿಕರ ವಿಭಾಗ ಸಾಮಾಜಿಕ ಜಾಲತಾಣ, ತಾಲೂಕ ಉಪಾಧ್ಯಕ್ಷರು ಹಿಂದುಳಿದ ವರ್ಗಗಳ ವಿಭಾಗ ಬ್ಲಾಕ್ ಕಾಂಗ್ರೆಸ್ ಯಲಬುರ್ಗಾ ಅವರು ಮನವಿ ಮಾಡಿದ್ದಾರೆ. ಈ ಯಲಬುರ್ಗಾ ಕ್ಷೇತ್ರದಲ್ಲಿ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಆರು ಭಾರಿ ಶಾಸಕರಾಗಿ, ಸಂಸದರಾಗಿ ಆಯ್ಕೆ ಆಗುವ ಮೂಲಕ ಎರಡು ಭಾರಿ ಸಚಿವರಾಗಿ ಕೂಡ ಕಾರ್ಯನಿರ್ವಹಿಸಿರುವ ಬಸವರಾಜ ರಾಯರೆಡ್ಡಿ ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಅತಿ ಹೆಚ್ಚು ಮೊರಾರ್ಜಿ ವಸತಿ ಶಾಲೆ, ಹೈಸ್ಕೂಲ್, 2 ಪದವಿ ಕಾಲೇಜು, ಐಟಿಐ, ಇಂಜಿನಿಯರಿಂಗ್, ಪಿಜಿ ಕಾಲೇಜ ಮಂಜೂರು ಮಾಡಿಸಿದ್ದಾರೆ. ರಾಜ್ಯದಲ್ಲಿಯೇ ಅತಿ ಹೆಚ್ಚು ಶೈಕ್ಷಣಿಕ ಕ್ಷೇತ್ರಕ್ಕೆ ಅಧ್ಯತೆ ನೀಡುವ ಮೂಲಕ ಮಾದರಿ ಕ್ಷೇತ್ರ ಮಾಡಿದ್ದಾರೆ. ಇವರ ಹಿರಿತನ, ಅನುಭವವನ್ನು ಗುರ್ತಿಸಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿರುವ ಅವರು, ತಮ್ಮ ಅವಧಿಯಲ್ಲಿ ಕೂಕನೂರು, ತಳಕಲ್ ಕುದ್ರಿಮೋತಿಯಲ್ಲಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಮಂಜೂರು ಆಗಿದ್ದಾವೆ. ಈ ನಿಟ್ಟಿನಲ್ಲಿ ನಮ್ಮ ಯಲಬುರ್ಗಾ ತಾಲೂಕಿನಲ್ಲಿ ನಮ್ಮ ಸಮಾಜದ ವಿದ್ಯಾರ್ಥಿಗಳಿಗೆ ಯಲಬುರ್ಗಾ ಸೇರಿದಂತೆ ಇನ್ನೊಂದು ಗ್ರಾಮದಲ್ಲಿ ಅಲ್ಪಸಂಖ್ಯಾತ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ಮಂಜೂರು ಮಾಡಿಸುವ ಮೂಲಕ ಅಲ್ಪಸಂಖ್ಯಾತ ಸಮಾಜದ ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡುವಂತೆ ನಮ್ಮ ಸಮಾಜದ ಪರವಾಗಿ ಶಾಸಕ ಬಸವರಾಜ ರಾಯರೆಡ್ಡಿಯವರಿಗೆ ಅಲ್ಪಸಂಖ್ಯಾತ ಸಮಾಜದ ಯುವ ನಾಯಕ ಇಮಾಮ್ ಮೊತೇಖಾನ್ ಅವರು ಮನವಿ ಮಾಡಿದ್ದಾರೆ.
ವರದಿ – ಹುಸೇನಬಾಷ್ ಮೊತೇಖಾನ್