ಸಬ್ ರಿಜಿಸ್ಟರ್ ಕಚೇರಿಗೆ ಶಾಸಕರ ಭೇಟಿ:ಸಾರ್ವಜನಿಕರಿಗೆ ಆದ್ಯತೆ ಕೊಡುವಂತೆ ಸೂಚನೆ.
ವಿಜಯನಗರ ಜಿಲ್ಲೆ ಕೂಡ್ಲಿಗಿ:ಉನೊಂದಣಾಧಿಕಾರಿ ಕಚೇರಿಗೆ ಶಾಸಕ, ಡಾ”ಎನ್.ಟಿ.ಶ್ರೀನಿವಾಸ್ ದಿಡೀರ್ ಬೇಟಿ ನೀಡಿದರು. ಅವರು ಸಿಬ್ಬಂದಿ ಹಾಜರಾತಿ ಪರಿಶೀಲಿಸಿದಾಗ , ಸಬ್ ರಿಜಿಸ್ಟರ್ ಅಧಿಕಾರಿ ಅನಾರೋಗ್ಯ ಕಾರಣ ರಜೆಯಲ್ಲಿರುವುದಾಗಿ ತಿಳಿದು ಬಂತು. ಗುಮಾಸ್ತರಾಗಿ ರುವ ದೇವೇಂದ್ರ ನಾಯ್ಕ ಹಾಜರಾತಿಯಲ್ಲಿ ಮಾತ್ರ ಹಾಜರಿದ್ದು, ಕೆಲಸದ ವೇಳೆಯಲ್ಲಿ ಕಚೇರಿಯಲ್ಲಿ ಇಲ್ಲದನ್ನು ಕಂಡು ಶಾಸಕರು ಕೆಂಡಾ ಮಂಡಲವಾದರು. ಇಪ್ಪತ್ತು ನಿಮಿಷಗಳ ನಂತರ ಕಚೇರಿಗೆ ದಾವಿಸಿದ ಗುಮಾಸ್ತ ದೇವೇಂದ್ರನಾಯ್ಕರನ್ನು, ಗೈರು ಹಾಜರಿಗೆ ಕಾರಣ ಕೇಳಿದ ಶಾಸಕರು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪ್ರತಿಕ್ರಿಯಿಸಿದ ಗುಮಾಸ್ತ ದೇವೇಂದ್ರನಾಯ್ಕ ಅನಾರೋಗ್ಯದಿಂದಾದ ಅನಿವಾರ್ಯ ಕಾರಣ,ತುರ್ತುಗಿ ಕಚೇರಿಯಿಂದ ಕೆಲ ಹೊತ್ತು ಹೊರ ಹೋಗಿರುವುದಾಗಿ ಸಬೂಬು ನೀಡಿದರು.ಇತ್ತೀಚೆಗಷ್ಟೇ ಜರುಗಿದ ಸಭೆಯಲ್ಲಿ ಇಲಾಖಾಧಿಕಾರಿ ಗೈರಾಗಿದ್ದು, ಅದು ಮರುಕಳಿಸಬಾರದು ಎಂದು ಶಾಸಕರು ಎಚ್ಚರಿಸಿದರು. ಕಚೇರಿಯಲ್ಲಿ ಕೇವಲ ಬೃಹತ್ ಬಂಡವಾಳ ಶಾಯಿಗಳಿಗೆ ಆಧ್ಯತೆ ನೀಡಲಾಗುತ್ತೆ, ಸಾರ್ವಜನಿಕರ ಕೆಲಸಗಳನ್ನು ಅನಗತ್ಯ ಭಾರೀ ವಿಳಂಬ ಮಾಡಲಾಗುತ್ತೆ ಎಂಬ ಆರೋಪಗಳಿವೆ. ಕೆಲ ಗಂಭೀರ ಆರೋಪಗಳಿರುವ ಸಾರ್ವಜನಿಕ ಹಿತಾಸಕ್ತಿಯ ಲಿಖಿತ ದೂರುಗಳು, ತಮ್ಮ ಬಳಿಗೆ ಬಂದಿದ್ದು ಸಾಕಷ್ಟು ಸಾರ್ವಜನಿಕರು ನೇರವಾಗಿ ತಮ್ಮಲ್ಲಿ ದೂರಿರುವುದಾಗಿ ಶಾಸಕರು ಈ ಸಂದರ್ಭದಲ್ಲಿ ತಿಳಿಸಿದರು. ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಕೆಲಸ ಮಾಡಿಕೊಡುವಲ್ಲಿ ಆಧ್ಯತೆ ಕೊಡಬೇಕಿದೆ, ಕೇವಲ ಬಂಡವಾಳ ಶಾಯಿಗಳ ಸೇವಕರಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ತಿಸಬಾರದು ಎಂದು ತಾಕೀತು ಮಾಡಿದರು. ದೂರುಗಳು ಮರುಕಳಿಸಿದರೆ ಸಂಬಂಧಿಸಿದ ಉನ್ನತಾಧಿಕಾರಿಗಳಲ್ಲಿ ದೂರಲಾಗುವುದು, ಮತ್ತು ತಪ್ಪಿತಸ್ತರ ವಿರುದ್ಧ ಶಿಸ್ಥು ಕ್ರಮಕ್ಕೆ ಶಿಪಾರಸ್ಸು ಮಾಡಲಾಗುವುದೆಂದು ಅವರು ಸಿಬ್ಬಂದಿಗೆ ಎಚ್ಚರಿಸಿದರು. ತ್ವರಿತಗತಿಯಲ್ಲಿ ಸಾರ್ವಜನಿಕರ ಕೆಲಸಗಳನ್ನು ಮಾಡಿ ಕೊಡಬೇಕೆಂದು ಸೂಚಿಸಿದರು. ಆಡಳಿತ ಭವನಕ್ಕೆ ಕಚೇರಿಯನ್ನು ಸ್ಥಳಾಂತರಿಸುವಲ್ಲಿ, ಅನಗತ್ಯ ವಿಳಂಬ ನೀತಿ ಅನುಸರಿಸುತ್ತಿರುವುದಾಗಿ ಕೇಳಿಬಂದಿದೆ, ಇದರಿಂದಾಗಿ ಗ್ರಾಮೀಣ ಜನರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಶೀಘ್ರವೇ ಕಚೇರಿಯನ್ನು ಆಡಳಿತ ಭವನಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವಂತೆ, ಸಂಬಂಧಿಸಿದಂತೆ ಉನ್ನತಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ನಂತರ ತಾಲೂಕಿನ ಕೆಲವು ಪ್ರಮುಖ ಸಮಸ್ಯೆಗಳ ಕುರಿತು, ಪತ್ರಕರ್ತರು ಕೇಳಿದ ಪ್ರೆಶ್ನೆಗಳಿಗೆ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.