ಕೂಡ್ಲಿಗಿ:ಪ್ರಾಮಾಣಿಕತೆಗೆ ಸಾಕ್ಷಿಯಾದ ಆಟೋ ಚಾಲಕ ಬಿ.ಗಿರೀಶ್*-
ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣದ ಆಟೋ ಚಾಲಕ ಬಿ.ಗಿರೀಶ್ ರವರು, ತಮ್ಮ ಆಟೋದಲ್ಲಿ ಪ್ರಯಾಣಿಕರು ಮರೆತು ಬಿಟ್ಟೋಗಿದ್ದ ಹಣವಿದ್ದ ಬ್ಯಾಗನ್ನು. ಕೂಡಲೇ ಬ್ಯಾಗ್ ಮಾಲೀಕರಿಗೆ ತಲುಪಿಸುವ ಮೂಲಕ, ಪ್ರಾಮಾಣಿಕತೆ ತೋರಿ ಚಾಲಕರಿಗೆ ಮಾದರಿಯಾಗಿದ್ದಾರೆ. ಅದಕ್ಕಾಗಿ ಬ್ಯಾಗ್ ಮರಳಿ ಪಡೆದ ಪ್ರಯಾಣಿಕರು ಹಾಗೂ ಹಿರಿಯ ನಾಗರೀಕರು, ಆಟೋಚಾಲಕ ಬಿ.ಗಿರೀಶ ರನ್ನು ಅಭಿನಂದಿಸಿದ್ದಾರೆ. ಕೂಡ್ಲಿಗಿ ಆಟೋ ಡ್ರೈವರ್ ಬಿ.ಗಿರೀಶ್ ಆಟೋದಲ್ಲಿ, ಪ್ರಯಾಣಿಕರಾದ ಕೂಡ್ಲಿಗಿ ಪಟ್ಟಣ ರತ್ನಮ್ಮ ಎಂಬ ಮಹಿಳೆ. ಆಟೋದಲ್ಲಿ ಸಂಚರಿಸಿದ್ದು, ಇಳಿಯುವ ಸಂದರ್ಭದಲ್ಲಿ ಬ್ಯಾಗ್ ನೆನಪಾಗದೇ ಆಟೋದಲ್ಲಿಯೇ ಬಿಟ್ಟು ಹೋಗಿದ್ದಾರೆ. ಪರಿಶೀಲಿಸಲಾಗಿ ಅದರಲ್ಲಿ ₹ 40,000 ಹಣ ಹಾಗೂ ದಾಖಲಾತುಗಳಿದ್ದುದ್ದನ್ನು ಗಮನಿಸಿದ್ದಾರೆ, ಗಿರೀಶ್ ಕೂಡಲೇ ದಾಖಲಾತಿಯಲ್ಲಿದ್ದ ಮೊ ನಂ ಸಂಪರ್ಕಿಸಿದ್ದಾರೆ. ನಂತರ ರತ್ನಮ್ಮರನ್ನು ಖುದ್ದು ಭೇಟಿ ಮಾಡಿ , ಅವರ ಬ್ಯಾಗ್ ನ್ನು ಅವರಿಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ. ನಡೆದಿದ್ದು ಇಷ್ಟು.. ಕೂಡ್ಲಿಗಿ ಪಟ್ಟಣದ ರತ್ನಮ್ಮ ಎಂಬ ಮಹಿಳೆ , ಖಾಸಗಿ ಆಸ್ಪತ್ರೆಯಿಂದ ಆಗಮಿಸಿ ಆಟೋದಲ್ಲಿ ತನ್ನ ಮನೆಗೆ ತೆರಳಿದ್ದಾಳೆ. ತನ್ನ ಮನೆ ಹತ್ತಿರ ಇಳಿಯುವಾಗ ಮಹಿಳೆ, ತನ್ನ ಕೈಯಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು. ಇಳಿಯುವಾಗ ತನಗೆ ತಿಳಿಯದೇ ಆಟೋದಲ್ಲಿ ತಾನು ಕುಳಿತ ಸೀಟಲ್ಲೇ ಮರೆತು ಬಿಟ್ಟು ಇಳಿದಿದ್ದಾರೆ. ಈ ಸಂದರ್ಭದಲ್ಲಿ ಆಟೋ ಚಾಲಕ, ಸೀಟನ ಮೇಲಿರುವ ಬ್ಯಾಗನ್ನು ಗಮನಿಸಿಯೇ ಇಲ್ಲ. “ಶಿವ ಶರಣ” ಪ್ರಯಾಣಿಕನಿಗೊಂದು ಶರಣು- ಕೆಲ ಹೊತ್ತಲ್ಲೇ ಆಟೋ ಚಾಲಕ ಬಿ.ಗಿರೀಶ್, ಸಹಜವಾಗಿಯೇ ಮತ್ತೊಬ್ಬ ಪ್ರಯಾಣಿಕರನ್ನು ಹತ್ತಿಸಿಕೊಂಡಿದ್ದಾರೆ. ಪ್ರಯಾಣಿಕರು ತಾವು ಕುಳಿತುಕೊಳ್ಳೋ ಸೀಟಿನಲ್ಲಿ, ಬ್ಯಾಗ್ ಇರುವುದನ್ನು ಕಂಡು ಚಾಲಕರಿಗೆ ತಿಳಿಸಿದ್ದಾರೆ.
