ರಾಜ್ಯಮಟ್ಟದ ಕವಿಗೋಷ್ಠಿಗೆ ಕವಿಗಳ ಆಯ್ಕೆ.
ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕವನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಕವಿಗಳಾದ ಶ್ರೀಮತಿ ನಳಿನ ದ್ವಾರಕನಾಥ್, ಶ್ರೀ ನಾರಾಯಣ ಕುಂಬ್ರ ಪುತ್ತೂರು, ಶ್ರೀ ಲೋಕೇಶ್ ಕಲ್ಕುಣಿ ಮಂಡ್ಯ, ಶ್ರೀ ಹಂಪೇಶ ಕನ್ನಡಿಗ, ಶ್ರೀ ಅಂಬಣ್ಣ ಕಟ್ಟಿಮನಿ ಅಂಕ, ಶ್ರೀಮತಿ ಜುಲೇಖಾ ಅಸ್ಲಂ ಪಟವಾರಿ, ಶ್ರೀಮತಿ ರಶ್ಮಿತಾ ಸುರೇಶ್, ಶ್ರೀಮತಿ ಬಂತನಾಳ ಶೋಭಾ, ಕುಮಾರಿ ತನ್ಸೀರಾ ಆತೂರು, ಶ್ರೀ ಅಬೂಬಕ್ಕರ್ ಕುದ್ರಡ್ಕ, ಶ್ರೀಮತಿ ತನುಜಾ ಜೆ.ಸಿ, ಶ್ರೀ ಎಸ್.ಶ್ರೀಧರಮೂರ್ತಿ, ಶ್ರೀಮತಿ ಪೂರ್ಣಿಮಾ ರಾಜೇಶ್, ಶ್ರೀಮತಿ ರೂಪಾ ಎ.ಎಮ್, ಡಾ. ಗೀತಾ ವಿಜಯ್ ಕುಮಾರ್, ಶ್ರೀ ಆನಂದ ಹಕ್ಕೆನ್ನವರ, ರೇಣುಕಾ ಶಿವಕುಮಾರ್, ಶ್ರೀಮತಿ ಬಿ.ಎಂ ಮಂಜುಳಾ, ಶ್ರೀ ಎಂ.ಡಿ ಅಲಿರಾಜ್, ಶ್ರೀ ಮಾಂತೇಶ ಕುಂಬಾರ, ಶ್ರೀಮತಿ ಅನುಪಮಾ ಸುಲಾಖೆ, ಶ್ರೀ ಬಸವರಾಜ ಕನ್ನೂರ, ಶ್ರೀಮತಿ ಈರಮಂಡ ಹರಿಣಿ ವಿಜಯ, ಶ್ರೀ ಮಹಮ್ಮದ್ ಅನ್ಸಾದ್ ಕಬಕ, ಕುಮಾರಿ ಪೂಜಾ ಷಣ್ಮುಖ, ಶ್ರೀಮತಿ ಲತಾ ಶ್ರೀಭಾರ್ಗವ, ಶ್ರೀಮತಿ ರೇಖಾ ಸುರೇಶ್, ಶ್ರೀ ಲುಕ್ಮಾನ ಅಡ್ಯಾರ್ , ಶ್ರೀ ನಾರಾಯಣ ಮಾಸ್ತಿ ಹಾಗೂ ಶ್ರೀ ಶಂಕರಾನಂದ ಹಿರೇಮರಳಿ ಆಯ್ಕೆಯಾಗಿದ್ದಾರೆ. ಉಪನ್ಯಾಸಕರು ಹಾಗೂ ವಿಮರ್ಶಕರಾದ ಶ್ರೀ ಮೈಬೂಬಸಾಹೇಬ.ವೈ.ಜೆ, ವಿಜಯಪುರ ಮತ್ತು ಕವಯಿತ್ರಿ ಶ್ರೀಮತಿ ತುಳಸಿ ಭಟ್ ಬೆಂಗಳೂರು ತೀರ್ಪುಗಾರರಾಗಿದ್ದರು.ಆಯ್ಕೆಯಾದ ಕವಿಗಳು ಮುಂದಿನ ತಿಂಗಳು ಜುಲೈ 9ರಂದು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಖಿದ್ಮಾ ಫೌಂಡೇಶನ್ ಕರ್ನಾಟಕ ಆಯೋಜನೆ ಮಾಡಲಾಗಿರುವ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಕವನವನ್ನು ವಾಚನ ಮಾಡಲಿದ್ದಾರೆ ಎಂದು ಕಾರ್ಯಕ್ರಮದ ಆಯೋಜಕ ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕರಾದ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಸೋಮನಾಥ ಹೆಚ್.ಎಮ್.