ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.,ತಾವರಗೇರಾ ಚುನಾವಣೆಗೆ ನಾಮ ಪತ್ರ ಸಲ್ಲಿಸಿದ ಶ್ರೀ ಯಮನೂರಪ್ಪ ಬಿಳೆಗುಡ್ಡ.

Spread the love

ತಾವರಗೇರಾ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ತಾವರಗೇರಾ, ತಾ|| ಕುಷ್ಟಗಿ ಇದರ 2023 ರಿಂದ ಮುಂದಿನ 05 (ಐದು) ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಚುನಾವಣೆಯನ್ನು ಈ ಕೆಳಕಾಣಿಸಿದ ಮತಕ್ಷೇತ್ರಗಳಿಗೆ ಸಂಘದ ಕಾರ್ಯಾಲಯದಲ್ಲಿ ದಿನಾಂಕ 13-08-2023 ರಂದು ಭಾನುವಾರ ಬೆಳಿಗ್ಗೆ 9-00 ಗಂಟೆಯಿಂದ ಸಂಜೆ 4-00 ಗಂಟೆಯವರೆಗೆ ಚುನಾವಣೆ ನಡೆಸಲಾಗುವುದೆಂದು ನೋಟೀಸ್ ನೀಡಲಾಗಿದೆ.ಸಂಪೂರ್ಣ ವಿವರ ಈ ಕೆಳಗಿನಂತ್ತೆ ಇರುತ್ತದೆ.

  1. ಸಾಲಗಾರರ ಮತ ಕ್ಷೇತ್ರದಿಂದ

11 ಸ್ಥಾನಗಳು

ಪೈಕಿ ಸಾಮಾನ್ಯ ಕ್ಷೇತ್ರದಿಂದ :- 05

ಪ.ಜಾತಿ ಮೀಸಲು ಕ್ಷೇತ್ರದಿಂದ :-01

ಪ.ಪಂಗಡದ ಮೀಸಲು ಕ್ಷೇತ್ರದಿಂದ :- 01

ಹಿಂದುಳಿದ ವರ್ಗ = “ಅ” ಮೀಸಲು ಕ್ಷೇತ್ರದಿಂದ :-01

ಹಿಂದುಳಿದ ವರ್ಗ “ಬ” ಮೀಸಲು ಕ್ಷೇತ್ರದಿಂದ :- 01

ಮಹಿಳಾ ಸದಸ್ಯರ ಮೀಸಲು ಕ್ಷೇತ್ರದಿಂದ :- 02

  1. ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರ ಒಟ್ಟು 01 ಸ್ಥಾನ

                                                                  12 ಸ್ಥಾನಗಳು.

ಸದರಿ ಚುನಾವಣಾ ವೇಳಾಪಟ್ಟಿಯು ಈ ಕೆಳಗಿನಂತೆ ಇರತಕ್ಕದೆಂದು ನೋಟೀಸು ನೀಡಲಾಗಿದೆ.

(ಎ) ಆಕಾಂಕ್ಷೆವುಳ್ಳ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸುವ ಆರಂಭದ ದಿನಾಂಕ (ನಿಯಮ 14ಎ ಸಂಘದ ಕಛೇರಿಯಲ್ಲಿ : 29-07-2023 ಬೆಳಗ್ಗೆ 11-00 ಯಿಂದ ಮಧ್ಯಾಹ್ನ 3-00 ಗಂಟೆಯವರೆಗೆ,

(ಬಿ) ಆಕಾಂಕ್ಷೆವುಳ್ಳ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸುವ ಕೊನೆಯ ದಿನಾಂಕ (ನಿಯಮ 14ಎ) ಸಂಘದ ಕಛೇರಿಯಲ್ಲಿ 05-08-2023 ಬೆಳಗ್ಗೆ 11-00 00 ಮಧ್ಯಾಹ್ನ 3-00 ಗಂಟೆಯವರೆಗೆ

(ಸಿ) ರಿಟರ್ನಿಂಗ್ ಅಧಿಕಾರಿಯಿಂದ – ನಾಮಪತ್ರಗಳ ಪರಿಶೀಲನೆ. (ನಿಯಮ 14 ಬಿ) ಸಂಘದ ಕಛೇರಿಯಲ್ಲಿ 05-08-2023 ಬೆಳಗ್ಗೆ 11-00 00 ಮಧ್ಯಾಹ್ನ 3-00 ಗಂಟೆಯವರೆಗೆ

(ಡಿ) ರಿಟರ್ನಿಂಗ್ ಅಧಿಕಾರಿಯಿಂದ ಕ್ರಮಬದ್ಧವಾಗಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಪಟ್ಟಿಯ ಪ್ರಕಟಣೆ (ನಿಯಮ 14ಬಿ4) ಸಂಘದ ಕಛೇರಿಯಲ್ಲಿ ದಿ : 06-08-2023 ರಂದು ನಾಮಪತ್ರಗಳ ಪರಿಶೀಲನೆಯ ನಂತರ

   ದಿ: 06-08-2023  ಬೆಳಿಗ್ಗೆ 11-00 ಗಂಟೆಗೆ

(ಇ) ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳಿಂದ ನಾಮಪತ್ರಗಳ ಹಿಂತೆಗೆದುಕೊಳ್ಳಲು ಕೊನೆಯ ದಿನ (ನಿಯಮ 144) ಸಂಘದ ಕಛೇರಿಯಲ್ಲಿ : 07-08-2023 ಬೆಳಗ್ಗೆ 11-00 00 ಮಧ್ಯಾಹ್ನ 3-00 ಗಂಟೆಯವರೆಗೆ

(ಎಫ್) ರಿಟರ್ನಿಂಗ್ ಅಧಿಕಾರಿಯಿಂದ ಕ್ರಮಬದ್ಧವಾಗಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ (ನಿಯಮ 14ಡಿ) ಸಂಘದ ಕಛೇರಿಯಲ್ಲಿ ಸಂಘದ ನೋಟೀಸ್ ಬೋರ್ಡಿನ ಮೇಲೆ ದಿ:- 07-08-2023 ಸಾಯಂಕಾಲ 4-00 ಗಂಟೆಗೆ.

(ಜಿ) ರಿಟರ್ನಿಂಗ್ ಅಧಿಕಾರಿಯಿಂದ ಅಭ್ಯರ್ಥಿಗಳು ಆಪೇಕ್ಷಿಸಿದಲ್ಲಿ ಚಿಹ್ನೆಗಳ ಹಂಚಿಕೆ (ನಿಯಮ (49) ಸಂಘದ ಕಾರ್ಯಾಲಯದಲ್ಲಿ ದಿ : 07-08-2023  ಸಾಯಂಕಾಲ 4-00 ಗಂಟೆಯ ನಂತರ

(ಹೆಚ್) ಮಾದರಿ ಮತಪತ್ರ ಸಂಘದ ಕಾರ್ಯಾಲಯದಲ್ಲಿ ದಿ : 09-08-2023 ಬೆಳಿಗ್ಗೆ 11-00 ಗಂಟೆಗೆ

(ಐ) ಮತದಾನದ ದಿನಾಂಕ ಮತ್ತು ಸಮಯ ಸಂಘದ ಕಾರ್ಯಾಲಯದಲ್ಲಿ ದಿ: 13-08-2023 ಬೆಳಗ್ಗೆ 9-00 do ಸಾಯಂಕಾಲ 4-00 ಗಂಟೆಯವರೆಗೆ

(ಜೆ) ಮತ ಎಣಿಕೆಯ ದಿನ ಮತ್ತು ಸಮಯ ಸಂಘದ ಕಾರ್ಯಾಲಯದಲ್ಲಿ ದಿ : 13-08–2023 ರಂದು ಮತದಾನದ ಅವಧಿ ಮುಗಿದ ನಂತರ

(ಕೆ)  ರಿಟರ್ನಿಂಗ್ ಅಧಿಕಾರಿಯಿಂದ ಫಲಿತಾಂಶ ಪ್ರಕಟಣೆ  ಸಂಘದ ಕಾರ್ಯಾಲಯದಲ್ಲಿ ದಿ : 13-08-2023 ಮತದಾನ ಮತ ಎಣಿಕೆ ಮುಗಿದ ನಂತರ

ಪರಸಪ್ಪ ಕಲ್ಲಪ್ಪ ಉಪ್ಪಾರ ಹಾಗೂ ಮುಖ್ಯ ಗುರುಗಳು, ಕರ್ನಾಟಕ ಪಬ್ಲಿಕ್ ಶಾಲೆ, ಸರ್ಕಾರಿ ಮಾಧ್ಯಮಿಕ ಶಾಲೆ, ತಾವರಗೇರಾ, ತಾ ಕುಷ್ಟಗಿ.

