ಗೃಹ ಲಕ್ಷ್ಮೀ ಯೋಜನೆ ಜಾರಿ: ನರಸಿಂಹ ಗಿರಿ ಗ್ರಾಮಸ್ಥರಿಂದ, ಸರ್ಕಾರಕ್ಕೆ-ಶಾಸಕರಿಗೆ ಅಭಿನಂದನೆ ಸಲ್ಲಿಕೆ.

Spread the love

ವಿಜಯನಗರ  ಜಿಲ್ಲೆ ಕೂಡ್ಲಿಗಿ: ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಜಾರಿತರುವುದಾಗಿ, ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಅಂತೆಯೇ ಹಂತ ಹಂತವಾಗಿ ಯೋಜನೆಗಳನ್ನು, ಜಾರಿ ತರುವ ಮೂಲಕ ಕಾಂಗ್ರೇಸ್ ಸರ್ಕಾರ ಜನಪರ ಕಾಳಜಿ ತೋರುತ್ತಿದೆಗ್ಯಾರಂಟಿ ಯೋಜನೆಗಳಾದ 1)ಶಕ್ತಿ ಯೋಜನೆ.

2)ಅನ್ನ ಭಾಗ್ಯ ಯೋಜನೆ. 3)ಗೃಹ ಜ್ಯೋತಿ ಯೋಜನೆ. 4) ಗೃಹಲಕ್ಷ್ಮೀ.5)ಯುವ ಶಕ್ತಿ ಯೋಜನೆ.

ಕಾಂಗ್ರೆಸ್ ಪಕ್ಷ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳ ಪೈಕಿ, ಮನೆಯ ಯಜಮಾನಿಗೆ ಮಾಸಿಕ 2 ಸಾವಿರ ರೂ ನೀಡುವಗೃಹ ಲಕ್ಷ್ಮೀಯೋಚನೆಗೆ  ಇಂದು ರಾಜ್ಯಾದ್ಯಂತ ಚಾಲನೆ ದೊರಕಿದೆ.

ಕ್ಷೇತ್ರದ ಶಾಸಕರಾದ ಡಾll ಶ್ರೀನಿವಾಸ್ ಎನ್.ಟಿ ರವರು, ಕಳೆದ ತಮ್ಮ ಚುನಾವಣಾ ಪ್ರಚಾರದ ವೇಳೆ. ಸ್ವಗ್ರಾಮ ನರಸಿಂಹನಗಿರಿಯಲ್ಲಿ ಮಹಿಳೆಯರಿಗೆ ಕಾರ್ಯಕರ್ತರಿಗೆ, ಅಧಿಕಾರಕ್ಕೆ ಕಾಂಗ್ರೇಸ್ ಪಕ್ಷ ಬಂದಲ್ಲಿ, ಜಾರಿ ತರಬಹುದಾದ ಗ್ಯಾರಂಟಿ ಯೋಜನೆಗಳ ಬಗ್ಗೆ. ಗ್ರಾಮದ ಸಮಸ್ತ ಜನತೆಗೆ ವಿವರಿಸಿ, ಯೋಜನೆಗಳ ಕುರಿತು ವಿವರವಾಗಿ ತಿಳಿ ಹೇಳಿ ಮತ ಹಾಕುವಂತೆ ಮತದಾರರಲ್ಲಿ ಮತ ಕೋರಿ ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದರು. ಅದರಂತೆ ಅವರೂ ಭಾರೀ ಬಹುಬತದಿಂದ ಗೆಲುವು ಸಾಧಿಸಿದರು, ಮತ್ತು ಸುದೈವಕ್ಕೆ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಕೊಟ್ಟ ಮಾತಿನಂತೆ ಕಾಂಗ್ರೇಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು, ಜನತೆಗಾಗಿ ಜಾರಿಗೆ ತಂದು ಜನಪರ ಕಾಳಜಿ ತೋರಿದೆ. ಸರ್ಕಾರ ನೀಡುವ ಗ್ಯಾರಂಟಿ ಯೋಜನೆಗಳುಹಿಂದುಳಿದ ಪಟ್ಟೊಯಲ್ಲಿರುವ ಕೂಡ್ಲಿಗಿ ಕ್ಷೇತ್ರದ ಜನತೆಗೆಆರ್ಥಿಕ ಸ್ವಾವಲಂಬನೆಗೆ ನೆರವಾಗಲಿವೆ. ಇಂತಹ ಜನಪರ ಯೋಜನೆ ಜಾರಿತಂದಿರುವುದಕ್ಕಾಗಿ, ಗ್ಯಾರಂಟಿ ಯೋಜನೆಗಳಿಗೆ ಚಾಲನೆ ನೀಡಿದ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ. ಹಾಗೂ  ಉಪಮುಖ್ಯಮಂತ್ರಿಗಳಾದ, ಡಿ ಕೆ ಶಿವಕುಮಾರ್ ರವರಿಗೆ. ಕ್ಷೇತ್ರದ ಶಾಸಕರಾದ ಡಾಎನ್.ಟಿ.ಶ್ರೀನಿವಾಸ್ ರವರಿಗೆ, ಮತ್ತು   ಕಾಂಗ್ರೇಸ್ ಪಕ್ಷದ ನೇತೃತ್ವದ ಸರ್ಕಾರಕ್ಕೆ. ಕೂಡ್ಲಿಗಿ ತಾಲೂಕಿನ ಸಮಸ್ತ ಜನತೆ, ಹಾಗೂ ಕಾಂಗ್ರೇಸ್ ಪಕ್ಷದ ಸಮಸ್ತ ಕಾರ್ಯಕರ್ತರು ಮೂಲಕ ಅಭಿನಂದಿಸಿದ್ದಾರೆಶಾಸಕರ ಸ್ವಂತ ಊರಾದ ಕೂಡ್ಲಿಗಿ ತಾಲೂಕಿನ ನರಸಿಂಹ ಗಿರಿಯಲ್ಲಿ ಸಮಸ್ತ ಗ್ರಾಮಸ್ಥರು, ಗೃಹ ಲಕ್ಷ್ಮೀ ಯೋಜನೆಗೆ ಸೌಲಭ್ಯ ಪಡೆದುಕೊಂಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಪಲಾನುಭವಿಗಳು ಸಾಮೂಹಿಕವಾಗಿ ತಮ್ಮ ತಮ್ಮ ಪ್ರತಿಯನ್ನು ಪ್ರದರ್ಶಿಸಿ, ಸರ್ಕಾರಕ್ಕೆ ಹಾಗೂ ಕ್ಷೇತ್ರದ ಶಾಸಕರಾದ ಡಾಎನ್ .ಟಿ.ಶ್ರೀನಿವಾಸ್ ರವರಿಗೆ. ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿಜಯ ಘೋಷಗಳನ್ನು ಕೂಗಿ ತಮ್ಮ ಸಂತಸ ಹಂಚಿ ಕೊಂಡಿದ್ದಾರೆ.

ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.

Leave a Reply

Your email address will not be published. Required fields are marked *