ಶಾಸಕರ ಗ್ರಾಮ ಸಂಚಾರ:ಕೈ ಜೋಡಿಸಿದ ಪತ್ನಿ ಪುಷ್ಪ, ಗ್ರಾಮಗಳ ಗ್ರಾಮಸ್ಥರಿಂದ ದಂಪತಿಗಳಿಗೆ ಅದ್ಧೂರಿ ಸ್ವಾಗತ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಕ್ಷೇತ್ರದ ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ರವರು, ನಿರಂತರವಾಗಿ ಗ್ರಾಮ ಸಂಚಾರದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಅವರೊಂದಿಗೆ ಅವರ ಪತ್ನಿ ಶ್ರೀಮತಿ ಪುಷ್ಪರವರು ಕೈ ಜೋಡಿಸಿದ್ದಾರೆ. ಬೆಳಿಗ್ಗೆ ಯಿಂದ ನಿತ್ಯ ಬೆಳಿಗ್ಗೆ ಯಿಂದಲೇ ಶಾಸಕರ ಗ್ರಾಮ ಸಂಚಾರ ಆರಂಭಗೊಳ್ಳುತ್ತದೆ, ಸಂಜೆ ಮುಕ್ತಾಯ ಗೊಳ್ಳುತ್ತದೆ. ಕೆಲವೊಮ್ಮೆ ರಾತ್ರಿಯಾಗಿದ್ದರೂ ಕೂಡ, ಗ್ರಾಮಗಳಲ್ಲಿ ಅಹವಾಲು ಆಲಿಸುವುದರಲ್ಲಿ ಶಾಸಕರು ತಲ್ಲೀನರಾಗಿರುತ್ತಾರೆ. ಹೀಗಿರುವಾಗ ಅವರ ಮಡದಿ ಶ್ರೀಮತಿ ಪುಷ್ಪರವರೂ ಕೂಡ,ಪ್ರತಿಯೊಂದು ಕ್ಷಣ ತಮ್ಮ ಪತಿ ಯೊಂದಿಗಿದ್ದು ಗ್ರಾಮೀಣ ಜನರ ಸೇವೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದಾರೆ. ಇದನ್ನರಿತ ಪ್ರಜ್ಞಾವಂತರು ಗ್ರಾಮಗಳ ಗ್ರಾಮಸ್ಥರು ದಂಪತಿಗಳಿಬ್ಬರನ್ನು, ತುಂಬಾ ಉತ್ಸುಕತೆಯಿಂದ ಹಾಗೂ ಅದ್ಧೂರಿಯಾಗಿ ಬರಮಾಡಿಕೊಳ್ಳುತ್ತಿದ್ದಾರೆ. ಅಂತೆಯೇ ನಾಗರುಣುಸೆ ಗ್ರಾಮದಲ್ಲಿ ಶಾಸಕರು ಮತ್ತು ಅವರ ಪತ್ನಿ ಪುಷ್ಪರನ್ನು,ಗ್ರಾಮದ ಹಿರಿಯರು ಗ್ರಾಮಸ್ಥರು ತುಂಬು ಹೃದಯದಿಂದ ಸನ್ಮಾನಿಸಿ ಅಭಿನಂದಿಸಿದ್ದಾರೆ. ಇದರಂತೆಯೇ ರಾಮದುರ್ಗ,ಶ್ರೀಕಂಠಾಪುರ ಹಾಗೂ ಶ್ರೀಕಂಠಾಪುರ ತಾಂಡ,ಯರ್ರಗುಂಡ್ಲಹಟ್ಟಿ, ಸಿ ಎಸ್.ಪುರ ಸೇರಿದಂತೆ. ಅವರು ಭೇಟಿ ನೀಡಿದ ಕಡೆಗಳಲ್ಲಿ, ದಂಪತಿಗಳನ್ನು ಬಹು ಅದ್ದೂರಿಯಾಗಿ ಬರಮಾಡಕೊಂಡು ಸನ್ಮಾನಿಸುತ್ತಿದ್ದಾರೆ. ಶಾಸಕರು ತಾವು ಭೇಟಿ ನೀಡುವ ಗ್ರಾಮಗಳಲ್ಲಿ, ತಮ್ಮ ಪತ್ನಿಯೊಡಗೂಡಿ ಮೂಲೆ ಮೂಲೆಗೆ ತೆರಳಿ ಖುದ್ದು ಸಮಸ್ಯೆಗಳನ್ನರಿತು. ಗ್ರಾಮಸ್ಥರ ಅಹವಾಲು ಆಲಿಸಿ, ತುರ್ತಾಗಿ ಅವರಿಗೆ ಸ್ಪಂಧಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಇದೆಲ್ಲವೂ ಅವರ ಸರಳತೆ ಪ್ರಾಮಾಣಿಕತೆ, ಸೇವಾಮನೋಭಾವವನ್ನು ಪ್ರತಿಭಿಂಬಿಸುತ್ತದೆ ಎನ್ನುತ್ತಾರೆ ಪ್ರಜ್ಞಾವಂತರು. ಸಾಮಾಜಿಕ ಕಾಳಜಿಯ ಶಾಸಕರು ದೊರಕಿರುವುದಕ್ಕೆ, ಕ್ಷೇತ್ರದ ಜನತೆ ಹಾಗೂ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತ ಸಂಘಟನೆಯವರು, ಕಾರ್ಮಿಕ ಸಂಘಟನೆಯವರು, ಹೋರಾಟಗಾರರು, ಸಾಹಿತಿಗಳು, ಕಲಾವಿದರು, ಪ್ರಗತಿ ಪರ ಚಿಂತಕರು, ಪತ್ರಕರ್ತರು, ಜನಪ್ರತಿನಿಧಿಗಳು, ವಿವಿದ ಮಹಿಳಾ ಸಂಘದವರು, ವಿವಿದ ಕನ್ನಡ ಪರ ಸಂಘಟನೆಯವರು, ವಿವಿದ ದಲಿತ ಪರ ಸಂಘಟನೆಗಳವರು, ಕೂಡ್ಲಿಗಿ ಪಟ್ಟಣದ ನಾಗರೀಕರು ಸೇರಿದಂತೆ ಹಿರಿಯರು, ಪ್ರಜ್ಞಾವಂತ ಯುವಕರು ಸಂತಸ ವ್ಯಕ್ತಪಡಿಸಿದ್ದಾರೆ.
✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.