ಇಲ್ಲಿ ಪ್ರಯಾಣಿಕನ ಪ್ರಾಮಾಣಿಕತೆಯೂ, ತುಂಬಾ ಮಹತ್ವದ್ದಾಗಿದೆ. ಏಕೆಂದರೆ ಬಿಟ್ಟಿ ಸರಕು ಸಾಮಾಗ್ರಿ ಹಣ ಸಿಕ್ಕರೆ,ಅದು ತಮ್ಮದೆಂಬಂತೆ ಬಾಚಿಕೊಳ್ಳೋ ಜನರಿರುವ ಈ ಕಾಲದಲ್ಲಿ. ಆ ಎರಡನೇ ಪ್ರಯಾಣಿಕನ ಪ್ರಾಮಾಣಿಕತೆಗೆ, ಸಮಸ್ತ ನಾಗರಿಕರ ಪರವಾಗಿ ಆಟೋಚಾಲಕರ ಪರವಾಗಿ ಶರಣು ಹೇಳಬೇಕಿದೆ. ಬ್ಯಾಗ್ ನಲ್ಲೇನಿತ್ತು.!?- ಅಚ್ಚರಿಗೊಂಡ ಚಾಲಕ ಗಿರೀಶ ಒಂದು ಕ್ಷಣ ಚಕಿತನಾಗಿದ್ದು, ಬ್ಯಾಗ್ ನ್ನು ನೆರೆದಿದ್ದವರ ಸಮಕ್ಷಮದಲ್ಲಿ ಪರಿಶೀಲಿಸಿದ್ದಾನೆ.ಅದರಲ್ಲಿ ₹40 ಸಾವಿರ ನಗದು, ಹಾಗೂ ಆಧಾರ್ ಕಾರ್ಡ್, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ದಾಖಲುಗಳು ಲಭ್ಯವಾಗಿವೆ. ದಾಖಲುಗಳನ್ನು ಪರಿಶೀಲಿಸಲಾಗಿ, ಆಧಾರ್ ಕಾರ್ಡ್ ನಲ್ಲಿ ವಿಳಾಸ ಮತ್ತು ಮೊ ನಂ ಸಂಪರ್ಕಿಸುವ ಪ್ರಯತ್ನದಲ್ಲಿದ್ದಾರೆ. ಅಷ್ಟರಲ್ಲಿಯೇ ತಮ್ಮ ಚೀಲವನ್ನು ಆಟೋದಲ್ಲಿ ತಿಳಿಯದೇ ಮರೆತು ಬಿಟ್ಟಿದ್ದು, ಅರಿವಾಗಿ ಆ ಮಹಿಳೆ ಆಟೋ ಪತ್ತೆ ಹಚ್ಚಲು ಆಟೋ ಸ್ಟ್ಯಾಂಡ್ ಕಡೆ ದಾವಿಸಿ ಬಂದಿದ್ದಾರೆ. ಅಷ್ಟರಲ್ಲಿಯೇ ಆಟೋ ಚಾಲಕ ಬಿ.ಗಿರೀಶ ಬಿಟ್ಟು ಹೋಗಿದ್ದ, ಆಧಾರ್ ಕಾರ್ಡ್ ನಲ್ಲಿ ದೂರವಾಣಿ ನಂಬರ್ ತೆಗೆದುಕೊಂಡು ಕರೆ ಮಾಡಿ ಸಂಪರ್ಕಿಸಿದ್ದಾರೆ. ದುಖಃದ ಕಣ್ಣೀರು..ಬದಲಿಸಿ, ಸಂತೋಷದ ಕಣ್ಣಿರು ತಂದ ರತ್ನಮ್ಮ-ಕೂಡಲೇ ತಾವೇ ಮಹಿಳೆಯನ್ನು ಪತ್ತೆ ಹಚ್ಚಿ ಭೇಟಿಯಾಗಿ, ಅವರ ಬ್ಯಾಗ್ ನಲ್ಲಿದ್ದ ₹40 ಸಾವಿರ ನಗದು ಹಾಗೂ ದಾಖಲೆಗಳನ್ನು. ಕಳೆದು ಕೊಂಡ ಪ್ರಯಾಣಿಕ ಮಹಿಳೆ ರತ್ನಮ್ಮಗೆ ಮುಟ್ಟಿಸಿದ್ದಾರೆ. ಈ ಮೂಲಕ ಆಟೋಚಾಲಕ ಗಿರೀಶ, ಪ್ರಾಮಾಣಿಕತೆ ಮೆರೆದಿದ್ದಾರೆ ಹಾಗೂ ಇತರರಿಗೆ ಮಾದರಿಯಾಗಿದ್ದಾರೆ. ತನ್ನ ಹಣ ಹಾಗೂ ದಾಖುಲುಗಳನ್ನು, ತಮಗೆ ಖುದ್ದು ಭೇಟಿಯಾಗಿ ಮರಳಿಸಿದ ಆಟೋಚಾಲಕ ಗಿರೀಶರಿಗೆ. ಬ್ಯಾಗ್ ಪಡೆದಾಕ್ಷಣ ಪ್ರಯಾಣಿಕರಾದ ರತ್ನಮ್ಮ. ಕಣ್ಣಲ್ಲಿ ಸಂತೋಷದ ಕಣ್ಣೀರಿನೊಂದಿಗೆ. ಅಭಿನಂದನೆಗಳನ್ನು ತಿಳಿಸಿದ್ದಾರೆ, ಅವರು ಮಾತನಾಡಿ. ನಾನು ಹಣ ಹಾಗೂ ದಾಖಲುಗಳನ್ನು ಎಲ್ಲೋ ಕಳೆದು ಕೊಂಡೆನಲ್ಲಾ, ಎಂದು ದುಖಃದಿಂದ ಕಣ್ಣೀರಿಡುತಿದ್ದೆ. ಅದೇ ಸಮಯದಲ್ಲಿ ಆಟೋಚಾಲಕ ಗಿರೀಶರವರೇ ಖುದ್ದು, ಕರೇ ಮಾಡಿ ನನಗೆ ನನ್ನ ಬ್ಯಾಗ್ ನಲ್ಲಿದ್ದ ನಗದು ಹಣ ಹಾಗೂ ದಾಖಲುಗಳನ್ನು ತಲುಪಿಸಿದ್ದಾರೆ. ಆಟೋ ಚಾಲಕ ರಮೇಶರವರು ಈ ಮೂಲಕ, ತಮ್ಮಲ್ಲಿ ದುಖಃದ ಕಣ್ಣೀರು ತೊಲಗಿಸಿ ಸಂತೋಷದ ಕಣ್ಣಿರು ತರಿಸಿದ್ದಾರೆ. ಇದಕ್ಕೆ ಕಾರಣ ಆಟೋಚಾಲಕ ಗಿರೀಶ ಹಾಗೂ, ಬ್ಯಾಗ್ ಪತ್ತೆ ಹಚ್ಚಿದ ಮತ್ತೋರ್ವ ಪ್ರಯಾಣಿಕರ ಪ್ರಾಮಾಣಿಕತೆ ಇಲ್ಲಿ ಕಾಣುತ್ತಿದೆ. ಅದಕ್ಕಾಗಿ ತಾವು ಇವರಿಬ್ಬರಿಗೂ ಈ ಮೂಲಕ ಕೃತಜ್ಞತೆ ಹಾಗೂ ಅಭಿನಂದನೆಗಳನ್ನು ತಿಳಿಸುವುದಾಗಿ, ರತ್ನಮ್ಮ ಕೈ ಮುಗಿಯುತ್ತಲೇ ಭಾವುಕರಾಗಿ ಕಣ್ಣೀರಾದರು.
