ತಾಜಾ ಹಣ್ಣುಗಳ ಮಾರಾಟಗಾರ್ತಿ, ಮಾದರಿ ಮಹಿಳೆ– ಶಿಳ್ಳೇಕ್ಯಾತರ ಗೌರಮ್ಮ.
ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಜಾ ಹಣ್ಣು ಬೇಕೆ.!?, ಮರದಿಂದ ನೇರ ಗ್ರಾಹಕರ ಕೈಗೆ ರಿಯಾಯಿತಿ ದರದಲ್ಲಿ ಮಾವಿನ ಹಣ್ಣು ಬೇಕೆಂದರೆ. ಪಟ್ಟಣದ ಹಣ್ಣಿನ ವ್ಯಾಪಾರಿ ಹಾಗೂ ಸಮಾಜ ಸೇವಕಿ , ಮಾದರಿ ಮಹಿಳೆ ಶಿಳ್ಳೇಕ್ಯಾತರ ಗೌರಮ್ಮ ರನ್ನು ಸಂಪರ್ಕಿಸಬೇಕಿದೆ. ಕೂಡ್ಲಿಗಿ ಪಟ್ಟಣದ ಡಾ”ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ, ಬೀದಿ ಬದಿಯಲ್ಲಿನ ತನ್ನ ಗೂಡಂಗಡಿಯಲ್ಲಿ, ಶಿಳ್ಳೇಖ್ಯಾತರ ಮಹಿಳಾ ಪ್ರಮುಖರಾದ ಗೌರಮ್ಮರವರು. ಮಂಡಿಯಿಂದ ಮಾಗಿದ ಮಾವಿನ ಹಣ್ಣು ಮಾರುತ್ತಾರೆ, ಗೌರಮ್ಮರ ಅಂಗಡಿಯಲ್ಲಿ ತರಹವೇರಿ ತಾಜಾ ಮಾವಿನ ಹಣ್ಣು ದೊರಕುತ್ತವೆ. ತೋಟದಿಂದ ಆಯ್ದು ತಂದ ಮಾವಿನ ಕಾಯಿ ಹಾಗೂ ದ್ವಾರಗಾಯಿಗಳನ್ನು, ತಮ್ಮ ಮನೆಯಲ್ಲಿಯೇ ನಿರ್ಮಿಸಲಾಗಿರುವ ಮಂಡಿಯಲ್ಲಿ ದಾಸ್ಥಾನು ಮಾಡಿ ಹಣ್ಣಾಗಿಸುತ್ತಾರೆ. ಯಾವುದೇ ರೀತಿಯ ರಾಸಾಯನಿಕ ದ್ರವ್ಯ ಅಥವಾ ಪೌಡರ್ ಬಳಸದೇ,ಸಹಜವಾಗಿ ಹಣ್ಣಾಗಿರುವಂತಹ ತಾಜಾತನ ಹಣ್ಣಿನಲ್ಲಿ ಕಾಯ್ದುಕೊಳ್ಳೋ ವ್ಯವಸ್ಥೆ ಮಾಡಿದ್ದಾರೆ. ಮನೆಯ ಬೃಹತ್ ಕೋಣೆಯಲ್ಲಿ ಹುಲ್ಲುಹಾಸಿನ , ಮತ್ತು ಹುಲ್ಲು ಹೊದಕೆಯ ಸಾಂಪ್ರದಾಯಿಕ ಪದ್ದತಿಯ ಮಂಡಿ ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಮಾವು ಸದಾ ತಾಜಾತನ ಹಾಗೂ ಸ್ವಾದ ಹೊಂದಿರುತ್ತದೆ, ಇದಕ್ಕೆ ಮಾರುಕಟ್ಟೆಯಲ್ಲಿ ವಿಶೇಷವಾದ ಬೇಡಿಕೆ ಇದೆ. ಆದರೂ ಕೂಡ ಮಾರುಕಟ್ಟೆ ದರಕ್ಕಿಂತ ಕೊಂಚ ರಿಯಾಯಿತಿ ದರದಲ್ಲಿಯೇ, ತಾಜಾ ಮಾವಿನ ಹಣ್ಣನ್ನು ಗ್ರಾಹಕರಿಗೆ ಮಾರುಕಟ್ಟೆ ಒದಗಿಸಿಕೊಡುತ್ತಾರೆ. ಬಸವ ತತ್ವದ ಅನುಯಾಯಿಗಳಾದ ಶಿಳ್ಳೇಕ್ಯಾತರ ಪ್ರಮುಖ ಮಹಿಳೆಯಾಗಿರುವ, ಹಣ್ಣಿನ ವ್ಯಾಪಾರಿ ಗೌರಮ್ಮ ಶುಚಿತ್ವಕ್ಕೆ ಮತ್ತು ನೈರ್ಮಲ್ಯತೆ ಹೆಚ್ಚು ಆಧ್ಯತೆ ನೀಡುತ್ತಾರೆ. ವ್ಯಾಪಾರ ಧರ್ಮಕ್ಕೂ ಮಿಗಿಲಾಗಿ ಧರ್ಮದ ವ್ಯಾಪಾರಕ್ಕೆ ಗೌರಮ್ಮ ಹೆಸರಾಗಿದ್ದಾರೆ, ತಮ್ಮ ಪತಿ ಮಹಂತೇಶಪ್ಪ ಮತ್ತು ಪುತ್ರ ಯುವ ಕವಿ ಮಂಜುನಾಥರ ಸಹಕಾರದಲ್ಲಿ ಅಂಗಡಿಯಲ್ಲಿ ವ್ಯಾಪಾರ ನಿರ್ವಹಿಸುತ್ತಾರೆ. ಬಸವ ತತ್ವದಂತೆ “ಕಾಯಕವೇ ಕೈಲಾಸ” ಹಾಗೂ “ಕೈ ಕೆಸರಾದರೆ ಬಾಯಿ ಮೊಸರು” ನಾಣ್ಣುಡಿಯನ್ನು, ಗೌರಮ್ಮ ರ ಕುಟುಂಬ ಸದಸ್ಯರೆಲ್ಲರೂ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ಹಾಗಾಗಿ ಗೌರಮ್ಮ ಹಾಗೂ ಅವರ ಕುಟುಂಬ ಸದಸ್ಯರು, ಹಣ್ಣು ವ್ಯಾಪಾರದಲ್ಲಿಯೇ ತಮ್ಮ ನಿತ್ಯ ಜೀವನ ಸಾಗಿಸುತ್ತಾರೆ. ಗೌರಮ್ಮರವರು ತಮ್ಮ ಹಣ್ಣಿನ ಅಂಗಡಿಯಲ್ಲಿ ನಾನಾ ಬಗೆಯ ಹಣ್ಣುಗಳನ್ನು ಮಾರುತ್ತರಾದರೂ, ಸೀಜನ್ ಗೆ ತಕ್ಕಂತೆ ವಿವಿದ ಬಗೆ ಹಣ್ಣಿನ ವ್ಯಾಪಾರಕ್ಕೆ ಆಧ್ಯತೆ ನಿಡೋ ಮೂಲಕ ತಜಾ ಹಣ್ಣುಗಳನ್ನು ಮರದಿಂದ ತಾವೇ ತಂದು ಮಂಡಿಗೆ ಹಾಕುತ್ತಾರೆ. ನಂತರ ತಮ್ಮಂಗಡಿಗೆ ಅಗತ್ಯಕ್ಕೆ ತಕ್ಕಂತೆ ದಾಸ್ತಾನು ಮಾಡಿಕೊಂಡು, ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ತಾಜಾ ಹಣ್ಣುಗಳನ್ನು ವ್ಯಾಪಾರದ ಮೂಲಕ ಒದಗಿಸುತ್ತಾರೆ. ಗೌರಮ್ಮರ ಹಣ್ಣಿನ ಅಂಗಡಿಯು ತುಂಬಾ ಚಿಕ್ಕದಾದರೂ ಚೊಕ್ಕಟ್ಟವಾಗಿದೆ, ಶುಚಿತ್ವಕ್ಕೆ ಆಧ್ಯತೆ ಮತ್ತು ರಿಯಾಯಿತಿ ದರದಲ್ಲಿ ಹಣ್ಣು ಮಾರಾಟ ಮಾಡಲಾಗುತ್ತದೆ. ಈ ಅಂಗಡಿಯ ವಿಶೇಷ ಎಂದರೆ ವ್ಯವಹಾರದ ಸಂದರ್ಭದಲ್ಲಿ, ತಮಗೆ ಬರಬೇಕಿರುವ ಲಾಭಾಂಶಕ್ಕಿಂತ ಗ್ರಾಹಕರ ಹಿತಾಸಕ್ತಿ ಹಾಗೂ ಸಂತೃಪ್ತಿಗೆ ಹೆಚ್ಚು ಆಧ್ಯೆತೆ ನೀಡಲಾಗುತ್ತದೆ. ಚಿಕ್ಕದಾದ ಗೂಡಂಗಡಿಯಲ್ಲಿ ಬಾಳೆ, ಸಪೋಟ, ಕಿತ್ತಲೆ, ದ್ರಾಕ್ಷಿ, ಸೇಬು, ಸೀತಾಫಲ, ದಾಳಿಂಭೆ, ನೇರಳೆ, ಪ್ಯಾರಲ, ಮೋಸಂಬೆ, ಪಪ್ಪಾಯಿ,ಮಾವಿನ ಹಣ್ಣು ಮಾರಾಟ ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಸಹಜವಾಗಿ ದೊರಕಬಹುದಾದ ಎಲ್ಲಾ ಬಗೆಯ ಹಣ್ಣುಗಳನ್ನು,ತಮ್ಮ ಅಂಗಡಿಯಲ್ಲಿ ಮಾರಾಟಕ್ಕೆ ಲಭ್ಯ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಗೌರಮ್ಮ.ಸಗಟು ಹಣ್ಣಿನ ವ್ಯಾಪಾರಿಗಳಿಗೂ ವಿಶೇಷ ರಿಯಾಯಿತಿ ದರದಲ್ಲಿ, ಹಣ್ಣುಗಳನ್ನು ತಾವು ಒದಗಿಸುವುದಾಗಿ ಗೌರಮ್ಮ ತಿಳಿಸಿದ್ದಾರೆ. ಆಧುನಿಕ ಭರಾಟೆಯಲ್ಲಿ ಕೇವಲ ಲಾಭಂಶದ ಉದ್ದೇಶಕ್ಕಾಗಿ, ಹಣ್ಣು ಮಾರಾಟಗಾರರು ಪೌಡರ್ ಹಾಗೂ ರಾಸಾಯನಿಕಗಳ ಮೊರೆ ಹೋಗಿರುವ ಸಂದರ್ಭದಲ್ಲಿ. ಗೌರಮ್ಮರವರು ಸಾಂಪ್ರದಾಯಿಕ ಹಣ್ಣು ಮಂಡಿ ಹಾಕುವ ಪದ್ಧತಿಯನ್ನೇ ಆನುಸರಿಸುತ್ತಿರುವುದು ತುಂಬಾ ವಿಶೇಷವಾಗಿದೆ. ವ್ಯಾಪಾರ ಧರ್ಮಕ್ಕೆ ಹೆಚ್ಚು ಆಧ್ಯತೆ ನೀಡುವ ವ್ಯಾಪಾರಿಗರೇ ಇರುವ ಪ್ರಪಂಚದಲ್ಲಿ, ಧರ್ಮಯುತ ಹಾಗೂ ರಿಯಾಯಿತಿ ದರದಲ್ಲಿ ತಾಜಾ ಹಣ್ಣನ್ನು ಮಾರಾಟ ಮಾಡುವ ಮೂಲಕ ವ್ಯಾಪಾರ ಲೋಕಕ್ಕೆ ಆದರ್ಶರಾಗಿದ್ದಾರೆ. ಸಮಾಜ ಸೇವೆ- ಹಣ್ಣಿನ ವ್ಯಾಪಾರಿ ಶಿಳ್ಳೇಕ್ಯಾತರ ಗೌರಮ್ಮಳು, ವ್ಯಾಪಾರಿ ಮಾತ್ರವಲ್ಲ ಸಮಾಜ ಸೇವಕಿಯೂ ಆಗಿದ್ದಾರೆ. ಶಿಳ್ಳೆಕ್ಯಾತರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ,ಅಖಂಡ ಬಳ್ಳಾರಿ ಜಿಲ್ಲಾಧ್ಯರಾಗಿದ್ದಾರೆ ಗೌರಮ್ಮ. ಅನಾಥ ಮಹಿಳೆಯರ ಪಾಳಿಗೆ ಆಶ್ರಯದಾತೆಯಾಗಿದ್ದಾರೆ ಗೌರಮ್ಮ. ಈ ಮೂಲಕ ತಮ್ಮ ಸಮುದಾಯಕ್ಕೆ ಮಾತ್ರವಲ್ಲ ಇಡೀ ಸಮಾಜಕ್ಕೆ ಮಾದರಿ ಮಹಿಳೆಯಾಗಿದ್ದಾರೆ. ಇವರ ಪುತ್ರ ಮಂಜುನಾಥ ತಮ್ಮ ಪದವೀಧರನಿದ್ದು, ಬಿಡುವಿನ ವೇಳೆ ತಾಯಿಯೊಂದಿಗೆ ಹಣ್ಣಿನ ವ್ಯಾಪಾರದಲ್ಲಿ ಪಾಲ್ಗೊಳ್ಳುತ್ತಾನೆ. ಯುವ ಪ್ರತಿಭೆ ಮಂಜುನಾಥ ಉದಯೋನ್ಮುಖ ಕವಿ, ಹಾಗೂ ಗಾಯಕನೂ ಆಗಿದ್ದಾನೆ. ತಮ್ಮ ಪತ್ನಿಯ ಸಮಾಜ ಸೇವೆ ಹಾಗೂ ವ್ಯಾಪಾರದ ಸಂದರ್ಭದಲ್ಲಿ, ಗೌರಮ್ಮರವರ ಪತಿ ಮಹಾಂತೇಶ ಹಾಗೂ ಈ ದಂಪತಿಗಳ ಹಿರಿಯ ಪುತ್ರ ಹಣ್ಣಿನ ವ್ಯಾಪಾರದಲ್ಲಿ ತೊಡಗಿಸಿಕೊಂಡು ಗೌರಮ್ಮರಿಗೆ ನೆರವಾಗುತ್ತಾರೆ. ಹೀಗಾಗಿ ಹಣ್ಣಿನ ವ್ಯಾಪಾರಿ ಗೌರಮ್ಮ, ಸಮಾಜ ಸೇವೆಯಲ್ಲೂ ಯಶಸ್ವೀ ಮಾದರಿ ಮಹಿಳೆಯಾಗಲು ಸಾದ್ಯವಾಗಿದೆ ಎನ್ನುತ್ತಾರೆ ಶಿಳ್ಳೇಖ್ಯಾತ ಸಮಾಜದ ಮುಖಂಡರು. ಗೌರಮ್ಮರ ಸಹೋದರ ಬಡೇಲಡಕು ಗ್ರಾಮದ ತಿಪ್ಪೇಸ್ವಾಮಿ ಬಲು ಅಪರೂಪದ ತೊಗಲುಗೊಂಬೆ ಕಲಾವಿದರಾಗಿದ್ದಾರೆ, ರಂಗ ನಿರ್ಧೇಶಕರೂ ಆಗಿದ್ದಾರೆ ಜೀವನೋಪಾಯಕ್ಕೆ ಹಣ್ಣಿನ ವ್ತಾಪಾರಿಯಾಗಿದ್ದಾರೆ. ಈ ಮೂಲಕ ಗೌರಮ್ಮರವರ ಕುಟುಂಬದ ಸದಸ್ಯರು ಜೀವನೋಪಾಯಕ್ಕಾಗಿ, ಹಣ್ಣಿನ ವ್ಯಾಪಾರ ಅವಲಂಭಿಸಿದ್ದಾರೆ. ಮಾತ್ರವಲ್ಲ ಸಮಾಜ ಸೇವೆ ಹಾಗೂ ಕಲಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಹಣ್ಣಿನ ವ್ಯಾಪಾರಿ ಗೌರಮ್ಮರವರ ಮನೆ ವಿಳಾಸ: ಶಿಳ್ಳ್ಯಾಕ್ಯಾತರ ಗೌರಮ್ಮ ಗಂಡ ಮಹಂತೇಶಪ್ಪ, ಹಣ್ಣಿನ ವ್ಯಾಪಾರಿ ಕೆ.ಎಸ್.ಆರ್ಟಿಸಿ ಬಸ್ ನಿಲ್ದಾಣದ ಹಿಂಭಾಗ ಕೂಡ್ಲಿಗಿ ಪಟ್ಟಣ. ಅಂಗಡಿ ವಿಳಾಸ: ಡಾ”ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ,ಪೊಲೀಸ್ ವಸತಿಗಳ ಸಮುಚ್ಚಯದ ಕಾಂಪೌಂಡ್ ಹತ್ತಿರ, ಕೂಡ್ಲಿಗಿ ಪಟ್ಟಣ 583135.ಮೊ ನಂ: 7337695126. ತಿಂದು ಸವಿಯಲು ತಾಜಾ ಹಣ್ಣುಗಳು ಬೇಕಿದ್ದಲ್ಲಿ ಮತ್ತು ಮಾರಾಟಮಾಡಿ ಲಾಭ ಗಳಿಸಲು, ಹಣ್ಣು ಬೇಕಾದವರು ಈ ಮೇಲಿನ ವಿಳಾಸ ಅಥವಾ ಮೊ ನಂ ಸಂಪರ್ಕಿಸಬಹುದಾಗಿದೆ.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ
ಗ್ರೇಟ್ ಮಾ ಈರೀತಿ ದುಡಿದು ಉಣ್ಣುವದಲ್ಲಿ ಇರುವ ಸುಖ ಯಾವದರಲ್ಲೂ ಸಿಗುದಿಲ್ಲ ಧನ್ಯವಾದಗಳು ಅಮ್ಮ ನಿಮ್ಮ ಶ್ರಮಕ್ಕೆ
ಧನ್ಯವಾದಗಳು ಮೇಡಂ
ಸತ್ಯ ಮೇಡಂ.