ಕುಷ್ಟಗಿ ತಾಲೂಕು ಮೆತ್ತಿನಾಳ ಗ್ರಾಮದಲ್ಲಿ ಸಾರ್ವನಿಕರು ಕುಡಿಯಲು ಕಲುಷಿತ ನೀರು ಬಳಸುತ್ತಿರುವ ಹಾಗೂ ಸ್ವಚ್ಛತೆ ಕಾಪಾಡುವ ಕುರಿತು ಮಾನ್ಯ ಶಾಸಕರಿಗೆ ಮನವಿ.
ಕುಷ್ಟಗಿ ತಾಲೂಕು ಸಂಗನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೆತ್ತಿನಾಳ ಗ್ರಾಮದ ಸಾರ್ವಜನಿಕರಿಗೆ ಕುಡಿಯುವ ನೀರು ಪೂರೈಸುವ 1 ಕೊಳವೆ ಬಾವಿ ಇದ್ದು, ಸದರಿ ಕೊಳವೆ ಬಾವಿಗೆ ಹೊಂದಿಕೊಂಡು ದೊಡ್ಡ ಚರಂಡಿ, ಸುತ್ತಲೂ ಕೊಳಚೆ ನೀರು ಸಂಗ್ರಹವಾಗಿದೆ. ಕೊಳಚೆ ಮತ್ತು ಚರಂಡಿ ನೀರು ಕೊಳವೆಬಾವಿಯಲ್ಲಿ ಸೇರಿಕೊಂಡು ಜನರು ಕುಡಿಯಲು ಬಳಸುವ ನೀರು ಹಿತವಾಗಿರುತ್ತದೆ. ಇತ್ತೀಚೆಗೆ ತಾಲೂಕಿನ ವಿವಿಧ ಕಡೆ ವಾಂತಿ ಬೇಧಿ ಪ್ರಕರಣಗಳು ನಡೆದಾಗ, ಮೆತ್ತಿನಾಳ ಗ್ರಾಮದ ಕುಡಿವ ನೀರನ್ನು ಪರಿಶೀಲಿಸಲಾಗಿದೆ, ಅಲ್ಲಿನ ನೀರು ಕುಡಿಯಲು ಯೋಗ್ಯವಾಗಿಲ್ಲ’ ಎಂಬ ಪ್ರಯೋಗಾಲಯದ ವರದಿ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಕೆಲವು ದಿನ ಗ್ರಾಮಕ್ಕೆ ಹೊರಗಿನಿಂದ ತಂದು ಶುದ್ಧ ಕುಡಿವ ನೀರನ್ನು ನೀಡಲಾಯಿತು. ನಂತರ, ಕೆಲವು ದಿನಗಳಾದ ಮೇಲೆ ಶುದ್ಧ ಕುಡಿವ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಯಿತು. ಅಲ್ಲಿನ ಗ್ರಾಮಸ್ಥರೇ ಹಣಕೊಟ್ಟು ಶುದ್ಧ ಕುಡಿವ ನೀರನ್ನು ಪಡೆದುಕೊಳ್ಳಬೇಕು ಗ್ರಾಮಪಂಚಾಯತಿಯವರು ಸೂಚಿಸಿರುತ್ತಾರೆ. ನಮ್ಮ ಗ್ರಾಮದಲ್ಲಿ ನೀರು ಶುದ್ದೀಕರಣ ಘಟಕ (ಆರ್.ಓ.ಪ್ಲಾಂಟ್) ಇರುವುದಿಲ್ಲ. ಸದ್ಯ ಶಾಲೆಯ ವಿದ್ಯಾರ್ಥಿಗಳು, ಅಂಗನವಾಡಿ ಮಕ್ಕಳು ಸೇರಿದಂತೆ ಗ್ರಾಮದ ಎಲ್ಲರೂ ಕಲುಷಿತ ನೀರನ್ನೇ ಕುಡಿಯಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಗ್ರಾಮದ ವ್ಯಾಪ್ತಿಯಲ್ಲಿ ಇನ್ನೊಂದು ಕೊಳವೆಬಾವಿಯನ್ನು ಕೊರೆಯಿಸಿ ಗ್ರಾಮಕ್ಕೆ ಕುಡಿವ ನೀರು ಒದಗಿಸಬೇಕು ಅಥವಾ ಗ್ರಾಮದಲ್ಲಿಯೇ ಆರ್ಓ ಪ್ಲಾಂಟ್ ನ್ನು ತೆರೆಯಬೇಕು. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಾವು ನಿರ್ದೇಶನ ನೀಡಬೇಕೆಂದು. ಈ ಮೂಲಕ ಕೇಳಿಕೊಳ್ಳುತ್ತೇವೆ.
ವರದಿ-ಸೋಮನಾಥ ಹೆಚ್.ಎಮ್