ಅಭಿನಂದನೆಗಳ ಮಹಾಪೂರ-ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಸೈನಿಕರಾದ ಕಾಟೇರ ರಮೇಶ್, ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷ ಮಯೂರ ಮಂಜುನಾಥ. ಪ್ರಾಮಾಣಿಕತೆ ಮೆರೆದ ಆಟೋ ಚಾಲಕ ಬಿ.ಗಿರೀಶ್ ರವರಿಗೆ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಪಟ್ಟಣದ ಹಿರಿಯ ನಾಗರೀಕರು, ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪತ್ರಕರ್ತರು, ವಿವಿದ ಜನಪ್ರತಿನಿಧಿಗಳು, ಕಲಾವಿದರು, ಹಮಾಲರ ಸಂಘ, ವಾಹನ ಚಾಲಕರ ಸಂಘ, ರೈತ ಸಂಘ,ಕಾರ್ಮಿಕರ ಸಂಘ, ಮಹಿಳಾ ಸಂಘ,ಕಲಾವಿದರ ಸಂಘ, ವರ್ತಕರ ಸಂಘ ಸೇರಿದಂತೆ ವಿವಿದ ಸಂಘಟನೆಗಳ ಪದಾಧಿಕಾರಿಗಳು ಆಟೋ ಚಾಲಕ ಗಿರೀಶ ಗೆ ಈ ಮೂಲಕ ಅಭಿನಂದಿಸಿದ್ದಾರೆ. ತಮ್ಮ ಲಗೇಜಿಗೆ ತಾವೇ ಜವಾಬ್ದಾರರು-ಆಟೋ ಚಾಲಕರ ಸಂಘದ ಅಧ್ಯಕ್ಷ, ಹಾಗೂ ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಮಯೂರ ಮಂಜುನಾಥ ಮಾತನಾಡಿದರು. ಆಟೋದಲ್ಲಿ ಪ್ರಯಾಣಿಸುವ ನಮ್ಮ ಪ್ರಯಾಣಿಕರನ್ನು, ಅವರು ತಿಳಿಸಿದ ಜಾಗಕ್ಕೆ ಇಳಿಸಿದ ನಂತರ. ಹಿಂದಿನ ಸೀಟ್ ನ್ನು ಗಮನಿಸುವ ಗೋಜಿಗೆ ಹೋಗೋದಿಲ್ಲ, ತದನಂತರದಲ್ಲಿ ಸಹಜವಾಗಿಯೇ ಅನ್ಯ ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತೇವೆ. ಆಗ ಅವರು ಆಟೋ ಹತ್ತುವಾಗ ನಮಗೆ, ಹಿಂದಿನ ಸೀಟಿನಲ್ಲಿ ಏನಾದರೂ ಇದ್ದಲ್ಲಿ ನಮ್ಮ ಗಮನಕ್ಕೆ ತರಬೇಕಿದೆ. ಆಗ ಕಳೆದು ಕೊಂಡವರಿಗೆ ಆವರ ವಸ್ತುಗಳನ್ನು ತಲುಪಿಸಬಹುದಾಗಿದೆ. ಹಾಗೆ ಮಾಡದೇ ಆ ವಸ್ತುಗಳನ್ನು ನಮಗೆ ತಿಳಿಯದೇ, ನಮ್ಮವೆಂದು ಅವರು ತೆಗೆದುಕೊಂಡಲ್ಲಿ. ಸಾಮಾಗ್ರಿ ಕಳೆದು ಕೊಂಡ ಪ್ರಯಾಣಿಕರ ಪಾಲಿಗೆ, ನಮ್ಮ ಆಟೋ ಚಾಲಕರೇ ಅಪರಾಧಿಗಳಾಗಿ ಕಾಣಿಸುತ್ತಾರೆ. ಆದ ಕಾರಣ ದಯವಿಟ್ಟು ಪ್ರಯಾಣಿಕರು ಹಾಗೂ ಸಾರ್ವಜನಿಕರು, ಆಟೋ ಹತ್ತುವಾಗ ಮತ್ತು ಇಳಿಯುವಾಗ ತಮ್ಮ ವಸ್ತುಗಳ ಮೇಲೆ ಜವಾಬ್ದಾರಿ ವಹಿಸಬೇಕು ಎಂದು ಅವರು ಈ ಮೂಲಕ ಕೋರಿದ್ದಾರೆ.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.