ರಸ್ತೆ ಬದಿಯಲ್ಲಿ ಒಣಗಿ ನಿಂತಿರುವ ಮರಗಳನ್ನು ತೆರವು ಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಕರವೇ ಕಾರ್ಯಕರ್ತರಿಂದ ಮನವಿ.
ಶನಿವಾರಸಂತೆ ಹೋಬಳಿಗೆ ಸೇರಿ ರಾಜ್ಯ ಹೆದ್ದಾರಿಯಲ್ಲಿ ಇರುವ ಹೆಗ್ಗಳ ಗ್ರಾಮದ ರಸ್ತೆ ಬದಿಯಲ್ಲಿ ದೊಡ್ಡ ಮರ ಒಂದು ಒಣಗಿ ನಿಂತಿರುತ್ತದೆ ಇದರ ಬದಿಯಲ್ಲಿ ಶಾಲೆ ಮಕ್ಕಳು ವೃದ್ದರು ಹಾಗೂ ಜನ ವಸತಿ ಪ್ರದೇಶವಾಗಿರುವುದರಿಂದ ಇಲ್ಲಿ ಜನರು ಹೆಚ್ಚಿನದಾಗಿ ತಿರುಗಾಡಿಕೊಂಡಿರುತ್ತಾರೆ ಹಾಗೂ ವಾಹನಗಳು ಸಂಚರಿಸುವ ಸಂದರ್ಭದಲ್ಲಿ ತೊಂದರೆ ಉಂಟಾಗುತ್ತಿದ್ದು ಹಾಗಾಗಿ ಈ ಮರದ ಕೊಂಬೆಗಳು ಈಗಾಗಲೇ ಒಣಗಿ ಬೀಳುವ ಹಂತದಲ್ಲಿದ್ದು ಜನರಿಗೆ ತೊಂದರೆಯಾಗುವ ಹಾಗೂ ಶಾಲಾ ಮಕ್ಕಳಿಗೆ ತೊಂದರೆ ಆಗುವ ಕಾರಣದಿಂದ ಬೇಗನೆ ತೆರವುಗೊಳಿಸುವ ಅರಣ್ಯ ಇಲಾಖೆ ಕರವೇ ಕಾರ್ಯಕರ್ತರಿಂದ ಮನವಿ ಒಂದು ವೇಳೆ ಒಣಗಿ ನಿಂತಿರ ಮರಗಳನ್ನು ತೆರೆ ಗೊಳಿಸದೆ ಹೋದಲ್ಲಿ ಮುಂದೆ ಈ ಮರಗಳಿಂದ ಯಾರಿಗಾದರೂ ಹಾನಿ ಸಂಭವಿಸಿದೆ ಆಗಿದ್ದರೆ ಇದಕ್ಕೆ ಅರಣ್ಯ ಇಲಾಖೆ ಜವಾಬ್ದಾರಿ ಆಗಿರುತ್ತದೆ ಹಾಗೂ ಶನಿವಾರ ಸಂತೆಯಿಂದ ಸೋಮವಾರಪೇಟೆ ಹೋಗುವ ರಸ್ತೆ ಉದ್ದಕ್ಕೂ ತುಂಬಾ ಮರಗಳು ಒಣಗಿ ನಿಂತಿರುತ್ತದೆ ಇದರಿಂದ ಜನರಿಗೆ ಹಾಗೂ ಸವಾರರಿಗೆ ಹಾಗೂ ವಾಹನಗಳಿಗೆ ತೊಂದರೆಯಾಗುವುದರಿಂದ ಈ ಒಣಗಿ ನಿಂತಿರುವ ಮರಗಳು ತೆರವು ಗೊಳಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಅರಣ್ಯ ಇಲಾಖೆಯಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ..ಕರವೇ ಫ್ರಾನ್ಸಿಸ್ ಡಿಸೋಜ ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ.9449255831.. 9449255831.
ವರದಿ-ಸಂಪಾದಕೀಯಾ