ಸೂಚನೆಗಳು :-

1) ಮತದಾರರ ಯಾದಿ, ನಾಮಪತ್ರ, ನಾಮಪತ್ರ ಹಿಂತೆಗೆದುಕೊಳ್ಳುವ ಅರ್ಜಿಗಳನ್ನು ಸಂಘದ ಕಾರ್ಯಾಲಯದಲ್ಲಿ ನಿಗದಿತ ಶುಲ್ಕ ಪಾವತಿಸಿ ಪಡೆಯಬಹುದು.

2) ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಸ್ಪರ್ಧಿಸ ಬಯಸುವವರು ನಾಮಪತ್ರಗಳನ್ನು ಸಂಘದ ಕಾರ್ಯಾಲಯದಲ್ಲಿ ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಸಲ್ಲಿಸುವುದು.

3) ಸಂಘದ ಉಪವಿಧಿಗಳ ಮೇರೆಗೆ ಅರ್ಹತೆ ಹೊಂದಿದವರು ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅರ್ಹರಿರುತ್ತಾರೆ. ಪ್ರತಿಯೊಬ್ಬ ಉಮೇದುವಾರರ ನಾಮಪತ್ರಗಳಲ್ಲಿ ಮತದಾನದ ಅರ್ಹತೆ ಪಡೆದ ಒಬ್ಬ ಸೂಚಕರ ಸಹಿ ತಪ್ಪದೇ ಮಾಡಿರತಕ್ಕದ್ದು,

4) ಚುನಾವಣಾ ಚಿಹ್ನೆಗಳ ಪಟ್ಟಿಯನ್ನು ಸ್ಪರ್ಧಿಸುವ ಸದಸ್ಯರ ಮಾಹಿತಿಗಾಗಿ ಸಂಘದ ಸೂಚನಾ ಫಲಕದ ಮೇಲೆ ಪ್ರಕಟಿಸಲಾಗಿದೆ.

5) ನಾಮಪತ್ರದೊಂದಿಗೆ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸುವ ಉಮೇದುವಾರರು ರೂ. 2000,00 ಗಳ ಠೇವಣಿ ಮೊತ್ತವನ್ನು ಪಾವತಿಸಿ ಇದರ ರಸೀದಿಯನ್ನು ನಾಮಪತ್ರದೊಂದಿಗೆ ಲಗತ್ತಿಸುವುದು, ಕಾಯ್ದಿರಿಸಿದ ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ರೂ. 1000.00 ಠೇವಣಿ ಪಾವತಿಸಿದ ರಸೀದಿ ಲಗತ್ತಿಸುವುದು,

6) ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮತ್ತು ಹಿಂದುಳಿದ ವರ್ಗ-ಅ, ಬ ಕಾಯ್ದಿರಿಸಿದ ಸ್ಥಾನಗಳಿಗೆ ಉಮೇದುವಾರರಾಗಿ ಸ್ಪರ್ಧಿಸ ಬಯಸುವವರು.

ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರಗಳನ್ನು ನಾಮಪತ್ರದೊಂದಿಗೆ ಕಡ್ಡಾಯವಾಗಿ ಲಗತ್ತಿಸತಕ್ಕದ್ದು. 7) ಉಮೇದುವಾರರು ತಮ್ಮ ನಾಮಪತ್ರ ವಾಪಸ್ಸು ಪಡೆಯುವ ಸಂದರ್ಭದಲ್ಲಿ ಖುದ್ದು ಹಾಜರಿದ್ದು, ಅರ್ಜಿ ಸಲ್ಲಿಸುವುದು.

8) ಆಡಳಿತ ಮಂಡಲಿಯ ನಿರ್ದೇಶಕರಾಗಿ ಚುನಾಯಿತರಾಗಲು ಸಹಕಾರ ಸಂಘಗಳ ಕಾಯ್ದೆ, ನಿಯಮ ಮತ್ತು ಉಪವಿಧಿಗಳಲ್ಲಿ ನಿರ್ಧಿಷ್ಟಪಡಿಸಿದ ಅರ್ಹತೆಗಳನ್ನು ಹೊಂದಿರತಕ್ಕದ್ದು,

9) ಚಿಹ್ನೆಗಳನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಉಮೇದುವಾರರು ಹಾಜರಿರಬಹುದು. ಚಿಹ್ನೆಗಳನ್ನು ನಿಯಮಾನುಸಾರ ಹಂಚಿಕೆ ಮಾಡಲಾಗುವುದು. 10) ನಾಮಪತ್ರಗಳ ಪರಿಶೀಲನೆ ಸಮಯದಲ್ಲಿ ಉಮೇದುವಾರರು ಅಥವಾ ಸೂಚಕರು ಹಾಜರಿರಬಹುದು.

  1. ii) ಸಮಾನ ಮತಗಳಿಸಿದ ಅಭ್ಯರ್ಥಿಗಳ ಫಲಿತಾಂಶವನ್ನು ಚೀಟಿ ಎತ್ತುವ ಮೂಲಕ ನಿರ್ಧರಿಸಲಾಗುವುದು.

12) ಚುನಾವಣಾ ಚಿಹ್ನೆಗಳ ಪಟ್ಟಿಯನ್ನು ಸ್ಪರ್ಧಿಸುವ ಸದಸ್ಯರ ಮಾಹಿತಿಗಾಗಿ ಸಂಘದ ಸೂಚನಾ ಫಲಕದ ಮೇಲೆ ಪ್ರಕಟಿಸಲಾಗಿದೆ.

13) ಸಂಘದ ಕಛೇರಿ ವೇಳೆಯು ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ 3-00 ಗಂಟೆಯವರೆಗೆ ಇರುತ್ತದೆ. ಚುನಾವಣಾ ನಿಮಿತ್ತ ರಜೆಯ ದಿನಗಳಲ್ಲಿಯೂ ಕಛೇರಿಯು ಕೆಲಸ ನಿರ್ವಹಿಸುತ್ತಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಇವರಿಗೆ ಸಂರ್ಪಕಿಸಬವುದು. ಒಟ್ಟಿನಲ್ಲಿ ಈ ಚುನಾವಣೆಗೆ ಸ್ಪರ್ಧಿಸುವವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಅಭಿವೃದ್ದಿಗಾಗಿ ಮತ್ತು ರೈತರ ಏಳಿಗೇಗಾಗಿ ಶ್ರಮಿಸಲೆಂದು ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಆರೈಸುತ್ತೆವೆ. ಈ ಸಂದರ್ಭದಲ್ಲಿ ಸಾಲಗಾರರ ಮತ ಕ್ಷೇತ್ರಕ್ಕೆ ನಾಮ ಪತ್ರ ಸಲ್ಲಿಸಿದ ಶ್ರೀ ಯಮನೂರಪ್ಪ ಬಿಳೆಗುಡ್ಡ ಹಾಗೂ ಚುನಾವಣಾ ಅಧಿಕಾರಿಗಳಾದ ಪರಸಪ್ಪ ಕಲ್ಲಪ್ಪ ಉಪ್ಪಾರರವರು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಸರ್ವ ಸಿಬಂದಿ ವರ್ಗದವರು. ಮತ್ತು ರಾಜಾನಾಯಕ ಸಮಾಜ ಸೇವಕರು, ಖಾಜಾಖಾನ್ ಪಠಾಣ, ಬಾಲರಾಜ ಯಾದವ್, ರವಿ ಆರೇರ್, ದೇವೇಂದ್ರಕುಮಾರ ಹುನಗುಂದ, ಆರ್.ಬಿ.ಅಲಿಆದಿಲ್.ಇತರರು ಪಾಲುಗೊಂಡಿದ್ದರು.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *