ಕೂಡ್ಲಿಗಿ:ಶಾಸಕ ಡಾ”ಎನ್.ಟಿ.ಎಸ್- ಕ್ಷೇತ್ರದ ಜನತೆಗೆ ಚಿಕಿತ್ಸೆ ನೀಡಲು ಸೈ, ಸದನದಲ್ಲಿ ಸಮಸ್ಯೆಗಳ ವಿರುದ್ಧ ಸಮರಕ್ಕೂ ಸೈ.
ಕೂಡ್ಲಿಗಿ ಕ್ಷೇತ್ರದ ಜನತೆಯ ಸುಕೃತ ಹೇಗಿದೆ ಎಂದರೆ..ಸದಾ ಜನ ಹಿತ ಬಯಸುವ ಶಾಸಕರಾದ ಡಾ॥ಎನ್.ಟಿ.ಶ್ರೀನಿವಾಸ್ ವೈದ್ಯರಾಗಿದ್ದು, ಕೇವಲ ನೇತ್ರ ಚಿಕಿತ್ಸೆ ಯೊಂದನ್ನು ಮಾಡದೇ ಶಾಸಕರಾಗಿ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಚಿಕಿತ್ಸೆ ನೀಡೋ ದಾವಂತದಲ್ಲಿದ್ದಾರೆ. ಅದಕ್ಕಾಗಿ ಅವರು ಸದನದ ಅಂಗಳದಲ್ಲಿ, ಕ್ಷೇತ್ರದ ಜ್ವಲಂತ ಸಮಸ್ಯೆಗಳ ವಿರುದ್ಧ ಸಮರ ಸಾರಿದ್ದಾರೆ.
ಇತ್ತೀಚೆ ಜರುಗಿದ ಕೂಡ್ಲಿಗಿ ಪಪಂ ವ್ಯಾಪ್ತಿಯ ಎ.ಡಿ.ಗುಡ್ಡ ಗೊಲ್ಲರಹಟ್ಟಿ, ಶಾಲಾ ಬಾಲಕಿಗೆ ಲಘುವಾಹನ ಡಿಕ್ಕಿಯಾಗಿ ಬಾಲಕಿ ಅಸುನೀಗಿದ ಘಟನೆಗೆ ಸಂಬಂಧಿಸಿದಂತೆ. ಅವರು ಘಟನೆಗೆ ಮಮ್ಮಲ ಮರುಗಿದ್ದಾರೆ, ತಕ್ಷಣವೇ ಆ ಮೃತ ಬಾಲಕಿಯ ಕುಟುಂಬಕ್ಕೆ. ನೆರವಿನ ಹಸ್ತ ಚಾಚಿ ಕಣ್ಣೀರು ಹೊರೆಸುವಲ್ಲಿ, ಹಾಗೂ ಕುಟುಂಬ ಸದಸ್ಯರಲ್ಲಿ ಆತ್ಮ ಸ್ಥೈರ್ಯ ತುಂಬಿ ಆದರ್ಶ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಅವರು ವಿಧಾನ ಸೌಧದ ಮೊಗಸಾಲೆಯ ಸದನದಲ್ಲಿದ್ದು, ಅವರು ಕ್ಷೇತ್ರದಲ್ಲಿ ಅನುಪಸ್ಥಿತಿಯ ಸಂದರ್ಭದಲ್ಲಿಯೂ ಕೂಡ. ಅವರ ಆಪ್ತರ ಸಹಕಾರದೊಂದಿಗೆ, ನೊಂದವರ ಕಣ್ಣೀರೊರೆಸಿ ಜನಪರ ಕಾಳಜಿ ತೋರಿದ್ದಾರೆ.
ಅಷ್ಟು ಮಾತ್ರವಲ್ಲ ಘಟನೆಯನ್ನು ಸದನದಲ್ಲಿ ಪ್ರಸ್ರಾಪಿಸಿದ್ದಾರೆ, ಶಿಕ್ಷಣ ಕ್ಷೇತ್ರದ ಅವ್ಯವಸ್ಥೆ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಸರ್ಕಾರಿ ಶಾಲೆಗಳ ಅದೋಗತಿಯ ಅವ್ಯವಸ್ಥೆ ಬಗ್ಗೆ, ಅವರು ಖೇದ ವ್ಯಕ್ತಪಡಿಸಿ ಸೂಕ್ತ ಕ್ರಮಗಳನ್ನು ಜರುಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಶಾಲೆಗಳು ರಸ್ತೆಗೆ ಹೊಂದಿಕೊಂಡಿರುವಲ್ಲಿ ಹಾಗೂ ಅಪಘಾತ ವಲಗಳಲ್ಲಿ, ವೇಗ ತಡೆಗಳನ್ನು ನಿರ್ಮಿಸಿಲ್ಲದ ಕುರಿತು. ರಸ್ತೆಗಳ ಬದಿಗಳಲ್ಲಿ ವೇಗ ನಿಯಂತ್ರಣ ಸೂಚನೆ ಫಲಕ ಹಾಕದಿರುವುದು, ಅಪಘಾತ ವಲಯಗಳ ಸೂಚಕ ಫಲಕಗಳನ್ನು ಅಗತ್ಯ ಇರೋ ಕಡೆ ನಿರ್ಮಿಸದಿರುವ ಕುರಿತು. ವಾಹನ ಸವಾರರಲ್ಲಿ ಚಾಲನೆಯ ನಿಯಮ ಉಲ್ಲಂಘನೆ ಪರಿಣಾಮ, ಆಗುವ ಅನಾಹುತಗಳ ಗಂಭೀರತೆ ಬಗ್ಗೆ ಮತ್ತು ಕಾನೂನು ರೀತ್ಯ ಶಿಕ್ಷೆಯ ಕುರಿತು. ವಾಹನ ಚಾಲಕರಲ್ಲಿ ಜಾಗ್ರತೆ ಮೂಡಿಸದೇ ಇರುವುದು ಕೂಡ, ಅಪಘಾತಗಳು ಸಂಭವಿಸಲು ಪ್ರಮುಖ ಕಾರಣವಾಗಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಸಂಬಂಧಿಸಿದ ಇಲಾಖೆಗಳ ವೈಫಲ್ಯ ಸ್ಪಷ್ಟವಾಗಿ ಕಾಣುತ್ತಿದೆ, ಶೀಘ್ರವೇ ಸಂಬಂಧಿಸಿದಂತೆ ಇಲಾಖೆಯ ಉನ್ನತಾಧಿಕಾರಿಗಳು ಸೂಕ್ತ ಕ್ರಮಗಳನ್ನು ಶೀಘ್ರವೇ ಜರುಗಿಸಬೇಕೆಂದು ಅವರು ಸದನದಲ್ಲಿ ಮಾತನಾಡಿದರು. ಈ ಮೂಲಕ ಜನಪರ ಕಾಳಜಿ ತೋರಿದ್ದಾರೆ, ಇಷ್ಟಾದ ಮೇಲಾದರೂ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತು ಕೊಂಡು ಅಗತ್ಯ ಕ್ರಮಗಳನ್ನು ಜರುಗಿಸಿ ಕರ್ಥವ್ಯ ಪ್ರಜ್ಞೆ ತೋರಬೇಕಿದೆ.
ಸದನದಲ್ಲಿ ಶಾಸಕರು,
ಕ್ಷೇತ್ರವನ್ನು ನಿರಂತದ ವಾಗಿ ಬಾಧಿಸುವ. ಗಂಭೀರ ಸ್ವರೂಪದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಿ, ಸರ್ಕಾರದ ನೆರವು ಕೋರಿ ಪ್ರಾಮಾಣಿಕತೆ ಮೆರೆದಿದ್ದಾರೆ. ಕ್ಷೇತ್ರದ ಅನೇಕ ಸರ್ಕಾರಿ ಶಾಲೆಗಳಿಗೆ ಕಾಪೌಂಡೇ ಇಲ್ಲ, ಹಲವಾರು ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮಳೆ ಬಂದಾಗ ಮಳೆ ನೀರು ಶಾಲಾ ಕೊಠಡಿಯಲ್ಲಿ ತುಂಬಿ ನೀರಿನ ಗುಂಡಿ ನಿರ್ಮಾಣವಾಗುತ್ತಿವೆ. ಕಾರಣ ಶಿಕ್ಷಣ ಇಲಾಖೆಯ ಹಾಗೂ ಸಂಬಂಧಿಸಿದ ಇಲಾಖೆಗಳ, ಉನ್ನತಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಅತೀ ಶೀಘ್ರವೇ ಅಗತ್ಯ ಇರುವಲ್ಲಿ, ಸುಸಜ್ಜಿತ ಶಾಲಾ ಕಟ್ಟಡಗಳನ್ನು ನಿರ್ಮಿಸಬೇಕೆಂದು. ಅದಕ್ಕಾಗಿ ಸರ್ಕಾರ ಸಂಬಂಧಿಸಿದ ಇಲಾಖೆಗಳ ಮೇಲೆ ಒತ್ತಡ ಹಾಕಿ, ಸೂಕ್ತ ಕ್ರಮಗಳನ್ನು ಜಾರುಗಿಸಬೇಕೆಂದು ಸದನದಲ್ಲಿ ಶಾಸಕ ಡಾ॥ ಎನ್.ಟಿ.ಶ್ರೀನಿವಾಸ್ ಕೋರಿದರು.
ಈ ಮೂಲಕ ಕ್ಷೇತ್ರದ ಸಮಸ್ತ ಜನರ ಲೇಸನ್ನ ಬಯಸಿ, ಸಾಮಾನ್ಯರ ಅಸಮಾನ್ಯ ಕನಸುಗಳನ್ನು ನನಸಾಗಿಸುವಲ್ಲಿ ಡಾ”ಎನ್.ಟಿ.ಶ್ರೀನಿವಾಸ್ ರವರು ನಿಷ್ಠೆ ತೋರಿದ್ದಾರೆ.
ಇದು ಕೂಡ್ಲಿಗಿ ಕ್ಷೇತ್ರದ ಜನರು ಕಂಡ ಆದರ್ಶ ಶಾಸಕರ , ಹಾಗೂ ಜನರ ಕನಸುಗಳನ್ನು ನನಸು ಮಾಡುವಲ್ಲಿ, ಫಣ ತೊಟ್ಟು ಕ್ಷೇತ್ರದ ಸಮಸ್ತ ಜನರ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕರ ನಾಡಿಮಿಡಿತವಾಗಿದೆ.
“ಜನ ಸೇವೆಯೇ ಜನಾರ್ದನನ ಸೇವೆ” ಎನ್ನುವ ಕೆಚ್ಚೆದೆಯ ಹಸನ್ಮುಖಿ ಶಾಸಕರಾದ, ಡಾ॥ಎನ್.ಟಿ.ಶ್ರೀನಿವಾಸರವರ ನೈಜ ಜನಪರ ಕಾಳಜಿಗೆ ಸಾಕ್ಷಿಯಾಗಿದೆ.
ಇಲಾಖೆಗಳ ನಿರ್ಲಕ್ಷ್ಯ ಧೋರಣೆ ಅಪಘಾತಗಳ ಹೆಚ್ಚಳಕ್ಕೆ ಕಾರಣ- ಕಾನೂನು ತಜ್ಞರ ಆರೋಪ-
ವಾಹನ ಅಪಘಾತಗಳ ನಿಯಂತ್ರಿಸುವಲ್ಲಿ ಸಂಬಂಧಿಸಿದ ಕೆಲ ಇಲಾಖೆಗಳ ಕರ್ಥವ್ಯ ಲೋಪ, ಹಾಗೂ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ ಎನ್ನುತ್ತಾರೆ ಕಾನೂನು ತಜ್ಞರು. ಇದಕ್ಕೆ ಕೂಡ್ಲಿಗಿ ಪಟ್ಟಣದಲ್ಲಿ, ಪಟ್ಟಣದ ಅಂಚಿನಲ್ಲಿ ಹಾಗೂ ಹೊರ ವಲಯದಲ್ಲಿ , ಜರುಗುತ್ತಿರುವ ಸರಣಿ ಅಪಘಾತಗಳೇ ಸಾಕ್ಷಿಯಾಗಿವೆ ಎನ್ನುತ್ತಾರೆ ಅವರು.
