ಬೆಂಗಳೂರು: ಜು 19, ರಾಜಭವನದಲ್ಲಿ “ಸಲಾಂ ಸೊಲ್ಜರ್ಸ್” ಶೀರ್ಷಿಕೆಯಡಿಯಲ್ಲಿ ಯುವಕರು ಸೇನೆ ಸೇರುವ ಕುರಿತು ಕಾಶ್ಮೀರದ ಕಾರ್ಗಿಲ್ ನಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿಯ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಹಮ್ಮಿಕೊಂಡಿರುವ ಜಾಗೃತಿ ಮ್ಯಾರಥಾನ್ ಓಟದ ಭಿತ್ತಿಪತ್ರವನ್ನು ಕರ್ನಾಟಕ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಡಾ.ಥಾವರ್ ಚಂದ್ ಗೆಹಲೋಟ್ ರವರು ಬಿಡುಗಡೆ ಮಾಡಿ ಶುಭ ಹಾರೈಸಿದರು!
ಆಗಸ್ಟ್ 15 ರಂದು ದೇಶದ 77ನೇ ಸ್ವಾತಂತ್ರ್ಯ ದಿನಾಚರಣೆ ಮತ್ತು 24ನೇ ಕಾರ್ಗಿಲ್ ವಿಜಯ ದಿವಸ ಅಂಗವಾಗಿ ಕಾರ್ಗಿಲ್ ಯುದ್ಧದಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ವೀರಯೋಧರಿಗೆ ಗೌರವ ನಮನಗಳನ್ನ ಸಲ್ಲಿಸಲು ಕಾಶ್ಮೀರದ ಕಾರ್ಗಿಲ್ ನಲ್ಲಿ “ಸಲಾಂ ಸೊಲ್ಜರ್ಸ್” ಶೀರ್ಷಿಕೆಯಡಿಯಲ್ಲಿ “ಯುವಕರೇ ದೇಶ ಸೇವೆಗೆ ಒಂದಾಗಿ, ಸೇನೆ ಸೇರಲು ಮುಂದಾಗಿ” ಎನ್ನುವ ವ್ಯಾಕ್ಯದಡಿಯಲ್ಲಿ ಯುವಕರು ದೇಶ ಸೇವೆಗೆ ಭಾರತೀಯ ಸೇನೆ ಸೇರುವ ಕುರಿತು ಜಾಗೃತಿ ಮೂಡಿಸಲು ಕಾಶ್ಮೀರದ ಕಾರ್ಗಿಲ್ ನಗರದಿಂದ ಕಾರ್ಗಿಲ್ ಯುದ್ದ ಸ್ಮಾರಕದವರೆಗೂ ತಡೆರಹಿತವಾಗಿ 5 ಗಂಟೆಗಳ ಕಾಲ ರಾಷ್ಟ್ರಧ್ವಜ ಹಿಡಿದು ಓಡುವ ಮ್ಯಾರಥಾನ್ ಓಟದ ಕಾರ್ಯಕ್ರಮದ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಿ ಕರ್ನಾಟಕದ ವ್ಯಕ್ತಿಯೊಬ್ಬ ರಾಷ್ಟ್ರಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿರುವುದು ಪ್ರಶಂಸನೀಯವೆಂದರು, ಇದೆ ಸಂಧರ್ಭದಲ್ಲಿ ಮಾತನಾಡಿದ ಜಾಗೃತಿ ಓಟಗಾರ ಹಾಗೂ ಹೈ ಕೋರ್ಟ್ ಸಿಜಿಸಿ ಮೋಹನ್ ಕುಮಾರ್ ದಾನಪ್ಪನವರು “ಯುವ ಸಮೂಹ ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚಿನ ಸಮಯ ಕಳೆಯುವುದರಿಂದ ಮತ್ತು ಸಾಮಾಜಿಕ ಜಾಲತಾಣದ ಮೂಲಕ ಹಣ ಗಳಿಸುವ ಪ್ರವೃತ್ತಿಗೆ ಬಿದ್ದು ಹಾಗೂ ಸೇನೆಯ ನೇಮಕದ ಬಗ್ಗೆ ಮತ್ತು ಸೇನೆಯ ಬಗ್ಗೆ ಮಾಹಿತಿ ಪಡೆಯದೆ ವಯಸ್ಸನ್ನ ಕಳೆದುಕೊಳ್ಳುತ್ತಿರುವುದರಿಂದ ಸೇನೆ,ಸಶಸ್ತ್ರ ಪಡೆ ಸೇರಲು ಯುವಜನರಲ್ಲಿ ಪ್ರೇರೇಪಿಸುವ ಅಗತ್ಯವಿದೆ, ಸೇನೆಗೆ ಸೇರುವುದು ಪ್ರತಿಯೊಬ್ಬರ ಆದ್ಯತೆಯ ವೃತ್ತಿ ಆಯ್ಕೆಯಾಗಬೇಕಿದೆ, ಆ ಕುರಿತು ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಹಾಗಾಗಿ ಯುವ ಸಮೂಹವನ್ನ ಎಚ್ಚರಿಸುವ ಒಂದು ಪ್ರಯತ್ನವನ್ನ ಕೈಗೊಂಡಿ ರುವುದಾಗಿ ತಿಳಿಸಿದರು!
ವರದಿ-✍️ ಮಹೇಶ ಶರ್ಮಾಶ ಅಥಣಿ.