ವಾಯ್ಸ್ ಆಫ್ ಬಂಜಾರ ಗಾಯನ ಕಾರ್ಯಕ್ರಮ ಇದನ್ನು ನಾವು ಪ್ರತಿ ಶನಿವಾರ ಸಂಜೆ 07.30 ಗಂಟೆಯಿಂದ ಆನ್ಲೈನ್ ಗೂಗಲ್ ಮೀಟ್ ನಲ್ಲಿ……
ವಾಯ್ಸ್ ಆಫ್ ಬಂಜಾರ ಗಾಯನ 60 ನೇ ವಾರದ ವಿಶೇಷ ಆಹ್ವಾನಿತ ಅತಿಥಿಗಳಾಗಿ ಶ್ರೀ ಓಂಪ್ರಕಾಶ್ ನಾಯಕ್ ನಟ ಮತ್ತು ನಿರ್ದೇಶಕರು ಭಾಗವಹಿಸಿ ಉದಯೋನ್ಮುಖ ಗಾಯಕರಿಗೆ ಸಂಗೀತದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದರು. ನಿರ್ಣಾಯಕರಾಗಿ ಬಂಜಾರ ಹಿರಿಯ ಗಾಯಕರು ಲೇಖಕರು ಆದ ಕಲಾಶ್ರೀ ವಸಂತ ಎಲ್ ಚವ್ಹಾಣ್ ಮತ್ತು ಗಾಯಕರು ಮತ್ತು ಗೀತ ರಚನೆಕಾರರಾದ ಶ್ರೀ ಎಸ್ ಮೀಠ್ಯಾನಾಯ್ಕ ಹಾಗೂ ಬಂಜಾರ ಗಾಯಕರು ಶ್ರೀ ಜೀವ ಪಿ ಎಸ್ ಹಾಜರಿದ್ದರು. ವಾಯ್ಸ್ ಆಫ್ ಬಂಜಾರದ ಸಂಚಾಲಕರಾದ ಶ್ರೀ ಗೋಪಾಲ್ ನಾಯಕ್ ನಿರೂಪಣೆ ಮತ್ತು ನಿರ್ವಹಣೆ ಮಾಡಿದರು. ವಾಯ್ಸ್ ಆಫ್ ಬಂಜಾರದ ಸಂಸ್ಥಾಪಕರು ಮತ್ತು ಸಂಚಾಲಕರು ಶ್ರೀ ರಾಮು ಎನ್ ರಾಠೋಡ್ ಮಸ್ಕಿ ಉಪಸ್ಥಿತರಿದ್ದರು. ಡಾ. ಗಿರೀಶ್ ಮೂಡ್ ಹೃದಯ ರೋಗ ತಜ್ಞರು ಅಮೇರಿಕಾ ಮತ್ತು ಸಮಾಜ ಚಿಂತಕರು ಕೂಡ ಹಾಜರಿದ್ದರು. ಪ್ರಕಾಶ್ ಜಾಧವ್, ಕುಮಾರ್ ನಾಯ್ಕ್, ಶಾರದಾ ಬಾಯಿ, ರಮೇಶ್ ಲಮಾಣಿ, ಪೂಜಾ ಚವ್ಹಾಣ, ಪ್ರೇಮಾ ರಾಠೋಡ್, ರವಿರಾಜ್ ದೊಡ್ಡಮನಿ, ಸಿಂಧು ಚವ್ಹಾಣ್, ಮಂಜು ಮದಲಪುರ, ಪ್ರೇಮಾ ಚವ್ಹಾಣ್, ಸೋಮು ಪಮ್ಮಾರ, ಸಂತೋಷ ಬಂಜಾರ, ರಾಜು ನಾಯ್ಕ್ ಡಿ ಎಂ, ಧರ್ಮೆಂದ್ರ ಕುಮಾರ್ ಪಿ ಎಲ್, ಪರಶುರಾಮ್ ಕಲ್ಬುರ್ಗಿ, ಸುನಿಲ್ ನಾಯ್ಕ್, ಥಾಕ್ರ್ಯಾ ನಾಯ್ಕ್, ಮನುಜ ರಾಠೋಡ್, ಕವಿತಾ ಬಾಯಿ, ಜಿ.ಕೆ.ರಾಠೋಡ್, ಕೀಶೋರ್ ನಾಯ್ಕ್, ಧನಂಜಯ್ ನಾಯ್ಕ್, ರವಿ ಲಂಬಾಣಿ, ವೆಂಕಟೇಶ್ ಕೆ.ಡಿ.ಎ., ರಾಹುಲ್ ಜಾಧವ್, ಪೀರ್ಯ ನಾಯ್ಕ್, ಅರುಣ್ ಎ, ಮಾರುತಿ ತುಳಸಿಮನಿ, ದೇವು ಲಮಾಣಿ, ಇಂದುಮತಿ ಚವ್ಹಾಣ್, ಚಂದ್ರಕಲಾ ಬಾಯಿ, ರಕ್ಷಿತ ಬಾಯಿ ಮುಂತಾದ ಬಂಜಾರ ಉದಯೋನ್ಮುಖ ಗಾಯಕರು ಭಾಗವಹಿಸಿ ಬಂಜಾರ ಜಾನಪದ ಭಾವಗೀತೆ ಭಜನೆ ಮತ್ತು ಸಂಸ್ಕೃತಿ ಸಂಪ್ರದಾಯ ಇತಿಹಾಸ ಕುರಿತು ಹಾಡುಗಳನ್ನು ಹಾಡಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ವರದಿ-ಉಪಳೇಶ ವಿ.ನಾರಿನಾಳ.