ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊಡದೆ ರಾಜಕೀಯ ದ್ವೇಷ ಸಾಧಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಡೋಣ.

Spread the love

ಅನ್ನ ಭಾಗ್ಯ ಯೋಜನೆಗೆ ಅಕ್ಕಿ ಕೊಡದೆ ರಾಜಕೀಯ ದ್ವೇಷ ಸಾಧಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೋರಾಡೋಣ.

ಸ್ವಾತಂತ್ರ್ಯ ಪೂರ್ವದಿಂದಲೆ  ಬಡವರ ಅನ್ನ ಕಸಿದುಕೊಳ್ಳುವ  ಪರಂಪರೆಯನ್ನು ಈಗಲೂ ಮುಂದುವರೆಸಿರುವ ಶಕ್ತಿಗಳನ್ನು ವೈಚಾರಿಕವಾಗಿ  ಸೋಲಿಸದಿದ್ದರೆ ಈ ದೇಶಕ್ಕೆ ಭವಿಷ್ಯವಿಲ್ಲ. ಕರ್ನಾಟಕ ಸರ್ಕಾರ ಬಡವರಿಗೆ ಕೊಡುತ್ತಿರುವ 5 ಗ್ಯಾರಂಟಿ ಯೋಜನೆಗಳು ಬಿಕ್ಷೇ ಅಲ್ಲ.  ಬಡವರು, ರೈತರು, ಕಾರ್ಮಿಕರು ವಿವಿಧ ರೀತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ  ತೆರಿಗೆ ಕಟ್ಟುತ್ತಿರುವುದು ಮಕ್ಕಳಿಗೂ ಕೂಡ ಗೊತ್ತಿರುವ ಸಂಗತಿ ತೆರಿಗೆಯ ಒಂದು ಕಾಲು ಭಾಗ ಮಾತ್ರ ಬಡವರಿಗೆ ವಾಪಸ್ ಕೊಡಲಾಗುತ್ತಿದೆ ಅಷ್ಟೇ. ಬಡವರಿಗೆ  ಸೌಲಭ್ಯಗಳನ್ನು ಕೊಟ್ಟರೆ ದೇಶದ  ಆರ್ಥಿಕತೆಗೆ ಪೆಟ್ಟು ಬೀಳುತ್ತಿದೆ ಎಂದು ಹೇಳುವವರು; ಬಹುಸಂಖ್ಯಾತ ಜನಾಂಗ  ಶಾಶ್ವತವಾಗಿ ಬಡತನದಲ್ಲಿ ಉಳಿಯಬೇಕೆಂದು ಬಳಸುವರಾಗಿರುತ್ತಾರೆ.  ಕೇಂದ್ರ ಸರ್ಕಾರ 2014 ರಿಂದ 2022 ಅವಧಿಯಲ್ಲಿ ಕಾರ್ಪೋರೇಟ ಕಂಪನಿಗಳ 15 ರಿಂದ 20 ಲಕ್ಷ ಕೋಟಿ ಸಾಲ (ಕಟ್ ಬಾಕಿ ದಾರರ ಪಟ್ಟಿಗೆ  ಸೇರಿಸಿದ್ದು ಹೊಳಗೊಂಡು) ಮನ್ನ ಮಾಡಿದೆ. ಈ ಸತ್ಯವನ್ನು  ದೊಡ್ಡ  ಮಾಧ್ಯಮಗಳು ಬಿತ್ತರಿಸುತ್ತಿಲ್ಲ. ರಾಜ್ಯಕ್ಕೆ ಅಕ್ಕಿ ಪೂರೈಸಲು ಒತ್ತಾಯಿಸಿ ಇಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದದಲ್ಲಿ ಕೊಪ್ಪಳದ ಜಿಲ್ಲಾಧಿಕಾರಿಯ ಮೂಲಕ, ರಾಷ್ಟ್ರಪತಿಗಳಿಗೆ  ಮನವಿ ಕಳುಹಿಸಲಾಗಿದೆ.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *