ನಕಲಿ ಐಡಿ ಇಟ್ಟಿಕೊಂಡು ಅಲೆದಾಡುತಿದ್ದ ನಕಲಿ ಪತ್ರಕರ್ತ ಬಂಧನ.
ತಾನೋಬ್ಬ ಪತ್ರಕರ್ತ ನೆಂದು ಹೇಳಿಕೊಂಡು ಖಾಸಗಿ ವಾಹಿನಿ ಈ ಟಿವಿ ಯ ನಕಲಿ ಗುರುತಿನ ಚೀಟಿಯನ್ನು ಇಟ್ಟುಕೊಂಡು ತಿರುಗುತ್ತಿದ್ದ ಅಸಾಮಿಯನ್ನು ಖುದ್ದು ಹುಬ್ಬಳ್ಳಿ ಧಾರವಾಡ ಡಿಸಿಪಿ ರಾಮರಾಜನ್ ಹಿಡಿದಿದ್ದಾರೆ. ಲಾಕ್ ಡೌನ್ ಹಿನ್ನೆಲೆ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಬೈಕ್ ಸವಾರನೊಬ್ಬ ತನ್ನ ಬೈಕ್ ಗೇ ಜ್ ಪ್ರೆಸ್ ಅಂತಾ ಬರೆಸಿಕೊಂಡು ಅಂತಾ ತಿರುಗುತ್ತಿದ್ದ. ಇದನ್ನು ಕಂಡ ಡಿಸಿಪಿ ರಾಮರಾಜನ್ ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಈತ ಪತ್ರಕರ್ತ ನಲ್ಲ ಎಂಬ ಮಾಹಿತಿ ಗೊತ್ತಾದ ಕೂಡಲೇ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಗೆ ಕರೆದೊಯ್ದು 420 ಪ್ರಕರಣವನ್ನು ದಾಖಲು ಮಾಡಿದ್ದಾರೆ. ಅಷ್ಟೇ ಅಲ್ಲದೆ ಯಾರಾದರೂ ನಕಲಿ ಗುರುತಿನ ಚೀಟಿಯನ್ನು ಇಟ್ಟುಕೊಂಡು ಅಡ್ಡಾಡುತ್ತಿದ್ದರೇ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ರಾಮರಾಜನ್ ಹೇಳಿದ್ದಾರೆ. ವರದಿ – ಅಮಾಜಪ್ಪ ಹೆಚ್.ಜುಮಲಾಪೂರ