ಅಥಣಿ ಇತಿಹಾಸ ಕುರುಹುಗಳು.

Spread the love

ಅಥಣಿ ಇತಿಹಾಸ ಕುರುಹುಗಳು.

ಅಥಣಿಯಲ್ಲಿ ಗಂಗಾನದಿಯ ಪರ್ಯಾಯ ಹೆಸರಾದ ಭಾಗೀರಥಿ ಹೆಸರಿನ ಹಳ್ಳವು ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತ ಮುಂದೆ ಪೂರ್ವದಿಂದ ಪಶ್ಚಿಮಕ್ಕೆ ಹರಿಯುತ್ತ ಹೋಗಿದೆ. ಕಾಶಿಯಲ್ಲಿ ಗಂಗಾನದಿ ಉತ್ತರಕ್ಕಷ್ಟೆ ಹರಿದರೆ ಇಲ್ಲಿ ಭಾಗೀರಥಿ ತೊರೆ ಉತ್ತರಕ್ಕೂ ಮತ್ತು ಪಶ್ಚಿಮಕ್ಕೂ ಹರಿದಿದೆ. ಇದರಿಂದ ಕಾಶಿಗಿಂತಲೂ ಅಧಿಕ ಪುಣ್ಯಸ್ಥಾನ ಹಾಗೂ ದಕ್ಷಿಣದ ಕಾಶಿ ಅಥಣಿ ಎಂತಲೂ ಹೆಸರು .! ಶ್ರೀ ಸಿದ್ದೇಶ್ವರ ದೇವಾಲಯ ಪೂರ್ವ ಕಾಲದಲ್ಲಿ ತಪಸ್ವಿಗಳೊಬ್ಬರಲ್ಲಿ ಈ ಸ್ಥಾನದ ಮಾಹಿತಿ ಅರಿತು ಎರಡೂ ದಿಕ್ಕಿಗೆ ತೊರೆ ಹರಿವ ಮಧ್ಯದ ಸ್ಥಳದಲ್ಲಿ ತಮ್ಮ ತಪಃಸ್ಥಾನವನ್ನಾಗಿರಿಸಿಕೊಂಡು ತಪಸ್ಸು ಆಚರಿಸಿದ್ದರು ಹಾಗೂ ಇಲ್ಲಿ ತಮ್ಮ ಆಶ್ರಮ ಕಟ್ಟಿಕೊಂಡು  ಇವರು ಸಿದ್ದೇಶ್ವರ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ( ಇವರ ಪೂರ್ವದಲ್ಲಿ ಅಥಣಿಯ ಕೆಲವು ದೇವಸ್ಥಾನ ಇದ್ದಿರಬಹುದು ಆ ದೇವಸ್ಥಾನ ಪ್ರಭಾವಕ್ಕೆ ಅಥಣಿ ಸ್ಥಳ ಆಯ್ಕೆಮಾಡಿಕೂಂಡಿರಬಹುದು  ಅಂದರೆ ಅಥಣಿ ಕೆಲವ ಪಂಚಲಿಂಗ ಅಥವಾ  ಲಿಂಗ ರೂಪ ಇರುವದರಿಂದ  ಮಹಾದೇವನಿಗೆ ಹೋಲಿಕೆ) ದೇವಸ್ಥಾನದ ಪ್ರಭಾವ ಮತ್ತು ದಿನನಿತ್ಯ ಪೂಜೆಯೂಂದಿಗೆ )   ಅದೇ ಸ್ಥಾನಗಳಲ್ಲಿ ತಪಸ್ವಿಗಳ ಕರ್ತೃಗದ್ದುಗೆ ಇದೆ. ಈ ಮಹಿಮರೆ  ಶ್ರೀ ಸಿದ್ದೇಶ್ವರ ದೇವಾಲಯ. ವಿಶೇಷವಾಗಿ ಗಂಗಾ ನದಿಯ ಅಷ್ಟೆ ಪವಿತ್ರವಾದ ಅಥಣಿಯ ಭಾಗೀರಥಿ ಹಳ್ಳದ ಸುತ್ತಮುತ್ತಲೂ ಪೂರ್ವದಿಕ್ಕಿಗೆ ಮುಖಮಾಡಿದ ಪ್ರವೇಶ ದ್ವಾರಗಳನ್ನು ಒಳಗೊಂಡ ಲಿಂಗರೂಪದಪಂಚ ದೇವಾಲಯಗಳು ಅದ್ಭುತವಾಗಿವೆ ಇದರ ಹಿಂದಿನ ಇತಿಹಾಸ ಚಾಲುಕ್ಯ ಕಾಲವಾಗಿರಬಹುದು.. ? ಸುಮಾರ ಐದು(5) ಲಿಂಗರೂಪದ ದೇವರ ದೇವಾಲಯಗಳ ಅಥವಾ ಲಿಂಗ ಇರುವಕಾರಣಕ್ಕೆ ಮಹಾದೇವ ದೇವಾಲಯಗಳು  ಮಹಾದೇವನಿಗೆ ಬೇರೆ ಬೇರೆ ಹೆಸರು ಹೂಂದಿದರಬಹುದು   ಅಥಣಿ ನಗರದ ಹಳ್ಳದ ಸುತ್ತಮುತ್ತಪ್ರದೇಶಗಳಲ್ಲಿ ಮಹಾದೇವ   ಸ್ವರೂಪದ ದೇವಾಲಯಗಳು ಇವೆ ಇದಕ್ಕೆ ಕಾರಣ ಇನ್ನೂ ಎಂಬ ನಮ್ಮ ಪ್ರಶ್ನೆ…?  ಅವುಗಳು ೧)ತ್ರಿಲೋಕೆಶ್ವರ.(ಸಿದ್ದೇಶ್ವರ ದೇವಾಲಯ ಮುಂದೆ).ಲಿಂಗ ಸ್ವರೂಪ. ೨) ವಿರೂಪಾಕ್ಷಶ್ವೇರ‌. ಅಥವಾ ವಿರೂಪಾಕ್ಷ ನಂದಗಾವ ಪೆಟ್ರೋಲ್ ಪಂಪ್ ಹಿಂದೆ).ಲಿಂಗ ಸ್ವರೂಪ.   ೩)ಅಮೃತೆಶ್ವರ. (ಕಾಯಿಪಲ್ಲೆ ಪೇಟೆ ಹತ್ತಿರ).ಲಿಂಗ ಸ್ವರೂಪ. ೪) ಮಹಾದೇಶ್ವರ.( KEB ಹಿಂದೆ). ಲಿಂಗ ಸ್ವರೂಪ. ೫) ರಾಮೇಶ್ವರ.( ಜತ್ತ ರಸ್ತೆ)ಇದು ಕೂಂಡ ಲಿಂಗ ಸ್ವರೂಪ..  ಮುಖ್ಯವಾಗಿ ಸ್ಥಳಿ ಜನರು ರೂಢಿಯಂತೆ ಇವುಗಳ ಮದ್ಯ” ಲಿಂಗ ನಾಮ ಸೇರಿಸಿ ಅಥವಾ ಶಿವಲಿಂಗಳು ಇರುವದರಿಂದ ಮಹಾದೇವನ ದೇವಾಲಯ ಎಂದು   ಕೆರಯುತ್ತಾರೆ ಎಂಬ  ಅನುಮಾನ.ಅಥವಾ ಪ್ರಶ್ನೆ…? So ದಯಮಾಡಿ ಇವುಗಳ ಸತ್ಯ ಸಂಶೋಧನೆ ಅತಿ ಅವಶ್ಯಕವಾಗಿದ್ದು ಇತಂಹ ಪ್ರಶ್ನೆಗಳಿಗೆ ಉತ್ತರ ಕೇವಲ ಪ್ರಾಚ್ಯ ಇಲಾಖೆ ಉತ್ಪನ್ನ ಮತ್ತು ಸಂಶೋಧನೆಯಿಂದ ಮಾತ್ರ ಸಾದ್ಯ ಎಂಬ ಅನುಮಾನ ನಮ್ಮ ಗೆಳೆಯರ ತಂಡದ ದಿಟ್ಟ ಪ್ರಶ್ನೆ & ಹೋರಾಟದ ದ್ವನಿ ಹಾಗೂ ಈ ಗೆಳೆಯರ ತಂಡದಲ್ಲಿ ನಾನು ಒಬ್ಬ ಸದಸ್ಯನಾಗಿರುವುದು ನನಗೆ ಹೆಮ್ಮೆ.. ಜೈ ಅಥಣಿ.

ವರದಿ-ಮಹೇಶ ಶರ್ಮಾ ಅಥಣಿ.

Leave a Reply

Your email address will not be published. Required fields are marked *