ದಲಿತ ಹಕ್ಕುಗಳ ಸಮಿತಿಯ ಅಖಂಡ ಬಳ್ಳಾರಿ ಜಿಲ್ಲಾ ಘಟಕದಿಂದ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲಾ ಸಮಿತಿಗಳಿಂದ ಬಳ್ಳಾರಿಯ ಸಿಐಟಿಯು ಸಭಾಂಗಣದಲ್ಲಿ. ರಾಜ್ಯ ಹಿರಿಯ ಮುಖಂಡರಾದ ವಿ.ಎಸ್.ಶಿವಶಂಕರ ರವರ ಅಧ್ಯಕ್ಷತೆಯಲ್ಲಿ. ಡಿ.ಹೆಚ್.ಎಸ್ ರಾಜ್ಯ ಜಿಲ್ಲೆ ತಾಲೂಕು ಸಮಾವೇಶಗಳನ್ನು, ಆಯೋಜಿಸುವ ಕುರಿತು ಪೂರ್ವ ಭಾವಿ ಸಭೆ ನಡೆಸಲಾಗಿದೆ. ಸಂಘಟನೆಯ ರಾಜ್ಯ ಹಾಗೂ ವಿವಿದ ಜಿಲ್ಲೆ, ವಿವಿದ ತಾಲೂಕು ಪ್ರಮುಖರನ್ನೊಳಗೊಂಡ ಸಭೆಯಲ್ಲಿ ಭಾಗವಹಿಸಿದ್ದರು. ಈ ಕುರಿತು ಬಳ್ಳಾರಿ ಜಿಲ್ಲೆ ಹಾಗೂ ವಿಜಯನಗರ ಜಿಲ್ಲೆಗಳ ಸಂಘಟನಾ ಸಂಚಾಲಕರಾದ, ಎಂ.ಜಂಬಯ್ಯನಾಯಕರವರು ಮಾಹಿತಿ ನೀಡಿದ್ದಾರೆ. ಸಭೆಯ ಪ್ರಾತಂಭದಲ್ಲಿ ರಾಜ್ಯ ಸಮಿತಿಯ ಸಹ ಸಂಚಾಲಕರಾದ ಯು.ಬಸವರಾಜ ಮಾತನಾಡಿ, ಕರ್ನಾಟಕದಲ್ಲಿನ ಪ್ರಸ್ಥುತ ರಾಜಕೀಯ ಪರಿಸ್ಥಿತಿ ಮತ್ತು ಸಂಘಟನೆಯ ಸ್ಥಿತಿ ಗತಿಗಳ ಕುರಿತು ಮಾತನಾಡಿದರು. ಹಾಗೆಯೇ ದಲಿತರ ಸ್ಥಿತಿಗತಿಯ ಹಿನ್ನೆಲೆಯಲ್ಲಿ ದಲಿತ ಹಕ್ಕುಗಳ ಸಮಿತಿಯ, ಚಾರಿತ್ರಿಕ ಮಹತ್ವ ಮತ್ತು ನಿರ್ವಹಿಸಬೇಕಾದ ಜವಾಬ್ದಾರಿಯ ಕುರಿತು ಮಾರ್ಗದರ್ಶನ ಮಾಡಿದರು. ನಂತರ ಸಭೆಯ ಅಜೆಂಡಾಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ, ಕೆಲ ಮಹತ್ವದ ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಅಕ್ಟೋಬರ1ಮತ್ತು2 ರಂದು, ಡಿ.ಹೆಚ್.ಎಸ್ ರಾಜ್ಯ ಸಮಾವೇಶ ನಡೆಸಲು ತೀರ್ಮಾನಿಸಲಾಯಿತು. ಈ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನ ಬಳ್ಳಾರಿ- ವಿಜಯನಗರ ಜಿಲ್ಲಾ 2 ನೇ ಸಮಾವೇಶವನ್ನು, ಕೂಡ್ಲಿಗಿ ಪಟ್ಟಣದಲ್ಲಿ ಆಗಸ್ಟ್ 20 ರಂದು ಭಾನುವಾರ ನಡೆಸಲು ನಿರ್ಣಯಿಸಲಾಯಿತು. ಆಗಸ್ಟ್ 10ರಂದು ಸಂಡೂರು ತಾಲೂಕು ಸಮಾವೇಶ, ಮತ್ತು ಕುರುಗೋಡು ಹಾಗೂ ಕಂಪ್ಲಿ ತಾಲೂಕುಗಳ ಸಮಾವೇಶ. ಆಗಸ್ಟ್ 13ರಂದು ಸಿರುಗುಪ್ಪ ತಾಲೂಕು ಸಮಾವೇಶ, ಆಸ್ಪತ್ರೆ 18ರಂದು ಹೊಸಪೇಟೆ ತಾಲೂಕು ಸಮಾವೇಶ ಜರುಗಿಸಲು ನಿರ್ಣಯಿಸಲಾಯಿತು. ಆಗಸ್ಟ್ 15ನೇ ತಾರೀಖಿನೊಳಗಾಗಿ,ಕೂಡ್ಲಿಗಿ ಹಗರಿಬೊಮ್ಮನಹಳ್ಳಿ ತಾಲೂಕುಗಳ ಸಮಾವೇಶಗಳನ್ನು ನಡೆಸಲು ಸಭೆಯಲ್ಲಿ ನಿರ್ಧರಿಸಯಿತು. ರಾಜ್ಯ ಸಮಿತಿಯ ಸೂಚನೆಯ ಮೇರೆಗೆ ನಿರ್ಧಿಷ್ಟ ಬೇಡಿಕೆಗಳನ್ನು ಆಯಾ ತಾಲ್ಲೂಕು ಮಟ್ಟದಲ್ಲಿ ಗುರ್ತಿಸಿ, ಈ ಕುರಿತು ಕೂಡಲೇ ಪ್ರಚಾರ ಆಂದೋಲನ ನಡೆಸಿ ಸಮಾವೇಶಗಳನ್ನು. ನಿಗಧಿತ ದಿನಾಂಕಗಳಲ್ಲಿ ಆಯಾ ಸಮಾವೇಶಗಳನ್ನು ಆಯೋಜಿಸಿ, ಯಶಸ್ವಿಗೊಳಿಸುವ ಸಂಕಲ್ಪವನ್ನು ಸಭೆಯಲ್ಲಿ ಮಾಡಲಾಯಿತೆಂದು. ಅಖಂಡ ಬಳ್ಳಾರಿ ಜಿಲ್ಲಾ ಸಂಚಾಲಕರಾದ, ಎಂ.ಜಂಬಯ್ಯನಾಯಕ ರವರು ಮಾಹಿತಿ ನೀಡಿದ್ದಾರೆ.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.