ಸರ್ಕಾರಿ ಸಂಬಳ ಪಡೆಯೋ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಲ್ಲಿ, ಕಿಂಚಿತ್ತಾದರು ಪ್ರಾಮಾಣಿಕತೆ ಹಾಗೂ ಕರ್ಥವ್ಯ ಪ್ರಜ್ಞೆ, ಜನಪರ ಕಾಳಜಿ
ಇರೋದು ನಿಜವಾದರೆ. ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿಗಳಲ್ಲಿ ಆತ್ಮ ಸಾಕ್ಷಿ ಅನ್ನೋದು ಇದ್ದರೆ, ಶೀಘ್ರವೇ ಜನ ಹಿತಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳೋ ಮೂಲಕ. ಅವರು ತಮ್ಮ ಪ್ರಾಮಾಣಿಕತೆ ತೋರಬೇಕಾಗಿದೆ, ಎಂದು ಪಟ್ಟಣದ ಹಿರಿಯ ನಾಗರೀಕರು ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ.
✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ-9008937428ಕೂಡ್ಲಿಗಿ:ಶಾಸಕ ಡಾ”ಎನ್.ಟಿ.ಎಸ್- ಕ್ಷೇತ್ರದ ಜನತೆಗೆ ಚಿಕಿತ್ಸೆ ನೀಡಲು ಸೈ, ಸದನದಲ್ಲಿ ಸಮಸ್ಯೆಗಳ ವಿರುದ್ಧ ಸಮರಕ್ಕೂ ಸೈ-ಕೂಡ್ಲಿಗಿ ಕ್ಷೇತ್ರದ ಜನತೆಯ ಸುಕೃತ ಹೇಗಿದೆ ಎಂದರೆ..ಸದಾ ಜನ ಹಿತ ಬಯಸುವ ಶಾಸಕರಾದ ಡಾ॥ಎನ್.ಟಿ.ಶ್ರೀನಿವಾಸ್ ವೈದ್ಯರಾಗಿದ್ದು, ಕೇವಲ ನೇತ್ರ ಚಿಕಿತ್ಸೆ ಯೊಂದನ್ನು ಮಾಡದೇ ಶಾಸಕರಾಗಿ ಕ್ಷೇತ್ರದ ಜ್ವಲಂತ ಸಮಸ್ಯೆಗಳಿಗೆ ಚಿಕಿತ್ಸೆ ನೀಡೋ ದಾವಂತದಲ್ಲಿದ್ದಾರೆ. ಅದಕ್ಕಾಗಿ ಅವರು ಸದನದ ಅಂಗಳದಲ್ಲಿ, ಕ್ಷೇತ್ರದ ಜ್ವಲಂತ ಸಮಸ್ಯೆಗಳ ವಿರುದ್ಧ ಸಮರ ಸಾರಿದ್ದಾರೆ.
ಇತ್ತೀಚೆ ಜರುಗಿದ ಕೂಡ್ಲಿಗಿ ಪಪಂ ವ್ಯಾಪ್ತಿಯ ಎ.ಡಿ.ಗುಡ್ಡ ಗೊಲ್ಲರಹಟ್ಟಿ, ಶಾಲಾ ಬಾಲಕಿಗೆ ಲಘುವಾಹನ ಡಿಕ್ಕಿಯಾಗಿ ಬಾಲಕಿ ಅಸುನೀಗಿದ ಘಟನೆಗೆ ಸಂಬಂಧಿಸಿದಂತೆ. ಅವರು ಘಟನೆಗೆ ಮಮ್ಮಲ ಮರುಗಿದ್ದಾರೆ, ತಕ್ಷಣವೇ ಆ ಮೃತ ಬಾಲಕಿಯ ಕುಟುಂಬಕ್ಕೆ. ನೆರವಿನ ಹಸ್ತ ಚಾಚಿ ಕಣ್ಣೀರು ಹೊರೆಸುವಲ್ಲಿ, ಹಾಗೂ ಕುಟುಂಬ ಸದಸ್ಯರಲ್ಲಿ ಆತ್ಮ ಸ್ಥೈರ್ಯ ತುಂಬಿ ಆದರ್ಶ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಅವರು ವಿಧಾನ ಸೌಧದ ಮೊಗಸಾಲೆಯ ಸದನದಲ್ಲಿದ್ದು, ಅವರು ಕ್ಷೇತ್ರದಲ್ಲಿ ಅನುಪಸ್ಥಿತಿಯ ಸಂದರ್ಭದಲ್ಲಿಯೂ ಕೂಡ. ಅವರ ಆಪ್ತರ ಸಹಕಾರದೊಂದಿಗೆ, ನೊಂದವರ ಕಣ್ಣೀರೊರೆಸಿ ಜನಪರ ಕಾಳಜಿ ತೋರಿದ್ದಾರೆ.
ಅಷ್ಟು ಮಾತ್ರವಲ್ಲ ಘಟನೆಯನ್ನು ಸದನದಲ್ಲಿ ಪ್ರಸ್ರಾಪಿಸಿದ್ದಾರೆ, ಶಿಕ್ಷಣ ಕ್ಷೇತ್ರದ ಅವ್ಯವಸ್ಥೆ ಕುರಿತು ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಕ್ಷೇತ್ರದ ಸರ್ಕಾರಿ ಶಾಲೆಗಳ ಅದೋಗತಿಯ ಅವ್ಯವಸ್ಥೆ ಬಗ್ಗೆ, ಅವರು ಖೇದ ವ್ಯಕ್ತಪಡಿಸಿ ಸೂಕ್ತ ಕ್ರಮಗಳನ್ನು ಜರುಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಶಾಲೆಗಳು ರಸ್ತೆಗೆ ಹೊಂದಿಕೊಂಡಿರುವಲ್ಲಿ ಹಾಗೂ ಅಪಘಾತ ವಲಗಳಲ್ಲಿ, ವೇಗ ತಡೆಗಳನ್ನು ನಿರ್ಮಿಸಿಲ್ಲದ ಕುರಿತು. ರಸ್ತೆಗಳ ಬದಿಗಳಲ್ಲಿ ವೇಗ ನಿಯಂತ್ರಣ ಸೂಚನೆ ಫಲಕ ಹಾಕದಿರುವುದು, ಅಪಘಾತ ವಲಯಗಳ ಸೂಚಕ ಫಲಕಗಳನ್ನು ಅಗತ್ಯ ಇರೋ ಕಡೆ ನಿರ್ಮಿಸದಿರುವ ಕುರಿತು. ವಾಹನ ಸವಾರರಲ್ಲಿ ಚಾಲನೆಯ ನಿಯಮ ಉಲ್ಲಂಘನೆ ಪರಿಣಾಮ, ಆಗುವ ಅನಾಹುತಗಳ ಗಂಭೀರತೆ ಬಗ್ಗೆ ಮತ್ತು ಕಾನೂನು ರೀತ್ಯ ಶಿಕ್ಷೆಯ ಕುರಿತು. ವಾಹನ ಚಾಲಕರಲ್ಲಿ ಜಾಗ್ರತೆ ಮೂಡಿಸದೇ ಇರುವುದು ಕೂಡ, ಅಪಘಾತಗಳು ಸಂಭವಿಸಲು ಪ್ರಮುಖ ಕಾರಣವಾಗಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಸಂಬಂಧಿಸಿದ ಇಲಾಖೆಗಳ ವೈಫಲ್ಯ ಸ್ಪಷ್ಟವಾಗಿ ಕಾಣುತ್ತಿದೆ, ಶೀಘ್ರವೇ ಸಂಬಂಧಿಸಿದಂತೆ ಇಲಾಖೆಯ ಉನ್ನತಾಧಿಕಾರಿಗಳು ಸೂಕ್ತ ಕ್ರಮಗಳನ್ನು ಶೀಘ್ರವೇ ಜರುಗಿಸಬೇಕೆಂದು ಅವರು ಸದನದಲ್ಲಿ ಮಾತನಾಡಿದರು. ಈ ಮೂಲಕ ಜನಪರ ಕಾಳಜಿ ತೋರಿದ್ದಾರೆ, ಇಷ್ಟಾದ ಮೇಲಾದರೂ ಸಂಬಂಧಿಸಿದ ಇಲಾಖೆಗಳು ಎಚ್ಚೆತ್ತು ಕೊಂಡು ಅಗತ್ಯ ಕ್ರಮಗಳನ್ನು ಜರುಗಿಸಿ ಕರ್ಥವ್ಯ ಪ್ರಜ್ಞೆ ತೋರಬೇಕಿದೆ.
ಸದನದಲ್ಲಿ ಶಾಸಕರು,
ಕ್ಷೇತ್ರವನ್ನು ನಿರಂತದ ವಾಗಿ ಬಾಧಿಸುವ. ಗಂಭೀರ ಸ್ವರೂಪದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಯತ್ನಿಸಿ, ಸರ್ಕಾರದ ನೆರವು ಕೋರಿ ಪ್ರಾಮಾಣಿಕತೆ ಮೆರೆದಿದ್ದಾರೆ. ಕ್ಷೇತ್ರದ ಅನೇಕ ಸರ್ಕಾರಿ ಶಾಲೆಗಳಿಗೆ ಕಾಪೌಂಡೇ ಇಲ್ಲ, ಹಲವಾರು ಸರ್ಕಾರಿ ಶಾಲೆಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದ್ದು, ಮಳೆ ಬಂದಾಗ ಮಳೆ ನೀರು ಶಾಲಾ ಕೊಠಡಿಯಲ್ಲಿ ತುಂಬಿ ನೀರಿನ ಗುಂಡಿ ನಿರ್ಮಾಣವಾಗುತ್ತಿವೆ. ಕಾರಣ ಶಿಕ್ಷಣ ಇಲಾಖೆಯ ಹಾಗೂ ಸಂಬಂಧಿಸಿದ ಇಲಾಖೆಗಳ, ಉನ್ನತಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಅತೀ ಶೀಘ್ರವೇ ಅಗತ್ಯ ಇರುವಲ್ಲಿ, ಸುಸಜ್ಜಿತ ಶಾಲಾ ಕಟ್ಟಡಗಳನ್ನು ನಿರ್ಮಿಸಬೇಕೆಂದು. ಅದಕ್ಕಾಗಿ ಸರ್ಕಾರ ಸಂಬಂಧಿಸಿದ ಇಲಾಖೆಗಳ ಮೇಲೆ ಒತ್ತಡ ಹಾಕಿ, ಸೂಕ್ತ ಕ್ರಮಗಳನ್ನು ಜಾರುಗಿಸಬೇಕೆಂದು ಸದನದಲ್ಲಿ ಶಾಸಕ ಡಾ॥ ಎನ್.ಟಿ.ಶ್ರೀನಿವಾಸ್ ಕೋರಿದರು.
ಈ ಮೂಲಕ ಕ್ಷೇತ್ರದ ಸಮಸ್ತ ಜನರ ಲೇಸನ್ನ ಬಯಸಿ, ಸಾಮಾನ್ಯರ ಅಸಮಾನ್ಯ ಕನಸುಗಳನ್ನು ನನಸಾಗಿಸುವಲ್ಲಿ ಡಾ”ಎನ್.ಟಿ.ಶ್ರೀನಿವಾಸ್ ರವರು ನಿಷ್ಠೆ ತೋರಿದ್ದಾರೆ.
