ತಾವರಗೇರಾ ಪಟ್ಟಣದ ಶ್ರೀ ಹಜರತ್ ಸೈಯದ ಶಾಮೀದ್ ಅಲಿ ದರ್ಗಾದ ಆಡಳಿತವನ್ನು ತಮ್ಮ ವ್ಯಾಪಿಗೆ ಹಸ್ತಾಂತರಿಸುವ ಬಗ್ಗೆ. ಉಲ್ಲೇಖ:- ಕರ್ನಾಟಕ ರಾಜ್ಯ ವಕ್ಷ ಮಂಡಳಿ, ಬೆಂಗಳೂರು ಇವರ ಆದೇಶ ಸಂಖ್ಯೆ.ಕೆಬಿಡಬ ಸಿಎಂಸಿ/79/ಕೊಪ್ಪಳ/2014-15 ದಿನಾಂಕ:21/03/2023. ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖದ್ವಾರ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಶ್ರೀ ಹಜರತ್ ಸೈಯದ ಶಾಮೀದ್ ಅಲಿ ದರ್ಗಾದ ಎಲ್ಲಾ ಕಾರ್ಯಕ್ರಮಗಳ ಆಡಳಿತವನ್ನು ಶ್ರೀ ತಾಜುದ್ದೀನ್, ಕಿರಿಯ ಇಂಜನೀಯರ ಲೋಕೋಪಯೋಗಿ ಇಲಾಖೆ ಕುಷ್ಟಗಿ ಇವರ ಬದಲಾಗಿ ಶ್ರೀ ಶ್ಯಾಮಣ್ಣ ತಂದೆ ಹುಲಗಪ್ಪ ನಾರಿನಾಳ ಸಹಾಯಕ ಇಂಜನೀಯರ ಲೋಕೋಪಯೋಗಿ ಇಲಾಖೆ ಕುಷ್ಟಗಿ ಇವರಿಗೆ ಹಸ್ತಾಂತರಿಸಿ ಆದೇಶಿಸಿರುತ್ತಾರೆ. ಪ್ರಸ್ತುತವಾಗಿ ಇಲ್ಲಿಯವರೆಗೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಶ್ರೀ ಹಜರತ್ ಸೈಯದ ಶಾಮೀದ್ ಅಲಿ ದರ್ಗಾದ ಎಲ್ಲಾ ಕಾರ್ಯಕ್ರಮಗಳು ತಹಶೀಲ್ದಾರರು ಕುಷ್ಟಗಿ ರವರ ಆಡಳಿತದಲ್ಲಿ ನಡೆಯುತ್ತಿದ್ದವು, ಸಧ್ಯ ಕರ್ನಾಟಕ ರಾಜ್ಯ ಪಕ್ಷ ಮಂಡಳಿ, ಬೆಂಗಳೂರು ಇವರ ಆದೇಶದಂತೆ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ಶ್ರೀ ಹಜರತ್ ಸೈಯದ ಶಾಮೀದ್ ಅಲಿ ದರ್ಗಾದ ಎಲ್ಲಾ ಕಾರ್ಯಕ್ರಮಗಳ ಆಡಳಿತವನ್ನು ಶ್ರೀ ಶ್ಯಾಮಣ್ಣ ತಂದೆ ಹುಲಗಪ್ಪ ನಾರಿನಾಳ ಸಹಾಯಕ ಇಂಜನೀಯರ ಕುಷ್ಟಗಿ ಇವರಿಗೆ ಹಸ್ತಾಂತರಿಸಿದ ಪ್ರಯುಕ್ತ ಉಲ್ಲೇಖಿತ ಪತ್ರದೊಂದಿಗೆ ಈ ಪತ್ರಕ್ಕೆ ಲಗತ್ತಿಸಿ ಕಾನೂನು ರಿತ್ಯಾ ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಕೋರಲಾಗಿರುತ್ತದೆ..
ಪ್ರತಿಯನ್ನು:
- ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕರ್ನಾಟಕ ರಾಜ್ಯ ವಕ್ಷ ಬೋರ್ಡ ಬೆಂಗಳೂರು ಇವರಿಗೆ ದಯಾಪರ ಮಾಹಿತಿಗಾಗಿ ಸಲ್ಲಿಸಲಾಗಿದೆ.
2.ಮಾನ್ಯ ಜಿಲ್ಲಾಧಿಕಾರಿಗಳು ಕೊಪ್ಪಳ ಇವರ ದಯಾಪರ ಅವಗಾಹನೆಗಾಗಿ ಸಲ್ಲಿಸಲಾಗಿದೆ.
3.ಮಾನ್ಯ ಉಪ ವಿಭಾಗಾಧಿಕಾರಿಗಳು ಕೊಪ್ಪಳ ಇವರ ದಯಾಪರ ಅವಗಾಹನೆಗಾಗಿ ಸಲ್ಲಿಸಲಾಗಿದೆ.
4.ಮಾನ್ಯ ಜಿಲ್ಲಾ ವಕ್ಷ ಅಧಿಕಾರಿಗಳು ಕೊಪ್ಪಳ ಇವರಿಗೆ ಮಾಹಿತಿ ಮತ್ತು ಅಗತ್ಯ ಕ್ರಮಕ್ಕಾಗಿ ಸಲ್ಲಿಸಲಾಗಿದೆ.
5.ಕಾರ್ಯದರ್ಶಿಗಳು ಶ್ರೀ ಹಜರತ್ ಸೈಯದ ಶಾಮೀದ್ ಅಲಿ ದರ್ಗಾ ಸಾಃತಾವರಗೇರಾ ಹಾಗೂ ಕಂದಾಯ ನೀರಿಕ್ಷಕರು ತಾವರಗೇರಾ ಇವರಿಗೆ ಅಗತ್ಯ ಕ್ರಮಕ್ಕಾಗಿ.
- ಶ್ರೀ ಹಜರತ್ ಸೈಯದ ಶಾಮೀದ್ ಅಲಿ ದರ್ಗಾದ ಮುಜರಾವ ಇವರಿಗೆ ಸೂಕ್ತ ಕ್ರಮಕ್ಕಾಗಿ,
- ಕಛೇರಿ ಪ್ರತಿಯನ್ನಾಗಿ ಸಲ್ಲಿಸಲಾಗಿದೆ.
- ವರದಿ-ಸಂಪಾದಕೀಯಾ