ನಗಲು ಬಿಗುಮಾನವೇಕೆ…..?

Spread the love

ನಗಲು ಬಿಗುಮಾನವೇಕೆ…..?

ಮನುಷ್ಯನ ಭಾವನಾತ್ಮಕ ಗುಣವು ‘ನವರಸ’ಗಳೆಂಬ ಅಂಶಗಳಿಂದ ಕೂಡಿರುವುದಾಗಿದೆ ಇದರಲ್ಲಿ ‘ಹಾಸ್ಯರಸವು’ಮನುಷ್ಯನಿಗೆ ತುಂಬಾ ಪ್ರಯೋಜನಕಾರಿ ಇಲ್ಲಿ ಹಾಸ್ಯವೆಂಬುದು ಮುಖದಲ್ಲಿ ನಗು ಮೂಡಿಸಿ ಹೃದಯವನ್ನು ಹಗುರಗೊಳಿಸುವ ಸಾಧನವಾಗಿದೆ. ಇಂತಹ ಒಂದು ನಗುವನ್ನು ಹೊದ್ದ ಮುಖವು ಹುಣ್ಣಿಮೆಯ ಚಂದ್ರನಂತೆ ಎಲ್ಲರನ್ನು ಆಕರ್ಷಿಸುತ್ತದೆ ಇತ್ತೀಚಿನ ನಮ್ಮ ಒತ್ತಡದ ಜೀವನದಲ್ಲಿ ಮನಸ್ಸು ಹಾಗೂ ದೇಹಕ್ಕೆ ವಿಶ್ರಾಂತಿಯೇ ಇಲ್ಲದಂತಾಗಿದೆ ಯಾವಾಗ, ಎಲ್ಲಿ ನೋಡಿದರೂ ಆತುರ, ಅವಸರಗಳು, ತುರ್ತು ಕೆಲಸಗಳು, ನಮ್ಮ ಬೆನ್ನೇರಿ ಕುಳಿತಿವೆ. ಸರಿಯಾಗಿ ಕೂತು ಊಟ ಮಾಡಲು, ಹಾಯಾಗಿ ಮಲಗಿ ನಿದ್ದೆ ಮಾಡಲು, ಕೂಡ ಮನುಷ್ಯನಿಗೆ ಆಗುತ್ತಿಲ್ಲ ನಾಳೆ ಏನು ಎಂಬ ಆಲೋಚನಾ ಕಾರಾಗೃಹದಲ್ಲಿಯೇ ನಾವು ದಿನ ಕಳೆಯುವುದಾಗಿದೆ. ಅದಕ್ಕಾಗಿ ಆಧುನಿಕ ಜೀವನ ಶೈಲಿಯಲ್ಲಿ ನಮಗೆ ರಕ್ತದಒತ್ತಡ,ಸಕ್ಕರೆ ಕಾಯಿಲೆ,ಹಾಗೂ ಹೃದಯ ಸಂಬಂಧಿ ಕಾಯಿಲೆಯಂತಹ ರೋಗಗಳು ಸರ್ವೇಸಾಮಾನ್ಯವಾಗಿದೆ. ಆದ್ದರಿಂದ ನಮ್ಮ ಈ ಒತ್ತಡದ ಜೀವನದಲ್ಲೂ ಕೊಂಚ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯದ ಕಡೆಗೆ ನಾವು ಗಮನಹರಿಸಬೇಕಾಗಿದೆ.ವರಕವಿ ಬೇಂದ್ರೆಯವರು ತಮ್ಮ ಒಂದು ಕವಿತೆಯಲ್ಲಿ ಈ ರೀತಿ ಹೇಳಿದ್ದಾರೆ “”ನಗರೋ ನಗರೀ

ನಗ್ತಾ ನಗ್ತಾ ಸತ್ರೆ

ನಕ್ಷತ್ರ ಆಗ್ತೀರಿ,,,,,!

ಅಂತ ನಗುವಿನ ಮಹತ್ವ ತಿಳಿಸಿದ್ದಾರೆ.

ಇತ್ತೀಚಿಗೆ ನಾವು ನೈಸರ್ಗಿಕವಾಗಿ ನಗುವುದನ್ನು ತೊರೆದು Laughing therapy (ನಗುವ ಚಿಕಿಸ್ತೆ)ಯ ಕೇಂದ್ರಕ್ಕೆ ಸೇರಿ ಕೃತಕವಾಗಿ ನಗುವ ಚಿಕಿತ್ಸೆಯನ್ನು ಪಡೆಯುತ್ತೇವೆ. ಇದರಿಂದ ಕ್ಷಣಿಕ ಲಾಭವಾದರೂ ನೈಸರ್ಗಿಕ ನಗುವಿನಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಆದ್ದರಿಂದ ನಾವು ಒಡನಾಡಿಗಳ ಜೊತೆ ಹೆಚ್ಚು ಸಮಯವನ್ನು ಕಳೆಯಬೇಕು ಉತ್ಸವ,ಜಾತ್ರೆ,ಹಬ್ಬ ಹರಿದಿನಗಳಂತಹ ಆಚರಣೆಗಳನ್ನು ಸಂಬಂಧಿಕರ ಜೊತೆಗೂಡಿ ಆಚರಿಸಬೇಕು.ಆದಷ್ಟು ಏಕಾಂಗಿ ಬದುಕಿನಿಂದ ದೂರವಿರಬೇಕು ಉಚಿತ ಗಾಂಭೀರ್ಯವಿರಲಿ ಆದರೆ ಪ್ರತಿಕ್ಷಣವೂ ಗಾಂಭೀರ್ಯದಿಂದ ಕೂಡಿರದಂತೆ ನೋಡಿಕೊಳ್ಳಿ ಏಕಾಂತ ಸಮಯದಲ್ಲಿ ನಿಮ್ಮ ಬಾಲ್ಯ ಸ್ನೇಹಿತರನ್ನು ಭೇಟಿಯಾಗಿ ಅಥವಾ ಫೋನಾಯಿಸಿ ಮಾತಾಡಿ ಇದರಿಂದ ಬಾಲ್ಯದ ತುಂಟಾಟಗಳು ನೆನಪಿಗೆ ಬಂದು ನಗುವಿಗೆ ದಾರಿಯಾಗುವುದು. ಅಲ್ಲದೆ ದೂರದರ್ಶನದಲ್ಲಿ ಬರುವ ಹಾಸ್ಯ ಸಂಚಿಕೆ,ಹಾಗೂ ಹರಟೆ stand-up comedy(ಎದ್ದು ನಿಂತು ಹೇಳುವ ಹಾಸ್ಯ) ಹಾಸ್ಯ ಚಟಾಕಿಗಳನ್ನು ಆಲಿಸಿ ಮತ್ತು ವೀಕ್ಷಿಸಿ ಅಲ್ಲದೆ ಚುಟುಕುಗಳ ಪುಸ್ತಕವನ್ನು ಓದುವುದರಿಂದ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಒತ್ತಡದ ಮನಸ್ಸು ನಿರಾಳತೆಯನ್ನು ಪಡೆಯುವುದಾಗಿದೆ ಎಂತಹ ಕಠೋರ ಹೃದಯವನ್ನು ನಾವು ಒಂದು ಮಂದಹಾಸದಿಂದ ಗೆಲ್ಲಬಹುದಾಗಿದೆ. ಆದ್ದರಿಂದ ನಗುವೊಂದು ನೈಸರ್ಗಿಕ ಆಭರಣವಾಗಿದೆ.

“Always wear a smile

Because your smile is a

Reason for many other to

Smile”……

ಈ ಇಂಗ್ಲಿಷ್ ಗಾದೆಯ ಸಾರಾವಿಷ್ಟೇ ಯಾವಾಗಲೂ ನಿಮ್ಮ ನಗುವೆಂಬ ಆಭರಣ ಹೊಳೆಯುತ್ತಿರಲಿ ಇಂತಹ ಒಂದು ನಿಷ್ಕಲ್ಮಶ ನಗು ಇನ್ನೊಬ್ಬರ ಮುಖದಲ್ಲೂ ನಗುವಿನ ಹೊನಲನ್ನು ಹೋಮ್ಮಿಸಲಿ ಎಂದು.ಆದ್ದರಿಂದ ಆದಷ್ಟು ನಾವು ಇತರರೊಂದಿಗೆ ನಗುನಗುತ ಮಾತನಾಡಿದರೆ ನಮ್ಮ ಮನೋವ್ಯತೆಯನ್ನು ಹಂಚಿಕೊಂಡರೆ ಹಗುರ  ಮನದ ಸ್ಪರ್ಶ ಪಡೆಯಬಹುದಾಗಿದೆ.

