ಬಸವಣ್ಣನವರ ಅನುಯಾಯಿ  ಗುರು ಬಸವ ಪಟ್ಟದ್ದೇವರು.

Spread the love

ಬಸವಣ್ಣನವರ ಅನುಯಾಯಿ  ಗುರು ಬಸವ ಪಟ್ಟದ್ದೇವರು.

ಬಸವಣ್ಣನವರ  ಕರ್ಮಭೂಮಿ, ಶರಣರು ನಡೆದಾಡಿದ ಪಾವನನೆಲ.ಭಾವೈಕ್ಯತೆಯ, ಸೌಹಾರ್ದ, ಸಹೋದರತೆ ,ಸಹಬಾಳ್ವೆ ,ಸಮಾನತೆಗಾಗಿ ಶ್ರಮಿಸಿದ ಕಾಯಕ ತತ್ವದ ಭೊಮಿ, ಕಲ್ಯಾಣ ನಾಡಿನ  ಮುಕುಟವೆಂದೇ ಪ್ರಸಿದ್ಧಿ ಪಡೆದು ಜನಸಾಮಾನ್ಯರ ಪ್ರೀತಿಯ ಶ್ರೀ ಮಠವೆಂದೆ ಖ್ಯಾತಿ ಪಡೆದ ಮಠವೇ ಭಾಲ್ಕಿ ಹಿರೇಮಠ ಸಂಸ್ಥಾನ ಮಠ. ಶ್ರೀ ಮಠವು ಜಾತಿ ಮತ ಪಂಥಗಳ ಬೇದ ಭಾವನೆಗಳು ಹೊಡೆದು ಹಾಕಿ ಕಾಯಕ ಸಿದ್ಧಾಂತದ ನೀತಿಗಳು, ಬಸವಾದಿ ಪ್ರಮಥರ ವೈಚಾರಿಕ ಚಿಂತನೆಗಳು ಜನಸಾಮಾನ್ಯರಲ್ಲಿ ನಿರಂತರವಾಗಿ ಬಿತ್ತುವ ಕೆಲಸ ಮಾಡುತ್ತಿದೆ. ಶ್ರೀ ಮಠವು ಶತಮಾನಗಳಿಂದ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕಲ್ಯಾಣ ಕರ್ನಾಟಕ ಭಾಗದ ಹಾಗೂ ಕರುನಾಡಿನ ಸರ್ವಾಂಗೀಣ, ಸರ್ವೊತ್ತಮ ಅಭಿವೃದ್ಧಿಗಾಗಿ ಹಗಲಿರುಳು ಎನ್ನದೆ ದುಡಿಯುತ್ತಿದೆ. ಅದಕ್ಕಾಗಿ ಇಂದು ದೇಶದ ಹೆಮ್ಮೆಯ ಮಠವಾಗಿ ಬೆಳಗುತ್ತಿದೆ ಎಂದರೆ ತಪ್ಪಾಗಲಾರದು ಬಂಧುಗಳೇ. ಸಧ್ಯ ಶ್ರೀ ಮಠದ ಕಿರಿಯ ಪೀಠಾಧಿಪತಿಯಾಗಿ  ಪೂಜ್ಯ ಗುರು ಬಸವ ಪಟ್ಟದ್ದೇವರು ಜವಾಬ್ದಾರಿ ಹೊತ್ತುಕೊಂಡು ಸಕಲ ಜೀವಾತ್ಮರಿಗೆ ಲೇಸನೇ ಬಯಸುವ ಹತ್ತು ಹಲವು ವಿನೂತನ ಅಭಿವೃದ್ಧಿಯ ಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಶ್ರೀಮಠದ ಶ್ರೇಯಸ್ಸಿಗಾಗಿ, ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದೇ ರೀತಿ ನಾಡಿನ ತುಂಬೆಲ್ಲಾ ಶರಣರ ವೈಜ್ಞಾನಿಕ ಮತ್ತು ವೈಚಾರಿಕ ತತ್ತ್ವಗಳು ಬಿತ್ತುವ ಕೆಲಸ ಸಹ ಚಾಚೂ ತಪ್ಪದೇ ನಿರ್ವಹಣೆ ಮಾಡುಕೊಂಡು ಬರುತ್ತಿರುವುದು ಕಾಣುತ್ತಿದ್ದೇವೆ. ಹೀಗಾಗಿ ಗುರು ಬಸವ ಪಟ್ಟದ್ದೇವರ ಸಾಮಾಜಿಕ ಸೇವೆ ಅನನ್ಯ ಮತ್ತು ಅಜರಾಮರವಾದದ್ದು  ಎನ್ನುವುದಂತೂ ಇಲ್ಲಿ ಹೇಳಲೇಬೇಕಾದ ವಿಚಾರ, ಯಾಕೆ ಈ ಮಾತು, ಈ ಸಂದರ್ಭದಲ್ಲಿ ಹೇಳಲೇಬೇಕಾಗಿತ್ತು ಎಂದರೆ ಈ ನಿಟ್ಟಿನಲ್ಲಿ ಶ್ರೀಗಳು ಕೆಟ್ಟ ಚಟಗಳಿಗೆ ದಾಸರಾದ ಎಷ್ಟೋ ವ್ಯಕ್ತಿಗಳನ್ನು ತಿದ್ದಿ ತೀಡಿ ಸರಿದಾರಿಗೆ ತಂದು ಅವರ ನೆಮ್ಮದಿ ಜೀವನಕ್ಕೆ ಕಾರಣಿಕರ್ತರು. ಸ್ವಚ್ಛತಾ ಆಂದೋಲನಗಳನ್ನು ಹಮ್ಮಿಕೊಂಡು ಅನೇಕ ಕಾರ್ಯಕ್ರಮಗಳನ್ನು ನೀಡಿ ಮಾದರಿಯಾಗಿದ್ದಾರೆ.

ಶೈಕ್ಷಣಿಕ ಕ್ಷೇತ್ರದ ಉನ್ನತಿಗಾಗಿ ಅನೇಕ ಯೋಜನೆಗಳನ್ನು ಹಾಕಿಕೊಂಡು ಸಕಾರ ಮಾಡುತ್ತಿದ್ದಾರೆ. ಬಸವಾದಿ ಶರಣರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ  ತಿಂಗಳಿಗೊಮ್ಮೆ ಪ್ರತಿಯೊಬ್ಬ ಶರಣರ ಹೆಸರಿನಲ್ಲಿ ವಿಚಾರ ಮತ್ತು ಚಿಂತನಾ ಗೋಷ್ಠಿಗಳನ್ನು ಹಮ್ಮಿಕೊಂಡು ವಚನ ಸಾಹಿತ್ಯದ ರಸದೌತಣ ಬಡಿಸುವ ಕೆಲಸ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೆ

ಜನಸಾಮಾನ್ಯರೊಂದಿಗೆ ಮುಕ್ತವಾಗಿ ಬೆರೆಯುತ್ತಾರೆ. ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ನಿತ್ಯ ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ಇಂದು ಈ ಭಾಗದಲ್ಲಿ ನಡೆದಾಡುವ ಶರಣರು ಎಂದೇ ಸುಪ್ರಸಿದ್ಧ ಪಡೆದಿದ್ದಾರೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ಅಹಂಕಾರ, ದರ್ಪ, ದೌಲತ್ತುಗಳನ್ನು ಪ್ರದರ್ಶಿಸದೇ, ಸರ್ವ ಪರಿತ್ಯಾಗಿಯಾಗಿ, ಸಹನೆ, ತಾಳ್ಮೆ ,ಸೌಜನ್ಯತೆ, ವಿನಮ್ರತೆಯ ಅಕ್ಕರೆಯಿಂದ ಜನಸಾಮಾನ್ಯರನ್ನು ಹಾಗೂ ಮಕ್ಕಳನ್ನು ಗೌರವಿಸುತ್ತಾರೆ. ಅದಕ್ಕಾಗಿ  ಇವರನ್ನು ಜನಸಾಮಾನ್ಯರ ಸ್ನೇಹ ಜೀವಿ ಶ್ರೀಗಳೆಂದೇ ಕರೆಯುವುದುಂಟು.  ಇವರ ಪ್ರಾಮಾಣಿಕತೆ, ಪ್ರಬುದ್ಧತೆ, ನಿಷ್ಕಲ್ಮಶತೆಯಿಂದ ಲಕ್ಷಾಂತರ ಬಡವರಿಗೆ ಅನೇಕ ಸೌಲಭ್ಯಗಳನ್ನು ಒದಿಗಿಸಿದ್ದಾರೆ. ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ವ್ಯವಸ್ಥೆ ಮಾಡಿರುತ್ತಾರೆ. ಹೀಗೆ ಶ್ರೀಗಳ ಕಾರ್ಯ ಚಟುವಟಿಕೆಗಳು ಸದ್ದುಗದ್ದಲವಿಲ್ಲದೆ ನಿತ್ಯ ನಿರಂತರವಾಗಿ ಸೇವಾ ನಿಷ್ಠೆಯ ಕಾರ್ಯಗಳು ಚಾಚೂ ತಪ್ಪದೆ ಸಾಗರೋಪಾದಿಯಾಗಿ ಸಾಗುತ್ತಿವೆ. ಜನಮಾನಸಗೊಂಡಿವೆ ಎಂಬುದಂತೂ ಅಷ್ಟೇ ಸತ್ಯ.

ಗುರು ಬಸವ ಪಟ್ಟದ್ದೇವರು ದಿನನಿತ್ಯವೂ ಸೇವಾ ಕೈಂಕರ್ಯಗಳು ಯಾವುದೇ ಹಮ್ಮುಗಳಿಲ್ಲದೆ ಮಾಡಿಕೊಂಡು ಬರುತ್ತಿದ್ದಾರೆ. ಜನಪರ, ರೈತಪರ, ಬಡವರ ಪರ, ಕೂಲಿ ಕಾರ್ಮಿಕರ, ನೊಂದವರ ಧ್ವನಿಯಾಗಿದ್ದಾರೆ. ಹೀಗಾಗಿಯೇ ಶ್ರೀಗಳ ನಿಷ್ಕಲ್ಮಶ

ಶ್ರದ್ಧಾ ಭಕ್ತಿಯ ಸೇವಾ ಕಾರ್ಯಗಳು ಐತಿಹಾಸಿಕ  ಮತ್ತು ಶ್ಲಾಘನೀಯ ಸೇವಾ ಕೆಲಸ ಎಂದೇ ಹೆಮ್ಮೆಯಿಂದ ಹೇಳಬಹುದು.

ಅದಕ್ಕಾಗಿಯೇ ಶ್ರೀಗಳವರು ಸರ್ವ ಜನಾಂಗದ ಶಾಂತಿಯ ತೋಟದ ರೂವಾರಿಗಳು, ಮಾನವೀಯ ಮೌಲ್ಯಗಳ ಹರಿಕಾರರು, ಸೇವೆಯೇ ಶ್ರೇಷ್ಠ ಜೀವನದ ಪ್ರತಿಪಾದಕರಾಗಿ ನಮ್ಮೆಲ್ಲರ ಮಾರ್ಗದರ್ಶಕರಾಗಿ ಬೆಳಗುತ್ತಿದ್ದಾರೆ.

ಪರಮ ಪೂಜ್ಯ ಗುರುಬಸವ ಪಟ್ಟದ್ದೇವರು ಧಾರ್ಮಿಕ ಮತ್ತು ವಚನ ಸಾಹಿತ್ಯ ಅಧ್ಯಯನ ಮಾಡಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ. ಉಪನ್ಯಾಸ ಮಾಲೆ,  ಪುಸ್ತಕ ಬಿಡುಗಡೆ,  ಸಾಂಸ್ಕೃತಿಕ ಕಾರ್ಯಕ್ರಮಗಳು, ವೈಚಾರಿಕ ಜಾತ್ರೆ ನಡೆಸಿಕೊಂಡು ಬರುತ್ತಿದ್ದಾರೆ. ಜೊತೆಯಲ್ಲಿ ಸಂಗೀತ ಸೇವ ಸಹ ಪ್ರತಿ ವರ್ಷ  ಶ್ರೀಮಠದಲ್ಲಿ ನಿರಂತರವಾಗಿ ನಡೆಯುತ್ತದೆ. ಶ್ರೀಗಳ ಸಮಾಜ ಮುಖಿ ಸೇವೆಯಿಂದ ಕನ್ನಡ ನಾಡಿಗೆ ಚಿರಪರಿಚಿರರಾಗಿದ್ದಾರೆ. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಸಾಹಿತಿ,ಸಾಂಸ್ಕೃತಿಕ ಲೋಕದಲ್ಲಿ ಶ್ರೀಗಳ ಸೇವೆ ಅನನ್ಯ ಹಾಗೂ  ಶ್ರೀಮಠವನ್ನು ಪವಿತ್ರ ಶರಣರ ಸುಕ್ಷೇತ್ರವನ್ನಾಗಿ ಮಾಡಿದ್ದಾರೆ. ಅಪಾರ ಅಭಿಮಾನಿಗಳು ಹೊಂದುವ ಮೂಲಕ ಈ ಭಾಗದಲ್ಲಿ ವೈಚಾರಿಕ ಸಮತವಾದ ಸಾರುವ ಕ್ರಾಂತಿಗಳು ಮಾಡಿಕೊಂಡು,

ಬಸವಾದಿ ಶರಣರ ಆಶಯ ಹಾದಿಯಲ್ಲಿ ಸಾಗುತ್ತಿರುವುದರಿಂದ  ಇಡಿ ಭಕ್ತ ಸಮೂಹವನ್ನು ಶ್ರೀಗಳರವರನ್ನು ಗೌರವದಿಂದ ಪೂಜಿಸುತ್ತಾರೆ. ಕಲ್ಯಾಣ ನಾಡಿನ ಹೆಮ್ಮೆಯ ಹಿರೇಮಠ:  ಅನೇಕ ರಾಜಕರಣಿಗಳು, ಸಾಹಿತಿಗಳು, ಕವಿಗಳು ಕಲಾವಿದರು ಹಾಗೂ ಅಪಾರ ಭಕ್ತ ವೃಂದ ಶ್ರೀ ಹಿರೇಮಠ ಕ್ಕೆ ದಿನನಿತ್ಯ ಬಂದು ಹೊಗುತ್ತಾರೆ. ಅನಾಥರಿಗೆ ಮತ್ತು ಬಡವರಿಗೆ ಶ್ರೀ ಮಠ ನೆಮ್ಮದಿಯ ಆಶ್ರಯತಾಣವಾಗಿದೆ. ಮುಂಜಾನೆಯಿಂದ ಮಧ್ಯ ರಾತ್ರಿ ವರೆಗೂ ದಾಸೋಹ ವ್ಯವಸ್ಥೆ ಇರುತ್ತದೆ. ಆಶ್ರಯಕ್ಕಾಗಿ ಬಂದವರಿಗೆ ಆಶ್ರಯ ನೀಡಿದೆ.ಕಲ್ಯಾಣ ನಾಡಿನ ಹೆಮ್ಮೆಯ ಮಠವಾಗಿ  ನಿರಂತರ ಜನಪರ ಕೆಲಸಗಳನ್ನು ಮಾಡಿಕೊಂಡು ಜನಸಾಮಾನ್ಯರ ಹೃದಯಗಳನ್ನು ಗೆದ್ದ ಹಿರೇಮಠವಾಗಿದೆ. ಶ್ರೀ ಮಠದ  ದಾಸೋಹ: ಕಲ್ಯಾಣ ನಾಡಿನ ಮಠಗಳ ವಿಶೇಷ ಅಂದರೆ, ಪ್ರತಿಯೊಂದು ಮಠದಲ್ಲಿ ದಿನದ 24 ಗಂಟೆಗಳಲ್ಲಿಯೋ ಪ್ರಸಾದದ ವ್ಯವಸ್ಥೆ ಇರುತ್ತದೆ. ಅದೇ ರೀತಿ ಶ್ರೀ ಮಠದಲ್ಲಿ ಸಹ ದಾಸೋಹ ವ್ಯವಸ್ಥೆ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಜಾತಿ, ಧರ್ಮ ಬೇದ ಭಾವನೆಗಳನ್ನು ಮಾಡುವುದಿಲ್ಲ, ಎಲ್ಲರೂ ಸಮಾನರು.ಹಾಗಾಗಿ ಬರುವ ಎಲ್ಲಾ ಭಕ್ತವೃಂದಕ್ಕೊ ಯಾವುದೇ ರೀತಿಯಲ್ಲಿ ನೋವಾಗದೇ ಇರುವ ಹಾಗೆ ಮಠದ ವತಿಯಿಂದ ದಾಸೋಹ ವ್ಯವಸ್ಥೆ  ನಿರ್ವಹಿಸಿಕೊಂಡು ಬರುತ್ತಿರುವುದು ವಿಶೇಷ ಹಾಗೂ ಶ್ರೀಮಠಕ್ಕೆ ಪರಸ್ಥಳಗಳಿಂದ ಬಂದು ಹೋಗುವ ಜನರಿಗೆ ವಸತಿ, ನಿತ್ಯದಾಸೋಹ ವ್ಯವಸ್ಥೆ ಇರುತ್ತದೆ. ಹೀಗೆ ಹತ್ತು ಕೆಲವು ಜನಪರ ಕಾರ್ಯಗಳೊಂದಿಗೆ ಈ ಶ್ರೀಮಠವು ಆಧ್ಯಾತ್ಮಿಕದೊಂದಿಗೆ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಮತ್ತು ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ”ಕಾಯಕವೇ ಕೈಲಾಸ” ಮತ್ತು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ಶ್ರೀಮಠ,

ಶ್ರೀಗಳು ತೊಡಗಿಸಿಕೊಂಡಿದ್ದಾರೆ. ಶ್ರೀ ಮಠದಲ್ಲಿ ಶಿಕ್ಷಣ:“ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ” ಎಂಬ ಬಸವಣ್ಣನವರ ವಾಣಿಯಂತೆ ಶಿಕ್ಷಣ ಪ್ರಸಾರವೇ ಸಮಾಜದ ಏಳಿಗೆಗೆ ಕಾರಣವೆಂಬುದನ್ನು ಶ್ರೀಮಠವು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದೆ. ಕಲ್ಯಾಣ ನಾಡಿನಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಶಾಲೆಗಳು, ಪ್ರಸಾದ ನಿಲಯಗಳು ನಡೆಸುತ್ತಿರುವ ಕೆಲವೇ ಧಾರ್ಮಿಕ ಸಂಸ್ಥೆಗಳಲ್ಲಿ ಶ್ರೀಮಠವು ಒಂದಾಗಿದೆ. ಗುರುಕುಲ, ವಸತಿ ಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು ಸೇರಿದಂತೆ ವಿವಿಧ ರೀತಿಯ ಶಿಕ್ಷಣ ವ್ಯವಸ್ಥೆ ಶ್ರೀಮಠದಲ್ಲಿ ದೊರೆಯುತ್ತದೆ. ಇಲ್ಲಿ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣಾಭ್ಯಾಸ ನೀಡುವ ಮೂಲಕ ಅವರ ಬಾಳಿಗೆ ಬೆಳಕಾಗುವ ಕೆಲಸ ಮಠ ಮಾಡುತ್ತಿದೆ.ಹಾಗಾಗಿ ಶ್ರೀಮಠವು  ಕೇವಲ ಧಾರ್ಮಿಕ ಸಂಸ್ಥೆಯಾಗಷ್ಟೆ ಉಳಿಯದೇ, ಶಿಕ್ಷಣ ಕ್ಷೇತ್ರದಲ್ಲೂ ವಿಶಿಷ್ಟ ಸೇವೆಯನ್ನು ನಿರಂತರವಾಗಿ ಸಲ್ಲಿಸುತ್ತಿದೆ.ಶ್ರೀ ಮಠದಿಂದ ಪ್ರಶಸ್ತಿ ಪ್ರದಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿರುವ ಸಾಧಕರನ್ನು ಗುರುತಿಸುವ ಮೂಲಕ ಅವರನ್ನು ಶ್ರೀ ಮಠದಿಂದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಒಟ್ಟು 10 ಕ್ಕೂ ಹೆಚ್ಚು ವಿಭಿನ್ನ ರೀತಿಯ ಪ್ರಶಸ್ತಿಗಳು ಶ್ರೀ ಮಠದಿಂದ ಇಲ್ಲಿಯವರೆಗೆ ನೀಡಲಾಗಿದೆ ಮತ್ತು ಪ್ರತಿ ವರ್ಷ ನಿರಂತರವಾಗಿ ನೀಡಲಾಗುತ್ತದೆ. ಶ್ರೀಮಠದಿಂದ ಪುಸ್ತಕಗಳ ಮೆರವಣಿಗೆ: ಅಡ್ಡಪಲ್ಲಕ್ಕಿ ,ಉದ್ದಪಲ್ಲಕ್ಕಿಗಳಿಗೆ ಆಸ್ಪದ ನೀಡದೇ ವೈಚಾರಿಕ ಚಿಂತನೆಗಳಿಗೆ ಆದ್ಯತೆ ನೀಡುವ ಶ್ರೀಗಳು ಯಾವುದೇ ತರಹದ ಪಲ್ಲಕ್ಕಿಗಳಲ್ಲಿ ಮರವಣಿಗೆ ಮಾಡಿಸಿಕೊಳ್ಳದೆ, ತಮ್ಮ ಅಭಿಮಾನದ ಪುಸ್ತಕಗಳ ಮರವಣಿಗೆಯನ್ನು ಶ್ರೀಮಠದಿಂದ ಅದ್ದೂರಿಯಾಗಿ ಮಾಡುತ್ತಾರೆ. ವಿಶೇಷವಾಗಿ ಹೇಳಬೇಕಾದರೆ ವಚನ ಜಾತ್ರೆ ಕಾರ್ಯಕ್ರಮ ಜನಮನ್ನಣೆಯ ಕಾರ್ಯಕ್ರಮ ಎನ್ನಬಹುದು. ಹಾಗಾಗಿಯೇ ನಾಡಿನ ಯಾವುದೇ ಸಂಘ – ಸಂಸ್ಥೆ ಮತ್ತು ಸರಕಾರಗಳು ಮಾಡದೇ ಇರುವ ಜನಪರ ಕೆಲಸಗಳು ಶ್ರೀಗಳು ತಮ್ಮ ಮಠದಿಂದ ತಪ್ಪದೇ ಮಾಡಿಕೊಂಡು ಬರುತ್ತಿರುವುದು ಶ್ರೀಗಳ ಹೆಗ್ಗಳಿಕೆಗೆ ಹಿಡಿದ ಕನ್ನಡಿಯಾಗಿದೆ. ಶ್ರೀಮಠದಿಂದ ಪುಸ್ತಕ ಬಿಡುಗಡೆ: ಕೇವಲ ಆದ್ಯಾತ್ಮೀಕ, ಸಮಾಜಿಕ ಕಾರ್ಯಗಳಿಗೆ ಸೀಮಿತವಾಗದೆ  ಸಮಾಜ ಮುಖಿ ಚಿಂತನೆಯುಳ್ಳ  ಪುಸ್ತಕ, ಕೃತಿಗಳು ಮಠದಿಂದ ಇಲ್ಲಿಯವರೆಗೆ 150 ಕ್ಕೂ ಹೆಚ್ಚು (ಪುಸ್ತಕಗಳು) ಬಿಡುಗಡೆ ಮಾಡಿರುತ್ತಾರೆ. ಶ್ರೀಗಳಿಗೆ ಪುಸ್ತಕ ಮೇಲೆ ಅಪರವಾದ ಅಭಿಮಾನ ಮತ್ತು ಪ್ರೀತಿ ಇದೆ. ಹಾಗಾಗಿ ನಿರಂತರವಾಗಿ ಶ್ರೀಮಠದಿಂದ ಪುಸ್ತಕ ಬಿಡುಗಡೆ ಕಾರ್ಯ ಮಾಡಲಾಗುತ್ತದೆ.

ಶ್ರೀಗಳಿಗೆ ಸಂದ ಪ್ರಶಸ್ತಿ ಗೌರವಗಳು:

ನಾಡಿನ ಅನೇಕ ಪ್ರತಿಷ್ಠಿತ ಸಂಘ – ಸಂಸ್ಥೆಗಳಿಂದ ಪ್ರಶಸ್ತಿ,ಗೌರವಗಳು ಸಂದಿವೆ ಹಾಗೂ ಇವರ ಸಮಾಜಿಕ ಜನಪರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಬದ್ಧತೆಯ ಶ್ರೀಗಳು: ಸದಾ ಹಸನ್ಮುಖಿಯಾಗಿ ಇರುವ ಶ್ರೀಗಳು ಎಂದೆಂದಿಗೂ ಅವರ ನೋವುಗಳನ್ನು ತೋರಪಡಿಸದೆ, ಸಮಾಜದ ಉನ್ನತಿಗಾಗಿ ಸದಾ ಚಿಂತನ ಮಾಡುತ್ತಿರುತ್ತಾರೆ.  ಇವರ ಸಮಾಜಿಕ ಕಳಕಳಿಯ ಬದ್ಧತೆ ಯಾರು ಪ್ರಶ್ನೆ ಮಾಡುವಂತೆ ಇರುವುದೇ ಇಲ್ಲ. ತಾನಾಯ್ತು ತಮ್ಮ ಕೆಲಸವಾಯಿತು ಎನ್ನುವ ದಿಸಯಲ್ಲೇ ಹೆಜ್ಜೆ ಹಾಕುವ ಮೇಧಾವಿ ಸಂತ ಎಂದರೆ ತಪ್ಪಾಗಲಾರದು.

ಜನರ ಅಶೋತ್ತರಗಳು ಈಡೇರಿಸುವ ನಿಟ್ಟಿನಲ್ಲಿ ಹತ್ತು ಹಲವು ವಿಶಿಷ್ಟ ವೈಚಾರಿಕ ಸೇವೆಗಳ ಮೂಲಕ ಜನಸಾಮಾನ್ಯರ ಬವಣೆಗಳನ್ನು ನೀಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.

ಕೊನೆಯ ಮಾತು: ಬಸವಣ್ಣನವರ ಅನುಯಾಯಿಯಾಗಿ,

ಸದ್ದು ಗದ್ದಲವಿರದ ಸಾಧನೆಯ ಗದ್ದುಗೆಯೇರಿದ ಪರಮ ಪೂಜ್ಯ ಗುರು ಬಸವ ಪಟ್ಟದ್ದೇವರ ಸೇವಾ ಕೈಂಕರ್ಯಗಳು ಅನನ್ಯ, ಅಪಾರ.

ಕಾಯಕವೇ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದ ಭಾವ ಇವರಲ್ಲಿ ಸದಾ ಎದ್ದು ಕಾಣುತ್ತದೆ.

ಇವರು ತ್ರಿವಿಧ (ಅನ್ನ, ಅಕ್ಷರ, ಜ್ಞಾನ) ದಾಸೋಹಿಗಳು,

ದೇಶ ಮತ್ತು ಸಮಾಜದ ಪ್ರಗತಿಯ ಬಗ್ಗೆ ಸದಾ ಕಳಕಳಿಯಿರುವ ಸ್ವಾಮೀಜಿಯವರು. ಮುಂದಿನ ಪೀಳಿಗೆಯ ಉಜ್ವಲ ಭವಿಷ್ಯದ ಬೆಳವಣಿಗೆಗಾಗಿ ಪಣತೊಟ್ಟ ಶ್ರೀಗಳು, ಭಕ್ತರ ಕಷ್ಟ-ಸುಖಕ್ಕೆ ಸ್ಪಂದಿಸುವ ಕೆಲಸ ನಿತ್ಯ ನಿರಂತರವಾಗಿ ಮಾಡುತ್ತಿರುವ ನಾಡಿನ ವೈಚಾರಿಕ ಶ್ರೀಗಳು. ಅಷ್ಟೇ ಅಲ್ಲ ಸಮಾಜದ ಎಷ್ಟೋ ಜೀವನಗಳ ಪರಿವರ್ತನೆಗೆ ಕಾರಣವಾಗಿದ್ದಾರೆ. ತಮ್ಮ ಮಠದಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಆಶ್ರಯವನಿತ್ತು, ತ್ರಿವಿಧ ದಾಸೋಹವನ್ನು ಸತತವಾಗಿ ನಡೆಸುತ್ತಾ ಬರುತ್ತಿದ್ದಾರೆ.

ಕಾಯಕವೇ ಕೈಲಾಸ ಎಂದು ನುಡಿಯಲ್ಲಿ ಮಾತ್ರ ಹೇಳದೇ ಕೃತಿಯಲ್ಲಿ ನಡೆದು ತೋರಿಸಿಕೊಟ್ಟಿದ್ದಾರೆ.

ಒಬ್ಬ ಭಾರತೀಯ ಆಧ್ಯಾತ್ಮಿಕ ಯುಗ ಪುರುಷ, ಮಾನವೀಯ ಮೌಲ್ಯಗಳನ್ನು ಸಾರುವ ಸಂತ ಮತ್ತು ಶಿಕ್ಷಣ ತಜ್ಞರಾಗಿ, ನಮ್ಮಲ್ಲರ ಮಾರ್ಗದರ್ಶಕರಾಗಿ ಕಲ್ಯಾಣ ಕರ್ನಾಟಕದಲ್ಲಿ ಬೆಳಗುತ್ತಿದ್ದಾರೆ.

ಲೇಖಕರು: ಸಂಗಮೇಶ ಎನ್ ಜವಾದಿ.

Leave a Reply

Your email address will not be published. Required fields are marked *