ಕರ್ನಾಟಕ ಸರ್ಕಾರ ಅಂಧತ್ವ ನಿಯಂತ್ರಣಾ ವಿಭಾಗ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ
HEALTH MISSION NATIONAL
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ, ಆರೋಗ್ಯ ಸೌಧ, Iನೇ ಅಡ್ಡ ರಸ್ತೆ ಮಾಗಡಿ ರಸ್ತೆ, ಬೆಂಗಳೂರು-23
ಕೆಲವು ದಿನಗಳಿಂದ ಹವಾಮಾನ ವ್ಯತ್ಯಾಸದಿಂದ ಮತ್ತು ನಿರಂತರವಾಗಿ ಬರುತ್ತಿವ ಮಳೆಯಿಂದ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದ್ದು, ಕೆಲವು ಜನರಲ್ಲಿ ಕಣ್ಣಿನ ಉರಿ (Conjunctivitis) ಸಮಸ್ಯೆ ಕಂಡುಬರುತ್ತಿರುವ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಈ ಕೆಳಕಂಡಂತೆ ಮಾಹಿತಿಯನ್ನು ತಿಳಿಸುವುದು ಹಾಗೂ ಸಂಬಂಧಪಟ್ಟ ವೈದ್ಯಾಧಿಕಾರಿಗಳು ಆಸ್ಪತ್ರೆಗಳಲ್ಲಿ ಬಂದ ಕಣ್ಣಿನ ಉರಿ ಊತದ ರೋಗಿಗಳಿಗೆ ವೈದ್ಯರು ನೋವು ನಿವಾರಕ ಮಾತ್ರೆ ಮತ್ತು ಕಣ್ಣಿನ ಡ್ರಾಪ್ಸ್ ಚಿಕಿತ್ಸೆ ನೀಡುವುದು. ಮೂಗಿನ ಮತ್ತು ಗಂಟಲಿನ ಸೋಂಕು ಇದ್ದಲ್ಲಿ ಅದಕ್ಕೆ ಬೇಕಾದ ಚಿಕಿತ್ಸೆ ನೀಡುವುದು. ಶಸ್ತ್ರ ಚಿಕಿತ್ಸೆ ಒಳಪಟ್ಟಿರುವ ರೋಗಿಗಳು ಮತ್ತು ಕಣ್ಣಿನ ಉರಿ ಊತ ಇರುವ ರೋಗಿಗಳಿಗೆ ಪ್ರತ್ಯೇಕವಾಗಿ ಚಿಕಿತ್ಸೆ ನೀಡುವುದು.
ಕಣ್ಣಿನ ಉರಿ ಊತ ಕಾಣಿಸುತ್ತಿರುವ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ನೀಡಬೇಕಾದ ಮಾಹಿತಿ
ರೋಗದ ಲಕ್ಷಣಗಳು:-
- ಅವನ ಕಣ್ಣಿನ ಬಿಳಿ ಭಾಗವು ಕೆಂಪಾಗುತ್ತದೆ. ಕಣ್ಣುಗಳಲ್ಲಿ ಉರಿ ಮತ್ತು ನೋವು ಇರುತ್ತದೆ.
ಕಣ್ಣುಗಳಿಂದ ನಿರಂತರವಾಗಿ ನೀರು ಹೊರಬರುತ್ತಿರುತ್ತದೆ.
ಕಣ್ಣುಗಳು ಊದಿಕೊಳ್ಳುತ್ತದೆ.
ಮುನ್ನೆಚ್ಚರಿಕೆ ಕ್ರಮಗಳು
- ಹೆಚ್ಚಿನ ಜನ ಇರುವ ಪ್ರದೇಶಗಳಿಗೆ ಹೋಗುವುದನ್ನು ಕಡಿಮೆ ಮಾಡಬೇಕು. • ಪದೇ ಪದೇ ಕಣ್ಣುಗಳನ್ನು ಮುಟ್ಟುವುದನ್ನು ಕಡಿಮೆ ಮಾಡಬೇಕು.
- ಸೋಪ್ ನಲ್ಲಿ ಆಗಾಗ ಕೈ ತೊಳೆಯುವುದನ್ನು ಅಭ್ಯಾಸ ಮಾಡಬೇಕು.
ಕಣ್ಣಿನ ಉರಿ ಊತ ಬಂದ ವ್ಯಕ್ತಿ ಬೇರೆಯವರ ಜೊತೆ ನಿಕಟ ಸಂಪರ್ಕ ಹೊಂದುವುದನ್ನು ತಪ್ಪಿಸಬೇಕು.
- ಅವರು ಉಪಯೋಗಿಸಿದ ಟವೆಲ್, ತಲೆ ದಿಂಬನ್ನು ಇತರರು ನೋಡಿಕೊಳ್ಳಬೇಕು. ಉಪಯೋಗಿಸದಂತೆ ಜಂಟಿ ನಿರ್ದೇಶಕರು(ನೇತ್ರ)
- ವರದಿ-ಉಪಳೇಶ ವಿ.ನಾರಿನಾಳ.