ರಾಜ್ಯ ಎಸ್.ಸಿ. ಎಸ್.ಐ. ಅಲೆಮಾರಿ ಬುಡಕಟ್ಟು ಮಹಾಸಭಾವತಿಯಿಂದ  ಪೌರಾಯುಕ್ತರು, ನಗರಸಭೆ ಕೊಪ್ಪಳ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Spread the love

ರಾಜ್ಯ ಎಸ್.ಸಿ. ಎಸ್.. ಅಲೆಮಾರಿ ಬುಡಕಟ್ಟು ಮಹಾಸಭಾವತಿಯಿಂದ  ಪೌರಾಯುಕ್ತರು, ನಗರಸಭೆ ಕೊಪ್ಪಳ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಕೊಪ್ಪಳ ನಗರಸಭೆಯ ನವೀಕರಣ ಕಾಮಗಾರಿಗಳಿಗಾಗಿ ೩ ಕೋಟಿ ರೂ ಖರ್ಚು ಮಾಡುತ್ತಿರುವುದನ್ನು ನಿಲ್ಲಿಸುವ ಬಗ್ಗೆ ಇಂದು ರಾಜ್ಯ ಎಸ್.ಸಿ. ಎಸ್.. ಅಲೆಮಾರಿ ಬುಡಕಟ್ಟು ಮಹಾಸಭಾವತಿಯಿಂದ  ಪೌರಾಯುಕ್ತರು, ನಗರಸಭೆ ಕೊಪ್ಪಳ ಇವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವಿವರಣೆ :- ಮೇಲಿನ ಹೇಳಿಕೆಯಂತೆ, ನಗರದ ಪ್ರತಿಯೊಂದು ವಾರ್ಡಿನಲ್ಲಿಯೂ, ಸ್ವಚ್ಛತೆಯ ವಿಷಯವಾಗಿ, ಮತ್ತು ನಿರಾಶ್ರಿತರ ಅನುಕೂಲಕ್ಕಾಗಿ ಮಾಡಬೇಕಾದ ಕೆಲಸ ಕಾರ್ಯಗಳು ಸಾಕಷ್ಟು ತಾಂಡವವಾಡುತ್ತಿವೆ. ಅಂತಹ ಸಂದರ್ಭದಲ್ಲಿ ಮತ್ತು, ಸಿಂದೋಗಿ ರಸ್ತೆಯಲ್ಲಿನ 2000ಗುಂಪು ಮನೆಗಳ ವಾಸಕ್ಕಾಗಿ, ಅಲ್ಲಿ ರಸ್ತೆ ಚರಂಡಿಗೆ, ಮತ್ತು ವಿದ್ಯುತ್, ವ್ಯವಸ್ಥೆ ಆಗದ ಕಾರಣ ನಿರಾಶ್ರಿತ ಫಲಾನುಭವಿಗಳಿಗೆ, ಇದುವರೆಗೂ ಅಲ್ಲಿ ಮನೆಗಳಿಗೆ ಹಕ್ಕು ಪತ್ರ ಕೊಟ್ಟರು ಕೂಡಾ ಉಪಯೋಗವಿಲ್ಲ, ಮತ್ತು ವಾರ್ಡ್ ನಂಬರ 3ರಲ್ಲಿ ಕುವೆಂಪು ನಗರದಲ್ಲಿನ ಸುಮಾರು ವರ್ಷಗಳು ಕಳೆದರು. ಇಲ್ಲಿನ ರಾಜಕಾಲುವೆಯ ನೀರು ಹರಿಯುವ ಸಮಸ್ಯೆಯನ್ನು ನೀರ್ಲಕ್ಷ ಒಯಿಸಿದ್ದಾರೆ. ಇನ್ನುಮುಂದೆ ಆದರೂ ಜನರ ನಾವು ಬದುಕಿನ ಜೀವನ ಸಾಗಿಸುವುದನ್ನು ತಡೆಯಲು ಮುಂದಾಗಬೇಕು ಕಾರಣ ಇಲ್ಲಿಯವರೆಗೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಬಂದು ಕೇವಲ ಅಸ್ಸಾಸನ ಕೊಟ್ಟಿದ್ದಾರೆ ವಿನಃ ಇಲ್ಲಿಯವರೆಗೆ ಯಾವುದೇ ಪರಿಹಾರವು ಕೂಡಾ ಇದುವರೆಗೂ ಪರಿಹರಿಸಿಲ್ಲ. ಇಂತಹ ಸಮಯದಲ್ಲಿ 2, ಕೋಟಿ ರೂ. ವೆಚ್ಚದಲ್ಲಿ ನಗರಸಭೆ ನವಿಕರಣ ಕಾಮಗಾರಿಗಳನ್ನು ಮಾಡಿಸುವುದು ಎಷ್ಟು ಸೂಕ್ತ, ಮತ್ತು ಈ ಎಲ್ಲಾ ಕಾರ್ಯಗಳಿಗಾಗಿ ಈಗ ನಡೆಸುತ್ತಿರುವ ಕಲಸ ನಿಲ್ಲಿಸಿ ಮೇಲೆ ಹೇಳಿದ ರೀತಿ ಕೆಲಸ ಮಾಡದೆ ಹೋದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು ಮತ್ತು ಕುವೆಂಪು ನಗರದ ಹರಿಯುವ ನೀರಿನ ಸಮಸ್ಯೆ ಇನ್ನು 8-10ದಿನಗಳಲ್ಲಿ ಸರಿ ಪಡಿಸದ ಇದ್ದ ಪಕ್ಷದಲ್ಲಿ ಡಿಸಿ ಕಛೇರಿ ಮುಂದೆ ಓಣಿಯ ತಾಯಂದಿರು ಮತ್ತು ಸಂಘಟನೆಯ ಹೋರಾಟಗಾರರು, ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುತ್ತದೆ. ಎಂದು ಈ ಮೂಲಕ ಸಂಬಂಧ ಪಟ್ಟ ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗುತ್ತದೆ ಎಂದು ಅಧಿಕಾರಿಗಳಿಗೆ ಮನವಿ ಪತ್ರದ ಮೂಲಕ ಇಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ನೋಂದಸಂತ್ರಸ್ತರಾದ ಪಿ.ಎಸ್.ಹಿರೇಮಠ,ಪ್ರಾಕಾಶ ಬಿ.ಹೆಚ್.ಶ್ರೀಮತಿ ಕಮಲ್ವ ಆರ್.ಹೆಚ್ಚ, ಶ್ರೀಮತಿ ನೀಲಮ್ಮ ಪಿ.ಹೆಚ್.ಸಂಜೀವಪ್ಪ ಎಸ್.ಕೆ, ಮೌಲಸಾಬ್,ಶ್ರೀಮತಿ ಮೌಲಮ್ಮ, ಜೀಲಾನಿ ಸಾಬ್, ಪ್ರಾವೀಣ ಹೊಟ್ಟಿ, ರಫೀಕ್ ಸಾಬ್ ಕಪಾಲಿ, ಹಾಗೂ ಇತರರು ಪಾಲುಗೊಂಡಿದ್ದರು, ಜೊತೆಗೆ ಈ ಸಂಧರ್ಭದಲ್ಲಿ ಅಲೆಮಾರಿ ಜಿಲ್ಲಾಧ್ಯಕ್ಷರಾದ ಶ್ರೀ ಸಂಜಯ್ ದಾಸ್ ಕೌಜಗೇರಿ, ಭಾರತೀಯ ಭೀಮ ಸೇನಾ ಜಿಲ್ಲಾ ಅಧ್ಯಕ್ಷರಾದ ಕಾಶಪ್ಪ ಚಲುವಾದಿ, ಸಮಾಜ ಸೇವಕರದ ಆಸೀಪ್ ಬಾನ್, ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಮಾರುತಿ ಚಿಲವಾಡಗಿ,ಹಾಗೂ ಸರ್ವ ಸದಸ್ಯರು ಪಾಲುಗೊಂಡಿದ್ದರು,

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *