ಮಣಿಪುರ ಹಿಂಸಾಚಾರ ಹಿನ್ನೆಲೆಯಲ್ಲಿ ಅಲ್ಲಿಯ ಸರಕಾರವನ್ನು ವಜಾ ಮಾಡುವ ನಮ್ಮ ದೇಶದಲ್ಲಿ ನಡೆಯುತ್ತಿರುವ ಕೆಲವು ಘಟನೆಗಳು ಗಾಬರಿ ಹುಟ್ಟುಸುತ್ತಿವೆ. ನಾವು ನಾಗರಿಕರ ಎಂದು ಪ್ರಶ್ನೆ ಮಾಡುವ೦ತಿವೆ, ಸಹಿಷ್ಣು ಭಾವಕ್ಕೆ ಧಕ್ಕೆಯಾದಂತಾಗಿದೆ. ಮಣಿಪುರದಲ್ಲಿ ಕುಕಿ ಮತ್ತು ಮೈತ್ರೇಯಿ ಎಂಬ ಬುಡಕಟ್ಟು ಜನಾಂಗದವರಿದ್ದು ಅವರಿಬ್ಬರ ಮೀಸಲಾತಿ ಹಿನ್ನಲೆಯಲ್ಲಿ ಘರ್ಷಣೆ ಪ್ರಾರಂಭವಾಗಿ ಈಗ ತೀವ್ರ ಹಂತಕ್ಕೆ ಮುಟ್ಟಿದೆ, ಅಲ್ಲಿಯ ರಾಜ್ಯ ಸರಕಾರವಾಗಲಿ, ಕೇಂದ್ರ ಸರಕಾರವಾಗಲಿ ಕ್ರಮಗಳನ್ನು ಕೈಕೊಳ್ಳುತ್ತಿಲ್ಲ. ಘರ್ಷಣೆಯಲ್ಲಿ ಅನೇಕರು ಸತ್ತಿದ್ದಾರೆ ಬಹಳಷ್ಟು ಸ್ವತ್ತು ಹಾಳಾಗಿದೆ.ಮಾನವ ಮಾನವರಲ್ಲಿ ಸಹಜವಾಗಿರಬೇಕಾಗಿದ್ದ ಗೌರವಕ್ಕೆ ದಕ್ಕೆಯಾದಂತಾಗಿದೆ. ಕುಕಿ ಬುಡಕಟ್ಟಿನ ಹೆಣ್ಣು ಮಕ್ಕಳನ್ನು ಬೆತ್ತಲೆ ಮೆರವಣಿಗೆ ನಡೆದಿರುವುದು ದೇಶವೇ ತಲೆ ತಗ್ಗಿಸುವ ಸ್ಥಿತಿ ಉಂಟಾಗಿದೆ. ಪ್ರಧಾನ ಮಂತ್ರಿಯವರನ್ನು ಈ ಬಗ್ಗೆ ಕ್ರಮ ಕೈ ಕೊಳ್ಳಲು ವಿರೋಧ ಪಕ್ಷಗಳು ವಿನಂತಿಸಿದರು. ಅವರು ಕ್ರಮ ಕೈಗೊಳ್ಳುತ್ತಿಲ್ಲ. ಆದ್ದರಿಂದ ಈ ವಿಷಯವನ್ನು ಪರಿಶೀಲಿಸಿ ಮಣಿಪುರ ಸರಕಾರವನ್ನು ವಜಾಗೊಳಿಸಬೇಕಾಗಿ ವಿನಂತಿಸುತ್ತೇವೆ. ಮಹಿಳೆಯರ ಬೆತ್ತಲೆ ಮೆರವಣಿಗೆ ಮಾಡಿದವರಿಗೆ ಸೂಕ್ತ ಶಿಕ್ಷೆಯಾಗುವಂತೆ ಕ್ರಮಕೈಕೊಳ್ಳಬೇಕೆಂದು ವಿನಂತಿಸುತ್ತೇವೆ.
ವರದಿ-ಉಪಳೇಶ ವಿ.ನಾರಿನಾಳ