ತಾವರಗೇರಾ ಪೊಲೀಸ್ ಠಾಣೆಯಲ್ಲಿ ಮೊಹರಂ ಹಬ್ಬದ ಶಾಂತಿ ಸಭೆ ಯಶಸ್ವಿ.

Spread the love

ಕೊಪ್ಪಳ ಜಿಲ್ಲೆಯಲ್ಲಿಯೆ ಹೆಸರುವಾಸಿಯಾಗಿ ಅಚ್ಚಳಿಯದೆ ಉಳಿದಿರುವ ತಾವರಗೇರಾ ಪಟ್ಟಣದ ಶ್ರೀ ಶ್ಯಾಮೀದಲಿ ದರ್ಗಾದ ಮೊಹರಂ ಹಬ್ಬವು ಒಂದು. ಇಲ್ಲಿ ಸರ್ವ ಧರ್ಮಿಯರು ಹೊಳಗೊಂಡು ವಿಜೃಂಭಣೆಯಿಂದ  ಈ ಹಬ್ಬವನ್ನು ಆಚರಿಸುತ್ತಾರೆ. ಮುದಗಲ್ ದೇವರು ನೋಡ, ತಾವರಗೇರಾ ಅಲೈಯಿ ಕುಣಿತ ನೋಡ ಎಂಬ ನಾಡು ನುಡಿಯಂತೆ ಲಿಪಿತವಾಗಿದೆ. ಹಾಗಾಗಿ ಪ್ರತಿ ವರ್ಷ ನಡೆಯುವ ಈ ಮೊಹರಂ ಹಬ್ಬವನ್ನು ಈ ವರ್ಷವು ಸಹ ಶಾಂತತೆಯಿಂದ ಜರುಗಲಿ ಎಂದು ಸರ್ಕಾರದ ನಿಯಮಗಳ ಅನುಸಾರವಾಗಿ ಇಂದು ತಾಲೂಕ ಆಡಳಿತದಿಂದ ತಾವರಗೇರಾ ಪಟ್ಟಣದ ಪೊಲೀಸ್ ಠಾಣೆಯ ಅವರಣಾದಲ್ಲಿ ಮುಸಂಜೆ ವೇಳೆಯಲ್ಲಿ ಸಾರ್ವಜನಿಕರೊಂದಿಗೆ ಶಾಂತಿ ಸಭೆ ಜರುಗಿತು. ಈ ಸಂದರ್ಭದಲ್ಲಿ ತಾವರಗೇರಾ ಪಟ್ಟಣದ ಹಿರಿಯ ಮುಖಂಡರು ಹಾಗೂ ಸರ್ವ ಸಂಘ ಸಂಸ್ಥೆಯ ಪದಾಧಿಕಾರಿಗಳು ಈ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಪಾಲುಗೊಂಡಿದ್ದರು. ಮೊಹರಂ ಹಬ್ಬದ ಶಾಂತಿಯತೆಯನ್ನು ಪ್ರತಿಯೊಬ್ಬರು ಕಾಪಡಬೇಕು ಎಂದು ಮಾನ್ಯ ಸಿಪಿಐ ನಿಂಗಪ್ಪ ಎನ್.ಆರ್ ರವರು ಊರಿನ ಸಾರ್ವಜನಿಕರಲ್ಲಿ ಮನವಿ ಮಾಡಿಕೊಳ್ಳುವುದರ ಜೊತೆಗೆ ಊರಿನ ಮುಖಂಡರಿಗೂ ಹಾಗೂ ತಾಲೂಕ ಆಡಳಿತ ಅಧಿಕಾರಿಗಳಿಗೆ ಸ್ವಾಗತಿಸಿದರು. ಸಾರ್ವಜನಿಕರ ಪರವಾಗಿ ಮೊಹರಂ ಹಬ್ಬದ ಪ್ರಯುಕ್ತವಾಗಿ ಮೊದಲಿನಿಂದ ಹೇಗೆ ಶಾಂತರೀತಿಯಲ್ಲಿ ನಡೆಯುತ್ತಿತ್ತು. ಈ ಹಬ್ಬವನ್ನು ಪುನಹ ಶಾಂತತೆಯಿಂದ ಜರುಗಲಿಯಂದು ಕೆಲವರು ಅಧಿಕಾರಿಗಳ ಜೊತೆಗೆ ಚರ್ಚಿಸಿದರು. ಮಾನ್ಯ ಡಿ.ಎಸ್.ಪಿ. ಸಾಹೇಬರುಗಳಾದ ಆರ್.ಎಸ್.ಉಜ್ಜನಕೊಪ್ಪರವರು ಈ ಮೊಹರಂ ಹಬ್ಬದ ಕುರಿತಾಗಿ ಸ್ವ-ವಿಸ್ತಾರವಾಗಿ ವಿವರಣೆ ನೀಡುವುದರ ಜೊತೆಗೆ  ಪ್ರತಿಯೊಂದಕ್ಕೂ ಕಾನೂನು ಇದೆ, ಯಾರು ಸಹ ಕಾನೂನು ಮೀರಿ ಹೋಗಬೇಡಿ, ಆಸ್ತಿ ಒಂದು ಸರ್ಕಾರದ ಒಂದು ಭಾಗವಾಗಿದೆ, ಹಾಗಾಗಿ ಯಾರು ಸಹ ಗೊಂದಲಕ್ಕೆ ಹಿಡಾಗಬೇಡಿ. ಕಾನೂನಿನ ರೀತಿಯಲ್ಲಿ ಕೋರ್ಟ ಇದೆ. ನೀವು ಹೇಳಿದ ರೀತಿಯಲ್ಲಿ ಆ ಆಸ್ತಿಗೆ ಸಂಬಂದಿಸಿದಂತೆ ಮೂಲ ದಾಖಲಾತಿಗಳು ಇದ್ದರೆ ನೀವು ಕೋರ್ಟ ಮೋರೆ ಹೋಗಬಹುದು. ಆದರೆ ಈ ಮೊಹರಂ ಹಬ್ಬದಲ್ಲಿ ಜಾತಿ ಗಲಭೆ ಆಗದಂತೆ ಸಾರ್ವಜನಿಕರು ಎಲ್ಲಾರೂ ಸೇರಿ ಸಂತೋಷದಿದ ಹಬ್ಬ ಆಚರಿಸೋಣ ಎಂದರು. ಮನುಷ್ಯನ ಭಾವನೆ ಹಾಗೂ ಮನುಷ್ಯನ ವಿಚಾರಗಳು ನೂರಾರು ಹಾಗಾಗಿ ಕಾನೂನಿಗೆ ಸರ್ವರು ತಲೆಭಾಗಬೇಕು. ಪ್ರತಿಯೊಬ್ಬರು ಈ ಮೊಹರಂ ಹಬ್ಬದ ಶಾಂತಿ ಸಭೆಯು ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ಊರಿನ ಮುಖಂಡರು ತಿಳಿ ಹೇಳುವುದರ ಜೊತೆಗೆ ಆ ಸ್ಥಳದಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಭಕ್ತಾಧಿಗಳಿಗೆ ವಿಶ್ರಾಂತಿ ತಗೇದುಕೊಳ್ಳಲು ಹಾಗೂ ದೂರಿನಿಂದ ಬಂದಂತ ಭಕ್ತಾಧಿಗಳಿಗೆ ವಸತಿಗಳ ವ್ಯವಸ್ತೆಯಾಗಲಿ, ಇದರ ಜೊತೆಗೆ ಪ್ರತಿ ವರ್ಷ ನಡೆಯುವ ಉರುಸಿನ ಸಂದರ್ಭದಲ್ಲಿ ಅಂದರೆ ಖಾವಲಿಯಲ್ಲಿ ಸಾರ್ವಜನಿಕರಿಗೆ ಕುಳಿತುಕೊಂಡು ಕೇಳುವಹಾಗೆ ಭಕ್ತಾಧಿಗಳಿಗೆ ಆಸನಗಳಾಗಲಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿಕೊಂಡರು. ಮಾನ್ಯ ವಕ್ಫ ಅಧಿಕಾರಿಗಳಾದ ರೇಹೆಮತ್ ರವರು ವಕ್ಫ ಭೋರ್ಡ ಅಂದರೆ ಸರ್ಕಾರ, ಸರ್ಕಾರ ಅಂದರೆ ವಕ್ಫ ಬೋರ್ಡ ಜೊತೆಗೆ ದರ್ಗಾದ ಪ್ರತಿಯೊಂದು ಜವಾಬ್ದಾರಿಯನ್ನು ಮಾನ್ಯ ತಹಶೀಲ್ದಾರವರಿಗೆ ಒಪ್ಪಿಸಲಾಗಿದೆ ಬೇರೆಯಾವುದಾದರು ವಿಚಾರಗಳು ಇದ್ದಲ್ಲಿ ಮಾನ್ಯ ತಹಶೀಲ್ದಾರರಲ್ಲಿ ಬಂದು ಹೇಳಿಕೊಳ್ಳಿ ಎಂದರು. ಯಾವುದೇರಿತಿಯಿಂದ ಭಾವೈಕತೆಗೆ ಧಕ್ಕೆ ಭಾರದಂತೆ ಪ್ರತಿಯೊಬ್ಬರ ನೋಡಿಕೊಳ್ಳಬೇಕು. ಜೊತೆಗೆ ಈ ಹಿಂದೆ ಸಲ್ಲಿಸಿದ ಅರ್ಜಿಗಳ ಬಗ್ಗೆ ಸ್ವ-ವಿಸ್ತಾರವಾಗಿ ವಿವರಣೆ ನೀಡುವುದರ ಜೊತೆಗೆ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು. ಇದರ ಜೊತೆಗೆ ಸಾರ್ವಜನಿಕರ ಬೇಡಿಕೆಯಂತೆ ದರ್ಗಾದಲ್ಲಿ ಯಾವುದೆ ರೀತಿಯಿಂದ ಮಾಜೀದ ಕಟ್ಟುವ ವ್ಯವಸ್ಥೆ ಮಾಡುವುದಿಲ್ಲ ಎಂದು ವಕ್ಫ ಅಧಿಕಾರಿಗಳು ಹಾಗೂ ಮುಸ್ಲಿಂ ಸಮಾಜದ ಹಿರಿಯರು ಒಪ್ಪಿಕೊಂಡರು.  ಈ ಸಭೆಯಲ್ಲಿ ಊರಿನ ಹಿರಿಯ ಮುಖಂಡರು ಹಾಗೂ ಸರ್ವ ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತು ಮಾನ್ಯ ತಹಶಿಲ್ದಾರರಾದ ಮುರುಳಿಧರ ರಾವ್ ಸಾಹೇಬರು ಮತ್ತು ನಾಡ ಕಚೇರಿಯ ಸರ್ವ ಸಿಬ್ಬಂದಿ ವರ್ಗದವರು ಜೊತೆಗೆ ಮಾನ್ಯ ಡಿ.ವೈ.ಎಸ್.ಪಿ.ಗಳಾದ ಆರ್.ಎಸ್.ಉಜ್ಜನಕೊಪ್ಪ ಹಾಗೂ ಸಿಪಿಐ ಸಾಹೇಬರಾದ ಶ್ರೀ ನಿಂಗಪ್ಪ ಎನ್ ಆರ್ ರವರು ಮತ್ತು ತಾವರಗೇರಾ ಪಟ್ಟಣ ಪಿಎಸ್ಐಗಳಾದ ಪುಂಡಪ್ಪ ಸಾಹೇಬರು ಪಾಲುಗೊಂಡಿದ್ದರು.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *