ಕರ್ನಾಟಕ ಪಬ್ಲಿಕ್ ಶಾಲೆ, ತಾವರಗೇರಾದಲ್ಲಿ ಎಲ್ ಕೆ ಜಿ ವಿಭಾಗಕ್ಕೆ ಅರ್ಜಿ ಸಲ್ಲಿಸಿದ ಪಾಲಕ ಮತ್ತು ಪೋಷಕರ ಸಭೆಯಲ್ಲಿ ಲಾಟರಿ ಎತ್ತುವ ಮೂಲಕ ಮಕ್ಕಳನ್ನು 60 ಮಕ್ಕಳನ್ನು ಆಯ್ಕೆ.
ಇಂದು ಕರ್ನಾಟಕ ಪಬ್ಲಿಕ್ ಶಾಲೆ, ತಾವರಗೇರಾದಲ್ಲಿ ಎಲ್ ಕೆ ಜಿ ವಿಭಾಗಕ್ಕೆ ಅರ್ಜಿ ಸಲ್ಲಿಸಿದ ಪಾಲಕ ಮತ್ತು ಪೋಷಕರ ಸಭೆಯಲ್ಲಿ ಲಾಟರಿ ಎತ್ತುವ ಮೂಲಕ ಮಕ್ಕಳನ್ನು 60 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಯಿತು ಒಟ್ಟು 80 ಅರ್ಜಿಗಳು ಸಲ್ಲಿಕೆಯಾಗಿದ್ದು ಅದರಲ್ಲಿ 60 ಮಕ್ಕಳನ್ನು ಆಯ್ಕೆ ಮಾಡಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾದ ಡಾಕ್ಟರ್ ಎಸ್ ಎಸ್ ಪೋರೆ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಶ್ರೀ ಮಂಜುನಾಥ ಬೆಳೆಗುಡ್ಡ ಹಾಗೂ ಶ್ರೀಮತಿ ಸುನಿತಾ ಶ್ರೀ ಹನುಮಂತಪ್ಪ ಶ್ರೀ ಪರಸಪ್ಪ ಹೊಸಮನಿ ಮುಖ್ಯೋಪಾಧ್ಯಾಯರು ಕರ್ನಾಟಕ ಪಬ್ಲಿಕ್ ಶಾಲೆ, ತಾವರಗೇರಾ ಮತ್ತು ಮಲ್ಲಂಗ್ ಸಾಬ್ ಶ್ರೀ ತುಕಾರಾಂ ಸರ್ವ ಸಿಬ್ಬಂದಿ ಹಾಜರಿದ್ದು ಕಾರ್ಯಕ್ರಮವನ್ನು ಅತ್ಯಂತ ಆಚ್ಚುಕಟ್ಟಾಗಿ ನಿರ್ವಹಿಸಲಾಯಿತು ಪಾಲಕರು ಮಾತನಾಡಿ ಇಂತಹ ಸೌಲಭ್ಯವನ್ನು ಒದಗಿಸಿದ ಸರಕಾರಕ್ಕೆ ಪಾಲಕರು ಅಭಿನಂದನೆಯನ್ನು ತಿಳಿಸುತ್ತಾ ಹರ್ಷ ವ್ಯಕ್ತಪಡಿಸಿದರು. ವರದಿ-ಸಂಪಾದಕೀಯಾ