ಕುಮಾರಿ ಅಕ್ಷತಾ ಕುರುಬರ ಅವರಿಗೆ  “ಖಿದ್ಮಾ ಕಾವ್ಯಶ್ರೀ ಪ್ರಶಸ್ತಿ” ಭಾಜನ.

Spread the love

ಕುಮಾರಿ ಅಕ್ಷತಾ ಕುರುಬರ ಅವರಿಗೆ  “ಖಿದ್ಮಾ ಕಾವ್ಯಶ್ರೀ ಪ್ರಶಸ್ತಿಭಾಜನ.

ಖಿದ್ಮಾ ಫೌಂಡೇಶನ್ ಕರ್ನಾಟಕ ಬೆಂಗಳೂರಿನಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದ ರಾಜ್ಯಮಟ್ಟದ ಖಿದ್ಮಾ ಕಾವ್ಯ ಮತ್ತು ಸಾಂಸ್ಕೃತಿಕ ಸಮಾರಂಭ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕುಮಾರಿ ಅಕ್ಷತಾ ಕುರುಬರ ಇವರಿಗೆ ಮೈಸೂರು ಸಮಾಜ ವಿಜ್ಞಾನದ ಮುಖ್ಯಸ್ಥರಾದ ಶ್ರೀ ಹುಮಾಯೂನ್ ಅವರು ”ಖಿದ್ಮಾ ಕಾವ್ಯಶ್ರೀ ಪ್ರಶಸ್ತಿ” ಯನ್ನು ಪ್ರಧಾನ ಮಾಡಿದರು. ಸಾಹಿತ್ಯ, ನೃತ್ಯ ಹಾಗೂ ಸಂಗೀತ ಕ್ಷೇತ್ರಗಳಲ್ಲಿ ತೊಡಗಿಕೊಂಡು ಎಲೆ ಮರೆ ಕಾಯಿಯಂತೆ ಬೆಳೆದು ಬರುತ್ತಿದ್ದಾರೆ. ಈಗಾಗಲೇ ರಾಜ್ಯದ ಹಲವಾರು ಕಡೆಗಳಲ್ಲಿ ಕವನ ವಾಚನ ಮಾಡುವುದರ ಮೂಲಕ ಗಮನ ಸೆಳೆದಿದ್ದಾರೆ. ಸೈಕಾಲಜಿಕಲ್ ವಿದ್ಯಾರ್ಥಿನಿಯಾದ ಇವರು ಮೂಲತಃ ಬೆಳಗಾವಿ ಜಿಲ್ಲೆಯವರು. ಇವರ ಸಾಧನೆಯನ್ನು ಗುರುತಿಸಿ ಖಿದ್ಮಾ ಫೌಂಡೇಶನ್ “ಖಿದ್ಮಾ ಕಾವ್ಯಶ್ರೀ ಪ್ರಶಸ್ತಿ”ಯನ್ನು ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದ ಆಯೋಜಕರಾದ ಶ್ರೀ ಆಮಿರ್ ಬನ್ನೂರು, ಅಧ್ಯಕ್ಷರಾದ ಹಾಶಿಂ ಬನ್ನೂರು, ಕಾರ್ಯದರ್ಶಿ ಅಮಿತಾ ಅಶೋಕ್ ಪ್ರಸಾದ್ ಸಂಸ್ಥೆಯ ಪ್ರಮುಖರಾದ ಮಂಜಪ್ಪ ಟಿ, ಸರಸ್ವತಿ ಎಲ್,ಕುಮಾರಿ ಪೂಜಾ ಸಿ.ಐ ಹಾಗೂ ಗಣ್ಯಮಾನ್ಯರು ಉಪಸ್ಥಿತರಿದ್ದರು.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *