ಕರ್ನಾಟಕ ರೈತ ಸಂಘ  (AIKKS)ದವತಿಯಿಂದ ಮಾನ್ಯ ಮುಖ್ಯಮಂತ್ರಿಗಳು  ಕರ್ನಾಟಕ ಸರ್ಕಾರ  ಇವರಿಗೆ ಮನವಿ ಪತ್ರ.

Spread the love

ಕರ್ನಾಟಕ ರೈತ ಸಂಘ  (AIKKS)ದವತಿಯಿಂದ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮನವಿ ಪತ್ರ.

ಭತ್ತದ ಖರೀದಿ ಕೇಂದ್ರ  ತೆರೆಯುವುದು ಮತ್ತು ಎಪಿಎಂಸಿ ಮಾರುಕಟ್ಟೆಯಲ್ಲಿ  ಮುಕ್ತ ಖರೀದಿಗೆ ಅವಕಾಶ ಮಾಡುವುದರೊಂದಿಗೆ  ರೈತರನ್ನು ರಕ್ಷಿಸುವ ಕುರಿತು. ಕರ್ನಾಟಕ ರೈತ ಸಂಘ ಸಂಘ (AIKKS)  ರಾಜ್ಯ ಸಮಿತಿ  ಮೂಲಕ ವಿನಂತಿ ಪೂರ್ವಕವಾಗಿ ಒತ್ತಾಯಸುವುದೆಂದರಿ. ಲಾಕ್ ಡೌನ್ ಕಾರಣದಿಂದ  ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳು ಸೇರಿದಂತೆ  ರಾಜ್ಯದ ಇತರೆ ಭಾಗದಲ್ಲಿ   ಭತ್ತ ಬೆಳೆದ ರೈತರ ಬದುಕು ತೀವ್ರ  ಸಂಕಷ್ಟಕ್ಕೆ  ಸಿಲುಕಿದೆ. ಸದಾ ಸಾಲ,ಬಡ್ಡಿ ಚಕ್ರಬಡ್ಡಿಯೊಂದಿಗೆ ಬದುಕಿನ  ಬಂಡಿಯನ್ನು  ಸಾಗಿಸುವ  ಬಹುಸಂಖ್ಯಾತ  ರೈತರಿಗೆ  ಕೊರೋನದ ದಾಳಿ, ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಾರ್ಮಿಕನಿಗೆ  ತಿಂಗಳ ಸಂಬಳ ಎಷ್ಟು ಮುಖ್ಯವೋ, ರೈತನಿಗೆ ಬೆಳೆ ಕಟಾವಿನ ಅವಧಿ  ಅಷ್ಟೇ ಮುಖ್ಯವಾಗಿರುತ್ತದೆ. ನಿತ್ಯದ ಜೀವನ,  ಆರೋಗ್ಯ, ಶಿಕ್ಷಣ ಪ್ರತಿಯೊಂದಕ್ಕೂ ರೈತ   ಸಾಲ ಮಾಡಿಕೊಂಡಿರುತ್ತಾನೆ. ಬೆಳೆ ಕಟಾವು ಮಾಡಿದ ತಕ್ಷಣ ಮಾರಾಟ ಮಾಡದಿದ್ದರೆ ರೈತನ ಉಸಿರೇ ನಿಂತು ಹೋಗುತ್ತದೆ.ಸರಕಾರ ರೈತರ ಬದುಕಿನ ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳದೆ ಮತ್ತು ಕೃಷಿ ಉತ್ಪನ್ನ ಮಾರಾಟಕ್ಕೆ ಸರಿಯಾದ ಮಾರ್ಗ  ಸೂಚಿಗಳನ್ನು ರೂಪಿಸದೆ  ಲಾಕ್ ಡೌನ್ ಮಾಡಿರುವುದು ಖಂಡನೀಯ.ಇದು ರೈತ ದ್ರೋಹಿ ತೀರ್ಮಾನವಾಗಿದೆ. ಲಾಕ್ ಡೌನ್  ನಿಂದ ರೈತರು ಮತ್ತು ವ್ಯಾಪಾರಿಗಳ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದರಿಂದ ಭತ್ತದ ಖರೀದಿ  ವ್ಯಾವಹಾರ ಸರಿಯಾಗಿ  ನಡೆಯುತ್ತಿಲ್ಲ.ಈ ಅವಕಾಶವನ್ನು ಬಳಸಿಕೊಂಡ ಖರೀದಿದಾರರು  ಹಗ್ಗದ ದರದಲ್ಲಿ ಭತ್ತದ ಖರೀದಿಯಲ್ಲಿ ತೊಡಗಿದ್ದಾರೆ. ಸರಕಾರ ನಿಗದಿ ಮಾಡಿದ ಕನಿಷ್ಠ  ಬೆಂಬಲ ಬೆಲೆ ಕ್ವಿಂಟಲ್ ಗೆ  1860 ರೂ.ಆದರೆ ರೈತರಿಗೆ ಸಿಗುತ್ತಿರುವುದು ಒಂದು ಚೀಲಕ್ಕೆ 1200  ರೂ. ಸರಕಾರ, ಕೃಷಿ ಕಾರ್ಯಕ್ಕೆ ಮತ್ತು  ರೈತರ ವ್ಯಾವಹಾರಕ್ಕೆ ಯಾವ  ತೊಂದರೆ ಇಲ್ಲ ಎಂದು ಹೇಳಿ ಕೈ ತೊಳೆದುಕೊಂಡಿದೆ. ಕೃಷಿ ಉತ್ಪನ್ನಗಳ ಮಾರಾಟಕ್ಕೆ ಪ್ರತ್ಯೇಕ ನಿಯಮಾವಳಿ ಮಾಡಿದ್ದರೆ  ರೈತರು ಈ ರೀತಿಯ ಸಂಕಷ್ಟದ ಸುಳಿಗೆ  ಸಿಲುಕುತ್ತಿರಲಿಲ್ಲ.  ರೈತರು ರಸ್ತೆಗೆ ಬಂದರೆ ಪೋಲೀಸರ ಲಾಠಿ ಬೀಳುತ್ತದೆ.  ಎಪಿಎಂಸಿ ಮತ್ತು ಕೃಷಿ ಇಲಾಖೆ ಅಧಿಕಾರಿಗಳು  ರೈತರಿಗೆ ಸರಿಯಾದ   ಮಾಹಿತಿ ಮತ್ತು  ಮಾರ್ಗದರ್ಶನ ನೀಡುತ್ತಿಲ್ಲ. ಈ ಕುರಿತು ವಿಚಾರಿಸಿದರೆ ನಮಗೆ ಸಂಬಂಧವಿಲ್ಲವೆಂದು ಕಂದಾಯ ಮತ್ತು  ಆಹಾರ ಇಲಾಖೆಯ ಕಡೆಗೆ ಕೈ ತೋರಿಸುತ್ತಾರೆ.  ಜಿಲ್ಲಾಧಿಕಾರಿಗಳಿಗೆ ಕಾಲ್ ಮಾಡಿದರೆ ಸರ್ಕಾರದಿಂದ ಯಾವುದೆ ಅಧಿಕೃತ  ಸೂಚನೆ  ಬಂದಿಲ್ಲವೆಂದು  ಜವಾಬ್ದಾರಿಯಿಂದ ನುಣಿಚಿಕೊಳ್ಳುತ್ತಾರೆ.  ಎರಡನೇ ಅಂಗಾಮಿನ (ಬೇಸಿಗೆ ಬೆಳೆ) ಭತ್ತದ ಬೆಳೆಯ ಖರೀದಿ ಕೇಂದ್ರ ತೆರೆಯುವ  ಕುರಿತು  ಕಳೆದ ನವಂಬರ್  ತಿಂಗಳಲ್ಲಿ ಸರ್ಕಾರ ತಗೆದುಕೊಂಡ ತೀರ್ಮಾನ ಸುಳ್ಳಾಯಿತೇ. ಅಥವಾ ರೈತರಿಗೆ  ನಷ್ಟವಾಗಲಿ, ವರ್ತಕರಿಗೆ ಲಾಭವಾಗಲಿ ಎನ್ನುವ ಜಾಣ ಮೌನವೆ.? ಸರ್ಕಾರ ಮತ್ತು ಸಂಬಂಧಿಸಿದ ಸಚಿವರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸದಿದ್ದರೆ ನಾವು ಸುಮ್ಮನಿರುವುದಿಲ್ಲ.  ಸಣ್ಣ ಮಧ್ಯಮವರ್ಗದ ರೈತರು  ಜಾಗದ ಸಮಸ್ಯೆಯಿಂದ ಹೊಲಗಳಲ್ಲಿ, ಗ್ರಾಮದ  ಬಯಲು ಜಾಗದಲ್ಲಿ  ಮತ್ತು ರಸ್ತೆ ಬದಿಯಲ್ಲಿ  ಭತ್ತವನ್ನು ಗುಡ್ಡೆ ಹಾಕಿಕೊಂಡು ಬದುಕಿನ ಭವಿಷ್ಯದ ಬಗ್ಗೆ  ಚಿಂತಿತರಾಗಿದ್ದಾರೆ.  ಮುಂಗಾರು ಮಳೆ ಆರಂಭಗೊಂಡಿದ್ದರಿಂದ ರೈತರ ಬೆವರಿನ ಫಲ ಮತ್ತು ಜೀವನ   ನೀರಿನಲ್ಲಿ ಕೊಚ್ಚಿಕೊಂಡು ಹೋಗುವ ಅಪಾಯ ಇದೆ. ರೈತರ ಬದುಕಿನ ಕೃಷಿಗೆ ಪ್ರಮುಖ ಆದ್ಯತೆ ಕೊಡದಿದ್ದರೆ ಕೊರೋನದ ಸಾವುಗಳ ಜೋತೆಗೆ ರೈತರ ಆತ್ಮಹತ್ಯೆಯ ಸಾವುಗಳನ್ನು ನೋಡಬೇಕಾಗುತ್ತದೆ ಸರಕಾರ ಮೇಲಿನ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ರೈತರ ನೆರವಿಗೆ ಮುಂದಾಗಬೇಕೆಂದು ವಿನಂತಿಸುತ್ತೇವೆ. ನಮ್ಮ ಮನವಿಯನ್ನು ಹಗುರವಾಗಿ ಪರಿಗಣಿಸಿದರೆ ಕೋವಿಢ್ ನಿರ್ಬಂಧಗಳ ಉಲ್ಲಂಘಸಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ.

ಹಕ್ಕೊತ್ತಾಯಗಳು

1)    ಅತಿ ಶೀಘ್ರವಾಗಿ ಗ್ರಾಮ ಪಂಚಾಯತಿಗೊಂದು ಸರ್ಕಾರಿ ಖರೀದಿ ಕೇಂದ್ರ ತರೆಯಬೇಕು.

2) ಖಾಸಗಿ ಖರೀದಿದಾರರು ಸರಕಾರ ನಿಗದಿ  ಮಾಡಿದ ಬೆಂಬಲ  ಬೆಲೆಯಲ್ಲೇ ಭತ್ತ ಖರೀದಿ ಮಾಡಲು ಕಟ್ಟುನಿಟ್ಟಿನ  ಆದೇಶ ಮಾಡಬೇಕು.

3) ಎಪಿಎಂಸಿ ಆವರಣದಲ್ಲಿನ ಖರೀದಿ ವ್ಯಾವಹಾರದ ಸಮಯವನ್ನು

ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಿಗದಿ ಮಾಡಬೇಕು.

4) 10 ಎಕರೆಗಿಂತ ಕಡಿಮೆ ಭೂಮಿಯುಳ್ಳ  ರೈತರು ಬೆಳೆದ ಭತ್ತಕ್ಕೆ ಸರ್ಕಾರ  ಆಡಮಾನ ಸಾಲ ಒದಗಿಸಬೇಕು.

5) ಅಕಾಲಿಕ  ಮಳೆಯಿಂದ ಭತ್ತದ ಬೆಳೆ  ನಷ್ಟವಾಗಿರುವ  ರೈತರ ಪ್ರತಿ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕು.

6) ಕೃಷಿ, ಕಂದಾಯ, ಎಪಿಎಂಸಿ, ಆಹಾರ ಇಲಾಖೆ ಮತ್ತು ಚುನಾಯಿತ ಪ್ರತಿನಿಧಿಗಳು, ರೈತ ಸಂಘಟಕರ ನೇತೃತ್ವದ ಸಮಿತಿ ರಚನೆ ಮಾಡಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಲು ಅನುಕೂಲ ಕಲ್ಪಿಸಬೇಕು ಎಂದು ಡಿ.ಹೆಚ್. ಪೂಜಾರ ರಾಜ್ಯಾಧ್ಯಕ್ಷರು (KRS) ಡಿ.ಎಸ್.ನಿರ್ವಾಣಪ್ಪ ರಾಜ್ಯ ಕಾರ್ಯದರ್ಶಿಗಳು ಕಂದೇಗಾಲ ಶ್ರೀನಿವಾಸನ್. ರಾಜ್ಯ ಉಪಾಧ್ಯಕ್ಷರು  ಕರ್ನಾಟಕ ರೈತ ಸಂಘ ಸಂಘ (AIKKS) ರಾಜ್ಯ ಸಮಿತಿವತಿಯಿಂದ ಮನವಿ ಮಾಡಿದರು.

ವರದಿ – ಅಮಾಜಪ್ಪ ಹೆಚ್.ಜುಮಲಾಪೂರ

Leave a Reply

Your email address will not be published. Required fields are marked *