ಹೈದರಾಬಾದ ಕರ್ನಾಟಕ ಸೌಹಾರ್ದ ಸಂಘರ್ಷ ವೇದಿಕೆ,

Spread the love

ಹೈದರಾಬಾದ ಕರ್ನಾಟಕ ಸೌಹಾರ್ದ ಸಂಘರ್ಷ ವೇದಿಕೆ,

ಹೈದರಾಬಾದ ಕರ್ನಾಟಕ ಭಾಗದ ಜನರು ಅಭಿವೃದ್ಧಿಗೊಳ್ಳದೆ ಎಲ್ಲ ರೀತಿಯಲ್ಲಿ ಹಿಂದುಳಿದಿದ್ದಾರೆ. ಶಿಕ್ಷಣ, ಆರೋಗ್ಯ,  ಸರ್ಕಾರಿ ಉದ್ಯೋಗ, ಉನ್ನತ ಮಟ್ಟದ ಉದ್ಯೋಗ, ರಸ್ತೆ ಅಭಿವೃದ್ಧಿ, ನೀರಾವರಿ ಸೌಲಭ್ಯಗಳು  ಸೇರಿದಂತೆ  ಅನೇಕ ರೀತಿಯ ಸೌಕರ್ಯಗಳಿಂದ ಈ ಭಾಗ ವಂಚಿತಗೊಂಡಿದೆ. ಈ ಭಾಗದ ಜನರು ಬೆಂಗಳೂರ, ಇತರೆ ಮಹಾ ನಗರಗಳಿಗೆ ಗುಳೆ ಹೋಗಿ ಬದುಕು ಕಟ್ಟಿಕೊಳ್ಳುತ್ತಿರುವುದೆ, ಇಲ್ಲಿನ  ವಾಸ್ತವ ಸ್ಥಿತಿಗೆ ಕೈಗನ್ನಡಿಯಾಗಿದೆ. ಪ್ರಾದೇಶಿಕ ಅಸಮಾನತೆಯನ್ನು  ಸರಿಪಡಿಸುವ ಉದ್ದೇಶದೊಂದಿಗೆ ಜಾರಿಗೊಳಿಸಿದ  371 J ಕಾಯ್ದೆಯಿಂದ  ನಿರೀಕ್ಷಿತ  ಸೌಲಭ್ಯಗಳು ದೊರೆಯುತ್ತಿಲ್ಲ. ರಾಯಚೂರಿಗೆ ಏಮ್ಸ್ ಕೊಡಬೇಕೆಂದು ಒತ್ತಾಯಿಸಿ ನಡೆದಿರುವ ಹೋರಾಟ ಒಂದು ವರ್ಷ ಎರಡು ತಿಂಗಳು ಕಳೆದು   ಮುಂದುವರೆದಿದೆ. ಬಿಜೆಪಿ ನೇತೃತ್ವದ ಬೊಮ್ಮಾಯಿ ಸರ್ಕಾರ ಸ್ಪಂದನೆ ಮಾಡಿರಲಿಲ್ಲ. ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಏಮ್ಸ್ ರಾಯಚೂರಿಗೆ ಮಂಜೂರಿ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕಳೆದ 4 ತಿಂಗಳ ಹಿಂದೆ ನೇಮಕಗೊಂಡ 15000 ಶಿಕ್ಷಕರ ನೇಮಕಾತಿಯ ವಿಷಯದಲ್ಲಿ ಅನೇಕ ತೊಡಕುಗಳು ಉಂಟಾಗಿವೆ. ಅತಿ ಹೆಚ್ಚು ಅಂಕಗಳನ್ನು (ಟಾಪರ್) ಪಡೆದುಕೊಂಡ ಹೈದರಾಬಾದ ಕರ್ನಾಟಕ ಭಾಗದ ಉದ್ಯೋಗಿಗಳು 371 J ಕಾಯ್ದೆಯ ಹೊರತುಪಡಿಸಿ ಜನರಲ್  ಕೋಟದಲ್ಲಿ ನೇಮಕಾತಿ ಮಾಡಿಕೊಳ್ಳಲು ಬೇಡಿಕೆ ಇಟ್ಟಿದ್ದರು. (ಬೆಂಗಳೂರು, ಮೈಸೂರ, ಧಾರವಾಡ ಇತರೆ ಭಾಗಗಳಲ್ಲಿ ಸೇವೆ ಮಾಡಲು ಅವಕಾಶ ದೊರೆಯುತ್ತದೆ ಎನ್ನುವ ಉದ್ದೇಶ ಇರಬಹುದೇನು -ಈ ವಿಷಯದಲ್ಲಿ ನಮಗೆ ಮಾಹಿತಿ ಕೊರತೆ ಇದೆ) ಆದರೆ 371 J ಕಾಯ್ದೆಗೆ ಹೊಳಪಡದ, ಬೆಂಗಳೂರ, ಮೈಸೂರ, ಮಂಡ್ಯ, ಮಂಗಳೂರ, ಇತರೆ ಜಿಲ್ಲೆಯ ಉದ್ಯೋಗಿ ಆಕಾಂಕ್ಷಿಗಳು, ಹೈದರಾಬಾದ ಕರ್ನಾಟಕ ಭಾಗದ ಉದ್ಯೋಗಿಗಳನ್ನು 371 J ಕೋಟದಡಿಯಲ್ಲಿ  ನೇಮಕ ಮಾಡಿಕೊಳ್ಳಬೇಕೆಂದು  ತಕರಾರು ಮಾಡಿ ಕೋರ್ಟ್ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ  ಅತಿ ಹೇಚ್ಚು ಅಂಕಗಳನ್ನು ಪಡೆದು ಆಯ್ಕೆಗೊಂಡ ಹೈದರಾಬಾದ ಕರ್ನಾಟಕ ಭಾಗದ ಸಾವಿರಾರು  ನಿರುದ್ಯೋಗಿಗಳು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ಇಂತಹ ಹತ್ತು ಹಲವು ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಈ ಭಾಗದ ಪ್ರಗತಿಪರರು, ಚಿಂತಕರು, ಸಾಹಿತಿಗಳ ಸಲಹೆಗಳನ್ನು ಪಡೆದುಕೊಂಡು ಮುನ್ನಡೆಯಲು ಹೈದರಾಬಾದ ಕರ್ನಾಟಕ ಸೌಹಾರ್ದ, ಸಂಘರ್ಷ ವೇದಿಕೆಯನ್ನು ಹುಟ್ಟು ಹಾಕಲಾಗಿದೆ. ಈ ಕುರಿತು ಮಾರ್ಗದರ್ಶನ ಸಲಹೆಗಳನ್ನು ಕೊಡಲು  ಎಲ್ಲರಿಗೆ ಮುಕ್ತ ಅವಕಾಶ ಇದೆ. ವಂದನೆಗಳೊಂದಿಗೆ ಹೈ,ಕ,ಸೌಹಾರ್ದ ಸಂಘರ್ಷ ವೇದಿಕೆ ಪರವಾಗಿ, ಮಹಾಂತೇಶ ಕೊತಬಾಳ ,ಬಸವರಾಜ ಶೀಲವಂತರ ,ಡಿ.ಹೆಚ್.ಪೂಜಾರ,ಆನಂದ ಭಂಡಾರಿ.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *