ಶಿವಮೊಗ್ಗ  ವಿನೋಬನಗರದ ಮಾಧವನೆಲೆಯಲ್ಲಿ ಹಮ್ಮಿಕೊಂಡ ಸಕ್ಷಮ ಸಂಸ್ಥಾಪನಾ ದಿನಾಚರಣೆ ಕಾರ್ಯಾಕ್ರಮ ಅದ್ದೂರಿ.

Spread the love

ಶಿವಮೊಗ್ಗ  ವಿನೋಬನಗರದ ಮಾಧವನೆಲೆಯಲ್ಲಿ ಹಮ್ಮಿಕೊಂಡ ಸಕ್ಷಮ ಸಂಸ್ಥಾಪನಾ ದಿನಾಚರಣೆ ಕಾರ್ಯಾಕ್ರಮ ಅದ್ದೂರಿ.

30/6/2023 ಶುಕ್ರವಾರ ನಿನ್ನೆ ನಡೆದ ಸಕ್ಷಮ ಸಂಸ್ಥಾಪನಾ ದಿನಾಚರಣೆಯನ್ನು ಶಿವಮೊಗ್ಗ  ವಿನೋಬನಗರದ ಮಾಧವನೆಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಹೆಲನ್ ಕೆಲ್ಲರ್ ದಿನಾಚರಣೆ,ವಿಶ್ವ ರಕ್ತದಾನಿಗಳ ದಿನಾಚರಣೆ, ವಿಶ್ವ ಪರಿಸರ ದಿನಾಚರಣೆಯನ್ನು ಸಹ ಆಯೋಜನೆಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಫಲಾನುಭವಿ ವಿಶೇಷಚೇತನರಿಗೆ ಸಕ್ಷಮದ “ಚರೈವೇತಿ”ಯೋಜನೆಯ ಅಡಿಯಲ್ಲಿ ಬಗಲಗೋಲು, ವಾಕರ್ ಹಾಗೂ ಕ್ರಚ್ಚಸ್ ಗಳನ್ನು ವಿತರಿಸುವುದರ ಜೊತೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಬಡ ವಿಶೇಷಚೇತನರ ಕುಟುಂಬಗಳಿಗೆ ಆಹಾರ ಪದಾರ್ಥಗಳ ಸಾಮಾಗ್ರಿಗಳನ್ನು ವಿತರಿಸಿದರು ಹಾಗೂ ವೀಲ್ಚೇರ್ ಗಳಿಗೆ ಆಯ್ಕೆಯಾದಂತಹ ಹಳ್ಳಿಯ ಕಡೆಗಳಲ್ಲಿ ಇರುವಂತಹ ಬಡ ವಿಶೇಷಚೇತನರಿಗೆ ವೀಲ್ಚೇರ್ ಕ್ಯಾಂಪ್ ನ್ನೂ ಸಹ ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಉದ್ಗಾಟಕರಾಗಿ  ಮಾತನಾಡಿದ ಭಾಸ್ಕರ್ ಕಾಮತ್ ಉದ್ಯಮಿಗಳು ಮಾತನಾಡಿ ವಿಶೇಷಚೇತನರಿಗೆ ಸಿಗುವ ಸೌಲಭ್ಯಗಳು ಪೂರ್ಣವಾಗಿ ತಲುಪಿಸಬೇಕು.ಸಕ್ಷಮ ಸಂಸ್ಥೆಯು ವಿಶೇಷಚೇತನರ ಸಬಲೀಕರಣಕ್ಕಾಗಿ ಇರುವ ರಾಷ್ಟ್ರೀಯ ಸಂಘಟನೆಯಾಗಿದೆ.ಸರ್ಕಾರ ವಿಶೇಷಚೇತನರಿಗೆ ಹಲವು ಯೋಜನೆಗಳನ್ನು ತಂದಿವೆ.ಈ ಯೋಜನೆಗಳ ಪ್ರಯೋಜನವನ್ನು  ವಿಶೇಷಚೇತನರು ಪಡೆದುಕೊಳ್ಳಬೇಕು. ವಿಶೇಷಚೇತನರಿಗೆ ಅನುಕಂಪಕ್ಕಿಂತ ಅನುದಾನ ಮುಖ್ಯ.ಇವರ ಸೇವೆ ಮತ್ತು ಸಹಾಯವನ್ನೂ ಮಾಡುವುದು ಪುಣ್ಯದ ಕೆಲಸ. ಈ ನಿಟ್ಟಿನಲ್ಲಿ ಸಕ್ಷಮ ಎಲೆಮರೆಕಾಯಿಯೋಗಿ ಕೆಲಸ‌ವನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.ದಿಕ್ಸೂಚಿ ಭಾಷಣವನ್ನು ಮಾಡಿದ ಸಕ್ಷಮ ಕರ್ನಾಟಕದ ಜಯದೇವಾ ಕಾಮತ್ ಸಕ್ಷಮ ಭಾರತದ ಪ್ರತಿಯೊಂದು ಜಿಲ್ಲೆಯಲ್ಲೂ ಸಹ ಕೆಲಸವನ್ನು ಮಾಡುತ್ತಿದೆ.ವಿಶೇಷಚೇತನರಿಗೆ ಸಮಾಜದ ಮುಖ್ಯವಾಹಿನಿಗೆ ಬರಲು ಸಹಕಾರವನ್ನು ನೀಡುತ್ತಿದೆ.ಶಿವಮೊಗ್ಗದಲ್ಲಿಯೂ ಸಂಘ ರಚನೆಯಾಗಿ ಪ್ರಾಮಾಣಿಕ ಕೆಲಸವನ್ನು/ಸೇವೆಯನ್ನು ಮಾಡುತ್ತಿದೆ.ಇಲ್ಲಿನ ಅಧ್ಯಕ್ಷರಾದ ಡಾ.ಪ್ರಶಾಂತ್ ಇಸ್ಲೂರು ಅವರು ಉತ್ತಮವಾದ ಸೇವೆಯನ್ನು ನೀಡುತ್ತಿದ್ದಾರೆ ಎಂದರು. ವಿಶೇಷಚೇತನರಿಗೆ ತಮ್ಮದೇ ಆದ ಜಾಣ್ಮೆ ಇರುತ್ತದೆ,ಸಮಾಜ ಇವರನ್ನು ಕೀಳಾಗಿ ನೋಡಬಾರದು. ಸಂಘ, ಸಂಸ್ಥೆಗಳು ಇವರ ಕಲ್ಯಾಣಕ್ಕಾಗಿ ಶ್ರಮಿಸಬೇಕು ಮುಖ್ಯವಾಗಿ ಯುವಕರು ವಿಶೇಷಚೇತನರಿಗೆ ಸಹಾಯವನ್ನು ಮಾಡಬೇಕು ಎಂದರು.ಪರಿಸರದ ಬಗ್ಗೆ ತ್ಯಾಗರಾಜ ಮಿತ್ಯಾಂತ್ ಅವರು ಮಾತನಾಡಿ ಪರಿಸರ ಮಾಲಿನ್ಯವನ್ನು ಮಾಡದೇ ಅದನ್ನು ಸಂರಕ್ಷಿಸುವ ಹೊಣೆ ಆದಕರ್ತವ್ಯ ನಮ್ಮೆಲ್ಲರ ಹೊಣೆ ಕೂಡ ಹೌದು.ಯಾಕೆಂದರೆ ಈಗಿನ ಸ್ಥಿತಿಯಲ್ಲಿ ಹೀಗೆ ಮುಂದೆವರೆದರೆ ತುಂಬಾ ಕಷ್ಟ ಆಗುತ್ತೆ ಅದು ಅಲ್ಲದೇ ಮುಂದಿನ ಪೀಳಿಗೆಗೂ ತುಂಬಾ ಕಷ್ಟ ಆಗುತ್ತೆ,ಪರಿಸರ ಸಂರಕ್ಷಣೆ ಮಾಡೋದು ನಮ್ಮೆಲ್ಲರ ಹೊಣೆ ಆಗಿದೆ ಎಂದರು.ಇದೇ ಸಂದರ್ಭದಲ್ಲಿ   108 ಭಜನಾ ಮಂಡಳಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೋಳ್ಳುವುದರ ಜೊತೆಯಲ್ಲಿ 27 ಬಾರಿ ರಕ್ತದಾನವನ್ನು ಮಾಡಿದ ಶಬರೀಶ ಕಣ್ಣನ್ ಅವರಿಗೆ ಸಕ್ಷಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇದರ ಅಧ್ಯಕ್ಷತೆಯನ್ನು ಡಾ ಪ್ರಶಾಂತ್  ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಕುಮಾರಶಾಸ್ತ್ರಿ ಜಿಲ್ಲಾ ಕಾರ್ಯದರ್ಶಿಗಳು ಸಕ್ಷಮ. ಶಿವಮೊಗ್ಗ, ಸಿ.ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ. ಶಿವಮೊಗ್ಗ, ಕೆ.ಜಿ ಕೃಷ್ಣಪ್ಪ,ಮಲ್ಲಿಕಾರ್ಜುನ, ಸತೀಶ್.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *