ಹಸಿರೆ ಉಸಿರು ಎಂಬುದು ಇಡೀ ಮಾನವ ಕುಲದ ಇಂದಿನ ಜೀವನ್ಮರಣದ ಮಂತ್ರವಾಗಿದೆ.ಪರಿಸರ ನಾಶ ಹಾಗೂ ಭೂ ತಾಪಮಾನದ ಪರಿಣಾಮದಿಂದ ಪ್ರತಿನಿತ್ಯ ಜಗತ್ತು ಒಂದಿಲ್ಲೊಂದು ದುರಂತಕ್ಕೆ ಗುರಿಯಾಗುತ್ತಾ ನಡೆದಿದೆ.ಇದನ್ನು ತಡೆಯುವ ಏಕೈಕ ಮಾಗ೯ವೆಂದರೆ ಹಸಿರು ಆಚರಣೆ ಅಥವಾ ಅರಣ್ಯ ಸಂರಕ್ಷಣೆ ಹಾಗೂ ವಿಸ್ತರಣೆಯಾಗಿದೆ. ಅಂದರೆ,ಅರಣ್ಯೋ ರಕ್ಷಿತಿ ರಕ್ಷಿತಾ: ಎಂಬುದಾಗಿದೆ. ಆದರೆ,ಈ ಜಾಗತಿಕ ಕತ೯ವ್ಯವನ್ನು ಮರೆತ ಕೇಂದ್ರ ಬಿಜೆಪಿ ಸರಕಾರವು, ಮೊನ್ನೆ ಲೋಕಸಭೆಯಲ್ಲಿ ಅಂಗೀಕರಿಸಿದ ‘ಅರಣ್ಯ (ಸಂರಕ್ಷಣಾ )ತಿದ್ದುಪಡೆ ಮಸೂದೆ-2023 ದೇಶದ ಅರಣ್ಯ ಸಂಹಾರಕ್ಕೆ ತೆರೆದ ಹೆದ್ದಾರಿಯಾಗಲಿದೆ. ಆದ್ದರಿಂದ ಈ ಕಾಯ್ದೆಯನ್ನು ಕೂಡಲೆ ಹಿಂಪಡೆಯ ಬೇಕೆಂದು ಸಿಪಿಐ( ಎಂಎಲ್ )ರೆಡ್ ಸ್ಟಾರ್ ಪಕ್ಷವು ಒತ್ತಾಯಿಸುತ್ತದೆ. ಈ ಹೊಸ ಅರಣ್ಯ ಕಾಯ್ದೆಯು ಅರಣ್ಯ ಪ್ರದೇಶದಲ್ಲಿ ಮಿತಿ ಮೀರಿದ ಅರಣ್ಯೇತರ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಿದೆ.ಅರಣ್ಯಕ್ಕೆ ಅರಣ್ಯವೆಂದು ಹೆಸರಿಟ್ಟು ಅದರ ಮಡಿಲಲ್ಲಿ ಸಾವಿರಾರು ವಷ೯ ಬದುಕು ಸಾಗಿಸಿದ ಆದಿವಾಸಿಗಳ ಅರಣ್ಯ ಹಕ್ಕನ್ನು ಅಲ್ಲಗಳೆದು,ದೇಶಾಧ್ಯಂತ ಆದಿವಾಸಿಗಳನ್ನು ಅರಣ್ಯದಿಂದ ಹೊರ ಹಾಕಿದ ಮೋದಿ ಸರಕಾರವು ಇದೀಗ ಕಾಯ್ದಿಟ್ಟ ಅರಣ್ಯ ಪ್ರದೇಶಗಳಲ್ಲಿ ಹೆಚ್ಚುವರಿ ರೈಲು,ಹೆದ್ದಾರಿ,ಸಂಪಕ೯ ಮೂಲ ಸೌಕಯ೯,ಮೃಗಾಲಯ,ಸಫಾರೀಸ್,ಎಕೊ ಟೂರಿಸಮ್ ನಿಮಾ೯ಣಕ್ಕೆ ಕೇಸರಿ ಕಾಪೆ೯ಟ್ ಹಾಕಿದೆ. ಮುಂದುವರೆದು,ದೇಶದ ಅಂತರಾಷ್ಟ್ರೀಯ ಗಡಿಯಿಂದ 100 ಕಿ.