ಇದು ಕೂಡ್ಲಿಗಿ ಕ್ಷೇತ್ರದ ಜನರು ಕಂಡ ಆದರ್ಶ ಶಾಸಕರ , ಹಾಗೂ ಜನರ ಕನಸುಗಳನ್ನು ನನಸು ಮಾಡುವಲ್ಲಿ, ಫಣ ತೊಟ್ಟು ಕ್ಷೇತ್ರದ ಸಮಸ್ತ ಜನರ ಹಿತಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಶಾಸಕರ ನಾಡಿಮಿಡಿತವಾಗಿದೆ.
“ಜನ ಸೇವೆಯೇ ಜನಾರ್ದನನ ಸೇವೆ” ಎನ್ನುವ ಕೆಚ್ಚೆದೆಯ ಹಸನ್ಮುಖಿ ಶಾಸಕರಾದ, ಡಾ॥ಎನ್.ಟಿ.ಶ್ರೀನಿವಾಸರವರ ನೈಜ ಜನಪರ ಕಾಳಜಿಗೆ ಸಾಕ್ಷಿಯಾಗಿದೆ.
ಇಲಾಖೆಗಳ ನಿರ್ಲಕ್ಷ್ಯ ಧೋರಣೆ ಅಪಘಾತಗಳ ಹೆಚ್ಚಳಕ್ಕೆ ಕಾರಣ- ಕಾನೂನು ತಜ್ಞರ ಆರೋಪ-
ವಾಹನ ಅಪಘಾತಗಳ ನಿಯಂತ್ರಿಸುವಲ್ಲಿ ಸಂಬಂಧಿಸಿದ ಕೆಲ ಇಲಾಖೆಗಳ ಕರ್ಥವ್ಯ ಲೋಪ, ಹಾಗೂ ನಿರ್ಲಕ್ಷ್ಯ ಧೋರಣೆ ಎದ್ದು ಕಾಣುತ್ತಿದೆ ಎನ್ನುತ್ತಾರೆ ಕಾನೂನು ತಜ್ಞರು. ಇದಕ್ಕೆ ಕೂಡ್ಲಿಗಿ ಪಟ್ಟಣದಲ್ಲಿ, ಪಟ್ಟಣದ ಅಂಚಿನಲ್ಲಿ ಹಾಗೂ ಹೊರ ವಲಯದಲ್ಲಿ , ಜರುಗುತ್ತಿರುವ ಸರಣಿ ಅಪಘಾತಗಳೇ ಸಾಕ್ಷಿಯಾಗಿವೆ ಎನ್ನುತ್ತಾರೆ ಅವರು.
ಸರ್ಕಾರಿ ಸಂಬಳ ಪಡೆಯೋ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಲ್ಲಿ, ಕಿಂಚಿತ್ತಾದರು ಪ್ರಾಮಾಣಿಕತೆ ಹಾಗೂ ಕರ್ಥವ್ಯ ಪ್ರಜ್ಞೆ, ಜನಪರ ಕಾಳಜಿ
ಇರೋದು ನಿಜವಾದರೆ. ಸಂಬಂಧಿಸಿದ ಇಲಾಖೆಗಳ ಸಿಬ್ಬಂದಿಗಳಲ್ಲಿ ಆತ್ಮ ಸಾಕ್ಷಿ ಅನ್ನೋದು ಇದ್ದರೆ, ಶೀಘ್ರವೇ ಜನ ಹಿತಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳೋ ಮೂಲಕ. ಅವರು ತಮ್ಮ ಪ್ರಾಮಾಣಿಕತೆ ತೋರಬೇಕಾಗಿದೆ, ಎಂದು ಪಟ್ಟಣದ ಹಿರಿಯ ನಾಗರೀಕರು ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.