ಪತ್ರಿಕಾ ದಿನಾಚರಣೆ / ರಾಜ್ಯ ಕಾರ್ಯಕಾರಿಣಿ ಸಭೆ ಬಾಗಲಕೋಟೆ ನಗರದ ಅಕ್ಷಯ್ ಇಂಟರ್ ನ್ಯಾಷನಲ್ ಹೊಟೇಲ್, ನವನಗರ, ಬಾಗಲಕೋಟೆಯಲ್ಲಿ ಬೆಳಿಗ್ಗೆ : 10-30ಕ್ಕೆ ಕರ್ನಾಟಕ ಪತ್ರಕರ್ತರ ಸಂಘದಿಂದ ಒಂದು ದಿನದ ಗ್ರಾಮೀಣ / ನಗರದ ಎಲ್ಲಾ ಪತ್ರಿಕೆ ಸಂಪಾದಕರು, ವರದಿಗಾರರಿಗಾಗಿ ಒಂದು ದಿನದ ರಾಜ್ಯಮಟ್ಟದ ಪತ್ರಿಕಾ ದಿನಾಚರಣೆ ಅಂಗವಾಗಿ “ಗ್ರಾಮಿಣ ಪತ್ರಿಕಾ ಮಾಧ್ಯಮದ ಇಂದಿನ ಸ್ಥಿತಿ” ಹಾಗೂ ಕಾನೂನು ಮಾಹಿತಿ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಇದರ ಜೊತೆಗೆ ಮಧ್ಯಾಹ್ನ ಉಪಾಆಹಾರದ ನಂತರ 3-00 ಗಂಟೆಗೆ ರಾಜ್ಯ ಕಾರ್ಯಕಾರಿಣಿ ಸಭೆ ನಡೆಯಿತು. ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಭಾಗವಹಿಸಿದ್ದರು. ಪ್ರತಿಯೊಂದು ಜಿಲ್ಲಾದ ಅಧ್ಯಕ್ಷರುಗಳಿಗೆ ಸನ್ಮಾನಿಸುವುದರ ಮೂಲಕ ಈ ಸಭೆಗೆ ಮೆರಗು ತಂದರು. ಸುಮಾರು ಕರ್ನಾಟಕ ರಾಜ್ಯ 20 ಜಿಲ್ಲೆಗಳಿಂದ ಪತ್ರಿಕಾ ವರದಿಗಾರರು ಹಾಗೂ ಸಂಪಾದಕರು ಆಗಮಿಸಿದ್ದರು. ಕರ್ನಾಟಕ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಪತ್ರಿಕೆ ಸಂಪಾದಕರು / ವರದಿಗಾರರು ಮಾತ್ರ ಈ ಕಾರ್ಯಾಗಾರ ಶಿಬಿರದಲ್ಲಿ ಸಂಘದ ಎಲ್ಲಾ ಸರ್ವ ಸದಸ್ಯರು ವಿವಿಧ ಭಾಗಗಳಿಂದ ಪಾಲ್ಗೊಂಡಿದ್ದರು.
ಶ್ರೀ ಡಿ. ಬಿ. ವಿಜಯಶಂಕರ ಜಿಲ್ಲಾ ಅಧ್ಯಕ್ಷರು ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ ದಾನಯ್ಯ ಸ್ವಾಮಿ ವಿ. ಹಿರೇಮಠ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪತ್ರಕರ್ತರ ಸಂಘ ಬಾಗಲಕೋಟೆ. ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಎಂ ಬಿ ಶಿವಪುಜಿ ಮಾತನಾಡುತ್ತಿರುವುದು ಸಸಿಗೆ ನಿರುಣಿಸುವ ಮುಖಾಂತರ ಸಮಾರಂಭವನ್ನ ಉದ್ಘಾಟಿಸಿದರು. ಈ ಸಭೆಯಲ್ಲಿ ಪತ್ರಿಕೆ ಅಂದ್ರೇನು, ವರದಿಗಳನ್ನು ಯಾವ ರೀತಿ ಮಾಡಬೇಕು, ವರದಿಗಾರರು ಹೇಗಿರಬೇಕು. ಇದರ ಜೊತೆ ಜೊತೆಗೆ ಕರ್ನಾಟಕ ಪತ್ರಕರ್ತ ಸಂಘದ ವಿಶೇಷ ಸೌಲಭ್ಯಗಳ ಬಗ್ಗೆ ಸ್ವ-ವಿಸ್ತಾರವಾಗಿ ವಿವರಣೆ ನೀಡಿದರು. ಮಾನ್ಯ ಶಾಸಕರಾದ ಹೆಚ್. ವೈ ಮೇಟಿ,ಯವರು ಯಾವರ ಸಮಯದಲ್ಲಾದರು ಬನ್ನಿ ನಿಮ್ಮ ಜೊತೆಗ ನಾವು ಇದ್ದೆವೆ, ನಮ್ಮ ಜೊತೆ ಸರ್ಕಾರವಿದೆ, ಸರ್ಕಾರದಿಂದ ಬರುವ ಪ್ರತಿಯೊಂದು ಸೌಲಭ್ಯಗಳನ್ನು ನಿಮಗೆ ತಲುಪಿಸುವ ಜವಭ್ದಾರಿ ನಮ್ಮದು ಎಂದು ಹೇಳಿದರು. ಶಾಸಕ ಹೆಚ್. ವೈ ಮೇಟಿ, ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮೀಜಿ, ಸಂಘದ ರಾಜ್ಯಧ್ಯಕ್ಷ ಎಂ ಬಿ ಶಿವಪುಜಿ ಹಾಗೂ ಪತ್ರಿಕೆ ಸಂಪಾದಕರು / ವರದಿಗಾರರು ಮಾತ್ರ ಈ ಕಾರ್ಯಾಗಾರ ಶಿಬಿರದಲ್ಲಿ ಸಂಘದ ಎಲ್ಲಾ ಸರ್ವ ಸದಸ್ಯರು ವಿವಿಧ ಭಾಗಗಳಿಂದ ಪಾಲ್ಗೊಂಡಿದ್ದರು.
ವರದಿ-ಸಂಪಾದಕೀಯಾ.