ಮಿ.ಪ್ರದೇಶದಲ್ಲಿ ಅರಣ್ಯವನ್ನು ನಾಶ ಮಾಡಿ ಈ ಪ್ರದೇಶದಲ್ಲಿ ಗಡಿ ರಕ್ಷಣಾ ಪಡೆಗಳ ವಸಾಹತು, ಗಡಿರಸ್ತೆ ,ರಕ್ಷಣಾ ಪಡೆಗಳ ಸಮುಚ್ಛಯ ಕಟ್ಟಡಕ್ಕೆ ಮೀಸಲಿಡಲು ಈ ಕಾಯ್ದೆಯಲ್ಲಿ ಅವಕಾಶ ಮಾಡಿಕೊಡಲಾಗಿದೆ.ಅಲ್ಲದೆ ಸಾಮಾಜಿಕ ಅರಣ್ಯಕ್ಕೆ ಮಾತ್ರ ಜನ ಮುಂದಾಗ ಬೇಕಂತೆ! ಅರಣ್ಯದಲ್ಲಿ ಅರಣ್ಯ ಕೃಷಿಗೆ ಭಾರಿ ಪ್ರೋತ್ಸಾಹ ನೀಡುವ ಕಾರಣದಿಂದ ಈ ಹೊಸ ಕಾಯ್ದೆ ತಂದಿದ್ದಾಗಿ ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ ಸರಕಾರದ ಅರಣ್ಯ ಸಂವಾರವನ್ನು ಸಮಥಿ೯ಸಿ ಕೊಂಡಿದ್ದಾರೆ.ಭಾರತದ ಅರಣ್ಯಗಳ ವಾಣಿಜ್ಯೀಕರಣ ಖಾಸಗಿಕರಣದ ಸ್ಪಷ್ಟವಾದ ಉದ್ದೇಶ ಈ ಕಾಯ್ದೆ ಅಂಗೀಕಾರದ ಹಿಂದಿದೆ.ಇದು ದೇಶದ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಏಕೆಂದರೆ,ಅರಣ್ಯಾಭಿವ್ರುದ್ದಿಯಲ್ಲಿ ಭಾರತವು ಅತ್ಯಂತ ಹಿಂದುಳಿಸಲಾದ ದೇಶವಾಗಿದೆ.ಪ್ರಪಂಚದ 16% ಜನ ಸಂಖ್ಯೆ ಹೊಂದಿರುವ ಈ ದೇಶದ ಅರಣ್ಯ ಪ್ರದೇಶದ ಪಾಲು ಕೇವಲ 2% ಆಗಿದೆ.ಸರಕಾರಿ ದತ್ತಾಂಶಗಳ ಪ್ರಕಾರ ಭಾರತದ ಅರಣ್ಯ ಪ್ರದೇಶವು 8.9 ಕೋಟಿ ಹೆಕ್ಟರಾಗಿದೆ.ಅಂದರೆ,ದೇಶದ 3287263 ಚದರ ಕಿ.ಮೀ.ಬೌಗೋಳಿಕ ವಿಸ್ತೀಣ೯ದ ಪೈಕಿ ಅರಣ್ಯ ಪ್ರದೇಶ 675538 ಚದರ ಕಿ.ಮೀ.ಆಗಿದೆ.ಅಂದರೆ,20.5% ಅರಣ್ಯ ಪ್ರದೇಶವಾಗಿದೆ. ಇದರಲ್ಲಿ ಅದಾನಿ, ಅಂಬಾನಿ, ಆರ್ ಎಸ್ ಎಸ್, ಎಸ್ಸಾರ್ ,ಪೊಸ್ಕೊ, ವೇದಾಂತ ಮುಂತಾದ ಕಂಪನಿಗಳಿಂದ ಕಬಳಿಕೆಯಾದ ಪ್ರಮಾಣ ಎಷ್ಟೋ ? ಇದು ಜಗತ್ತಿನಲ್ಲಿಯೆ ಅತ್ಯಂತ ಕಡಿಮೆ ಅರಣ್ಯವನ್ನು ಹೊಂದಿದ ಅಂದರೆ ಅತೀ ಹೆಚ್ಚು ಪರಿಸರ ದಿವಾಳಿಯಾದ ದೇಶವಾಗಿದೆ ! ತಮ್ಮ ದೇಶಗಳ ಭೌಗೋಳಿಕ ವಿಸ್ತೀಣ೯ದಲ್ಲಿ ಕೆನಡಾ 34.00% ಜಮ೯ನಿ 36.00% ಅಮೆರಿಕಾ 41.7% ಸ್ವಿಡನ್ 58.8% ಜಪಾನ್ 67.6% ಹಾಗೂ ಇಂಡಿಯಾ 20.5% ?? ಒಡಿಶಾ ಸೂಪರ್ ಸೈಕ್ಲೋನ್ ದಿಂದ ಜೋಷಿಮಠ ಭೂಕುಸಿತದ ಸರಣಿ ಪರಿಸರ ಸಂಬಂಧಿ ದುರಂತಗಳನ್ನು ಇಂಡಿಯಾ ಕಂಡುಂಡಿದೆ. ಪ್ರಕೃತಿ ವಿಕೋಪಕ್ಕೆ ಬಲಿಯಾಗದ ರಾಜ್ಯಗಳೆ ನಮ್ಮಲಿಲ್ಲ. ಇಂಥಹ ಅಪಾಯಕಾರಿ ಪರಿಸ್ಥಿತಿಯಲ್ಲೂ ಕಾಪೊ೯ರೇಟ್ ಲೂಟಿಗೆ ಭಾರತದ ಅರಣ್ಯವನ್ನೂ ಭಾರತವನ್ನೂ ಬಲಿಕೊಡುವ ಈ ಕಾಯ್ದೆಯ ಜಾರಿಯೂ ಸಾವಿರ ಪಟ್ಟು ದೇಶ ದ್ರೋಹಿಯಾಗಿದೆ. ಆದ್ದರಿಂದ ಇದನ್ನು ವಾಪಸ್ ಪಡೆಯುವಂತೆ ಹಾಗೂ ಆದಿವಾಸಿಗಳ ಅರಣ್ಯ ಹಕ್ಕುಗಳನ್ನು ರಕ್ಷಿಸುತ್ತಲೆ ಅರಣ್ಯ ಪ್ರಮಾಣವನ್ನು ವಿಸ್ತರಿಸುವಂತೆ ಒತ್ತಾಯಿಸುವುದು ದೇಶದ ಪ್ರತಿಯೊಬ್ಬ ನಾಗರಿಕರ ಕತ೯ವ್ಯವಾಗಿದೆ ಎಂದು ರೆಡ್ ಸ್ಟಾರ್ ಘೋಷಿಸುತ್ತದೆ. ಈ ಕತ೯ವ್ಯಕ್ಕೆ ಬೆನ್ನು ತೋರಿಸಿದ್ದೆ ಆದರೆ ನಾವು ಪ್ರಳಯದ ಪಾಲಾಗುತ್ತೇವೆ.ಭಾರತದ ಸಂವಿಧಾನವನ್ನು ಇಲ್ಲಿನ ಜನರ ಬಹುತ್ವವನ್ನು ಕಾಲಡಿ ತುಳಿದು,ಮಣಿಪುರ ಮಾದರಿ ಹಿಂದೂ ರಾಷ್ಟ್ರ ಕಟ್ಟುವ ಫ್ಯಾಸಿಸ್ಟ್ ಮೋದಿ ಸರಕಾರವು ಇಂಡಿಯಾವನ್ನು ಪ್ರಪಂಚದಲ್ಲಿಯೆ ಅತೀ ದೊಡ್ಡ ಸುಡುಗಾಡಾಗಿಸಲಿದೆ. ಇದನ್ನು ನಾವು ಅರಣ್ಯದಲ್ಲಿ ಕೇಸರಿ ಪ್ರಳಯವೆಂದು ಪರಿಗಣಿಸಲೇಬೇಕಾಗಿದೆ. ಆರ್.ಮಾನಸಯ್ಯ ಪಿಬಿಎಂ ಸಿಪಿಐ(ಎಂಎಲ್) ರೆಡ್ ಸ್ಟಾರ್.
ವರದಿ-ಸಂಪಾದಕೀಯಾ