ತ್ಯಾಗ ಬಲಿದಾನದ ಸಂಕೇತವೆ ಬಕ್ರೀದ್ ಹಬ್ಬ, ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯಗಳು,

Spread the love

ತ್ಯಾಗ ಬಲಿದಾನದ ಸಂಕೇತವೆ ಬಕ್ರೀದ್ ಹಬ್ಬ, ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯಗಳು,

ಇಸ್ಲಾಂ ಧರ್ಮವನ್ನು ನಂಬುವ ಜನರ ಪ್ರಮುಖ ಹಬ್ಬಗಳಲ್ಲಿ ಬಕ್ರೀದ್ ಕೂಡ ಒಂದು. ಈ ಹಬ್ಬವನ್ನು ತ್ಯಾಗದ ಸಂಕೇತವೆಂದು ಆಚರಿಸಲಾಗುತ್ತದೆ. ಇತ್ತೀಚೆಗಷ್ಟೇ ಝಿಲ್ಹಿಜ್ ತಿಂಗಳ ಚಂದ್ರ ದರ್ಶನವಾಗಿದ್ದು, ಇದೀಗ ಬಕ್ರೀದ್ ದಿನವು ಆಚರಣೆಗೆ ಬಂದಿದೆ . ಈ ವರ್ಷ, ಈದ್ ಉಲ್-ಅಧಾ ಅಂದರೆ ಬಕ್ರೀದ್ ಹಬ್ಬವನ್ನು 2023 ರ ಜೂನ್‌ 29 ರಂದು ಗುರುವಾರ ಆಚರಿಸಲಾಗುವುದು. ತ್ಯಾಗ ಹಾಗೂ ಬಲಿದಾನದ ಸಂಕೇತವಾದ “ಬಕ್ರೀದ್” ಹಬ್ಬವನ್ನು ಜಗತ್ತಿನಾದ್ಯಂತ ನಮ್ಮ ಮುಸ್ಲಿಮ್ ಬಾಂಧವರು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸುತ್ತಾರೆ. ಈ ಪವಿತ್ರ ದಿನದಂದು ನಾಡಿನ ಸಮಸ್ತ ಮುಸ್ಲಿಮ್ ಬಾಂಧವರಿಗೆ “ಬಕ್ರೀದ್” ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ. ಮುಸ್ಲಿಂ ಧರ್ಮದ ನಂಬಿಕೆಯ ಪ್ರಕಾರ, ಹಜರತ್ ಇಬ್ರಾಹಿಂ ದೇವರ ಸೇವಕರಾಗಿದ್ದರು, ಅವರು ದೇವರಲ್ಲಿ ಸಂಪೂರ್ಣ ನಂಬಿಕೆ ಹೊಂದಿದ್ದರು. ಒಮ್ಮೆ ಹಜರತ್ ಇಬ್ರಾಹಿಂ ತನ್ನ ಪ್ರಾಣಕ್ಕಿಂತ ಪ್ರೀತಿಯ ಒಬ್ಬನೇ ಮಗನನ್ನು ತ್ಯಾಗ ಮಾಡುವ ಕನಸು ಕಂಡರು. ಹಜರತ್ ಇಬ್ರಾಹಿಂ ಈ ಕನಸನ್ನು ದೇವರ ಸಂದೇಶವೆಂದು ಪರಿಗಣಿಸಿ, ಈ ಕನಸನ್ನು ಅಲ್ಲಾಹನ ಇಚ್ಛೆಯಂತೆ ಸ್ವೀಕರಿಸಿ, ದೇವರ ಮಾರ್ಗದಲ್ಲಿ ತನ್ನ 10 ವರ್ಷದ ಮಗನನ್ನು ಬಲಿಕೊಡಲು ನಿರ್ಧರಿಸಿದರು. ಆದೆ ಅಲ್ಲಾ ಮೇಕೆಯನ್ನ ಬಲಿ ಕೊಡಲು ಸಲಹೆ ನೀಡಿದರು ಎನ್ನಲಾಗುತ್ತದೆ. ಬಕ್ರೀದ್ ಅನ್ನು ಈದ್ ಅಲ್-ಅಧಾ ಅಥವಾ ತ್ಯಾಗದ ಹಬ್ಬ ಎಂದೂ ಕರೆಯಲಾಗುತ್ತದೆ, ಇದನ್ನು ವಿಶ್ವದಾದ್ಯಂತ ಮುಸ್ಲಿಮರು ಆಚರಿಸುತ್ತಾರೆ. ದಿನವು ವಿಶೇಷ ಪ್ರಾರ್ಥನೆ ಸಭೆಯೊಂದಿಗೆ ಪ್ರಾರಂಭವಾಗುತ್ತದೆ, ಅದರ ನಂತರ ಒಂದು ಪ್ರಾಣಿಯ ಬಲಿ ನೀಡಲಾಗುತ್ತದೆ. ಸಾಮಾನ್ಯವಾಗಿ ಮೇಕೆ ಅಥವಾ ಕುರಿ ನೀಡಲಾಗುತ್ತದೆ. ತ್ಯಾಗ, ಬಲಿದಾನ, ಸೋದರತ್ವವನ್ನು ಸಾರುವ ಈ ಹಬ್ಬವು ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವೆ. ತಾವರಗೇರಾ ನ್ಯೂಸ್ ಪತ್ರಿಕಾ ಬಳಗ ಹಾಗೂ ತಾವರಗೇರಾ ನ್ಯೂಸ್ ವೆಬ್ ಬಳಗದವತಿಯಿಂದ ನಾಡಿನ ಸಮಸ್ತ ಜನತೆಗೆ ಬಕ್ರೀದ್ ಹಬ್ಬದ ಶುಭಾಶಯಗಳು,

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *