ಬಕ್ರೀದ್ ಶಾಂತಿ ಮತ್ತು ಸೌಹಾರ್ದತೆಯ ಹಬ್ಬ: ಆಮಿರ್ ಬನ್ನೂರು
ಎಲ್ಲಾ ಧರ್ಮದ ಸಹೋದರರು ಅವರವರ ಧಾರ್ಮಿಕ ಆಚರಣೆಗಳನ್ನು ವಿಜ್ರಂಬಣೆಯಿಂದ ಆಚರಿಸಿಕೊಂಡು ಬರುತ್ತಿರುವುದು ಹಾಗೂ ಅವರ ಸಂತೋಷ ಮತ್ತು ಸಂಭ್ರಮದಲ್ಲಿ ಇನ್ನಿತರ ಧಾರ್ಮಿಕ ಸಮುದಾಯದವರು ಅವರ ಸಂಭ್ರಮದಲ್ಲಿ ಕೈಜೋಡಿಸುವುದೇ ಭಾರತ ದೇಶದ ಅತಿ ದೊಡ್ಡ ಮೌಲ್ಯವಾಗಿದೆ. ಪ್ರಜಾಪ್ರಭುತ್ವದ ಸಂಕೇತವೂ ಹೌದು. ವಿಶೇಷವೇನೆಂದರೆ, ಕರ್ನಾಟಕದ ಉತ್ತರ ಭಾಗಗಳಲ್ಲಿ ಯಾವುದೇ ಸಮುದಾಯದ ಹಬ್ಬ ಬರಲಿ ಎಲ್ಲರೂ ಮುಂದೆ ನಿಂತು ಸಂತೋಷದಿಂದ ಆಚರಿಸಿ ಧಾರ್ಮಿಕ ಭಾವನೆಗಳಿಗೆ ಗೌರವ ಸಲ್ಲಿಸಿರುವುದು ನೇರವಾಗಿ ಕಂಡವನು ನಾನು. ಇದು ಉತ್ತರ ಕರ್ನಾಟಕದ ಜನರ ಹೃದಯ ಶ್ರೀಮಂತಿಕೆಯಾಗಿದೆ. ಇದೇ ಭಾವನೆ ಕರ್ನಾಟಕದ ಎಲ್ಲಾ ದಿಕ್ಕುಗಳಿಗೂ ಭಾರತ ದೇಶದ ಅತ್ಯಂತ ಎಲ್ಲರಲ್ಲಿ ಮೂಡಿ ಬರಲಿ ಎಂದು ಆಶಿಸುತ್ತೇನೆ. ಇಸ್ಲಾಂ ಧರ್ಮದ ಪವಿತ್ರ ಮತ್ತು ಶ್ರೇಷ್ಠವಾದ ಹಬ್ಬ ಬಕ್ರೀದ್. ಬಕ್ರೀದ್ ಕೇವಲ ಹಬ್ಬ ಮಾತ್ರವಲ್ಲ ಶಾಂತಿ ಮತ್ತು ಸೌಹಾರ್ದತೆಯ ಸಂಕೇತವಾಗಿದೆ. ಈ ಹಬ್ಬವನ್ನು ಮುಸಲ್ಮಾನ್ ಬಂಧುಗಳು ಅಲ್ಲಾಹನಿಗೆ ಹಲವಾರು ತರದ ಆರಾಧನೆಗಳ ಮೂಲಕ ಆಚರಿಸುತ್ತಾರೆ ಅದರೊಂದಿಗೆ ಪ್ರವಾದಿ ಇಬ್ರಾಹಿಂ ಅಲೈಹಿಸ್ಸಲಾಂ, ಪತ್ನಿ ಹಾಜರಾ ಬೀಬಿ ಮತ್ತು ಮಗ ಇಸ್ಮಾಯಿಲ್ ಅಲೈಹಿಸ್ಸಲಾಂ ಅವರ ತ್ಯಾಗವನ್ನು ಸ್ಮರಿಸಿ ಎಲ್ಲರೂ ಕುರುಬಾನಿಯನ್ನು ನೀಡಿ ಬಕ್ರೀದ್ ಹಬ್ಬವನ್ನು ಸಾವಿರಾರು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಕೂಡ ಒಂದೇ ತಾಯಿಯ ಮಕ್ಕಳ ಹಾಗೆ ಯಾವುದೇ ಧಾರ್ಮಿಕ ಸಮುದಾಯಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ಅಹಿತಕರ ಘಟನೆಗಳಿಗೆ ದಾರಿ ಮಾಡಿಕೊಡುವುದಾಗಲಿ, ಸಮಾಜದಲ್ಲಿ ಅಶಾಂತಿಯನ್ನು ಉಂಟುಮಾಡುವ ಕೆಲಸಗಳಲ್ಲಿ ಕೈಜೋಡಿಸಿಕೊಳ್ಳುವುದಾಗಲಿ, ಸಮಾಜದ ಸ್ವಾಸ್ಥ್ಯವನ್ನು ಕದಡುವ ಕುಬ್ಬುದ್ದಿಗಗಳಿಗೆ, ಕುಮ್ಮಕ್ಕು ನೀಡುವವರಾಗದೆ ಎಲ್ಲರ ಖುಷಿಗಳನ್ನು ಇಮ್ಮಡಿಗೊಳಿಸುವವರಾಗಬೇಕು. ಈ ಸೌಹಾರ್ದತೆಯೇ ಭಾರತ ದೇಶದ ಸೌಂದರ್ಯವಾಗಿದೆ ಎಂದು ಖಿದ್ಮಾ ಫೌಂಡೇಶನ್ ಕರ್ನಾಟಕ ರಾಜ್ಯ ಸಂಚಾಲಕ ಯುವ ಬರಹಗಾರರಾದ ಆಮಿರ್ ಬನ್ನೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.