ತಾವರಗೇರಾ ಪಟ್ಟಣದ ಬಸ್ಸು ನಿಲ್ದಾಣದಲ್ಲಿ ನಾರಿನಾಳ ಶಾಲಾ ಮಕ್ಕಳಿಂದ ದಿಡೀರನೆ ಕಂಟ್ರೋಲ್ ಆಪೀಸ್ ಗೆ ಮುತ್ತಿಗೆ.
ಧಾನ ಧಾನಗಳಿಗಿಂತ ವಿಧ್ಯಾ ಧಾನ ಶ್ರೇಷ್ಠ ಧಾನ ಅನ್ನುವಂತೆ ಈ ವಾಡಿಕೆ ಎಷ್ಟು ಸತ್ಯವೊ, ಅಷ್ಟೇ ನಿಗೂಡ ಕೂಡ ಸತ್ಯ. ಮಾನ್ಯ ಶಿಕ್ಷಣ ಸಚಿವರು ಮಕ್ಕಳ ವಿಧ್ಯಾಬ್ಯಾಸಕ್ಕಾಗಿ ನಾನಾ ರೀತಿಯ ಸೌಲಭ್ಯಗಳು ಒದಗಿಸಿದರೂ, ಇನ್ನೂ ಕೆಲವು ಗ್ರಾಮದ ಮಕ್ಕಳಿಗೆ ಮರಿಚಿಕೆಯಾಗಿದೆ.
ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ವ್ಯಾಪ್ತಿಗೆ ಬರುವ ತಾವರಗೇರಾ ಹೋಬಳಿಗೆ ಸಂಬಂದಿಸಿದಂತೆ ನಾರಿನಾಳ ಗ್ರಾಮದ ಶಾಲಾ ಮಕ್ಕಳಿಂದ ತಾವರಗೇರಾ ಪಟ್ಟಣದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಕಂಟ್ರೋಲ್ ಆಪೀಸ್ ಗೆ ಶಾಲಾ ಮಕ್ಕಳಿಂದ ದಿಡೀರನೆ ಮುತ್ತಿಗೆ ಹಾಕಿ, ಬಸ್ಸು ಸೌಕರ್ಯದ ಬಗ್ಗೆ ಕೆಲವು ಮಕ್ಕಳು ತಮ್ಮ ಅಳುಲನ್ನ ತೋಡಿಕೊಂಡರು.
ಶಾಲೆಗಳು ಪ್ರಾರಂಭವಾಗಿ ತಿಂಗಳುಗಳು ಗತೀಸಿದರೂ ಸರಿಯಾದ ಸಮಯಕ್ಕೆ ಬಾರದ ಬಸ್ಸು, ಬಸ್ಸಿನ ರೂಟ್ ಮ್ಯಾಪ್ ಈ ರೀತಿ ಬೇಕು ಎಂದು ಶಾಲಾ ಮಕ್ಕಳು ಪಟ್ಟು ಹಿಡಿದರು. ರೂಟ್ ಮ್ಯಾಪ್:- ತಾವರಗೇರಾದಿಂದ ನಾರಿನಾಳ. ಗರ್ಜಿನಾಳ.ಜುಲಕುಂಟಿ. ಮ್ಯಾಗಳಡೊಕ್ಕಿ ಗ್ರಾಮಕ್ಕೆ ಹೋಗಿ ಮತ್ತೆ ಅದೇ ರೂಟಿಗೆ ಬರುವ ವ್ಯವಸ್ತೆ ಇದ್ದು. ಆದರೆ ಸರ್ಕಾರಿ ವಾಹನ ಚಾಲಕ ಹಾಗೂ ನಿರ್ವಾಹಕರು ಮೊದಲು ಹೋಗುವಾಗ ಈ ಎಲ್ಲಾ ಹಳ್ಳಿಗಳಿಂದ ಬಂದು ಮತ್ತೆ ಅದೇ ರೂಟ್ ಗೆ ಬರಬೇಕು. ಆದರೆ ವಾಹನ ಚಾಲಕ ಹಾಗೂ ನಿರ್ವಾಹಕರು ಸೇರಿ ಮುಳ್ಳೂರು ಗ್ರಾಮದ ರಸ್ತೆ ಹೋಗುವುದರಿಂದ ಮೊದಲ ಹಳ್ಳಿಗಳಿಗೆ ತಡವಾಗುತ್ತದೆ. ಅದಲ್ಲದೆ ಬೆಳಗಿನ ಜಾವ್ 09 ಗಂಟೆ 10 ನಿಮಿಷಕ್ಕೆ ಬರುವ ಬಸ್ಸು ಬೆಳಗ್ಗೆನೆ 10 ಗಂಟೆ ಸುಮಾರಿಗೆ ಬರುತ್ತಾರೆ ವಿದ್ಯಾರ್ಥಿಗಳು ದಿನಾಲು ಪರದಾಡಬೇಕು ಜೊತೆಗೆ ಶಾಲಾ ಶಿಕ್ಷಕರಿಂದ ಬಹಿಸಿಕೊಳ್ಳಬೇಕಾದಂತ ಪರಿಸ್ಥಿತಿ ಉದ್ಭವವಾಗಿದೆ. ಆದ್ದರಿಂದ ಶಾಲಾ ವಿದ್ಯಾರ್ಥಿಗಳು ದಿನವಿಡಿ ಬೆಸತ್ತು ಇಂದು ಧೀಡಿರನೆ ತಾವರಗೇರಾ ಪಟ್ಟಣದ ಬಸ್ಸು ನಿಲ್ದಾಣದ ಕಂಟ್ರೋಲ್ ಆಪೀಸ್ ಗೆ ಮುತ್ತಿಗೆ ಹಾಕಿದರು. ನಮಗೆ ಸರಿಯಾದ ಸಮಯಕ್ಕೆ ಬಸ್ಸು ಬಾರದೆ ಇದ್ದರೆ ಮುಂದಿನ ದಿನಮಾನಗಳಲ್ಲಿ ಕುಷ್ಟಗಿ ಪಟ್ಟಣದ ಬಸ್ಸು ಡಿಪೋ ಮುಂದೆ ಎಲ್ಲಾ ವಿಧ್ಯಾರ್ಥಿಗಳನ್ನುಮುಂದಿಟ್ಟುಕೊಂಡು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು. ಪಟ್ಟಣದ ಬಸ್ಸು ನಿಲ್ದಾಣದ ಕಂಟ್ರೋಲ್ ಆಪೀಸ್ ರ ಮಕ್ಕಳ ಬೇಡಿಕೆಗೆ ಸೂಕ್ತ ಪರಿಹಾರ ಒದಗಿಸುವ ವ್ಯವಸ್ತೆ ಕಲ್ಫಿಸುವೆಯೆಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ನಾರಿನಾಳ ಗ್ರಾಮದ ಗುರು/ಹಿರಿಯರು ಹಾಗೂ ಯುವಕ/ಯುವತಿಯರು ಪಾಲುಗೊಂಡಿದ್ದರು.
ವರದಿ-ಉಪ್ಪಳೇಶ ವಿ.ನಾರಿನಾಳ