ಮುದಗಲ್ ದೇವರ ನೋಡ, ತಾವರಗೇರಾ ಅಲಾಯಿ ಕುಣಿತ ನೋಡ, ಇದು ಮೊಹರಂ ಹಬ್ಬದ ವಿಶೇಷತೆ.

Spread the love

 

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ಮೊಹರಂ ಹಬ್ಬದ ವಿಶೇಷವಾಗಿ ಸಾರ್ವಜನಿಕರಿಂದ ಅಲಾಯಿ ಕುಣಿತ ಜರುಗಿತು, ಅಲಾಯಿ ಆಡುವವರ ವೇಷ/ಭೂಷಣ ಕಂಡು ನೋಡುಗರ ಮನಸ್ಸನ್ನ ಗೆಲ್ಲಲಾಯಿತು. ಜನಜಂಗುಳಿಯಲ್ಲಿ ಪಟ್ಟಣವು ತುಂಬಿ/ತುಳುಕಾಡಿತು. ಪಟ್ಟಣದಲ್ಲಿ ಮೊಹರಂ ಆಚರಣೆಯ ನಿಮಿತ್ಯವಾಗಿ ಮುಸ್ಲಿಮೇತರರೇ ಹೆಚ್ಚಾಗಿ ಭಾಗವಹಿಸಿದ್ದರು. ಹರಕೆ ಹೊತ್ತ ಹಿಂದೂ-ಮುಸ್ಲಿಮರು ಹುಲಿ ವೇಷ, ಅಳ್ಳಳ್ಳಿ ಬಪ್ಪಾ ವೇಷ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಜನರು ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಇಂದಿಗೂ ಸರ್ವರ ಇಷ್ಟಾರ್ಥಗಳನ್ನು ಪೂರೈಸುವ ಪುಣ್ಯಕ್ಷೇತ್ರೋತ್ಸವವೆಂದೇ ತಾವರಗೇರಾ ಪಟ್ಟಣವು ಹೆಸರುವಾಸಿಯಾಗಿ ಪ್ರಶಿದ್ದವಾಗಿದೆ.

ಪಟ್ಟಣದ ಮುಖ್ಯರಸ್ತೆಯಾದ ಡಾ// ರಾಜಕುಮಾರ ರಸ್ತೆ ಹತ್ತಿರ ಬರುವ ಶ್ರೀ ಖಾಜಾ ಬಂದೇನವಾಜ ಧರ್ಗಾದಿಂದ ಹಿಡಿದು ನೇರವಾಗಿ ಪಾತಪ್ಪನ ಕಟ್ಟಿಯವರೆಗೂ ಸಾರ್ವಜನಿಕರ ಜೊತೆಗೆ ಈ ಅಲಾಯಿ ಕುಣಿತವನ್ನ ಮುಂದುವರೆಸುತ್ತ ಪಟ್ಟಣದ ಇನ್ನೊಂದು ಮುಖ್ಯ ರಸ್ತೆಯಾದ ಪಾತಪ್ಪನ ಕಟ್ಟಿಯಿಂದ ಹಿಡಿದು ಪೋಲಿಸ್ ಠಾಣೆಯ ಹತ್ತಿರುವ ಬರುವ ಗರಡಿ ಮನೆಯವರೆಗೂ ಈ ಅಲಾಯಿ ಕುಣಿತ ಸಾಗುತ್ತದೆ. ತದ ನಂತರ ಊರಿನ ಗಣ್ಯರಾದ ಶ್ರೀ ಶೇಖರಗೌಡ್ರ ಪೋಲಿಸ್ ಪಾಟೀಲ್ ರವರ ಮನೆಯವರೆಗೂ ಈ ಮನೋರಂಜನೆ ಸಾಗಿತು, ತದ ನಂತರ ಪಟ್ಟಣದ 10ನೇ ವಾರ್ಡಿನ ಸಾರ್ವಜನಿಕರ ಅಂಗಳದ ಹತ್ತಿರವಿರುವ ಶ್ರೀಮತಿ ಇಳಿಗೇರ ಬಸಮ್ಮನವರ ಮನೆಯ ಅಂಗಳದಲ್ಲಿ ಬಂದು ಈ ಸಾರ್ವಜನಿಕರ ಅಲಾಯಿ ಕುಣಿತವನ್ನ ಇಲ್ಲಿಗೆ ಸಮಾಪ್ತಿಗೊಳಿಸುತ್ತಾರೆ.ಇಲ್ಲಿ ಸರ್ವ ಧರ್ಮಿಯರು ಹೊಳಗೊಂಡು ವಿಜೃಂಭಣೆಯಿಂದ  ಈ ಹಬ್ಬವನ್ನು ಆಚರಿಸುತ್ತಾರೆ. ತಾವರಗೇರಾ ಪಟ್ಟಣವು ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂಬುವುದಕ್ಕೆ ಇದೊಂದು ಸಾಕ್ಷಿ ಸಾಕು ಅಲ್ವಾ.

ವರದಿ-ಉಪಳೇಶ ವಿ.ನಾರಿನಾಳ.

Leave a Reply

Your email address will not be published. Required fields are marked *