ವಿವಿದ ಸಮಾಜದ ಮುಖಂಡರಿಂದ ಪಟ್ಟಣದ ನಾಡ ಕಚೇರಿ ಉಪ-ತಹಶೀಲ್ದಾರರವರಿಗೆ ಮನವಿ.

Spread the love

ವಿವಿದ ಸಮಾಜದ ಮುಖಂಡರಿಂದ ಪಟ್ಟಣದ ನಾಡ ಕಚೇರಿ ಉಪ-ತಹಶೀಲ್ದಾರರವರಿಗೆ ಮನವಿ.

ಶಾಮೀದಲಿ ದರ್ಗಾದಲ್ಲಿ ಯಾವುದೇ ರೀತಿಯ ಕಟ್ಟಡ ಕಟ್ಟಲು ಅನುಮತಿ ನೀಡದಿರುವ ಕುರಿತು. ತಾವರಗೇರಾ ಪಟ್ಟಣದ ಶ್ರೀ ಶಾಮೀದಲಿ ದರ್ಗಾವು ಭಾವೈಕ್ಯತೆಯ ಕೇಂದ್ರವಾಗಿದ್ದು, ಇಲ್ಲಿ ಎಲ್ಲಾ ಜಾತಿ, ಧರ್ಮಗಳ ಭಕ್ತಾದಿಗಳು ಪ್ರತಿ ದಿನವು ಆಗಮಿಸಿ, ಶರಣರ ಕೃಪಾಶಿರ್ವಾದವನ್ನು ಪಡೆದುಕೊಂಡು ಹೋಗುತ್ತಿರುವುದು ಹಲವಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ಧತಿಯಾಗಿದೆ. ಆದ್ದರಿಂದ ಇಲ್ಲಿ ಯಾವುದೇ ಜಾತಿ, ಧರ್ಮಗಳ ಮನಸ್ಸುಗಳಿಗೆ ನೋವಾಗದಂತೆ ಶ್ಯಾಮೀದಲಿ ಧರ್ಗಾ ಸ್ಥಳದಲ್ಲಿ ಯಾವುದೇ ರೀತಿಯ ಕಟ್ಟಡಗಳನ್ನು ಕಟ್ಟಲು ಅನುಮತಿ ನೀಡಬಾರದೆಂದು, ಇಲ್ಲಿ ತಾವರಗೇರಾ ಪಟ್ಟಣಕ್ಕೆ ಸಂಬಂದಿಸಿದಂತೆ ಮುಸ್ಲಿಂ ಸಮಾಜದವರು ಹಾಗೂ ಹಿಂದುಗಳು ಅಣ್ಣ/ತಮ್ಮಂದಿರ ರೀತಿರಲ್ಲಿ ಒಂದುಕೊಂಡು ಸಾಗುತ್ತ ಬಂದಿರುತ್ತೆವೆ. ಆದ್ದರಿಂದ ಇಲ್ಲಿ ಯಾವು ಸಮಾಜಕ್ಕೂ ದಕ್ಕೆಯಾಗಬಾರದು,  ಶ್ರೀ ಶ್ಯಾಮೀದಲಿ ಧರ್ಗಾದಲ್ಲಿ ಅವರಣವು ಬಹು ವಿಶಾಲವಾಗಿದೆ, ಜೊತೆಗೆ ಪ್ರತಿ ವರ್ಷ ನಡೆಯುತ್ತಿದ್ದ ಉರಿಸಿನ ಕಾರ್ಯಕ್ರಮದ ಖವಾಲಿ ನಡೆಯುವ ಸ್ಥಳದಲ್ಲಿ ಜನರಿಗೆ ಕುಳಿತುಕೊಳ್ಳಲು ಸ್ಥಳದ ಆಭಾವ ವಿರುತ್ತದೆ, ಆದ್ದರಿಂದ ಈ ಸುತ್ತಮುತ್ತಲಿನ ಸ್ಥಳದಲ್ಲಿ ಯಾವುದೇ ಕಟ್ಟಡ ಕಾರ್ಯಗಳು ನಡೆಯಬಾರದು, ಜೊತೆಗೆ ಈ ಸ್ಥಳದಲ್ಲಿ ಜನರಿಗೆ ಕುಳಿತುಕೊಳ್ಳಲು ಕ್ರೀಡಾಂಗಣದಲ್ಲಿ ಮಾಡಿದಂತೆ ಇಲ್ಲಿಯು ಸಹ ಮಾಡಿ ಕೊಟ್ಟರೆ ಜನರಿಗೆ ತುಂಬಾ ಅನೂಕೂಲವಾಗುತ್ತದೆ.  ತಾವರಗೇರಾ ಪಟ್ಟಣದ ವಿವಿದ ಸಮಾಜದ ಹಿರಿಯ ನಾಯಕರು ಸೇರಿ ಪಟ್ದಣದ ನಾಡ ಕಚೇರಿಯ ಮಾನ್ಯ ಉಪ-ತಹಶೀಲ್ದಾರರಾದ ಶ್ರೀ ಶರಣಪ್ಪ ಕಳ್ಳಿಮಠರವರಲ್ಲಿ ವಿನಂತಿಯೊಂದಿಗೆ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಶಂಕರ್ ಸಿಂಗ್ ಹೊಸಮನಿ, ಶಾಮ್ ಸಿಂಗ್ ಕಂಟಿ, ವೆಂಕಟ ಸಿಂಗ್ ಹೊಸಮನಿ, ಶಿವನಗೌಡ ಪಾಟೀಲ ಗೋಲ್ಡನ್ ಕ್ಲಬ್, ಸಿದ್ದನಗೌಡ ಪುಂಡಗೌಡ್ರು, ಚಂದ್ರು ಸಿಂಗ್ ಬನ್ನಿಕಟ್ಟಿ, ನಾರಾಯಣಪ್ಪ.ಮಡಿವಾಳ, ಹಾಗೂ ಎಲ್ಲಾ ಸಮುದಾಯದ ಹಿರಿಯರು ಪಾಲುಗೊಂಡಿದ್ದರು.

ವರದಿ-ಉಪಳೇಶ ವಿ.ನಾರಿನಾಳ  

Leave a Reply

Your email address will not be published. Required fields are marked *