ನಗುವಿನ ಪ್ರಯೋಜನೆಗಳು

* ನಗು ದೇಹಕ್ಕೆ ವಿಶ್ರಾಂತಿ ನವ ಚೈತನ್ಯ ಒದಗಿಸುತ್ತದೆ

* ನಗು ನೋ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ ನಗುವು ಎಂಡಾರ್ಫಿನ್ (ದೇಹಕ್ಕೆ ಅವಶ್ಯಕ ರಾಸಾಯನಿಕಗಳು) ಬಿಡುಗಡೆಯನ್ನು ಪ್ರಚೋದಿಸುತ್ತದೆ. *ನಗುವು ಹೃದಯದ ಆಯಾಸವನ್ನು ನೀಗಿಸುತ್ತದೆ. *ನಗುವು ನೈಸರ್ಗಿಕ ನೋವು ನಿವಾರಕ ದಂತೆ ಕೆಲಸ ಮಾಡುತ್ತದೆ.

* ಉಸಿರಾಟದ ಕಾಯಿಲೆಗಳಿಗೆ ನಗು ರಾಮಬಾಣ ವಿದ್ದಂತೆ.*

* ಅನವಶ್ಯಕ ಕ್ಯಾಲರಿಗಳನ್ನು ನಗುವುದರಿಂದ ನಾವು ಕಡಿಮೆ ಮಾಡಬಹುದಾಗಿದೆ .*

* 10 ನಿಮಿಷದ ನಗು 15 ನಿಮಿಷದ ಏರೋಬಿಕ್ಸ್ ವ್ಯಾಯಾಮಕ್ಕೆ ಸಮವಾಗಿದೆ.*

*  ನಗುವು ದೇಹದಲ್ಲಿಯ ಗ್ಲುಕೋಸ್ ಪ್ರಮಾಣವನ್ನು ಶಮನ ಮಾಡುವುದಾಗಿದೆ.*

*  ನಿದ್ರೆಯ ಗುಣಮಟ್ಟವನ್ನು ಸುಧಾರಿಸಿ ಮನೋ ನೆಮ್ಮದಿ ನೀಡುವುದಾಗಿದೆ.*

*  ನಗುವು ಮುಖದ,ಹೊಟ್ಟೆಯ, ಹಾಗೂ ಶ್ವಾಶದ ಸ್ನಾಯುಗಳಿಗೆ ವ್ಯಾಯಾಮವನ್ನು ಒದಗಿಸುತ್ತದೆ. ಆತ್ಮಸ್ಥೈರ್ಯ ಹಾಗೂ ಸಕಾರಾತ್ಮಕ ಮನೋಭಾವ ಬೆಳೆಸುವುದಾಗಿದೆ.

*   ನಗುವ ವ್ಯಕ್ತಿಯು ಸ್ನೇಹಪರನಾಗಿರುತ್ತಾನೆ. *

*   ಉತ್ತಮ ಸಾಮಾಜಿಕ ಸಂಬಂಧ ಹೊಂದಿರುವವನಾಗಿದ್ದಾನೆ.

ಹಾಗಾದರೆ ಬನ್ನಿ ಸ್ನೇಹಿತರೆ ನಾವು ಬದುಕಿರುವ ಈ ಮೂರು ದಿನದ ಅವಧಿಯಲ್ಲಿ ವೃಥ ಚಿಂತಿಸಿ ಕಾಲಹರಣ ಮಾಡದೆ “ಬಂದದ್ದು ಬರಲಿ,ಬಾಳಲ್ಲಿ ನಗುವಂದಿರಲಿ ಎಂದು ಹೇಳೋಣ”ಈ ಲೇಖನ ಓದಿ ಒಂದು ಕಿರುನಗೆ ಬೀರಿದರೆ ಸಾಕು ನನ್ನ ಬರಹಕ್ಕೆ.

Please smile…..😊😊

ವಿಶೇಷ ಲೇಖನ :- ಅಶ್ವಿನಿ ಅಂಗಡಿ. ಬದಾಮಿ……

Leave a Reply

Your email address will not be published. Required fields are marked *