ದಿನಾಂಕ:22.07.2023 ಶನಿವಾರ ಸಂಜೆ 07.30 ಗಂಟೆಯಿಂದ ಆನ್ಲೈನ್ ಗೂಗಲ್ ಮೀಟ್ ನಲ್ಲಿ ವಾಯ್ಸ್ ಆಫ್ ಬಂಜಾರ ಗಾಯನ ಗೋಷ್ಠಿ ನಡೆಯಿತು.
66 ನೇ ವಾರದ ವಾಯ್ಸ್ ಆಫ್ ಬಂಜಾರ ಗಾಯನ ಗೋಷ್ಠಿಯ ಆಹ್ವಾನಿತರಾಗಿ ಡಾ. ಕಠಾರಿ ನಾಯ್ಕ್, ಶ್ರೀ ಬಾಲು ಆರ್ ಚವ್ಹಾಣ್ ಭಾಗವಹಿಸಿದ್ದರು. ಉದಯೋನ್ಮುಖ ಗಾಯಕರ ಗಾಯನ ಆಲಿಸಿ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದರು. ನಿರ್ಣಾಯಕರಾಗಿ ಬಂಜಾರ ಹಿರಿಯ ಗಾಯಕರು ಲೇಖಕರು ಆದ ಕಲಾಶ್ರೀ ವಸಂತ ಎಲ್ ಚವ್ಹಾಣ್ ಮತ್ತು ಶ್ರೀನಿವಾಸ್ ನಾಯ್ಕ್ ಸಂಗೀತ ನಿರ್ದೇಶಕ ಮತ್ತು ಜೀವ ಪಿ.ಎಸ್. ಗಾಯಕರು ಹಾಜರಿದ್ದರು . ವಾಯ್ಸ್ ಆಫ್ ಬಂಜಾರದ ಸಂಚಾಲಕರಾದ ಶ್ರೀ ಗೋಪಾಲ್ ನಾಯಕ್ ನಿರೂಪಣೆ ಮತ್ತು ನಿರ್ವಹಣೆ ಮಾಡಿದರು. ವಾಯ್ಸ್ ಆಫ್ ಬಂಜಾರದ ಸಂಸ್ಥಾಪಕರು ಮತ್ತು ಸಂಚಾಲಕರು ಶ್ರೀ ರಾಮು ಎನ್ ರಾಠೋಡ್ ಮಸ್ಕಿ ಉಪಸ್ಥಿತರಿದ್ದರು. ಶಾರದಾ ಬಾಯಿ, ಶಿಲ್ಪಾ ಆರ್ ಬಾಯಿ, ಪುಂಡಲೀಕ್ ಲಮಾಣಿ, ರವಿರಾಜ್ ದೊಡ್ಡಮನಿ, ರವಿಚಂದ್ರ ನಾಯ್ಕ್, ಪ್ರಕಾಶ್ ಜಾಧವ್, ಬಸವರಾಜ್ ಲಮಾಣಿ, ಕುಮಾರ ನಾಯ್ಕ್, ನೀಲಪ್ಪ ಎನ್ ರಾಠೋಡ್, ಕವಿತಾ ಎಸ್ ನಾಯ್ಕ್, ಬಾಬು ಜಾಧವ್, ಇಂದುಮತಿ ಚವ್ಹಾಣ್, ಮಲ್ಲೇಶ್ ನಾಯ್ಕ್, ಮಾರುತಿ ರಾಠೋಡ್, ರಾಜು ಡಿ ನಾಯ್ಕ್, ಪ್ರೇಮಾ ಚವ್ಹಾಣ್, ಗೋವಿಂದರಾಜು ಡಿ ಎಂ, ಹನಮಂತು ಚವ್ಹಾಣ್, ರವಿ ಲಂಬಾಣಿ, ದೇವಸಿಂಗ್ ರಾಠೋಡ್, ಗೋಪಾಲ ಚವ್ಹಾಣ್, ಶಿವಾ ನಾಯ್ಕ್, ದಿನೇಶ್ ಆರ್ ರಾಠೋಡ್, ಪರಶುರಾಮ್ ಚವ್ಹಾಣ್, ಲಕ್ಷ್ಮೀ ರಾಠೋಡ್, ಅನಿತಾ ರಾಠೋಡ್, ಮಾರುತಿ ತುಳಸಿಮನಿ, ಸಿಂಧು ಚವ್ಹಾಣ್, ಚಂದ್ರಕಲಾ ಬಾಯಿ ಮುಂತಾದ ಬಂಜಾರ ಹಿರಿಯ ಗಾಯಕರು ಮತ್ತು ಉದಯೋನ್ಮುಖ ಗಾಯಕರು, ಬರಹಗಾರರು ಭಾಗವಹಿಸಿ ಬಂಜಾರ ಜಾನಪದ ಭಾವಗೀತೆ ಭಜನೆ ಮತ್ತು ಸಂಸ್ಕೃತಿ ಸಂಪ್ರದಾಯ ಇತಿಹಾಸ ಕುರಿತು ಹಾಡುಗಳನ್ನು ಹಾಡಿದರು, ಕಾರ್ಯಕ್ರಮಕ್ಕೆ ಮೆರುಗು ಕೂಡ ತಂದರು.
ವರದಿ-ಸಂಪಾದಕೀಯಾ