ಕೂಡ್ಲಿಗಿ:ಯೋಗದಿಂದ ಸರ್ವ ಸುಯೋಗ ಶಾಸಕ–ಶಾಸಕ ಡಾ” ಎನ್.ಟಿ.ಶ್ರೀನಿವಾಸ್.
ವಿಜಯನಗರ ಜಿಲ್ಲೆ ಕೂಡ್ಲಿಗಿ: ಯೋಗ ದಿಂದ ಧೈಹಿಕ ಹಾಗೂ ಮಾನಸಿಕ ವ್ಯಾಯಾಮ ಮಾತ್ರವಲ್ಲ, ಜೀವನದ ಎಲ್ಲಾ ಆಯಾಮಗಳಲ್ಲಿಯೂ ಸುಯೋಗ ಉಂಟಾಗಲಿದೆ ಎಂದು ಶಾಸಕ ಡಾ”ಎನ್.ಟಿ.ಶ್ರೀನಿವಾಸ್ ನುಡಿದರು.
ಅವರು ಕೂಡ್ಲಿಗಿ ಪಟ್ಟಣದ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿರುವ, ಮಹಾತ್ಮ ಗಾಂಧೀಜಿಯವರ ಚಿತಾಭಸ್ಮ ರಾಷ್ಟ್ರೀಯ ಸ್ಮಾರಕದ ಆವರಣದಲ್ಲಿ. ಜೂ21ರಂದು ಬೆಳಿಗ್ಗೆ ಅಂತರ ರಾಷ್ಟ್ರೀಯ ಯೋಗ ದಿನ ಪ್ರಯುಕ್ತ ಜರುಗಿದ, ಸಾಮೂಹಿಕ ಯೋಗ ತರಗತಿಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಯೋಗ ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ, ಸುಯೋಗವನ್ನುಂಟು ಮಾಡುತ್ತದೆ ನೆಮ್ಮದಿ ನೀಡುತ್ತದೆ.
ಆಸ್ಪತ್ರೆಯಿಂದ ದೂರ ಇರಲು ನೆಮ್ಮದಿಯ ಜೀವನಕ್ಕೆ, ಯೋಗ ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಬೇಕಿದೆ ಮತ್ತು ನಿತ್ಯ ಕರ್ಮಗಳಲ್ಲಿ ಪ್ರಮುಖದ್ದಾಗಿರಬೇಕಿದೆ ಎಂದರು. ಸ.ಸಂ.ಪ.ಪೂ.ಕಾಲೇಜ್ ನ ಹಿರಿಯ ಉಪನ್ಯಾಸಕರಾದ ಶ್ರೀಮತಿ ಟಿ.ಕೊತ್ತಮ್ಮ ಮಾತನಾಡಿ, ಮಾನಸಿ ಧೈಹಿಕ ಸದೃಡತೆಗೆ ಸರ್ವರೂ ಯೋಗ ರೂಡಿಗೊಳಿಸಿಕೊಳ್ಳಬೇಕಿದೆ, ಸದೃಡ ಸಮಾಜಕ್ಕೆ ಸರ್ವರಿಗೂ ಯೋಗ ಅನಿವಾರ್ಯವಾಗಿದೆ ಎಂದರು. ನಂತರ ನೌಕರರ ಸಂಘದ ಅಧ್ಯಕ್ಷ ಪಿ.ಶಿವರಾಜ್ ಮಾತನಾಡಿದರು. ಯೋಗ ಮಾತೆ ಗೌರಮ್ಮ ರವರು, ಸರ್ವರನ್ನೊಳಗೊಂಡಂತೆ ಸಾಮೂಹಿಕ ಯೋಗ ತರಗತಿ ನಡೆಸಿಕೊಟ್ಟರು. ಮೈದಾನ ಗೆಳೆಯರ ಬಳಗ ,ಹಾಗೂ ಮಹದೇವ ಮೇಲಾರ ಕ್ರೀಡಾಂಗಣ ಹೋರಾಟ ಸಮತಿ ಪದಾಧಿಕಾರಿಗಳು. ಪಟ್ಟಣದ ವಿವಿದ ಸಂಘ ಸಂಸ್ಥೆಗಳ ಪ್ರಮುಖರು, ವಿವಿದ ಇಲಾಖೆಗಳ ನೌಕರರು, ವಿವಿದ ಶಾಲಾ ಕಾಲೇಜುಗಳ ಶಿಕ್ಷಕರು, ನಿವೃತ್ತ ಶಿಕ್ಷಕರು, ಚಿಂತನ ಚೇತನ ಬಳಗದ ಕೆ.ನಾಗರಾಜ, ವಿವಿದ ಹಾಸ್ಟೇಲ್ ಗಳ ವಿದ್ಯಾರ್ಥಿಗಳು, ಬಿಸಿಎಮ್ ಅಧಿಕಾರಿ ಪಂಪಾಪತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಫಿರೋಜ್ ಖಾನ್, ನಿವೃತ್ತ ಧೈಹಿಕ ಶಿಕ್ಷಕ ಡಿ.ನಾಗರಾಜ,ಮಂಜುನಾಥ, ಪಟ್ಟಣದ ನಾಗರೀಕರು, ಗೃಹ ರಕ್ಷಕ ಅಧಿಕಾರಿ ಹಾಗೂ ಸಿಬ್ಬಂದಿ, ಮಹಿಳೆಯರು, ಬಿಸಿಎಮ್ ಹಾಸ್ಟೆಲ್ ವಿದ್ಯಾರ್ಥಿಗಳು, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ವಿದ್ಯಾರ್ಥಿಗಳು, ಡಾ” ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಮಕ್ಕಳು, ಎಸ್ಸಿ ಎಸ್ಟಿ ಹಾಸ್ಟೆಲ್ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು. ಅಲ್ಪ ಸಂಖ್ಯಾತ ಹಾಸ್ಟೆಲ್ ವಿದ್ಯಾರ್ಥಿಗಳು,ಪಟ್ಟಣದ ನೂರಾರು ಮಕ್ಕಳು ಯೋಗ ತರಗತಿಯಲ್ಲಿದ್ದರು.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.