ನನ್ನ ಜನ ,,,,,,
ಮೂರು ಹೊತ್ತಿನ ತುತ್ತಿಗಾಗಿ ತಿರುಗುವ
ದಿನದ ಕೂಲಿಗಾಗಿ ಅಲೆಯುವ
ಬದುಕಿ ಬಾಳಲು ಹವೆಣೀಸುವ
ಅಕ್ಷರ ಅರಿಯದ ನನ್ನ ಜನ..
ಅನಕ್ಷರಸ್ಥ ಅನಾಥರಾಗುವರೆಂಬ ಆತಂಕ!
ಮೈ ಮಾನಕ್ಕಂಜುವ
ಮಾತುಗಳಿದ್ದರೂ ಮೌನವಿರುವ
ಆಸರೆಗೆ ತುಸು ಸೂರಿನ ಕನಸು ಕಾಣುವ
ಅಂಟಿದ ಕವಚದಿ ನಿದ್ರಿಸುವ ನನ್ನ ಜನ..
ಅಲ್ಲೇ ಚಿರ ನಿದ್ರೆಗೆ ಜಾರಿದರೆ ಎಂಬ ಆತಂಕ!
ಒಗ್ಗಟ್ಟಿನ ಮುಷ್ಠಿ ಮುರಿಯದ
ನಿಷ್ಠೆ ಪ್ರಾಮಾಣಿಕತೆ ಬಿಡದ
ಜಾತಿ ಮತ ಭೇದ ಭಾವ ಇರದ
ಅಭಿಮಾನ ಸ್ವಾಭಿಮಾನದ ನನ್ನ ಜನ..
ಮುಖವಾಡಕೆ ಮೋಸ ಹೋದಾರೆಂಬ ಆತಂಕ!
ದುಡಿಮೆಯೇ ದೈವವೆನ್ನುವರು
ದುಃಖ ದುಮ್ಮಾನಕೆ ನಲುಗಿಹರು
ನಾನು ಮರೆತ ನನ್ನವರು
ಸ್ವಾರ್ಥವಿರದ ನನ್ನ ಜನ
ಕಾಲನ ಭೂತಕ್ಕೆ ಬಲಿಯಾದಾರು ಎಂಬ ಆತಂಕ!
ರಾಮು ಎನ್ ರಾಠೋಡ್ ಮಸ್ಕಿ ೯೭೩೯೯೫೯೧೫೧