ಜಾತಿ, ಧರ್ಮ, ಭಾಷೆ, ಮತ, ಹಾಗು ಪ್ರಾದೇಶಿಕತೆಗಳ ಭೇದ ಭಾವವನ್ನು ಬಿಟ್ಟು ತಾವೆಲ್ಲರೂ ಒಂದೇ ಎಂಬ ಭಾವನೆಯನ್ನ ಬೆಳೆಸಿಕೊಂಡು ಭಾವೇಕ್ಯತೆಯಿಂದ ಕೂಡಿದ ಮೊಹರಂ ಹಬ್ಬ. ಇಂದು ಬೆಳಗಿನ ಜಾವ್ ತಾವರಗೇರಾ ಪಟ್ಟಣದಲ್ಲಿ ಮೊಹರಂ ಹಬ್ಬದ ವಿಶೇಷವಾಗಿ ಶ್ರೀ ಖಾಜಾ ಬಂದೇನವಾಜ ದರ್ಗಾ, ಶ್ರೀ ಶ್ಯಾಮೀದಲಿ ದರ್ಗಾ, ಹಣಿಗೇರ್ ಮಜೀದಿಯಿಂದ, ಕಲಾಲ್ ಮಸೀದಿಯಿಂದ, ಮತ್ತು ಮೇಗಳಪೇಟೆ ಮಸೀದಿಯಿಂದ ಶ್ರೀ ಕಾಸೀಮ ಅಲಂ ಮತ್ತು ಹಸನ ಅಲಂ, ಮೌಲಾಲಿ, ಮತ್ತು ಜುಮ್ಕಿ ದೇವರು ತಮ್ಮ ತಮ್ಮ ಸ್ಥಳದಿಂದ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಸಿದ್ದಗೊಂಡು, 5 ಗಂಟೆ 30 ನಿಮಿಷಕ್ಕೆ ಆ ಸ್ಥಳದಿಂದ ನೇರವಾಗಿ ಊರಿನ ಪ್ರಮುಖ ರಸ್ತೆಯಿಂದ ಜನಸ್ಥೋಮದ ಮದ್ಯದಲ್ಲಿ ಸಾಗುತ್ತ, ಪಟ್ಟಣದ ಪಂಚಾಯತ ಮುಂಬಾಗದಲ್ಲಿ ಪ್ರತಿಯೊಂದು ದೇವರುಗಳು ಒಂದಕ್ಕೊAದು ಭೇಟಿಯಾದಾಗ ನೆರೆದ ಜನ ಸಾಮೂಹ ತೇರಿನ ಮೇಲೆ ಹಣ್ಣುಕಾಯಿ ಎಸೆಯುವಂತೆ ಸೂರ ಮಾಡಿ, ಭಯ ಭಕ್ತಿಯಿಂದ ಕೈಮುಗಿದು ತೃಪ್ತರಾಗುತ್ತಾರೆ. ಜನಜಂಗುಳಿಯಲ್ಲಿ ಪಟ್ಟಣವು ತುಂಬಿ/ತುಳುಕಾಡಿತು. ಪಟ್ಟಣದಲ್ಲಿ ಮೊಹರಂ ಆಚರಣೆಯ ನಿಮಿತ್ಯವಾಗಿ ಮುಸ್ಲಿಮೇತರರೇ ಹೆಚ್ಚಾಗಿ ಭಾಗವಹಿಸಿದ್ದರು. ಜನರು ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ.
ಇಂದಿಗೂ ಸರ್ವರ ಇಷ್ಟಾರ್ಥಗಳನ್ನು ಪೂರೈಸುವ ಪುಣ್ಯಕ್ಷೇತ್ರೋತ್ಸವವೆಂದೇ ತಾವರಗೇರಾ ಪಟ್ಟಣವು ಹೆಸರುವಾಸಿಯಾಗಿ ಪ್ರಶಿದ್ದವಾಗಿದೆ. ಜನರು ಕಂದೂರಿ ಮಾಡಿ ಎಡೆ ನೀಡಿ ಮನಸ್ಸಿಗೆ ನೆಮ್ಮದಿ ತಂದುಕೊಳ್ಳುತ್ತಾರೆ. ದೀರ್ಘ ದಂಡ ನಮಸ್ಕಾರ ಹಾಕಿ ಧನ್ಯರಾಗುತ್ತಾರೆ. ಇಂದಿಗೂ ಸರ್ವರ ಇಷ್ಟಾರ್ಥಗಳನ್ನು ಪೂರೈಸುವ ಪುಣ್ಯಕ್ಷೇತ್ರೋತ್ಸವವೆಂದೇ ತಾವರಗೇರಾ ಪಟ್ಟಣವು ಹೆಸರುವಾಸಿಯಾಗಿ ಪ್ರಶಿದ್ದವಾಗಿದೆ. ಇಲ್ಲಿ ಸರ್ವ ಧರ್ಮಿಯರು ಹೊಳಗೊಂಡು ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ. ತಾವರಗೇರಾ ಪಟ್ಟಣವು ಸರ್ವಜನಾಂಗದ ಶಾಂತಿಯ ತೋಟವೆಂದು ಮತ್ತೊಮ್ಮೆ ಸಾಬೀತುಗೊಂಡಿದೆ. ನಾವೆಲ್ಲರು ಒಂದೇ ಎಂಬ ಪರಿಕಲ್ಪನೆಯನ್ನು ಹೊಂದಿರುವುದೇ ಈ ಭಾವೈಕ್ಯೆತೆಗ ಸಾಕ್ಷಿಯಾಗಿದೆ. ವಿವಿಧತೆಯಲ್ಲಿ ಏಕತೆಯಿಂದ ಇರುವುದಕ್ಕೆ ಭಾವೈಕ್ಯತೆ, ವಿವಿಧ ಧರ್ಮಗಳ ಆಚರಣೆಗಳ ನಡುವೆಯೂ ಅದ್ವಿತೀಯವಾದ ಅಖಂಡತೆಯನ್ನು ಉಳಿಸಿಕೊಂಡು ಬಂದಿದೆ. ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವುದು, ಧಾರ್ಮಿಕ ಐಕ್ಯತೆಯನ್ನು ಮೂಡಿಸುವುದು, ಸಾಂಸ್ಕೃತಿಕ ಮತ್ತು ಭಾಷಾ ಐಕ್ಯತೆಯನ್ನು ಮೂಡಿಸಿ ನಾವು ಭಾರತೀಯರೆಲ್ಲ ಒಂದೇ ಎಂಬ ಭಾವನೆ ಮೂಡಿಸುವುದು. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಇಂದು ಸಂಜೆ ದೇವರು ದಪ್ನವಾಗುವ ಹಲವು ವಿಶೇಷ ಸುದ್ದಿಯೊಂದಿಗೆ ನಾಳೆ ನಿಮ್ಮ ಮುಂದೆ.
ವರದಿ-ಸಂಪಾದಕೀಯಾ.