ವಿಜಯನಗರ ಜಿಲ್ಲೆ ಕೂಡ್ಲಿಗಿ:ಪಟ್ಟಣದ 15,16,17ನೇ ವಾರ್ಡ್ ನಲ್ಲಿ ಜು19ರಂದು, ಪಟ್ಟಣ ಪಂಚಾಯ್ತಿ ನೈರ್ಮಲ್ಯ ನಿರ್ವಹಣಾ ವಿಭಾಗದ ಪ್ರಮುಖ ಹೆಚ್.ಪರಶುರಾಮಪ್ಪ. ವಾರ್ಡಗಳ ಗಲ್ಲಿ ಗಲ್ಲಿಗಳಿಗೆ ತೆರಳಿ, ಸಾರ್ವಜನಿಕರಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳುವ ಕುರಿತು ಜಾಗ್ರತೆ ಮೂಡಿಸಿದರು. ಹಸಿ ಕಸ ಹೊಣ ಕಸ ಬೇರ್ಪಡಿಸಿ ಸಂಗ್ರಹಿಸಿಟ್ಟು ಕೊಳ್ಳಬೇಕು, ಕಸ ಕೊಂಡೊಯ್ಯುವ ಇಲಾಖೆಯ ವಾಹನ ಮನೆ ಬಾಗಿಲಿಗೆ ಬಂದಾಗ ಅದರಲ್ಲಿ ಹಾಕಬೇಕು ಎಂದು ಸಾರ್ವಜನಿಕರಿಗೆ ತಿಳಿಸಿದರು. ನಿಷೇಧಿತ ಪ್ಲಾಸ್ಟೀಕ್ ಬಳಕೆ ಮಾಡಬಾರದು, ಅಂತಹ ತ್ಯಾಜ್ಯ ಪ್ಲಾಸ್ಟಿಕನ್ನು ಚರಂಡಿಗಳಿಗೆ ಎಸೆಯಬಾರದು. ತ್ಯಾಜ್ಯಕಸ, ಆಹಾರದ ತ್ಯಾಜ್ಯ ಹಾಗೂ ಮಕ್ಕಳ ಮಲ ಹಸುವಿನ ಸಗಣಿ ಹಾಗೂ ಮೇವಿನ ತ್ಯಾಜ್ಯವನ್ನು, ಮನೆಯ ಬದಿಯ ಕಾಲುವೆಗಳಿಗೆ ಮನೆ ಮುಂದಿರುವ ಸಣ್ಣ ಸಣ್ಣ ಚರಂಡಿಗೆ ಎಸೆಯ ಬಾರದು. ಹಾಗೆ ಮಾಡುವುದರಿಂದ ನೀರು ಸರಾಗವಾಗಿ ಹರಿಯದೇ, ನಿಂತು ಕಸದೊಂದಿಗೆ ಕೊಳೆತು ವಾತಾವರಣವು ಗಬ್ಬೆದ್ದು ನಾರುತ್ತದೆ. ಅದರಿಂದ ನಾನಾ ತರಹದ ಕ್ರಿಮಿಕೀಟಗಳ ಭಾದೆಯುಂಟಾಗುತ್ತದೆ, ಪರಿಣಾಮ ಹಲವು ಗಂಭೀರ ಖಾಯಿಲೆಗಳು ರೋಗ ಋಜಿನಗಳಿಗೆ ತುತ್ತಾಗಬೇಕಾಗುತ್ತದೆ ಎಂದು ಜನರಲ್ಲಿ ಜಾಗ್ರತೆ ಮೂಡಿಸಿದರು. ಕಸ ವಿಲೇವಾರಿ ವಾಹನ ಪ್ರತಿ ವಾರ್ಡ್ ಗಳ ಪ್ರತಿ ಪ್ರಮುಖ ಗಲ್ಲಿ ಗಲ್ಲಿಗಳಿಗೆ, ಸಿಬ್ಬಂದಿಯೊಂದಿಗೆ ಸಂಚರಿಸುತ್ತದೆ ಅದರ ಸದುಪಯೋಗ ಪಡೆದು ಕೊಳ್ಳಬೇಕಿದೆ ಎಂದರು. ತಿಳಿದೂ ತಿಳಿದೂ ಕಸವನ್ನು ಮಕ್ಕಳ ಮಲವನ್ನು ಹಾಗೂ ದನಗಳ ಮತ್ತು ಆಹಾರ ತ್ಯಾಜ್ಯವನ್ನು ಕಾಲುವೆಗಳಿಗೆ ಹಾಕಿ ನಿಯಮ ಉಲ್ಲಂಘಿಸಿದ್ದಲ್ಲಿ, ಅಂತಹವರ ವಿರುದ್ಧ ಇಲಾಖೆಯ ಆರೋಗ್ಯಧಿಕಾರಿಗಳು ಅಗತ್ಯ ಶಿಸ್ಥು ಕ್ರಮ ಜರುಗಿಸಿ ದಂಢ ವಿಧಿಸಲಿದ್ದಾರೆ ಎಂದು ಎಚ್ಚರಿಸಿದರು. ಒಳಚರಂಡಿ ವ್ಯವಸ್ಥೆಯನ್ನು ಎಲ್ಲರೂ ಉಪಯೋಗಿಸಬೇಕು, ಒಳ ಚರಂಡಿ ಯೋಜನೆಯ ಪೈಪ್ ಸಂಪರ್ಕ ಹೊಂದದವರು. ಕಛೇರಿಯಲ್ಲಿರುವ ಆ ವಿಭಾಗಾಧಿಕಾರಿಗಳನ್ನು ಭೇಟಿಮಾಡಿ, ಒಳ ಚರಂಡಿಯ ಪೈಪ್ ಸಂಪರ್ಕ ಪಡೆದು, ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳಬೇಕಿದೆ. ಇದು ಎಲ್ಲರ ಹೊಣೆಯಾಗಿದ್ದು ಪ್ರತಿಯೊಬ್ಬರೂ ಪರಿಸರ ಜಾಗ್ರತೆಯನ್ನ ಹೊಂದಬೇಕಿದೆ, ಮತ್ತು ಎಲ್ಲಾ ನಾಗರೀಕರು ಪಪಂ ನೈರ್ಮಲ್ಯ ಸಿಬ್ಬಂದಿ ಜೊತೆ ಸಹಕರಿಸಬೇಕೆಂದು ಹೆಚ.ಪರಶುರಾಮಪ್ಪ ಕೋರಿದರು. ರೈತರು ಹಿರಿಯ ನಾಗರೀಕರು ಯುವಕರು ಮಹಿಳೆಯರು, ನೈರ್ಮಲ್ಯ ವಿಭಾಗದ ಕೆ.ಕೆ.ಹಟ್ಟಿ ನಾಗರಾಜ ಹಾಗೂ ಸ್ವಚ್ಚತಾ ಸಿಬ್ಬಂದಿ ಇದ್ದರು.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.