ಮದುವೆ — ದೇವಸ್ಥಾನಗಳಲ್ಲಿ ‘ಆಹಾರ‘ ವ್ಯರ್ಥವೇಕೆ..!?
ಅನ್ನದ ಮಹತ್ವ ಅರಿತವರಿಗೆ ಗೊತ್ತು. ಹಸಿದ ಹೊಟ್ಟೆಗೆ ಭಿಕರಿಯಾಗಿಯೂ ಸಹ ಕೆಲವೊಮ್ಮೆ ಬಾರಿ ಏನೆಲ್ಲಾ ಹುಡುಕಾಟ, ನಮ್ಮೆಲ್ಲರ ಹೊಟ್ಟೆ ತುಂಬಿಸುವರು ಎಂದರೆ ನಾವು ‘ರೈತ’ರನ್ನು ನೆನೆ ನೆನೆದು ಉಣಬೇಕು.ಅವರು ಬೆಳೆದು ಹಾಕಿದ ಅನ್ನ ಇಂದೆಲ್ಲಾ ಜಗವು ಬದುಕುತಿದೆ. ಅದೆನೇ ಇರಲಿ, ಇತ್ತೀಚಗೆ ಸಿರಿವಂತರ ಮನೆಯಲ್ಲಿ ಕೆಲವು ಕಾರ್ಯಕ್ರಮಗಳು ನಡೆಯುತ್ತವೆ. ಮದುವೆಯಾಗಿರಬಹುದು ಅಥವಾ ವಿಶೇಷವಾಗಿ ದೇವಸ್ಥಾನಗಳಲ್ಲಿ ಪ್ರಸಾದ ಪಂಥಿಗಳಲ್ಲಾಗಿರಬಹುದು. ಜನರು, ಭಕ್ತರು ಸಾವಧಾನವಾಗಿ ತಮಗೆ ಬೇಕಾದಷ್ಟು ಊಟ ಮಾಡಿದರೆ ಪರಂಥು ಬೇಸರವಿಲ್ಲ. ಆದರೆ ಕೆಲವರು ಆ ಆಹಾರವನ್ನು ಎಚೇತ್ತವಾಗಿ ಕೆಡಿಸುವುದೇ ಮಾಡುತ್ತಿರುವದು ದುಃಖಕರ ಸಂಗತಿ.
ಭಾರತವು ಹಸಿವು ಮುಕ್ತ ದೇಶವನ್ನಾಗಿ ಮಾಡಬೇಕೆಂದು ಸುಸ್ಥಿರ ಅಭಿವೃದ್ದಿ ಯೋಜನೆಗಳಲ್ಲಿ ಕೆಲವು ಅಂಶವನ್ನು ಗಮನದಲ್ಲಿಡಬೇಕಾಗಿರುವದು ಜರೂರತೆ ಇದೆ. ಏತನ್ಮಧ್ಯೆ ಇನ್ನೂ ಸಹ ಆ ಯೋಜನೆ ಸಂಪೂರ್ಣತೆಯನ್ನು ಹೊಂದಬೇಕಿದೆ. ನಮ್ಮ ಜನರು ಸಹ ಈ ಆಹಾರ ವ್ಯರ್ಥವಾಗುವುದರ ಬಗೆಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಜಗತ್ತಿನಲ್ಲಿ ಆಹಾರದ ಸಮಸ್ಯೆಯನ್ನು ಎದುರಿಸುತ್ತಿರುವ ಅನೇಕ ದೇಶಗಳಲ್ಲಿ ನಮ್ಮ ಭಾರತವು ಒಂದು.ಇಷ್ಟೆಲ್ಲದರ ಮಧ್ಯೆ ರೈತರು ಕಷ್ಟ ಪಟ್ಟು ಬೆಳೆದ ಬೆಳೆಗೆ ಸೂಕ್ತ ಪರಿಹಾರವೂ ಸಹ ಇಲ್ಲವಾಗಿರುವದು ಖೇದಕರ ವಿಷಯ. ಆದರೆ ಇತ್ತೀಚಿನ ದಿನಗಳಲ್ಲಿ ಆಹಾರದ ಶೈಲಿಯೂ ಬದಲಾಗುತ್ತಿದೆ. ಎಲ್ಲರೂ ಆನ್ ಲೈನ್ ಮೊರೆ ಹೋಗುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಮನುಷ್ಯನ ಅಭಿರುಚಿಯೂ ಸಹ ಬದಲಾವಣೆಯತ್ತ ಚಿತ್ತವಾಗಿದೆ. ಎಷ್ಟೋ ಸಲ ನಾವು ಮದುವೆ, ಸಭೆ, ಸಮಾರಂಭಗಳು ಸೇರಿದಂತೆ ದೇವಸ್ಥಾನಗಳಲ್ಲಿ ಆಹಾರವನ್ನು ಗೊತ್ತಿದ್ದು ಗೊತ್ತಿಲ್ಲದಂತೇ ಬಿಸಾಡುತ್ತೇವೆ. ಇಲ್ಲವಾದರೆ ಊಟದಲ್ಲಿಯೇ ಬಿಡುವಂತಹ ಮನಃಸ್ಥಿತಿ ನಮ್ಮ ಜನರಿಗೆ ಉಂಟಾಗುತ್ತದೆ. ಆಹಾರವನ್ನು ಮಿತವಾಗಿ ಹಾಕಿಸಿಕೊಳ್ಳುವುದೇ ಇಲ್ಲ. ಒಮ್ಮೊಮ್ಮೆ ಊಟವನ್ನು ಅಲ್ಲಿಯೇ ಬಿಟ್ಟು ಹೋಗುತ್ತಾರೆ. ನಾವೇನು ಅವರಿಗೆ ಹೋಗಿ ಬುದ್ದಿ ಹೇಳಲು ಸಾಧ್ಯವೇ..? ಖಂಡಿತವಾಗಿಯೂ ಸಾಧ್ಯವಿಲ್ಲ ಎಂಬ ಮನಸ್ಸು ನಮ್ಮದಾಗಿರುತ್ತದೆ. ಅವರಿಗೆ ಆಹಾರದ ಸಮಸ್ಯೆ ಎದುರಿಸುತ್ತಿರುವ ವಿಷಯ ತಿಳಿದಿದ್ದರೂ ಸಹ ನಾವು ಹೀಗೆ ಮಾಡಿದರೆ ಹೇಗೆ..? ಎಂಬ ಪರಿಜ್ಞಾನವೂ ಇರುವುದಿಲ್ಲ.
ಆಹಾರ ವ್ಯರ್ಥವಾಗಿರವ ‘ಅಂಕಿ ಅಂಶ’ :
ನಮ್ಮ ದೇಶದಲ್ಲಿ ಪ್ರತಿ ವರ್ಷ ಅನೇಕ ಜನರು ಹಸಿವಿನಿಂದ ಸಾಯುತ್ತಾರೆ ಮತ್ತು ೨೦೧೯ ರಲ್ಲಿ ಪ್ರಪಂಚದಾದ್ಯಂತ ೯೩೧ ಮಿಲಿಯನ್ ಟನ್ ಆಹಾರ ವ್ಯರ್ಥವಾಗುತ್ತದೆ ಅಲ್ಲದೆ ಜಾಗತಿಕ ತಲಾ ಮಟ್ಟದಲ್ಲಿ, ಪ್ರತಿ ವರ್ಷ ೧೨೧ ಕೆಜಿ ಗ್ರಾಹಕ ಮಟ್ಟದ ಆಹಾರವು ವ್ಯರ್ಥವಾಗುತ್ತದೆ, ಇದರಲ್ಲಿ ೭೪ ಕೆಜಿ ನಮ್ಮ ಮನೆಗಳಲ್ಲಿ ನಡೆಯುತ್ತಿದೆ ಎಂದರೆ ತಪ್ಪಾಗಲಾರದು .ಅಂದಾಜು ೯೩೧ ಮಿಲಿಯನ್ ಟನ್ ಆಹಾರ ಅಥವಾ ೨೦೧೯ ರಲ್ಲಿ ಗ್ರಾಹಕರಿಗೆ ಲಭ್ಯವಿರುವ ಒಟ್ಟು ಆಹಾರದ ೧೭%, ಮನೆಗಳು, ಚಿಲ್ಲರೆ ವ್ಯಾಪಾರಿಗಳು, ರೆಸ್ಟೋರೆಂಟ್ಗಳು ಮತ್ತು ಇತರ ಆಹಾರ ಸೇವೆಗಳ ತ್ಯಾಜ್ಯ ತೊಟ್ಟಿಗಳಿಗೆ ಸೇರಿದೆ ಎಂದು ಆಹಾರ ತ್ಯಾಜ್ಯ ಸೂಚ್ಯಂಕ ವರದಿ ೨೦೨೧ರಲ್ಲಿ ತಿಳಿಸಿದೆ. ನಾವು ಎಲ್ಲವನ್ನೂ ಒಂದು ರೀತಿಯಲ್ಲಿ ಅಥವಾ ಇನ್ನೊಂದು ರೀತಿಯಲ್ಲಿ ವ್ಯರ್ಥ ಮಾಡುತ್ತೇವೆ. ಎಷ್ಟರಮಟ್ಟಿಗೆಂದರೆ, ನಮ್ಮ ಇಡೀ ಆರ್ಥಿಕತೆ ಮತ್ತು ಸಮಾಜವು ಗಮನಾರ್ಹ ಪ್ರಮಾಣದ ಸಮಯ, ಉತ್ಪಾದನೆ ಯಾವುದನ್ನಾದರೂ ವ್ಯರ್ಥ ಮಾಡುವುದರ ಮೇಲೆ ನಿರ್ಮಿಸಲ್ಪಟ್ಟಿದೆ. ಭಾರತದಲ್ಲಿಯೂ ಸಹ, ಲಕ್ಷಾಂತರ ಜನರು ಜೀವನಾಧಾರ ಮಟ್ಟದಲ್ಲಿ ಬದುಕುಳಿಯುತ್ತಾರೆ, ಟನ್ಗಳಷ್ಟು ಆಹಾರವು ವ್ಯರ್ಥವಾಗುತ್ತದೆ. ಆಹಾರ ವ್ಯರ್ಥದ ಬಗ್ಗೆ ತಲೆಕೆಡಿಸಿಕೊಂಡಾಗ ಮಾತ್ರ ಜನರು ರೈತರ ಕಷ್ಟಗಳನ್ನು ಅರಿತಂತೆ ಇಲ್ಲವಾದರೆ ಮುಂದಿನ ದಿನಗಳಲ್ಲಿ ಆಹಾರದ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ದೇಶವು ಪ್ರತಿ ವರ್ಷ ೪೪,೦೦೦ ಕೋಟಿ ರೂಪಾಯಿ ಮೌಲ್ಯದ ಆಹಾರವನ್ನು ವ್ಯರ್ಥವಾಗಿ ಬಿಡುತ್ತಿದೆ ಇದರಿಂದಾಗಿ ಲಕ್ಷಾಂತರ ಜನರು ಹಸಿದ ಹೊಟ್ಟೆಯಲ್ಲಿಯೇ ಜೀವನ ಸಾಗಿಸಬೇಕಾಗಿದೆ ೨೦೧೩ ರ ಅಂಕಿಅಂಶದ ಪ್ರಕಾರ ಐದು ವರ್ಷದೊಳಗಿನ ಶೇಕಡಾ ೪೮ ರಷ್ಟು ಮಕ್ಕಳು ಬೆಳವಣಿಗೆಯನ್ನು ಕುಂಠಿತಗೊಳಿಸಿದ್ದಾರೆ. ಇದರಿಂದ ದೇಶದ ಅರ್ಧದಷ್ಟು ಮಕ್ಕಳು ದೀರ್ಘಕಾಲದ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಅಲ್ಲದೆ ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಈಂಔ) ಪ್ರಕಾರ, ಪ್ರತಿ ವರ್ಷ ೧.೩ ಶತಕೋಟಿ ಟನ್ ಆಹಾರ ವ್ಯರ್ಥವಾಗುತ್ತದೆ. ಅದೇ ಸಮಯದಲ್ಲಿ, ಪ್ರಪಂಚದ ಪ್ರತಿ ಏಳು ಜನರಲ್ಲಿ ಒಬ್ಬರು ಹಸಿವಿನಿಂದ ಮಲಗುತ್ತಾರೆ. ಐದು ವರ್ಷದೊಳಗಿನ ೨೦,೦೦೦ ಕ್ಕೂ ಹೆಚ್ಚು ಮಕ್ಕಳು ಪ್ರತಿದಿನ ಹಸಿವಿನಿಂದ ಸಾಯುತ್ತಾರೆ. ಇಷ್ಷೆಲ್ಲಾ ತಿಳಿದಿದ್ದರರೂ ಸಹ ನಾವು ಆಹಾರ ವ್ಯರ್ಥಮಾಡುವುದು ಎಷ್ಷರ ಮಟ್ಟಿಗೆ ಸರಿ..? ಅದರಲ್ಲೂ ಮಕ್ಕಳು ಹಾಗೂ ವಿದ್ಯಾವಂತರೇ ಹೆಚ್ಚು..?!
ಪರಿಹಾರೋಪಾಯ ಮಾರ್ಗಗಳು :
* ಮುಂಚಿತವಾಗಿ ಯೋಜಿಸಿ, ಎಚ್ಚರಿಕೆಯಿಂದ ಬೇಯಿಸಿ, ಅದನ್ನು ಸರಿಯಾಗಿ ಉಳಿಸಿ ದೇವಸ್ಥಾನ, ಮದುವೆ, ಸಭೆ, ಸಮಾರಂಭಗಳು ಮತ್ತು ಇತರ ಸಾಮಾಜಿಕ ಸಭೆಗಳಿಂದ ಹೆಚ್ಚುವರಿ ಆಹಾರವನ್ನು ಸಂಗ್ರಹಿಸಿ ಬಡವರಿಗೆ ಹಂಚುವುದು.
* ಅನಿರೀಕ್ಷಿತ ಕಾರಣಗಳಿಂದಾಗಿ ಕೆಲವೊಮ್ಮೆ ಹೆಚ್ಚಿನ ಆಹಾರ ಇರುತ್ತದೆ. ಹೆಚ್ಚಿನ ಆಹಾರ ಸೇವಿಸುವ ಸಂಸ್ಥೆಗಳನ್ನು ಗುರುತಿಸಿ, ಯಾವುದೂ ವ್ಯರ್ಥವಾಗದಂತೆ ಜನರು ಅಂತಹ ಸಂದರ್ಭಗಳಿಗೆ ಮುಂಚಿತವಾಗಿ ತಿಳಿಸುವುದರಿಂದ ಆಹಾರ ವ್ಯರ್ಥವಾಗುವುದನ್ನು ತಡೆಯಬಹುದು.
* ರಾಜ್ಯಾದ್ಯಂತ ಆಹಾರದ ವ್ಯರ್ಥದ ಬಗ್ಗೆ ಶಿಕ್ಷಣವನ್ನು ಉತ್ತೇಜಿಸುವುದು
ಆಹಾರ ವ್ಯವಸ್ಥೆ ಮತ್ತು ತ್ಯಾಜ್ಯದ ಬಗ್ಗೆ ಗ್ರಾಹಕರ ಶಿಕ್ಷಣ ಮತ್ತು ಜಾಗೃತಿಯನ್ನು ಉತ್ತೇಜಿಸುವುದರ ಮೂಲಕ ಜನರಿಗೆ ತಾವು ಖರೀದಿಸುತ್ತಿರುವ ಆಹಾರದ ನಿಜವಾದ ಮೌಲ್ಯವನ್ನು ತಿಳಿಸುವುದು ಅಲ್ಲದೆ ಶಾಲೆಗಳಲ್ಲಿಯೇ ಮಕ್ಕಳಿಗೆ, ಹಾಗೂ ಕಾಲೇಜುಗಳಲ್ಲಿ ಸಾರ್ವಜನಿಕ ವಲಯಗಳಲ್ಲಿ ಅವರಿಗೆ ಜಾಗೃತಿ ಮೂಡಿಸಿ ಅನುಷ್ಠಾನಗೊಳಿಸುವುದು ಸಾರ್ವಜನಿಕರಿಗೆ ಶಿಕ್ಷಣ ನೀಡಲು ಪರಿಣಾಮಕಾರಿ ಮಾರ್ಗವಾಗಿದೆ.
* ಜನರಿಗೆ ನಾವು ಎಷ್ಷೇ ಜಾಗೃತಿ ನೀಡಿದರೂ ಸಾಲೂವುದಿಲ್ಲ ಬದಲಾಗಿ ಅವರ ಭಾವನೆ ಬದಲಾಗಿ ಆಹಾರವನ್ನು ಇತಮಿತವಾಗಿ ಬಳಸುವುದು ಒಳ್ಳೆಯದು.
* ಎಲ್ಲಿಯಂದರೆ ಅಲ್ಲಲ್ಲಿ ಬಿಸಾಡುವ ಬದಲು ಅರ್ಧದಲ್ಲಿಯೇ ಆಹಾರ ಬಿಡುವ ಬದಲು ಯೋಚಿಸಿ ಇನ್ನೊಬ್ಬರಿಗೆ ಸಹಾಯವಾಗುತ್ತದೆ ಎಂದು ಅವರಿಗೆ ಅರಿವಾದಾಗ ಆಹಾರ ವ್ಯರ್ಥವಾಗುವುದನ್ನು ತಪ್ಪಿಸಬಹುದು.
* ಅಂತಹ ಉಳಿದ ಆಹಾರವನ್ನು ಕೆಲವು ಹತ್ತಿರದ ಎನ್ಜಿಒ ಸಂಸ್ಥೆಗಳಿಗೆ ನೀಡುವುದು ಅಥವಾ ವಿವಿಧ ಆಶ್ರಮಗಳಿಗೆ ತಲುಪಿಸುವುದು ಒಳ್ಳೆಯದು. ಆಹಾರವು ಹೆಚ್ಚುವರಿಯಾಗಿ ಉಳಿದರೆ ಅದನ್ನು ವ್ಯರ್ಥವಾಗದಂತೇ ಕಾಪಾಡಿಕೊಳ್ಳಲು ಈ ಕೆಳಗಿನ ಮೊಬೆಲ್ ಸಂಖ್ಯೆಗಳಿಗೆ ತಾವು ಕರೆ ಮಾಡಬಹುದು. ಮಾನವ್ ಚಾರಿಟಿ ಸೇರಿದಂತೆ ಇತರೆ ಸಂಸ್ಥೆಗಳಿಗೂ ತಾವು ಸಂಪರ್ಕಿಸಬಹುದಾಗಿದೆ. ೦೮೦-೪೦೯೬೬೧೯೧/೨೮೩೮೬೮೨೮, ಮಿಷನರಿ ಚಾರಿಟಿ, ೦೮೦ ೨೫೪೭೪೯೯೩, ಶಿಶು ಮಂದಿರ, ೯೩೭೯೨೭೧೩೯೧/೦೮೦-೩೨೯೭೦೭೦೦ ಬೆಂಗಳೂರು.
ವಿಶೇಷ ಲೇಖನ – ಜ್ಯೋತಿ ಜಿ, ಮೈಸೂರು.(ಉಪನ್ಯಾಸಕಿ, ಅಂಕಣಗಾರ್ತಿ)