ಹನಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಹಣಕ್ಕಾಗಿ ಬೆದರಿಕೆ,
ಕರ್ಥವ್ಯಕ್ಕೆ ಅಡ್ಡಿ ಪ್ರಕರಣ ದಾಖಲು-ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹನಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಗೆ ಹಣಕ್ಕಾಗಿ ಬೆದರಿಕೆ ಹಾಕಿ, ಹಲ್ಲೆ ಯತ್ನ ಮಾಡಿದ್ದಾನೆಂದು ದೂರಲಾಗಿರುವ ಮಂಜುನಾಥನು, ತಾನು ಮಾನವಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷ, ಮಾಹಿತಿಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತನೆಂದು ಹೇಳಿದಾತನನ್ನು. ದೂರು ದಾರರ ಹೇಳಿಕೆಯಂತೆ ಕೂಡ್ಲಿಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆತನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ದೂರು:-ಹನಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಸ್ಪತ್ರೆಯಲ್ಲಿ ಡಾ:ಅರುಣ್ ಕುಮಾರ ಎನ್.ಎಸ್. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವಾಗ, ಹನಸಿ ಗ್ರಾಮದ ಈ ಮಂಜುನಾಥನು ಮೇ 16 ರಂದು ಆಸ್ಪತ್ರೆಯೊಳಗೆ ಅಕ್ರಮ ಪ್ರವೇಶ ಮಾಡಿ, ನಾನು ಮಾನವಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷ, ಪತ್ರಕರ್ತ, ಮಾಹಿತಿಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತನೆಂದು ವೈದ್ಯರಿಗೆ ನೀನು ಏನು ಕೆಲಸ ಮಾಡುತ್ತೀ, ನೀನು ಇಲ್ಲಿ ಕೆಲಸ ಮಾಡಬೇಕೆಂದರೆ, ನನಗೆ ಪ್ರತಿ ತಿಂಗಳು ಹಣಕೊಡಬೇಕು ಇಲ್ಲವೆಂದರೆ ಇಲ್ಲಿಂದ ಟ್ರಾನ್ಸ್‌ಫರ್ ಮಾಡಿಸಿಕೊಂಡು ಹೋಗಲೇ ಎಂದು ಅಲ್ಲದೆ ದುರ್ಬಾಷೆಗಳಿಂದ ಬೈದಿದ್ದಾನೆಂದು ದೂರಿನಲ್ಲಿ ಹೇಳಲಾಗಿದೆ. ವೈದ್ಯರು ಕೋವಿಡ್ 19 ಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ಬಂದ ರೋಗಿಗಳಿಗೆ ಪರೀಕ್ಷೆ ಮಾಡಿ ಚಿಕಿತ್ಸೆ ನೀಡುತ್ತಿದ್ದರೂ ಸಹ ಸಿ.ಎಂ. ಮಂಜುನಾಥನು ವೈದ್ಯರಿಗೆ ಕೆಲಸ ಮಾಡಲು ಬಿಡದೇ, ನೀನು ನನ್ನನ್ನು ನೋಡಿಕೊಳ್ಳಬೇಕು ಇಲ್ಲವೆಂದರೆ ನಾನು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷನಿದ್ದೇನೆಂದು ಹೇಳಿಕೆಕೊಂಡಿದ್ದಾನೆಂದು ಹೇಳಲಾಗಿದೆ, ಸರ್ಕಾರದ ಪ್ರಭಾವಿ ವ್ಯಕ್ತಿಗಳ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳ ಪರಿಚಯವಿದ್ದು 24 ಗಂಟೆಗಳಲ್ಲಿ ನಿನ್ನನ್ನು ಎಲ್ಲಿಗೆ ಬೇಕಾದರೂ ಟ್ರಾನ್ಸ್‌ಫರ್ ಮಾಡಿಸಿ. ಅಲ್ಲಿಯೂ, ನಿನಗೆ ತೊಂದರೆಕೊಟ್ಟು ಸಸ್ಪೆಂಡ್ ಮಾಡಿಸಿ ನೀವು ಎಲ್ಲಿಯೂ ಕೆಲಸ ಮಾಡದಂತೆ ಮಾಡಿಸಿಬಿಡುತ್ತೇನೆ ಅಂತಾ ಬೆದರಿಸಿದ್ದಾನೆಂದು ದೂರಲಾಗಿದೆ, ಹಲ್ಲೆ ಮಾಡಿ ಕಛೇರಿಯ ಟೇಬಲ್ ಮೇಲೆ ಗುದ್ದಿ ಟೇಬಲ್ ಗ್ಲಾಸ್ ಒಡೆದು ಮತ್ತು ಕಛೇರಿಯ ಕಂಪ್ಯೂಟರ್ ಉಪಕರಣವನ್ನು ಒಡೆದು ಹಾಳು ಮಾಡಿದ್ದಾನೆಂದು , ವೈದ್ಯಾಧಿಕಾರಿಗಳ ಮೇಲೆ ಹಲ್ಲೆ ಯತ್ನ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆಂದು ದೂರಿಲಾಗಿದೆ. ಅನ್ವಯ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ಹನಸಿ ಮಂಜುನಾಥಸ್ವಾಮಿಯನ್ನ ಬಂಧಿಸಿದ್ದಾರೆ.
ವರದಿ – ಚಲುವಾದಿ ಅಣ್ಣಪ್ಪ