ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು – ಸಂಗಮೇಶ ಎನ್ ಜವಾದಿ.

Spread the love

ಸನ್ಮಾನ್ಯ ಶ್ರೀ ಈಶ್ವರ ಖಂಡ್ರೆ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕುಸಂಗಮೇಶ ಎನ್ ಜವಾದಿ.

ಬೀದರ/ಭಾಲ್ಕಿ: ಕಾಂಗ್ರೆಸ್ ಪಕ್ಷವು ಲಿಂಗಾಯತ ನಾಯಕ,ಮಾಜಿ ಮುಖ್ಯಮಂತ್ರಿ  ವೀರೇಂದ್ರ ಪಾಟೀಲ ಅವರು 1990 ರಲ್ಲಿ ಮುಖ್ಯಮಂತ್ರಿ ಆದ ಸ್ಥಾನದ ನಂತರ ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತ ನಾಯಕರಿಗೆ ಉನ್ನತ ಜವಾಬ್ದಾರಿಗಳು ಹಾಗೂ ಹೆಚ್ಚಿನ ರೀತಿಯಲ್ಲಿ ಅವಕಾಶಗಳು ಕೊಟ್ಟಿಲ. ವೀರೇಂದ್ರ ಪಾಟೀಲ ಅವರ ಪದಚ್ಯುತಿ ಮಾಡಿದ ಕಳಂಕದಿಂದ ಹೊರಬರಬೇಕೆಂದರೆ, ಮಾನ್ಯ ಶ್ರೀ ಈಶ್ವರ ಖಂಡ್ರೆ ರವರಿಗೆ ಉಪ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಪ್ರಬಲ ಖಾತೆಗಳನ್ನು ನೀಡಬೇಕು ಎಂದು ಸಾಹಿತಿ ಪತ್ರಕರ್ತರು ಸಾಮಾಜಿಕ ಸೇವಕರಾದ ಸಂಗಮೇಶ ಎನ್ ಜವಾದಿ ಹೇಳಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಶ್ವರ ಖಂಡ್ರೆಯವರು ಅತ್ಯುತ್ತಮ ಕಾರ್ಯ ಚಟುವಟಿಕೆಗಳಿಂದ ಹಾಗೂ ಕಾರ್ಯವೈಖರಿಯಿಂದ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದಕ್ಕಾಗಿ ಮಾನ್ಯ ಈಶ್ವರ ಖಂಡ್ರೆಯವರಿಗೆ ತಕ್ಷಣವೇ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ಲಿಂಗಾಯತರನ್ನು ಗೌರವಿಸಬೇಕು. ಕರ್ನಾಟಕದ ಲಿಂಗಾಯತ ಪ್ರಭಾವಿ ನಾಯಕ ಈಶ್ವರ ಖಂಡ್ರೆ ರವರು ,ಈ ಬಾರಿ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಬರುವಲ್ಲಿ ಅತಿ ಹೆಚ್ಚಿನ ಪ್ರಮುಖ ಪಾತ್ರ ವಹಿಸಿದ್ದಾರೆ.  ಮತ್ತು ಕಾಂಗ್ರೆಸ್ ಪಕ್ಷದಿಂದ 39 ಜನ ಲಿಂಗಾಯತ ಶಾಸಕರು ಆಯ್ಕೆಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ಬಹುಸಂಖ್ಯಾತ ಲಿಂಗಾಯತ ಸಮುದಾಯದವರು ಈ ಬಾರಿ ಸ್ಪಷ್ಟವಾಗಿ, ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಲಿಂಗಾಯತ ನಾಯಕ ಯಡಿಯೂರಪ್ಪನವರನ್ನು ಹಾಗೂ ಲಿಂಗಾಯತ ಧರ್ಮದವರನ್ನು ಅತ್ಯಂತ ಹೀನಾಯವಾಗಿ ಬಿಜೆಪಿ ನಡೆಸಿಕೊಂಡ ರೀತಿಯಿಂದ ಇವತ್ತು ಬಿಜೆಪಿ ಈ ದುಸ್ಥಿತಿ ತಲುಪಿದೆ.ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಮಾನದಲ್ಲಿ ಈ ರೀತಿಯಾಗಬಾರದೆಂದರೆ ಕಾಂಗ್ರೆಸ್ ಹೈಕಮಾಂಡ್ ಆದಷ್ಟು ಬೇಗ ಈಶ್ವರ ಖಂಡ್ರೆ ರವರಿಗೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ಗೌರವಿಸಬೇಕು,ಹಾಗೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕ ಭಾಗಕ್ಕೂ ನ್ಯಾಯ ನೀಡಿದಂತಾಗುತ್ತದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಮಾನ್ಯ ಮಲ್ಲಿಕಾರ್ಜುನ ಖರ್ಗೆ ಜಿ ಹಾಗೂ ರಾಹುಲ್ ಗಾಂಧಿಯವರು, ಲಿಂಗಾಯತರು ಸಂಪೂರ್ಣವಾಗಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿದ ಕಾರಣದಿಂದ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಅರಿತು ಆದಷ್ಟು ಬೇಗನೆ ಮಾನ್ಯ ಕರ್ನಾಟಕದ ಮುಖ್ಯಮಂತ್ರಿಗಳಿಗೆ ಈ ವಿಷಯವನ್ನು ಮನವರಿಕೆ ಮಾಡಿಕೊಟ್ಟು ಮಾನ್ಯ ಶ್ರೀ ಈಶ್ವರ ಖಂಡ್ರೆಯವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಲು ತಿಳಿಸಬೇಕು.ಇದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಹಕಾರ ಮತ್ತು ಅನುಕೂಲಕರವಾಗಲಿದೆ ಎಂದು ಸಾಹಿತಿ ಪತ್ರಕರ್ತರು ಸಾಮಾಜಿಕ ಸೇವಕರಾದ ಸಂಗಮೇಶ ಎನ್ ಜವಾದಿ ತಿಳಿಸಿದ್ದಾರೆ.

ಸಂಗಮೇಶ ಎನ್ ಜವಾದಿ 

Leave a Reply

Your email address will not be published. Required fields are marked *