@@ನನ್ನ ಅಪ್ಪ ನನ್ನ ಆದರ್ಶ@@
ಪ್ರತಿ ಒಬ್ಬ ಹೆಣ್ಣು ಮಗಳು ಕೂಡ ಆಕೆಯ
ತಂದೆಯಲ್ಲೇ ಪ್ರೀತಿ ಪ್ರಪಂಚ ಕಾಣುತ್ತಾಳೆ.
ಹೆಗಲ ಮೇಲೆ ಕೂತು ಸ್ವರ್ಗ ನೋಡುತ್ತಾಳೆ.
ನಾನು ಇಂದು ಬೆಳೆದಿದ್ದೇನೆ ಎಂದರೆ ಅದು
ನನ್ನ ತಂದೆ ಕೊಟ್ಟಂಥ ಪ್ರೋತ್ಸಾಹ. ಅವರು ಬಾಲ್ಯದಿಂದಲೇ ನನ್ನನ್ನು ಯಾವುದೇ ವಿಚಾರದಲ್ಲಿ ತುಂಬ ತೆಗಳುವುದನ್ನಾಗಲೀ, ಹೊಗಳುವುದನ್ನಾಗಲೀ ಮಾಡಿದವರಲ್ಲ. ಯಾವತ್ತಿಗೂ ಮಗಳ ಮೇಲೆ ಸರ್ವಾಧಿಕಾರ ತೋರಿಸದೆ ಒಬ್ಬ ಸ್ನೇಹಿತನಂತೆ ನೋಡಿಕೊಂಡರು. ಇಂದಿಗೂ ಕೂಡ ನಾನು ಸರಿಯಾಗಿ ಮನೆಗೆ ಫೋನ್ ಮಾಡುವದರಲ್ಲಿ ಏನಾದರೂ ತಡವಾದರೆ ಅಥವಾ ಮನೆಯಿಂದ ಬಂದ ಫೋನ್ ರಿಸೀವ್ ಮಾಡದಿದ್ದರೆ ನನ್ನ ತಾಯಿ ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ತಂದೆ ಆತಂಕಗೊಳ್ಳುತ್ತಾರೆ. ಲಾಕ್ಡೌನ್ ನಲ್ಲಿ ಅಪ್ಪನ ಜೊತೆ ಕಳೆದ ಕ್ಷಣಗಳು ಮನಸ್ಸಿಗೆ ನಿಜಕ್ಕೂ ತುಂಬಾನೇ ಖುಷಿ ಸಿಕ್ಕಿದೆ ಯಾಕೆಂದರೆ ಇದುವರೆಗೂ ಬೆಳಗ್ಗೆ ಆಫೀಸಿಗೆ ಹೋದರೆ ಮಧ್ಯಾಹ್ನ ಊಟಕ್ಕೆ ಬರುವವರು ಮತ್ತೆ ಊಟದ ನಂತರ ಆಫೀಸಿಗೆ ಹೋದರೆ ಸಂಜೆ ಮನೆಗೆ ಬರುತ್ತಾರೆ ಆಮೇಲೆ ನಾನು ನನ್ನ ಕಾಲೇಜ್ ಕೆಲಸದಲ್ಲಿ ಬಿಝಿಯಾಗಿಬಿಡುತ್ತಿದ್ದೆ ಅವರ ಜೊತೆ ಕಳೆಯಲು ಸಮಯವೇ ಸಿಗುತ್ತಿರಲಿಲ್ಲ ಆದರೆ ಈ ಲಾಕ್ಡೌನ್ ಸಮಯದಲ್ಲಿ ಅವರ ಜೊತೆಗೆ ತುಂಬಾ ಸಮಯವನ್ನು ಕಳೆದೆ ಅವರ ಜೊತೆಗೆ ಫಿಲ್ಮ್ , ರುಚಿ ರುಚಿಯಾದ ತಿಂಡಿಗಳು, ಅನೇಕ ರೀತಿಯ ಆಟಗಳು , ಅವರ ಜೊತೆಗೆ ವೀಡಿಯೋ, ವಿಶೇಷ ಅಂದರೆ ಮಧ್ಯಾಹ್ನ ಆದರೆ ಸಾಕು ಇಬ್ಬರು ಟಿವಿ ಮುಂದೆ ಹಾಜರ್ ಏನಕ್ಕೆ ಅಂತೀರಾ ಸೀರಿಯಲ್ ನೋಡಕ್ಕೆ.. ನಿಜಕ್ಕೂ ಇದೆಲ್ಲಾ ಅದ್ಭುತ ಕ್ಷಣಗಳು ಆದರೆ ಮತ್ತೆ ಅವರು ಯಾವಾಗ ಆಫೀಸಿಗೆ ಹೋಗಬೇಕು ಅಂದರು ಅವಾಗ ಮನಸ್ಸಿಗೆ ತುಂಬಾ ಬೇಸರವಾಯಿತು “ಅಪ್ಪ ನಿಜಕ್ಕೂ ಗ್ರೇಟ್” ಒಬ್ಬೊಬ್ಬ ಅಧಿಕಾರಿಯು ಕೂಡ ಒಬ್ಬ ಅಪ್ಪನ್ ಅಲ್ಲವೇ ಈ ಮನುಷ್ಯನಾಗಿ ಹುಟ್ಟಿದ ಮೇಲೆ ಮನೆ ನಂತರ ಹೊರಪ್ರಪಂಚದೊಂದಿಗೆ ಒಂದಲ್ಲ ಒಂದು ರೀತಿಯದಿನದಂದು ಅಂತಹ ಮಹಾನ್ ಅಪ್ಪನಿಗೆ ಒಂದು ಶುಭಾಶಯ ಹೇಳೋಣ. ಜನರು ಕೊರೋನಾ ರೋಗಕ್ಕೆ ದೇಶದ ಅಲ್ಲಲ್ಲಿ ಸಾವು ನೋವು ಅನುಭವಿಸುತ್ತಿದ್ದಾರೆ ನರಳುತ್ತಿದ್ದಾರೆ ಬದುಕಲು ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ ಎಂದು ಟಿವಿಯಲ್ಲಿ ಸುದ್ದಿ ಓದುವವರು ಹೇಳುತ್ತಿದ್ದಾಗ ಅಪ್ಪ ಹೇಳುವುದು ಒಂದೇ ಮಾತು ಮನುಷ್ಯನಾಗಿ ಹುಟ್ಟಿದ ಮೇಲೆ ಹೊರಪ್ರಪಂಚದೊಂದಿಗೆ ಒಂದಲ್ಲ ಒಂದು ರೀತಿಯ ಎಲ್ಲಾ ನೋವುಗಳು ಅನುಭವಿಸಬೇಕು ಆದರೆ ದೇವರು ಕೊಟ್ಟ ಇಷ್ಟು ದಿನ ಖುಷಿಗೆ ಆ ದೇವರ ಮೇಲೆ ಭಾರ ಹಾಕ್ತಾ ಜಾಸ್ತಿ ಏನು ಯೋಚನೆ ಮಾಡದೇ ಜೀವನದಲ್ಲಿ ಏನ್ ಬರುತ್ತೋ ಅದನ್ನು ಎದುರಿಸಿಕೊಂಡು ಧೈರ್ಯವಾಗಿ ಹೋಗಬೇಕು ಎಂದು ಹೇಳುತ್ತಾರೆ.
(ಯುವ ಲೇಖಕಿ ಶಿವಮೊಗ್ಗ) ~ಸಾನಿಯಾ ಆರ್