ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಗೆ ಸಂಪುಟ ದರ್ಜೆಯ ಸ್ಥಾನ ನೀಡಲು ಒತ್ತಾಯ– ಮೋಹನ್ ಕುಮಾರ್ ದಾನಪ್ಪ!
ಕಂಪ್ಲಿ: ಮೇ 28, ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನ ಸಭಾ ಕ್ಷೇತ್ರಕ್ಕೆ 2 ನೇ ಬಾರಿಗೆ ಅತ್ಯಂತ ಬಹುಮತದಿಂದ ಆಯ್ಕೆಗೊಂಡ ಶಾಸಕರಾದ ಜೆ.ಎನ್.ಗಣೇಶ್ ರವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡುವಂತೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಒತ್ತಾಯಿಸಿದ್ದಾರೆ! ಬಳ್ಳಾರಿ ಜಿಲ್ಲೆಯ ಕಂಪ್ಲಿ ವಿಧಾನ ಸಭಾ ಕ್ಷೇತ್ರವು 2008ರಲ್ಲಿ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿ ರಚನೆಗೊಡಿರುತ್ತದೆ, ಅಲ್ಲಿಂದ ಇಲ್ಲಿಯತನಕ ಆಯ್ಕೆಯಾದ ಶಾಸಕರಿಗೆ ಆಯಾ ಆಡಳಿತ ಪಕ್ಷಗಳು ಸಚಿವ ಸಂಪುಟದಲ್ಲಿ ಸೂಕ್ತ ಸ್ಥಾನ ನೀಡದೆ ಈ ಕ್ಷೇತ್ರಕ್ಕೆ ಅನ್ಯಾಯ ಮಾಡಿಕೊಂಡು ಬಂದಿರುತ್ತವೆ, ಈ ಬಾರಿಯ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತ್ಯಂತ ಬಹುಮತದೊಂದಿಗೆ ಗೆಲುವು ಸಾಧಿಸಲು ರಾಜ್ಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ಜನರು ಬೆಂಬಲಿಸಿರುವುದರಿಂದ ಸಾಧ್ಯವಾಗಿರುವುದು ನೈಜ್ಯ ಸಂಗತಿ ಆದರೆ ನೂತನ ಸಚಿವ ಸಂಪುಟದಲ್ಲಿ ಬೆರೆಳೆಣಿಕೆಯಷ್ಟೇ ಶಾಸಕರಿಗೆ ಸಚಿವ ಸ್ಥಾನ ನೀಡಿರುವುದು ದಲಿತ ಸಮುದಾಯಕ್ಕೆ ಅನ್ಯಾಯ ಮಾಡಿದಂತಾಗಿರುತ್ತದೆ, ಕಂಪ್ಲಿ ಕ್ಷೇತ್ರದ ಶಾಸಕ ಗಣೇಶ್ ರವರು ದಲಿತ ಸಮುದಾಯದವರಾಗಿದ್ದು ಕಳೆದ ಬಾರಿ ವಿರೋಧ ಪಕ್ಷದಲ್ಲಿದ್ದರು ಹೆಚ್ಚಿನ ಅನುದಾನ ತಂದು ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಮಾಡಿದ್ದಲ್ಲದೆ ಕ್ಷೇತ್ರದಲ್ಲಿ ಸದಾ ಲಭ್ಯವಿದ್ದು ಎಲ್ಲಾ ವರ್ಗದ ಜನರ ಕಷ್ಟ ನೋವಿಗೆ ಸ್ಪಂದಿಸಿ ಎಲ್ಲಾ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದರ ಅಂಗವಾಗಿ ಈ ಬಾರಿಯ ಚುನಾವಣೆಯಲ್ಲಿ ಜನರು ಅನ್ಯ ಪಕ್ಷಗಳನ್ನ ತ್ಯಜಿಸಿ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದರಿಂದ ಕ್ಷೇತ್ರದ ಇತಿಹಾಸದಲ್ಲಿ ಅತ್ಯಂತ ಬಹುಮತದೊಂದಿಗೆ 2ನೇ ಬಾರಿಗೆ ಆಯ್ಕೆಗೊಂಡಿರುವ ಗಣೇಶ್ ರವರು ಸಚಿವ ಸ್ಥಾನಕ್ಕೆ ಅರ್ಹರಾಗಿರುತ್ತಾರೆ. ಆದರೆ ಈ ನೂತನ ಸರ್ಕಾರದಲ್ಲಿ ಗಣೇಶ್ ರವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗುವುದೆಂಬುವ ಆಶಾಭಾವನೆಯಲ್ಲಿದ್ದ ಜನರ ಕನಸನ್ನ ಗಣೇಶ್ ರಿಗೆ ಸಚಿವ ಸ್ಥಾನ ನೀಡದೇ ಹುಸಿಗೊಳಿಸಿದ್ದು ಮುಂದಿನ ದಿನಗಳಲ್ಲಿ ದಲಿತ ಹಿಂದುಳಿದ ಅಲ್ಪಸಂಖ್ಯಾತರನ್ನ ವಿರೋಧ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಲಿದೆ, ಆದ್ದರಿಂದ ಈ ನೂತನ ಸರ್ಕಾರದಲ್ಲಿ ಕಂಪ್ಲಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜೆ.ಎನ್.ಗಣೇಶ್ ರವರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಬೇಕೆಂದು ರಾಜ್ಯದ ಮಾಜಿ ಮುಖ್ಯ ಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕರಾದ ಎಂ.ವೀರಪ್ಪ ಮೊಯಿಲಿರವರನ್ನ ಭೇಟಿ ಮಾಡಿ ಮನವಿ ಸಲ್ಲಿಸಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆ.ಸಿ.ವೇಣುಗೋಪಾಲ್, ರಂದೀಪ್ ಸಿಂಗ್ ಸುರ್ಜೆವಾಲಾ, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವ ಕುಮಾರ್ ರವರಿಗೆ ಈ ಮೇಲ್ ಮಾಡುವ ಮೂಲಕ ವಕೀಲ ಮೋಹನ್ ಕುಮಾರ್ ದಾನಪ್ಪನವರು ಒತ್ತಾಯಿಸಿದ್ದಾರೆ!
ವರದಿ-ಮಹೇಶ ಶರ್ಮಾ